Ek Love Ya Postponed: ಸ್ಯಾಂಡಲ್​ವುಡ್​ಗೂ ಪೋಸ್ಟ್​ಪೋನ್ ಬಿಗ್​ ಶಾಕ್​ ! `ಏಕ್​ ಲವ್​ ಯಾ’ ಬಿಡುಗಡೆ ದಿನಾಂಕ ಮುಂದೂಡಿಕೆ!

‘ಆರ್​ಆರ್​ಆರ್​’(RRR) ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ ಆಗಿದೆ. ಅದನ್ನು ಅಧಿಕೃತವಾಗಿಯೇ ಚಿತ್ರತಂಡ ಘೋಷಿಸಿತ್ತು. ಇದಾದ ಬಳಿಕ ಪ್ರಭಾಸ್​(Prabhas) ನಟನೆಯ ರಾಧೆ-ಶ್ಯಾಮ್(Radhe Shyam)​ ಹಾಗೂ ಅಜಿತ್(Ajith) ನಟನೆಯ ವಲಿಮೈ(Valimai) ಸಿನಿಮಾ ಕೂಡ ತಮ್ಮ ಬಿಡುಗಡೆ ದಿನಾಂಕವನ್ನು ಮೂಂದುಡಿದೆ. ಇದೀಗ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟ ನಿರೀಕ್ಷೆ ಹುಟ್ಟಿಸಿದ್ದ ‘ಏಕ್​ ಲವ್​ ಯಾ’(Ek Love Ya)ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ.

ರಾಣಾ, ರಚಿತಾ, ಪ್ರೇಮ್​

ರಾಣಾ, ರಚಿತಾ, ಪ್ರೇಮ್​

  • Share this:
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳ (Corona Case) ಸಂಖ್ಯೆ ಏರಿಕೆಯಾಗುತ್ತಿವೆ ನಿಟ್ಟಿನಲ್ಲಿ ಜನರ ಆರೋಗ್ಯ ಕಾಪಾಡುವಂತ ಕಾಳಜಿಯ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳೋದು ತುರ್ತು ಅಗತ್ಯವಿದೆ ನಿಟ್ಟಿನಲ್ಲಿ ಬೆಂಗಳುರು ಸೇರಿದಂತೆ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ (Weekend Curfew) ಜಾರಿಯಾಗಲಿದೆ. ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೂ ಇಡೀ ಕರ್ನಾಟಕ ಸ್ತಬ್ಧವಾಗಲಿದೆ. ಕೊರೋನಾದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೂ ಮತ್ತೆ ಪೆಟ್ಟು ಬಿದ್ದಿದೆ. ದೇಶಾದ್ಯಂತ ಪ್ರತಿದಿನ ಓಮಿಕ್ರಾನ್ (Omicron)​ ಸೋಂಕಿನ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಓಮಿಕ್ರಾನ್​ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದು ಚಿತ್ರರಂಗಕ್ಕೂ ಹೊಡೆತ ಬಿದ್ದಿದೆ. ಚಿತ್ರೋದ್ಯಮ ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್​ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಅದರ ಮೊದಲ ಹಂತವಾಗಿ ‘ಆರ್​ಆರ್​ಆರ್​’ (RRR) ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ ಆಗಿದೆ. ಅದನ್ನು ಅಧಿಕೃತವಾಗಿಯೇ ಚಿತ್ರತಂಡ ಘೋಷಿಸಿತ್ತು. ಇದಾದ ಬಳಿಕ ಪ್ರಭಾಸ್​ (Prabhas) ನಟನೆಯ ರಾಧೆ-ಶ್ಯಾಮ್ (Radhe Shyam)​ ಹಾಗೂ ಅಜಿತ್ (Ajith) ನಟನೆಯ ವಲಿಮೈ (Valimai) ಸಿನಿಮಾ ಕೂಡ ತಮ್ಮ ಬಿಡುಗಡೆ ದಿನಾಂಕವನ್ನು ಮೂಂದುಡಿದೆ. ಇದೀಗ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟ ನಿರೀಕ್ಷೆ ಹುಟ್ಟಿಸಿದ್ದ ‘ಏಕ್​ ಲವ್​ ಯಾ’ (Ek Love Ya) ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ.

ಕೊರೋನಾ ಹೊಡೆತಕ್ಕೆ ನಲುಗಿದ ಸ್ಯಾಂಡಲ್​​ವುಡ್​!

ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ಚಿತ್ರ ಈಗಾಗಲೇ ಹಾಡುಗಳ ಮೂಲಕ ಸಿನಿಪ್ರೇಮಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿತ್ತು.  ನಿರ್ಮಾಪಕಿ ರಕ್ಷಿತಾ ಪ್ರೇಮ್ ಚಿತ್ರದ ಟ್ರೈಲರ್ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇದೀಗ ಚಿತ್ರತಂಡ ಅನಿವಾರ್ಯವಾಗಿ ತನ್ನ ನಿರ್ಧಾರ ಬದಲಾಯಿಸಿದೆ. ಎಲ್ಲಾ ನಿಗದಿಯಂತೆ ನಡೆಯುವುದಾಗಿದ್ದರೆ ಜನವರಿ 21ಕ್ಕೆ ‘ಏಕ್ ಲವ್ ಯಾ’ ತೆರೆಕಾಣಬೇಕಿತ್ತು. ಆದರೆ ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಬೇಸರದ ಸುದ್ದಿ ನೀಡಿದೆ. ಚಿತ್ರಮಂದಿರಗಳು ಅರ್ಧ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ. ಇದು ಬಿಗ್ ಬಜೆಟ್ ಚಿತ್ರಗಳ ಕಲೆಕ್ಷನ್​ಗೆ ಹೊಡೆತ ನೀಡಲಿದೆ. ಪ್ರಸ್ತುತ ಪ್ರೇಮ್ ಕೂಡ ತಮ್ಮ ನಿರ್ದೇಶನದ ಚಿತ್ರವನ್ನು ನಿಗದಿತ ದಿನಾಂಕದಂದು ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ.

ಇದನ್ನು ಓದಿ : ಹೇಳಿದ್​ ಟೈಮ್​ಗೆ ರಿಲೀಸ್​ ಮಾಡ್ತೀವಿ ಅಂದವ್ರು ಗಪ್​ಚುಪ್​: ರಾಧೆ ಶ್ಯಾಮ್​ ಬಿಡುಗಡೆ ದಿನಾಂಕ ಮುಂದೂಡಿಕೆ!

ಪೋಸ್ಟ್​ ಮೂಲಕ ಮಾಹಿತಿ ಕೊಟ್ಟ ಪ್ರೇಮ್​!

ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರೇಮ್, ಜನವರಿ 21ಕ್ಕೆ ‘ಏಕ್ ಲವ್ ಯಾ’ ತೆರೆಕಾಣಬೇಕಿತ್ತು. ಎಲ್ಲೆಡೆಯೂ ಈ ಕುರಿತು ಪ್ರಚಾರವನ್ನು ಮಾಡಿದ್ದೆವು. ಆದರೆ ಕೊರೋನಾ ಕಾರಣಗಳಿಂದ ಅದನ್ನು ಮುಂದೂಡುತ್ತಿದ್ದೇವೆ. ವೀಕೆಂಡ್ ಕರ್ಫ್ಯೂ ಹಾಗೂ ಚಿತ್ರಮಂದಿರಗಳ ಸಾಮರ್ಥ್ಯದಲ್ಲಿ ಕಡಿತಗೊಳಿಸಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಎಲ್ಲವೂ ಸರಿಯಾದ ತಕ್ಷಣ ಅಭಿಮಾನಿಗಳ ಮುಂದೆ ‘ಏಕ್ ಲವ್ ಯಾ’ವನ್ನು ತರಲಾಗುವುದು. ಅಲ್ಲಿಯವರೆಗೂ ಪ್ರೀತಿ ಹಾಗೂ ಹಾರೈಕೆಗಳಿರಲಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದ್ದಾರೆ.


ಇದನ್ನು ಓದಿ: ಒಬ್ಬ ಸ್ಟಾರ್​ ನಟನ ಮನೆ ಮುಂದೆ ಹೋಗಿ ಹೀಗಾ ಮಾಡೋದು? ಈ ಹೆಣೈಕ್ಳು ಮಾಡಿದ್ದು ನೋಡಿದ್ರೆ... ಅಷ್ಟೇ...!

RRR, ರಾಧೆ-ಶ್ಯಾಮ್​, ವಲಿಮೈ ರಿಲೀಸ್​ ಡೇಟ್​ ಪೋಸ್ಟ್​ಪೋನ್​!

ಕಳೆದ ಬಾರಿ ಕೊರೊನಾದಿಂದ ಚಿತ್ರಗಳನ್ನು ರಿಲೀಸ್‌ ಮಾಡಲು ಆಗಿರಲಿಲ್ಲ. ಈಗ ಮತ್ತೆ ಅದೇ ಸ್ಥಿತಿ ಎದುರಾದಂತೆ ಇದೆ. ಇದರಿಂದಾಗಿಯೇ RRR ಚಿತ್ರ ರಿಲೀಸ್ ಮುಂದೂಡಿದೆ. ಈಗ ಆರ್‌ಆರ್‌ಆರ್‌ ಚಿತ್ರದ ಮಾದರಿಯಲ್ಲೇ ಮತ್ತೆ ಎರಡು ಚಿತ್ರಗಳು ಅನಿರ್ಧಿಷ್ಟ ಅವಧಿಗೆ ರಿಲೀಸ್‌ ಮುಂದೂಡಿವೆ. ಬಹು ನಿರೀಕ್ಷಿತ ರಾಧೆ ಶ್ಯಾಮ್ ಮತ್ತು ವಲಿಮೈ ಎರಡು ಚಿತ್ರಗಳೂ ಕೂಡ ಈ ಪೋಸ್ಟ್ ಪೋನ್ ಆಗಿವೆ.
Published by:Vasudeva M
First published: