• Home
  • »
  • News
  • »
  • entertainment
  • »
  • Mani Ratnam: ‘ಪೊನ್ನಿಯಿನ್ ಸೆಲ್ವನ್’ ರಿಲೀಸ್ ಗೂ ಮುನ್ನ ಮಣಿರತ್ನಂ ಅವರ ಈ 5 ಚಿತ್ರಗಳನ್ನು ತಪ್ಪದೇ ನೋಡಿ

Mani Ratnam: ‘ಪೊನ್ನಿಯಿನ್ ಸೆಲ್ವನ್’ ರಿಲೀಸ್ ಗೂ ಮುನ್ನ ಮಣಿರತ್ನಂ ಅವರ ಈ 5 ಚಿತ್ರಗಳನ್ನು ತಪ್ಪದೇ ನೋಡಿ

ಮಣಿರತ್ನಂ

ಮಣಿರತ್ನಂ

ಮಣಿರತ್ನಂ ಅವರ ಚಿತ್ರಗಳು ಎಂದರೆ ಕೇಳಬೇಕೆ? ಯಾರಾದರೂ ಅವರು ಮಾಡಿರುವಂತಹ ಹಳೆಯ ಚಿತ್ರಗಳನ್ನು ನೋಡಿಲ್ಲ ಎಂದರೆ ನೆಟ್‌ಫ್ಲಿಕ್ಸ್ ನಲ್ಲಿರುವ ಅವರ ಚಲನಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ. ಎ.ಆರ್.ರೆಹಮಾನ್ ಅವರ ಸಂಗೀತವಿರುವ ‘ಪೊನ್ನಿಯಿನ್ ಸೆಲ್ವನ್’ ಇನ್ನೂ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಅಷ್ಟರಲ್ಲಿ ನೀವು ಈ 5 ಸಿನೆಮಾಗಳನ್ನು ನೋಡಿ ಮುಗಿಸಿ.

ಮುಂದೆ ಓದಿ ...
  • Share this:

ಖ್ಯಾತ ಲೇಖಕರಾದ ಕಲ್ಕಿ ಆರ್ ಕೃಷ್ಣಮೂರ್ತಿ ಅವರು ಬರೆದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan )ಎಂಬ ತಮಿಳು ಕಾದಂಬರಿ ಹಲವಾರು ದಶಕಗಳಿಂದ ತಮಿಳಿನ ಓದುಗರ ಕಲ್ಪನೆಯ ಮೇಲೆ ತುಂಬಾನೇ ಪ್ರಭಾವ ಬೀರಿತ್ತು ಅಂತ ಹೇಳಿದರೆ ತಪ್ಪಾಗುವುದಿಲ್ಲ. 1950ರ ದಶಕದ ಆರಂಭದಲ್ಲಿ ಕಲ್ಕಿ ಎಂಬ ತಮಿಳು (Tamil) ನಿಯತಕಾಲಿಕದಲ್ಲಿ ಮೊದಲ ಬಾರಿಗೆ ಧಾರಾವಾಹಿಗಳಲ್ಲಿ (Serial) ಪ್ರಸಾರವಾದ ಈ ಕಾದಂಬರಿಯು ಪ್ರತಿ ವರ್ಷ ಚೆನ್ನೈ ಪುಸ್ತಕ ಮೇಳದಲ್ಲಿ ಅತಿ ಹೆಚ್ಚು ಮಾರಾಟವಾಗುವುದರಲ್ಲಿ ಇದು ಒಂದಾಗಿತ್ತು ಎಂದು ಹೇಳಬಹುದು. ಚೋಳರ ಇತಿಹಾಸವನ್ನು ಆಧರಿಸಿದ ಈ ಪುಸ್ತಕವು (Books) ಯಾವಾಗಲೂ ಅನೇಕ ಚಲನಚಿತ್ರ ನಿರ್ಮಾಪಕರ (Film producer) ಗಮನವನ್ನು ಸೆಳೆದಿತ್ತು. ಆದರೆ ಅನೇಕ ಕಾರಣಗಳಿಂದ ಯಾರು ಇದನ್ನು ಚಿತ್ರ ಮಾಡಿರಲಿಲ್ಲ.


ಆದರೆ ಈಗ ನಿರ್ದೇಶಕ ಮಣಿರತ್ನಂ ಅವರು ಈ ಚಿತ್ರದ ಟೀಸರ್ ಅನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ್ದರು. ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ಜಯರಾಮ್, ವಿಕ್ರಮ್ ಪ್ರಭು, ಪ್ರಕಾಶ್ ರಾಜ್, ತ್ರಿಷಾ, ಐಶ್ವರ್ಯ ಲಕ್ಷ್ಮಿ ಸೇರಿದಂತೆ ದೊಡ್ಡ ತಾರಾ ಬಳಗವಿದೆ.


ಮಣಿರತ್ನಂ ಅವರ ಚಿತ್ರಗಳು ಎಂದರೆ ಕೇಳಬೇಕೆ? ಯಾರಾದರೂ ಅವರು ಮಾಡಿರುವಂತಹ ಹಳೆಯ ಚಿತ್ರಗಳನ್ನು ನೋಡಿಲ್ಲ ಎಂದರೆ ನೆಟ್‌ಫ್ಲಿಕ್ಸ್ ನಲ್ಲಿರುವ ಅವರ ಚಲನಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ. ಎ.ಆರ್.ರೆಹಮಾನ್ ಅವರ ಸಂಗೀತವಿರುವ ‘ಪೊನ್ನಿಯಿನ್ ಸೆಲ್ವನ್’ ಇನ್ನೂ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಅಷ್ಟರಲ್ಲಿ ನೀವು ಈ 5 ಸಿನೆಮಾಗಳನ್ನು ನೋಡಿ ಮುಗಿಸಿ.


ಬಾಂಬೆ (1995)
1995 ರಲ್ಲಿ ಬಿಡುಗಡೆಯಾದ ಮಣಿರತ್ನಂ ಅವರ ಚಿತ್ರ ಬಾಂಬೆ ಒಂದು ಹೃದಯಸ್ಪರ್ಶಿ ಪ್ರೇಮಕಥೆಯ ಚಿತ್ರ ಅಂತ ಹೇಳಬಹುದು. ಇದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಒಳನಾಡಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಈ ಚಿತ್ರದ ಕಥೆಯು ನಂತರ ಮುಂಬೈನಲ್ಲಿ ಬಂದು ಕೊನೆಗೊಳ್ಳುತ್ತದೆ. 1990ರ ದಶಕದ ರಕ್ತಸಿಕ್ತ ಕೋಮುಗಲಭೆಗಳಿಂದ ಪೀಡಿತವಾದ ಬಾಂಬೆಯ ಹಿನ್ನೆಲೆಯಲ್ಲಿ ಹೇಗೆ ಇಬ್ಬರು ಪ್ರೇಮಿಗಳು ಅಂತರ್ಧರ್ಮೀಯ ವಿವಾಹ ಮಾಡಿಕೊಂಡು ಮುಂಬೈಗೆ ಬಂದು ನೆಲೆಸುತ್ತಾರೆ ಮತ್ತು ನಂತರ ಕೋಮುಗಲಭೆ ಹೇಗೆ ಇವರ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಈ ಚಿತ್ರದ ಕಥೆ ಇದೆ.


ಇದನ್ನೂ ಓದಿ: Sai Prakash: ನಿರ್ದೇಶಕ ಸಾಯಿ ಪ್ರಕಾಶ್​ 100ನೇ ಸಿನಿಮಾ ಅನೌನ್ಸ್​, ಸದ್ಯದಲ್ಲಿಯೇ ಶೂಟಿಂಗ್ ಸ್ಟಾರ್ಟ್​


ಈ ಚಿತ್ರದಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತ ಮತ್ತು ಹಾಡುಗಳು ಮತ್ತೊಂದು ಹೈಲೈಟ್ ಆಗಿವೆ. ಅವರ ಮನೆಯ ಮೇಲೆ ಮುಸ್ಲಿಂ ಗುಂಪುಗಳು ಬಾಂಬ್ ಗಳನ್ನು ಎಸೆದವು ಮತ್ತು ಈ ಚಿತ್ರ ಬಿಡುಗಡೆಯಾದ ನಂತರ ಖ್ಯಾತ ನಿರ್ದೇಶಕನನ್ನು ಆಸ್ಪತ್ರೆಗೂ ಸಹ ದಾಖಲಿಸಬೇಕಾಯಿತು.


ದಿಲ್ ಸೆ (1998)
ಈ ಚಿತ್ರ ಬಾಲಿವುಡ್ ನಲ್ಲಿ ಮಣಿರತ್ನಂ ಅವರ ಚೊಚ್ಚಲ ಚಿತ್ರವಾಗಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಹಣ ಗಳಿಸದೆ ಹೋದರೂ ಸಹ ದಿಲ್ ಸೆ ಚಿತ್ರವನ್ನು ಅಂಡರ್ ರೇಟೆಡ್ ಕ್ಲಾಸಿಕ್ ಎಂದು ಪರಿಗಣಿಸಲಾಗಿದೆ. ಈ ಚಲನಚಿತ್ರವು ಅವರ ಭಯೋತ್ಪಾದನೆ ಟ್ರೈಲಾಜಿ ಎಂದರೆ ಇತರ ಎರಡು ರೋಜಾ ಮತ್ತು ಬಾಂಬೆ ಚಿತ್ರಗಳ ಒಂದು ಒಂದು ಭಾಗವಾಗಿದೆ, ಇದು ಭಾರತದಲ್ಲಿ ತುಂಬಾನೇ ವಿರಳವಾಗಿ ಮಾತನಾಡುವ ಸಮಸ್ಯೆಯಾದ ಈಶಾನ್ಯಲ್ಲಿನ ಭಯೋತ್ಪಾದನೆಯನ್ನು ತೋರಿಸಿದೆ.


ನಟ ಶಾರುಖ್ ಖಾನ್, ನಟಿ ಮನಿಷಾ ಕೊಯಿರಾಲಾ ಮತ್ತು ಪ್ರೀತಿ ಜಿಂಟಾ ನಟಿಸಿರುವ ಈ ಚಿತ್ರದಲ್ಲಿ ಅಸ್ಸಾಂನಲ್ಲಿ ದಂಗೆ ಮತ್ತು ಉಲ್ಫಾ ರೀತಿಯ ಭಯೋತ್ಪಾದನೆಯನ್ನು ತೋರಿಸಲಾಗಿತ್ತು.


ಕನ್ನತಿಲ್ ಮುತ್ತಮಿಟ್ಟಲ್ (2002)
ಭಯೋತ್ಪಾದನೆಯಿಂದ ತೊಂದರೆಗೀಡಾದ ಸ್ಥಳಗಳ ಬಗ್ಗೆ ಮಣಿರತ್ನಂ ಮತ್ತು ಅವರ ಮೋಹವು ಈ ಚಲನಚಿತ್ರದಲ್ಲಿ ಮತ್ತಷ್ಟು ನಾಟಕವನ್ನು ಪಡೆಯಿತು. ಚೆನ್ನೈನಲ್ಲಿ ಪ್ರಾರಂಭವಾಗುವ ಈ ಚಿತ್ರವು ಹಿಂಸಾಚಾರ ಪೀಡಿತ ಶ್ರೀಲಂಕಾದ ಕಾಡುಗಳಿಗೆ ಹರಡುತ್ತದೆ. ಈ ಕಥೆಯು ಶ್ರೀಲಂಕಾದ ತಮಿಳು ಪೋಷಕರಾದ, ಆದರೆ ಚೆನ್ನೈನಲ್ಲಿ ದಂಪತಿಗಳು ದತ್ತು ತೆಗೆದುಕೊಂಡ ಮಗುವಿನ ಕಥೆಯಾಗಿದೆ. ಮಗುವು ಶ್ರೀಲಂಕಾದ ಅಂತರ್ಯುದ್ಧದ ನಡುವೆ ತನ್ನ ಜೈವಿಕ ತಾಯಿಯನ್ನು ಭೇಟಿಯಾಗಲು ಬಯಸುತ್ತದೆ. ಇದು ಲಂಕಾದಲ್ಲಿನ ಜನಾಂಗೀಯ ಕಲಹವನ್ನು ತೋರಿಸಿದ ರೀತಿಗಾಗಿ ಕೆಲವು ವಿವಾದಗಳನ್ನು ಹುಟ್ಟು ಹಾಕಿತು. ಈ ಚಿತ್ರವು ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.


ಗುರು (2007)
ವಿವಾದಾತ್ಮಕ ವಿಷಯಗಳನ್ನು ನಿಭಾಯಿಸಲು ಹಿಂಜರಿಯದ ನಿರ್ದೇಶಕ ಅಂತ ಮಣಿರತ್ನಂ ಅವರನ್ನು ಕರೆಯಬಹುದು. ರಿಲಾಯನ್ಸ್ ಸಾಮ್ರಾಜ್ಯದ ಪಿತಾಮಹ ಧೀರೂಭಾಯಿ ಅಂಬಾನಿಯವರ ಜೀವನ ಮತ್ತು ಕಾಲಘಟ್ಟಗಳ ಬಗ್ಗೆ ಗುರು ಚಿತ್ರದಲ್ಲಿ ತೋರಿಸಿದರು. ಆದರೆ ಮಣಿ, ತನ್ನ ವಿಶಿಷ್ಟ ಚಾತುರ್ಯದಿಂದ ಅಂಬಾನಿಯ ಜೀವನದ ಕೆಲವು ಅಂಶಗಳನ್ನು ಗಾಳಿಗೆ ತೂರಿದರು ಎಂಬ ಟೀಕೆಗಳೂ ಬಂದಿದ್ದವು.


ಸಹಜವಾಗಿಯೇ ಭಾರತದಂತಹ ದೇಶದಲ್ಲಿ, ಜನಪ್ರಿಯ ವ್ಯಕ್ತಿಗಳ ಜೀವನದ ಬಗ್ಗೆ ಎಲ್ಲಾ ಸತ್ಯಗಳನ್ನು ಪರದೆಯ ಮೇಲೆ ತೋರಿಸುವುದು ಅಸಾಧ್ಯವಾಗಿದೆ. ಈ ಚಿತ್ರದ ಹೊರತಾಗಿ, ಚಿತ್ರದ ಬಿಡುಗಡೆಯ ಸಮಯದಲ್ಲಿಯೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇಬ್ಬರು ವಿವಾಹವಾದರು.


ಓಕೆ ಕಣ್ಮಣಿ (2015)
ಮಣಿರತ್ನಂ ಅವರು ವಿವಾಹದ ನಂತರ ಮಹಿಳೆ ಮತ್ತು ಪುರುಷನ ನಡುವಿನ ಸಂಬಂಧವನ್ನು ತೋರಿಸುವ ಆಸಕ್ತಿ ಹೊಂದಿರುವ ನಿರ್ದೇಶಕರಾಗಿದ್ದಾರೆ. ಇದು ಅವರ ಆಕರ್ಷಕ ವಿಷಯಗಳಲ್ಲಿ ಒಂದಾಗಿದೆ. ನಾವು ಇದನ್ನು ಅವರ ಆರಂಭಿಕ ಸಮಯದಲ್ಲಿ ನೋಡಿದ್ದೇವೆ. ಅವರ ಯಶಸ್ವೀ ಚಲನಚಿತ್ರದಲ್ಲಿ ಮೌನ ರಾಗಮ್ ಸಹ ಒಂದು ಎಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: Aarathi: ಆರತಿ ಪುಟ್ಟಣ್ಣ ಕಣಗಾಲ್​ಗೆ ಕೈಕೊಟ್ಟಿದ್ದು ಮಂತ್ರಿಯೊಬ್ಬರನ್ನು ಮದುವೆಯಾಗೋಕಾ? ಪುಟ್ಟಣ್ಣ ಸಾವಿಗೆ ಇದೇ ಕಾರಣವಾ?


ಈ ಚಲನಚಿತ್ರವು ಇಬ್ಬರು ಯುವ ಪ್ರೇಮಿಗಳ ಲಿವ್-ಇನ್ ಸಂಬಂಧಗಳ ವಿಷಯವನ್ನು ಪ್ರಸ್ತಾಪಿಸುತ್ತದೆ. ಈ ಚಿತ್ರವು ಉತ್ತಮ ಹಾಡುಗಳನ್ನು ಸಹ ಹೊಂದಿತ್ತು.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು