• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Vijay Deverakonda: ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾ ನೋಡುವುದಕ್ಕೂ ಮುನ್ನ ಈ ಚಿತ್ರಗಳನ್ನು ನೋಡಿ

Vijay Deverakonda: ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾ ನೋಡುವುದಕ್ಕೂ ಮುನ್ನ ಈ ಚಿತ್ರಗಳನ್ನು ನೋಡಿ

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ

ಅರ್ಜುನ್ ರೆಡ್ಡಿ ಮತ್ತು ಗೀತ ಗೋವಿಂದಂನಂತಹ ಹಿಟ್ ಚಿತ್ರಗಳಿಂದ ಕಳೆದ ಹತ್ತು ವರ್ಷಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಹವಾ ಸೃಷ್ಟಿಸಿಕೊಂಡ ವಿಜಯ್ ಅವರು ಅನೇಕ ತೆಲುಗು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಿಜಯ್ ದೇವರಕೊಂಡ ಅವರ ಕೆಲವು ಹಿಟ್ ಚಿತ್ರಗಳು ಇಲ್ಲಿವೆ, ಅವುಗಳನ್ನು ‘ಲೈಗರ್’ ಚಿತ್ರವನ್ನು ನೋಡುವ ಮೊದಲು ನೀವು ಮಿಸ್ ಮಾಡದೆ ನೋಡಲೇಬೇಕು.

ಮುಂದೆ ಓದಿ ...
  • Share this:

ತೆಲುಗಿನ ಜನಪ್ರಿಯ ನಟರಲ್ಲಿ ಒಬ್ಬರಾದ ವಿಜಯ್ ದೇವರಕೊಂಡ (Vijay Deverakonda) ಈಗ ಬರೀ ತೆಲುಗಿಗಷ್ಟೇ ಸೀಮಿತವಾಗಿರದೆ ನ್ಯಾಷನಲ್ ಕ್ರಶ್ ಆಗಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ‘ಕಾಫಿ ವಿತ್ ಕರಣ್’ ಶೋ (Koffee with Karan Show) ನ ಕೊನೆಯ ಸಂಚಿಕೆಯಲ್ಲಿ ಅವರನ್ನು "ಯೂನಿವರ್ಸಲ್ ಕ್ರಶ್" ಎಂದು ಕರೆಯಲಾಗಿತ್ತು. ವಿಜಯ್ ಅವರು ಈ ಹಿಂದೆ ‘ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಮೇಲ್ 2021’ ಎಂಬ ಬಿರುದನ್ನು ಪಡೆದರು ಮತ್ತು ಅರ್ಜುನ್ ರೆಡ್ಡಿ (Arjun Reddy) ಚಿತ್ರದ ನಂತರವಂತೂ ಅವರು ಈ ಮಹಿಳಾ ಪ್ರೇಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಶೀಘ್ರದಲ್ಲಿಯೇ ಅವರು ನಟಿ ಅನನ್ಯಾ ಪಾಂಡೆ (Ananya Pandey) ಅವರೊಂದಿಗೆ ‘ಲೈಗರ್’ (Liger) ಹಿಂದಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಅರ್ಜುನ್ ರೆಡ್ಡಿ ಮತ್ತು ಗೀತ ಗೋವಿಂದಂನಂತಹ ಹಿಟ್ ಚಿತ್ರಗಳಿಂದ ಕಳೆದ ಹತ್ತು ವರ್ಷಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಹವಾ ಸೃಷ್ಟಿಸಿಕೊಂಡ ವಿಜಯ್ ಅವರು ಅನೇಕ ತೆಲುಗು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಿಜಯ್ ದೇವರಕೊಂಡ ಅವರ ಕೆಲವು ಹಿಟ್ ಚಿತ್ರಗಳು ಇಲ್ಲಿವೆ, ಅವುಗಳನ್ನು ‘ಲೈಗರ್’ ಚಿತ್ರವನ್ನು ನೋಡುವ ಮೊದಲು ನೀವು ಮಿಸ್ ಮಾಡದೆ ನೋಡಲೇಬೇಕು.


ಅರ್ಜುನ್ ರೆಡ್ಡಿ
ನಟ ವಿಜಯ್ ದೇವರಕೊಂಡ ಅವರ ಅತ್ಯಂತ ಪ್ರಸಿದ್ಧ ಚಿತ್ರಗಳಲ್ಲಿ ಅರ್ಜುನ್ ರೆಡ್ಡಿ ಕೂಡ ಒಂದು. ಕಥೆಯ ಕಥಾನಾಯಕ ಮದ್ಯವ್ಯಸನ ಮತ್ತು ಅಸ್ಥಿರ ಮನೋಭಾವ ಹೊಂದಿರುವ ಯುವ ಶಸ್ತ್ರಚಿಕಿತ್ಸಕ. ತನ್ನ ಪ್ರಿಯತಮೆ ಬೇರೊಬ್ಬಳನ್ನು ಮದುವೆಯಾಗುತ್ತಿದ್ದಾಳೆ ಎಂದು ಅವನು ಕಂಡು ಕೊಂಡಾಗ, ನಾಯಕ ನಟ ಅಕ್ಷರಶಃ ವಿಚಿತ್ರ ವರ್ತನೆಗೆ ಬದಲಾಗುತ್ತಾನೆ.ಈ ಚಿತ್ರದ ಯಶಸ್ಸನ್ನು ನೋಡಿ ಈ ಚಿತ್ರವನ್ನು ಕಬೀರ್ ಸಿಂಗ್ ಆಗಿ ಹಿಂದಿ ಪ್ರೇಕ್ಷಕರಿಗೆ ತರಲಾಯಿತು ಮತ್ತು ಶಾಹಿದ್ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ನೀವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ವೀಕ್ಷಿಸಬಹುದು.


ಪೆಲ್ಲಿ ಚೂಪುಲು
ಈ ಚಿತ್ರದ ಕಥೆಯು ತುಂಬಾನೇ ಸರಳವಾಗಿದ್ದು, ಇದರಲ್ಲಿ ನಾಯಕ ನಟನ ಪಾತ್ರದಲ್ಲಿ ಅಭಿನಯಿಸಿದ ವಿಜಯ್ ಯಾವುದೇ ಗುರಿಯಿಲ್ಲದ ಒಬ್ಬ ಯುವಕನ ಪಾತ್ರ ಮಾಡಿದ್ದಾರೆ. ಹೇಗೆ ಅವರು ಮದುವೆಗೆ ಒಂದು ಹುಡುಗಿ ನೋಡಲು ಹೋಗಿ ಅವರ ಜೀವನ ಬದಲಾಗುತ್ತದೆ ಎಂಬುದೇ ಚಿತ್ರದ ಒಟ್ಟಾರೆ ಕತೆಯಾಗಿದೆ. ಇವರಿಬ್ಬರು ಆಹಾರ ಟ್ರಕ್ ಅನ್ನು ಪ್ರಾರಂಭಿಸುವುದು ಅವರ ಜೀವನವನ್ನು ಬದಲಾಯಿಸುವುದರ ಜೊತೆಗೆ ಇಬ್ಬರು ಪ್ರೀತಿ ಮಾಡುವುದನ್ನು ಈ ಚಿತ್ರದಲ್ಲಿ ನೋಡಬಹುದು. ಇದನ್ನು ನೀವು ಸನ್ ನೆಕ್ಸ್ಟ್ ನಲ್ಲಿ ನೋಡಬಹುದು.


ಇದನ್ನೂ ಓದಿ:  Vijay Deverekonda - Rashmika Mandanna ಬ್ರೇಕಪ್ ಆಗಿ 2 ವರ್ಷಗಳೇ ಆಗಿದ್ಯಂತೆ!


ಡಿಯರ್ ಕಾಮ್ರೇಡ್
ತುಂಬಾನೇ ಕೋಪ ಹೊಂದಿರುವ ಮತ್ತು ಅದರ ಮೇಲೆ ಯಾವುದೇ ನಿಯಂತ್ರಣ ಹೊಂದಿರದ ಒಬ್ಬ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುತ್ತಾರೆ. ಲಿಲ್ಲಿ ಎಂಬ ಹುಡುಗಿಯ ಬಗ್ಗೆ ಇವನಿಗೆ ಪ್ರೀತಿ ಹುಟ್ಟುತ್ತದೆ. ಅವನ ವ್ಯಕ್ತಿತ್ವವು ಲಿಲ್ಲಿ ಸಲುವಾಗಿ ಬದಲಾಯಿಸಿಕೊಳ್ಳುವುದಕ್ಕೆ ಅವನಿಗೆ ಕಷ್ಟಕರವಾಗಿಸುತ್ತದೆ. ಲಿಲ್ಲಿ ಬಾಬಿಯ ಹಿಂಸಾತ್ಮಕ ಪ್ರವೃತ್ತಿಗಳನ್ನು ಪರಿಗಣಿಸಿದಾಗ ಮತ್ತು ಅವನ ಕೋಪವನ್ನು ನಿಯಂತ್ರಿಸಲು ಹೆಣಗಾಡುವುದನ್ನು ಮತ್ತು ಹೇಗೆ ನಾಯಕ ಬದಲಾಗುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಇದನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ನೋಡಬಹುದು.


ಟ್ಯಾಕ್ಸಿವಾಲಾ
ಕ್ಯಾಬ್ ಡ್ರೈವರ್ ಆಗಲು ನಿರ್ಧರಿಸುವ ಮೊದಲು ಶಿವ ಹಲವಾರು ಬೇರೆ ಬೇರೆ ಉದ್ಯೋಗಗಳನ್ನು ತ್ಯಜಿಸುತ್ತಾನೆ. ಆದಾಗ್ಯೂ, ಅವನು ಕಾರೊಂದನ್ನು ಕೊಂಡುಕೊಂಡು ಚಾಲನೆ ಮಾಡುವಾಗ ಭಯಾನಕ ಘಟನೆಗಳನ್ನು ಎದುರಿಸಿದಾಗ ಮತ್ತು ರಹಸ್ಯವನ್ನು ಪರಿಹರಿಸಲು ಪ್ರಯತ್ನಿಸಿದಾಗ, ವಿಷಯಗಳು ತೀಕ್ಷ್ಣವಾದ ತಿರುವು ಪಡೆಯುತ್ತವೆ. ಇದನ್ನು ನೀವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ವೀಕ್ಷಿಸಬಹುದು.


ನೋಟಾ
ಒಬ್ಬ ರಾಜಕಾರಣಿಯ ಮಗನಾದ ವರುಣ್ ಇದ್ದಕ್ಕಿದ್ದಂತೆ ತನ್ನ ತಂದೆಯ ಮುಖ್ಯಮಂತ್ರಿ ಸ್ಥಾನಕ್ಕೆ ತಳ್ಳಲ್ಪಡುತ್ತಾನೆ, ಇದು ಕಥೆಯ ಕೇಂದ್ರ ವಿಷಯವಾಗಿ ಕಾರ್ಯನಿರ್ವಹಿಸುತ್ತದೆ. ವರುಣ್ ತನ್ನ ನಾಯಕತ್ವದಲ್ಲಿ ಜನರಿಗೆ ಒಬ್ಬ ಒಳ್ಳೆಯ ಮತ್ತು ನಿಷ್ಠಾವಂತ ನಾಯಕನ ಅಗತ್ಯವಿದೆ ಎಂದು ತಿಳಿದಾಗ, ಅವನು ಅನೇಕ ಸವಾಲುಗಳನ್ನು ಎದುರಿಸುತ್ತಾನೆ. ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ನೀವು ಇದನ್ನು ನೋಡಬಹುದು.


ವರ್ಲ್ಡ್ ಫೇಮಸ್ ಲವ್ವರ್
ಗೌತಮ್ ಮತ್ತು ಯಾಮಿನಿ ನಡುವಿನ ಪ್ರಣಯವು ಕಥೆಯ ಕೇಂದ್ರ ವಿಷಯವಾಗಿದೆ. ಗೌತಮ್ ಒಬ್ಬ ಬರಹಗಾರನಾಗಲು ಬಯಸುತ್ತಾರೆ. ಒಬ್ಬ ಬರಹಗಾರನಾಗಿ ತನ್ನ ಹೃದಯ ವಿದ್ರಾವಕತೆಯ ಬಗ್ಗೆ ಅವನು ವಿಷಾದಿಸುತ್ತಾನೆ ಮತ್ತು ಬರೆಯುತ್ತಾನೆ. ಅವನು ತನ್ನ ಪ್ರೇಮಕಥೆಗಳನ್ನು ಬರೆಯುವ ಮೂಲಕ ತನ್ನ ಸಂಬಂಧದ ತಪ್ಪುಗಳಿಂದ ಕಲಿಯುತ್ತಾನೆ. ಸೋನಿಲಿವ್ ನಲ್ಲಿ ಇದನ್ನು ನೋಡಬಹುದು.


ಇದನ್ನೂ ಓದಿ: Nayanthara: 75ನೇ ಸಿನಿಮಾಗೆ ನಯನತಾರಾ ತಗೊಳ್ತಿರೋ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ! ಬಾಲಿವುಡ್ ನಟಿಯರ ಲಿಸ್ಟ್​ಗೆ ಸೌತ್ ನಟಿ


ಮಹಾನಟಿ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ನಟಿ ಸಾವಿತ್ರಿ, ತನ್ನ ಖಾಸಗಿ ಜೀವನದಲ್ಲಿ ಅನೇಕ ದುರಂತ ಘಟನೆಗಳನ್ನು ಅನುಭವಿಸುತ್ತಾರೆ. ಅವಳು ಅಂತಿಮವಾಗಿ ಕುಡಿತದ ಚಟಕ್ಕೆ ಬೀಳುತ್ತಾರೆ. ಏಕೆಂದರೆ ಅವಳು ತನ್ನ ಖಿನ್ನತೆಯನ್ನು ನಿಭಾಯಿಸಲು ಅಸಮರ್ಥಳಾಗಿರುತ್ತಾಳೆ. ವಿಜಯ್ ದೇವರಕೊಂಡ ನಿರ್ವಹಿಸಿದ ವಿಜಯ್ ಆಂಥೋನಿ ಎಂಬ ಛಾಯಾಗ್ರಾಹಕನ ಪಾತ್ರ ಅವರ ದುಃಸ್ಥಿತಿಯ ಬಗ್ಗೆ ಒಂದು ಲೇಖನವನ್ನು ಬರೆಯುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಇದನ್ನು ವೀಕ್ಷಿಸಿ.


ಗೀತ ಗೋವಿಂದಂ
ಈ ಚಿತ್ರದ ಕಥೆಯು ಒಬ್ಬ ಯುವ ಉಪನ್ಯಾಸಕನ ಸುತ್ತಲೂ ಸುತ್ತುತ್ತದೆ, ಅವನು ಒಬ್ಬ ದೃಢ ನಿಶ್ಚಯವಿರುವಂತಹ ಮಹಿಳೆಯನ್ನು ಪ್ರೀತಿಸುತ್ತಾನೆ. ಅವನು ತನ್ನ ತಪ್ಪು ತಿಳುವಳಿಕೆಗಳನ್ನು ವಿವರಿಸಲು ಮತ್ತು ಅವಳನ್ನು ಮನವೊಲಿಸಲು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾನೆ, ಆದರೆ ದುರದೃಷ್ಟವಶಾತ್, ವಿಷಯಗಳು ಬೇಗನೆ ಅವನ ವಿರುದ್ಧ ತಿರುಗುತ್ತವೆ. ಇದನ್ನು ಝೀ5 ನಲ್ಲಿ ವೀಕ್ಷಿಸಬಹುದು.

Published by:Ashwini Prabhu
First published: