Wedding Gift Trailer: ಸ್ತ್ರೀ ರಕ್ಷಣೆ ಕಾನೂನು ಪುರುಷರಿಗೆ ಮಾರಕವೇ? ವೆಡ್ಡಿಂಗ್ ಗಿಫ್ಟ್ ಸಿನಿಮಾ ಟ್ರೇಲರ್‌ನಲ್ಲಿ ಏನ್ ಹೇಳ್ತಿದ್ದಾರೆ ನೋಡಿ

Sandalwood: ಯಾವ ರೀತಿ ಪ್ರೇಕ್ಷಕರಿಗೆ ಗಿಫ್ಟ್ ಕೊಡುತ್ತದೆ ಎಂದು ನೋಡಬೇಕಿದೆ. ಈ ಟ್ರೈಲರ್ ನಿಜಕ್ಕೂ ಬಹಳ ವಿಭಿನ್ನವಾಗಿದ್ದು, ನಿರ್ದೇಶಕರಾಗಿ ಸಹ ಮೊದಲ ಬಾರಿ ಸ್ಯಾಂಡಲ್​ವುಡ್​ಗೆ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ವೆಡ್ಡಿಂಗ್ ಗಿಫ್ಟ್

ವೆಡ್ಡಿಂಗ್ ಗಿಫ್ಟ್

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood)  ಹೊಸ ಹೊಸ ಸಿನಿಮಾಗಳು ಬರುತ್ತಿವೆ. ಹೊಸತನ ಹೆಚ್ಛಾಗಿದೆ. ವಿಭಿನ್ನ ಕಥೆಗಳ ಸಿನಿಮಾಗಳು  (Film) ಬಿಡುಗಡೆಯಾಗುತ್ತಿದೆ. ಸಮಾಜದಲ್ಲಿನ ಆಗು ಹೋಗುಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭವಲ್ಲ, ಅದು ಜನರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತದೆ. ಆದರೆ ಹಾಗೆಯೇ ಹೊಸ ಕಥೆಯೊಂದಿಗೆ ಚಿತ್ರವೊಂದು ಬರುತ್ತಿದ್ದು, ಅದರ ಟ್ರೈಲರ್ ಬಿಡುಗಡೆಯಾಗಿ, ಸದ್ದು ಮಾಡುತ್ತಿದೆ.  ವೆಡ್ಡಿಂಗ್ ಗಿಫ್ಟ್​ ಎನ್ನುವ ವಿಭಿನ್ನ ಟೈಟಲ್​ (Title) ಹೊಂದಿರುವ ಸಿನಿಮಾದ ಟ್ರೈಲರ್ (Trailer) ಸ್ಯಾಂಡಲ್​ವುಡ್​ನಲ್ಲಿ ಚರ್ಚೆ ಹುಟ್ಟು ಹಾಕಿದೆ.

ಕುತೂಹಲ ಮೂಡಿಸಿದ ಟ್ರೈಲರ್

ಹೆಸರೇ ಗಿಫ್ಟ್​ ಎಂದು ಇದ್ದು, ಯಾವ ರೀತಿ ಪ್ರೇಕ್ಷಕರಿಗೆ ಗಿಫ್ಟ್ ಕೊಡುತ್ತದೆ ಎಂದು ನೋಡಬೇಕಿದೆ. ಈ ಟ್ರೈಲರ್ ನಿಜಕ್ಕೂ ಬಹಳ ವಿಭಿನ್ನವಾಗಿದ್ದು, ನಿರ್ದೇಶಕರಾಗಿ ಸಹ ಮೊದಲ ಬಾರಿ ಸ್ಯಾಂಡಲ್​ವುಡ್​ಗೆ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಟ್ರೈಲರ್​ ಏನೋ ಈಗಾಗಲೇ ಕ್ರೇಜ್​ ಹುಟ್ಟು ಹಾಕಿದೆ.  ವೆಡ್ಡಿಂಗ್ ಗಿಫ್ಟ್ ಸಿನಿಮಾ ಈ ಮೊದಲು ಟೀಸರ್ ಮೂಲಕ ಕುತೂಹಲ ಹುಟ್ಟಿಸಿತ್ತು, ಇದೀಗ ಟ್ರೈಲರ್ ಆ ಕುತೂಹಲವನ್ನು ಹೆಚ್ಚು ಮಾಡಿದೆ.

ಇದರಲ್ಲಿ ಸಮಾಜಕ್ಕೆ ಸಂಬಂಧಪಟ್ಟ ಸಂದೇಶವಿದೆ ಎಂಬುದು ಮಾತ್ರ ಸ್ಪಷ್ಟವಾಗಿ ತಿಳಿಯುತ್ತದೆ. ಪ್ರೀತಿ, ಪ್ರೇಮ ಹಾಗೂ ಮದುವೆ ಬಗ್ಗೆ ಈ ಸಿನಿಮಾ ಇದೆ ಎಂಬುದು ಸದ್ಯಕ್ಕೆ ತಿಳಿದುಬಂದಿದೆ. ಅಲ್ಲದೇ ಸಾಧಿಸಬೇಕಾದ ಕನಸು, ಯಾವುದೋ ಕಾರಣಕ್ಕೆ ಕೋಪ, ಗಂಡನನ್ನ ಜೈಲಿಗೆ ಕಳುಹಿಸಲು ಮಾಡು ಸುಳ್ಳಿನ ನಾಟಕ, ವಕೀಲರ ಮಾತಿಗೆ ತಲೆ ಕುಣಿಸಿ, ಅಪರಾಧಿಯಾಗಿ ನಿಂತವನು ತನಗೇನಾಗಬೇಕು ಎಂಬುದನ್ನು ಮರೆತು ವರ್ತಿಸುವುದು ಹೀಗೆ ಈ ಸಿನಿಮಾ ಗಂಡ ಮತ್ತು ಹೆಂಡತಿಯ ಸಂಬಂಧದ ಸುತ್ತ ಸುತ್ತುತ್ತದೆ.


ಸಾಮಾನ್ಯವಾಗಿ ಯಾವುದೇ ಪ್ರಕರಣವಾಗಲಿ ಅದರಲ್ಲಿ ಹೆಣ್ಣು ಹೇಳಿದ ಮಾತಿಗೆ ಹೆಚ್ಚು ಬೆಲೆ ನೀಡಲಾಗುತ್ತದೆ. ಮೀಡಿಯಾ ಸೇರಿದಂತೆ ಪ್ರತಿಯೊಬ್ಬರೂ ಅದನ್ನೇ ನಂಬಿ ದೊಡ್ಡ ಸುದ್ದಿ ಮಾಡುತ್ತಾರೆ. ಅದರಿಂದ ತಪ್ಪೇ ಮಾಡದ ಗಂಡು ಸಹ ಬಲಿಯಾಗಿ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದು ಈ ಟ್ರೈಲರ್​ನ ಝಲಕ್ ಆಗಿದೆ. ಹೇಗೆ ಒಂದು ವಿಷಯದಲ್ಲಿ ಹಲವಾರು ತಪ್ಪುಗಳಾಗುತ್ತದೆ, ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಸಮಾಜದ ಕೆಲ ಹುಳುಕುಗಳನ್ನು ಈ ಟ್ರೈಲರ್ ಬಿಚ್ಚಿಟ್ಟಿದೆ.

ಇದನ್ನೂ ಓದಿ: ಸೀರೆ ಉಟ್ಟು ಪೋಸ್ ಕೊಟ್ಟ ಸಮಂತಾ! ತೆಲುಗು ಅಮ್ಮಾಯಿ ಫೋಟೋ ನೋಡಿ ಏನ್‌ ಲುಕ್ಕು ಗುರು ಅಂದ್ರು ಫ್ಯಾನ್ಸ್

ಜುಲೈ 8 ಕ್ಕೆ ಸಿನಿಮಾ ಬಿಡುಗಡೆ

ಇನ್ನು ಈ ಸಿನಿಮಾ ಜುಲೈ 8 ರಂದು ಬಿಡುಗಡೆಯಾಗುತ್ತಿದ್ದು, ಹೇಗಿರಲಿದೆ ಸಿನಿಮಾ ಎಂದು ಜನ ಕಾಯುತ್ತಿದ್ದಾರೆ.  ಇನ್ನು ಈ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ನಟಿ ಪ್ರೇಮಾ ಲಾಯರ್ ಆಗಿ ಕಮ್​ ಬ್ಯಾಕ್​ ಮಾಡುತ್ತಿದ್ದಾರೆ. ಈ ಟ್ರೈಲರ್​ನಲ್ಲಿ ಎಲ್ಲರ ಅಭಿನಯವೂ ಅದ್ಭುತವಾಗಿದೆ. ಅಚ್ಯುತ್ ಕುಮಾರ್ ಕೂಡ ಲಾಯರ್ ಪಾತ್ರದಲ್ಲಿ ನಿಮ್ಮನ್ನ ಮೋಡಿ ಮಾಡುತ್ತಾರೆ. ಹೆಂಡತಿಯಿಂದಲೇ ಕಷ್ಟದಲ್ಲಿ ಸಿಲುಕಿರುವ ಪತಿಯಾಗಿ ನಿಶಾನ್​ ಹಾಗೂ ಗಂಡನನ್ನೇ ದ್ವೇಷಿಸುವ ಪಾತ್ರದಲ್ಲಿ ಸೋನು ಗೌಡ ಬಹಳ ಚೆನ್ನಾಗಿ ನಟಿಸಿದ್ದಾರೆ.

ವಿಕ್ರಂ ಪ್ರಭು ಫಿಲ್ಮಂಸ್ ಬ್ಯಾನರ್ ನಡಿ ನಿರ್ಮಾಣ ಮಾಡಿರುವ ವೆಡ್ಡಿಂಗ್ ಗಿಫ್ಟ್ ಸಿನಿಮಾಗೆ ಉದಯ್ ಲೀಲಾ ಕ್ಯಾಮೆರಾ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನವಿದೆ.  ಇನ್ನು ಈ ಟ್ರೈಲರ್ ನೋಡುತ್ತಿದ್ದರೆ ವಿಕ್ರಮ್ ಪ್ರಭು ಸ್ಯಾಂಡಲ್​ವುಡ್​ನಲ್ಲಿ ಉತ್ತಮ ನಿರ್ದೇಶಕರ ಲಿಸ್ಟ್​ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಸದ್ಯದಲ್ಲೇ ಸೆಟ್ಟೇರಲಿದೆ ಕಾಫಿ ಕಿಂಗ್ ಬಯೋಪಿಕ್, ತೆರೆಯ ಮೇಲೆ ಕಾಫಿ ಡೇ ಸಿದ್ಧಾರ್ಥ್ ಜೀವನಗಾಥೆ

ಈ ಸಿನಿಮಾ ಹೊಸ ಆಯಾಮವನ್ನು ಹೊಂದಿದ್ದು, ಯಾವುದೇ ಒಂದು ವಿಷಯದಲ್ಲಿ ಎರಡು ಮಜಲುಗಳಿರುತ್ತದೆ ಎಂಬುದನ್ನ ಈ ಸಿನಿಮಾ ತೋರಿಸಿದೆ. ಸಿನಿಪ್ರಿಯರಿಗೆ ಇದು ಬಹಳ ಇಷ್ಟವಾಗಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ.
Published by:Sandhya M
First published: