• Home
 • »
 • News
 • »
 • entertainment
 • »
 • Banaras: ಟೈಟಲ್ ಲಾಂಚ್ ಮಾಡ್ಬೇಕಿತ್ತು ಪವರ್ ಸ್ಟಾರ್, ಆದ್ರೆ..? ಅಪ್ಪು ನೆನಪಿಸಿಕೊಂಡ ನಟ ಝೈದ್ ಖಾನ್

Banaras: ಟೈಟಲ್ ಲಾಂಚ್ ಮಾಡ್ಬೇಕಿತ್ತು ಪವರ್ ಸ್ಟಾರ್, ಆದ್ರೆ..? ಅಪ್ಪು ನೆನಪಿಸಿಕೊಂಡ ನಟ ಝೈದ್ ಖಾನ್

ಪುನೀತ್ ಜೊತೆ ಝೈದ್ ಖಾನ್ ಹಾಗೂ ಇತರರು (ಸಂಗ್ರಹ ಚಿತ್ರ)

ಪುನೀತ್ ಜೊತೆ ಝೈದ್ ಖಾನ್ ಹಾಗೂ ಇತರರು (ಸಂಗ್ರಹ ಚಿತ್ರ)

'ಬನಾರಸ್' ಚಿತ್ರದ ಮೂಲಕ ನಟ ಝೈದ್ ಖಾನ್ ಎಲ್ಲೆಡೆ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ. ಜೊತೆಗೆ ಝೈದ್ ಖಾನ್ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಬಗ್ಗೆ ಝೈದ್ ಖಾನ್ ತಾವು ಅಪ್ಪು ಜೊತೆ ಮಾತನಾಡಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

 • News18 Kannada
 • Last Updated :
 • Bangalore [Bangalore], India
 • Share this:

  ನಿರ್ದೇಶಕ (Director) ಜಯತೀರ್ಥ ಅವರು ಮತ್ತೊಂದು ಸಿನಿಮಾವನ್ನು (Movie) ತೆರೆಗೆ ತಂದಿದ್ದಾರೆ. ಇತ್ತೀಚೆಗೆ (Recent) ಸಖತ್ ಸುದ್ದಿಯಲ್ಲಿರುವ ಸಿನಿಮಾ ಬನಾರಸ್ (Banaras) ಚಿತ್ರ. ಈ ಚಿತ್ರ ಈಗ ಸಾಕಷ್ಟು ಸಂಚಲನ ಮೂಡಿಸಿದೆ. ನವೆಂಬರ್ 4 ರಂದು ತೆರೆಗೆ ಬಂದಿರುವ ಬನಾರಸ್ ಚಿತ್ರದಲ್ಲಿ ಝೈದ್ ಖಾನ್ ನಾಯಕ ನಟನಾಗಿ ಮತ್ತು ನಾಯಕಿಯಾಗಿ ಸೋನಲ್ ಮೊಂಥೆರೊ ಅಭಿನಯಿಸಿದ್ದಾರೆ. ನಿರ್ದೇಶಕ ಜಯತೀರ್ಥ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದೊಳ್ಳೆ ಪ್ರೇಮಕತೆಯನ್ನು (Love Story) ಟೈಮ್ ಟ್ರಾವೆಲ್ ಕಾನ್ಸೆಪ್ಟ್‌ ಜೊತೆ ನಿರ್ದೇಶಕ ಜಯತೀರ್ಥ ಅವರು ಕಟ್ಟಿ ಕೊಟ್ಟಿದ್ದಾರೆ. ನಿರ್ದೇಶಕ ಜಯತೀರ್ಥ ಅವರು ಈ ಬಾರಿಯೂ ಕನ್ನಡ ಸಿನಿ ಪ್ರಿಯರಿಗೆ ಹೊಸ ಹಾಗೂ ಪ್ರೇಮಕಥೆಯ ಚಿತ್ರವನ್ನು ನೀಡಿದ್ದಾರೆ.


  ಝೈದ್ ಖಾನ್ ನಟನೆ ಅನುಭವಿ ನಟರಿಗಿಂತ ಕಮ್ಮಿಯಿಲ್ಲ


  ಚೊಚ್ಚಲ ಚಿತ್ರದಲ್ಲಿ ಬಿಲ್ಡಪ್ ಹಾಗೂ ಗಿಮಿಕ್‌ ಗಳಿಲ್ಲದ ಸಖತ್ ಕಂಟೆಂಟ್ ಇರುವ ಚಿತ್ರವನ್ನು ನಟ ಝೈದ್ ಖಾನ್ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಖುಷಿಯ ವಿಚಾರಗಳಲ್ಲಿ ಒಂದಾಗಿದೆ. ಇನ್ನು ಚಿತ್ರ ವೀಕ್ಷಿಸಿದ ಸಿನಿ ಪ್ರಿಯರು ಬನಾರಸ್ ಒಳ್ಳೆಯ ಸಿನಿಮಾ. ಚೆನ್ನಾಗಿ ಮೂಡಿ ಬಂದಿದೆ. ಇಂತಹ ವಿಭಿನ್ನ ಚಿತ್ರಗಳು ಹಾಗೂ ಪ್ರಯತ್ನ ಕನ್ನಡ ಚಿತ್ರರಂಗಕ್ಕೆ ಅಗತ್ಯವಾಗಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.


  ಇನ್ನು ಝೈದ್ ಖಾನ್ ಅನುಭವ ಇರುವ ನಟರಂತೆ ಅಭಿನಯಿಸಿದ್ದಾರೆ. ಎಲ್ಲಿಯೂ ಸಹ ಝೈದ್ ಖಾನ್ ಪ್ರಥಮ ಚಿತ್ರ ಇದು ಅಂತಾ ಅನ್ನಿಸುವುದೇ ಇಲ್ಲ. ನಟನೆ ಜತೆಗೆ ಡಾನ್ಸ್ ಹಾಗೂ ಆಕ್ಷನ್ ಕೂಡ ಅಚ್ಚುಕಟ್ಟಾಗಿ ಝೈದ್ ಖಾನ್ ಮಾಡಿದ್ದಾರೆ. ಇವರು ಚಂದನವನಕ್ಕೆ ಹೊಸ ಭರವಸೆಯ ನಟರಾಗಿ ಮೂಡಿ ಬಂದಿದ್ದಾರೆ ಎನ್ನಲಾಗಿದೆ.


  ಇದನ್ನೂ ಓದಿ: ಜಪಾನ್​ನಲ್ಲಿ ತ್ರಿಬಲ್ ಆರ್ ಹವಾ! ಎರಡೇ ವಾರದಲ್ಲಿ ಗಳಿಸಿದ್ದೆಷ್ಟು?


  ಚಿತ್ರದ ಬಗ್ಗೆ ಪುನೀತ್ ರಾಜ್ ಕುಮಾರ್ ಜೊತೆ ಮಾತನಾಡಿದ್ದ ಸಂಗತಿ ಹಂಚಿಕೊಂಡ ನಟ


  ಇನ್ನು ಬನಾರಸ್ ಚಿತ್ರ ಮೂಲಕ ಝೈದ್ ಖಾನ್ ಎಲ್ಲೆಡೆ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ. ಜೊತೆಗೆ ಝೈದ್ ಖಾನ್ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಬಗ್ಗೆ ಝೈದ್ ಖಾನ್ ತಾವು ಅಪ್ಪು ಜೊತೆ ಮಾತನಾಡಿದ್ದ ಸಂಗತಿಯನ್ನು ಹಂಚಿಕೊಂಡಿದ್ದಾರೆ.


  ಜಗಳ ಮಾಡಿ ಟೈಟಲ್ ಲಾಂಚ್ ಮಾಡಿಸ್ತೀನಿ ಅಂದಿದ್ದೆ- ಝೈದ್ ಖಾನ್


  ಝೈದ್ ಖಾನ್ ತಾವು ಜಗಳ ಮಾಡಿ ಟೈಟಲ್ ಲಾಂಚ್ ಮಾಡಿಸ್ತಿದ್ದೆ ಎಂದು ಹೇಳಿದ್ದಾರೆ. ನಮ್ಮ ಚಿತ್ರದ ಶೀರ್ಷಿಕೆ ರೆಡಿ ಆದಾಗ ಯಾರ ಹತ್ರ ಲಾಂಚ್ ಮಾಡಿಸಬೇಕು ಅನ್ನೋ ಪ್ರಶ್ನೆ ಎದುರಾಗಿತ್ತು. ಆಗ ನಾನು ಪುನೀತ್ ಸರ್ ಅವರ ಕೈಯಲ್ಲಿ ಟೈಟಲ್ ಲಾಂಚ್ ಮಾಡಿಸಲೇಬೇಕು ಎಂದಿದ್ದೆ.  ಆಗ ನಿರ್ದೇಶಕರು ಅಪ್ಪು ಸರ್ ಟೈಟಲ್ ಲಾಂಚ್ ಮಾಡ್ತಾರಾ ಅಂತಾ ಕೇಳಿದ್ರು.


  ಅದಕ್ಕೆ ನಾನು ಯಾಕೆ ಮಾಡೋದಿಲ್ಲ. ನಾನು ಪುನೀರ್ ಸರ್ ಮನೆಗೆ ಹೋಗಿ ಜಗಳ ಮಾಡಿಯಾದ್ರೂ ಟೈಟಲ್ ಲಾಂಚ್ ಮಾಡಿಸ್ತೀನಿ ಅಂದಿದ್ದೆ. ಅಷ್ಟು ಸಲುಗೆ ಇದೆ ನನಗೆ ಎಂದು ಹೇಳಿದ್ದೆ ಅಂತಾ ಝೈದ್ ಖಾನ್ ಸ್ಮರಿಸಿದ್ದಾರೆ.


  ಈ ಬಗ್ಗೆ ಅಪ್ಪು ಸರ್‌ ಗೆ ಕಾಲ್ ಮಾಡಿ ಮಾತಾಡಿದ್ದೆ. ಅಪ್ಪು ಸರ್‌ಗೆ ಸಂಜೆ ಕರೆ ಮಾಡಿದ್ದೆ. ಮೊದಲಿಗೆ ಅವರು ಫೋನ್ ಎತ್ತಲಿಲ್ಲ. ಆಮೇಲೆ ಅವ್ರೇ ಕರೆ ಮಾಡಿ ಮಾತನಾಡಿದ್ರು. ಆಗ ನಾನು ಸಿನಿಮಾ ಟೈಟಲ್ ಲಾಂಚ್ ನೀವೇ ಮಾಡ್ಬೇಕು ಅಂದಿದ್ದೆ. ಅದಕ್ಕೆ ಅವರು ಓಕೆ ಅಂದಿದ್ರು. ಆದರೆ ದುರಾದೃಷ್ಷ ನಾನು ಮಾತಾನಾಡಿದ ಮರುದಿನವೇ ಅಪ್ಪು ಸರ್ ನಮ್ಮನ್ನೆಲ್ಲಾ ಅಗಲಿದರು ಅಂತಾ ಹೇಳಿದ್ರು.


  ಅಪ್ಪು ಸರ್ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಿದೆ


  ಹೀಗಾಗಿ ನಾನು ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಿದೆ. ತುಂಬಾ ಜನರು ಬೇಡ ಅಂದ್ರು. ಆದ್ರೆ ನಾನು ಮಾತ್ರ ನನ್ನ ಪಟ್ಟು ಬಿಡದೇ ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಿದೆವು ಅಂತಾ ಹೇಳಿದ್ರು.


  ಇದನ್ನೂ ಓದಿ: ರಾಮ-ಕೃಷ್ಣರ ನಾಮ, ಚಿಂದಿ ಬಟ್ಟೆಯಲ್ಲಿ ಡ್ಯಾನ್ಸರ್ಸ್ ಹಂಗಾಮ! ದೇವಿ ಶ್ರೀ ಪ್ರಸಾದ್ ವಿರುದ್ಧ ಕೇಸ್


  ಅಪ್ಪು ಸರ್ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡೋದು ಬೇಡ. ಸಮಾಧಿ ಮುಂದೆ ಮಾಡಿದರೆ ನೆಗೆಟಿವ್ ಆಗುತ್ತೆ. ಯಾರೂ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಲ್ಲ ಅಂತಾ ತುಂಬಾ ಜನ ಹೇಳಿದ್ರು. ಆಗ ನಾನು ಯಾರ ಮಾತೂ ಕೇಳಲಿಲ್ಲ. ಸಮಾಧಿ ಎದುರೇ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದೆ ಅಂತಾ ಹೇಳಿದ್ದಾರೆ.

  Published by:renukadariyannavar
  First published: