ಸಿನಿರಸಿಕರಿಗೆ ಈ ವೀಕೆಂಡ್(Weekend) ಮಸ್ತ್ ಮಜಾ ನೀಡಲಿದೆ. ಯಾಕಂದ್ರೆ ತುಂಬಾ ದಿನಗಳ ನಂತರ ಒಟಿಟಿ ಪ್ಲಾಟ್ಫಾರ್ಮ್ (OTT Platform) ಗಳಲ್ಲಿ ಹೊಚ್ಚ ಹೊಸ ಚಲನಚಿತ್ರಗಳು ಸ್ಟ್ರೀಮ್ ಆಗಲಿದೆ. ಪ್ರೇಕ್ಷಕ ಮಹಾಪ್ರಭುಗಳ ಯಾವ ಸಿನಿಮಾ ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಅನ್ನುವ ಗೊಂದಲ ಕೂಡ ಉಂಟಾಗಲಿದೆ. ಈ ವೀಕೆಂಡ್ ಮನೆಯಲ್ಲೇ ಟೈಮ್ ಸ್ಪೆಂಡ್ ಮಾಡಬೇಕು ಅಂದುಕೊಂಡಿದ್ದರೆ, ಈ ಸಿನಿಮಾಗಳು (Movies) ನಿಮಗೆ ಒಳ್ಳೆಯ ಚಾಯ್ಸ್ ಎಂದು ಹೇಳಬಹುದು. ಹಾಗಿದ್ದರೆ ಬನ್ನಿ ನೋಡೋಣ ಈ ವಾರ ಒಟಿಟಿ (OTT) ಯಲ್ಲಿ ಯಾವೆಲ್ಲಾ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿದೆ ಎಂಬುದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಕೊಡುತ್ತೇವೆ.
ಒಟಿಟಿ ಪ್ಲಾಟ್ಫಾರ್ಮ್ ರೇಸ್ನಲ್ಲಿ ಜೀ5 ಕೂಡ ಮುಂದಿದೆ. ಸ್ಟಾರ್ ಹೀರೋಗಳ ಬ್ಲಾಕ್ ಬಸ್ಟರ್ ಸಿನಿಮಾಗಳ ಜೊತೆಗೆ ಸದಾಭಿರುಚಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ಉಣಬಡಿಸ್ತಿರುವ ಜೀ5 ಒಟಿಟಿ ಈಗ ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಭರ್ಜರಿ ಧಮಾಕ ನೀಡಿದೆ. ಭಾರತದ ಸೆನ್ಸೇಷನಲ್ ಸೃಷ್ಟಿಸಿದ್ದ ಕಾಶ್ಮೀರಿ ಫೈಲ್ಸ್, ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಮುಗಿಲ್ ಪೇಟೆ ಹಾಗೂ ತಲೆದಂಡ ಸಿನಿಮಾಗಳು ಇದೇ ಮೇ 13ಕ್ಕೆ ಜೀ5 ಒಟಿಟಿಗೆ ಲಗ್ಗೆ ಇಡ್ತಿವೆ.
ಕನ್ನಡದಲ್ಲಿ ಬರ್ತಿದೆ ‘ಕಾಶ್ಮೀರಿ ಫೈಲ್ಸ್’ (Zee5)
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಾಶ್ಮೀರಿ ಫೈಲ್ಸ್ ಸಿನಿಮಾ ಮೇ 13ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ. ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆ ಆಧಾರಿಸಿ ತಯಾರಿಸಿದ್ದ ಈ ಸಿನಿಮಾದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ ಸೇರಿದಂತೆ ಅನುಭವಿ ತಾರಾಬಳಗ ನಟಿಸಿದ್ದಾರೆ. ಹಿಂದಿಯಲ್ಲಿ ರಿಲೀಸ್ ಆಗಿದ್ದ ಕಾಶ್ಮೀರಿ ಫೈಲ್ಸ್ ಸಿನಿಮಾ ಈಗ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗ್ತಿದೆ. ಅಂತೇಯೇ ಕನ್ನಡ, ತಮಿಳು,ತೆಲುಗು ಭಾಷೆಯಲ್ಲಿ ಒಟಿಟಿಗೆ ಎಂಟ್ರಿ ಕೊಡ್ತಿದೆ.
ತಲೆದಂಡ ಜೀ5ಗೆ ಲಗ್ಗೆ
ರಾಷ್ಟ್ರಪ್ರಶಸ್ತಿ ವಿಜೇತ ದಿವಂಗತ ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ತಲೆದಂಡ ಕೂಡ ಜೀ5 ಒಟಿಟಿಯಲ್ಲಿ ಈ ವೀಕೆಂಡ್ ನಲ್ಲಿ ರಿಲೀಸ್ ಆಗ್ತಿದೆ. ಏಪ್ರಿಲ್ 1ರಂದು ರಿಲೀಸ್ ಆಗಿದ್ದ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಒಬ್ಬ ಮುಗ್ಧ ವ್ಯಕ್ತಿಯ ಪರಿಸರ ಪ್ರೇಮ , ಹೋರಾಟದ ಕಥೆ ಹೊಂದಿದ್ದು ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾ ತಲೆದಂಡಗೆ ಪ್ರವೀಣ್ ಕೃಪಾಕರ್ ಆಕ್ಷನ್ ಕಟ್ ಹೇಳಿದ್ದು, ಹರಿಕಾವ್ಯ ಅವರ ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ ಧೋನಿ! 'ಆ' ನಟಿ ನಟಿಸಿದ್ರೆ ಮಾತ್ರ ದುಡ್ಡು ಹಾಕೋದು ಅಂದ್ರಾ ಮಾಹಿ?
ಕ್ರೇಜಿಪುತ್ರನ ಮುಗಿಲ್ ಪೇಟೆ
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿದ್ದ ಆ್ಯಕ್ಷನ್ ಮತ್ತು ಕೌಟುಂಬಿಕ ಕಥಾ ವಸ್ತುವಿನ ಜೊತೆಗೆ ರೊಮ್ಯಾಂಟಿಕ್ ಎಂಟರ್ಟೇನ್ಮೆಂಟ್ ಸಿನಿಮಾ ಮುಗಿಲ್ ಪೇಟೆ ಮೇ 13ಕ್ಕೆ ಪ್ರತಿಷ್ಠಿತ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ. ಮನೋರಂಜನ್ ನಾಲ್ಕನೇ ಸಿನಿಮಾವಾಗಿರುವ 'ಮುಗಿಲ್ ಪೇಟೆ' ಚಿತ್ರದಲ್ಲಿ ಮನುಗೆ ಜೋಡಿಯಾಗಿ ಕಯಾದು ಲೋಹರ್ ನಾಯಕಿಯಾಗಿ ಅಭಿನಯಿಸಿದ್ದು, ಚಿತ್ರಕ್ಕೆ ಭರತ್ ಎಸ್. ನಾವುಂದ ಆಕ್ಷನ್ ಕಟ್ ಹೇಳಿದ್ದು, ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.
ಒಟಿಟಿಗೆ ಬಂದ ವಿಜಯ್ರ ಬೀಸ್ಟ್ ಸಿನಿಮಾ!
ಬೀಸ್ಟ್ ಸಿನಿಮಾದಲ್ಲಿ ಲಾಜಿಕ್ ಇಲ್ಲ, ನಾಯಕಿ ಪಾತ್ರಕ್ಕೆ ಮಹತ್ವ ಇಲ್ಲ. ಇದು ವಿಜಯ್ ಅವರ ಸಿನಿಮಾ ಅಲ್ಲ. ನಿರ್ದೇಶಕ ನೆಲ್ಸನ್ ವಿಜಯ್ ಅವರ ಜೊತೆ ಸಿನಿಮಾ ಮಾಡಿ ಇಮೇಜ್ ಡ್ಯಾಮೇಜ್ ಮಾಡಿಬಿಟ್ರು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಈ ಸಿನಿಮಾ ಯಾರಿಗೂ ತಿಳಿಸದೇ ಸಡನ್ ಆಗಿ ಒಟಿಟಿಗೆ ರಿಲೀಸ್ ಆಗಿದೆ. ಹಿಂದಿ, ತೆಲುಗು, ಕನ್ನಡ ಹಾಗೂ ಮಲಯಾಳಂ ವರ್ಶನ್ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸನ್ ನೆಟ್ವರ್ಕ್ನಲ್ಲಿ ತಮಿಳು ವರ್ಶನ್ ಬೀಸ್ಟ್ ಸಿನಿಮಾ ಲಭ್ಯವಿದೆ.
ಇದನ್ನೂ ಓದಿ: Keerthy Suresh ಮೇಲೆ ಹಲ್ಲೆ-ಫೋಟೋಗಳು ವೈರಲ್, ನಟಿಯ ಮುಖ ಕಂಡು ಬೆಚ್ಚಿ ಬಿದ್ದ ಫ್ಯಾನ್ಸ್! ಅಸಲಿಯತ್ತೇನು?
ಪುಝು ಮಲಯಾಳಂ ಕ್ರೈಮ್ ಥ್ರಿಲ್ಲರ್! (ಸೋನಿ ಲೈವ್)
ಹಿರಿಯ ನಟ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪುಝು ಮಲಯಾಳಂ ಕ್ರೈಮ್ ಥ್ರಿಲ್ಲರ್ ಆಗಿದ್ದು, ಇದನ್ನು ರತೀನಾ ಪಿಟಿ ನಿರ್ದೇಶಿಸಿದ್ದಾರೆ. ಆರಂಭದಲ್ಲಿ ಥಿಯೇಟ್ರಿಕಲ್ ಬಿಡುಗಡೆಗೆ ಯೋಜಿಸಲಾಗಿತ್ತು, ಈಗ ಚಿತ್ರವು ನೇರವಾಗಿ OTT ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ. ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ದಿ ಮ್ಯಾಟ್ರಿಕ್ಸ್ ರಿಶ್ಯುರೆಕ್ಷನ್ಸ್
ಮೇ 12 ರಿಂದ Amazon, Book My Show ಮತ್ತು Google Play ನಲ್ಲಿ ಮ್ಯಾಟ್ರಿಕ್ಸ್ ಸಿರೀಸ್ನ ಸಿನಿಮಾ ಸ್ಟ್ರೀಮಿಂಗ್ ಆಗಲಿವೆ. ಈ ಆಕ್ಷನ್ ಥ್ರಿಲ್ಲರ್ ತೆಲುಗು ಹಿಂದಿ ಮತ್ತು ಇತರ ಎಲ್ಲಾ ಪ್ರಮುಖ ದಕ್ಷಿಣ ಭಾರತದ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ