Etharkkum Thunindhavan: ಸೂರ್ಯ ಹೊಸಾ ಸಿನಿಮಾ ಫಸ್ಟ್ ಲುಕ್ ನೋಡಿದ್ರಾ? ರಗಡ್ ಲುಕ್ ಹೇಗನ್ನಿಸ್ತು?

Etharkkum Thunindhavan: ಈ ಟೀಸರ್​ ಈಗಾಗಲೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಕೈಯಲ್ಲೊಂದು ಖಡ್ಗ ಹಿಡಿದು ಸೂರ್ಯ ಫ್ಯಾಕ್ಟರಿಯೊಂದರೊಳಗೆ ನಡೆದುಕೊಂಡು ಬರುತ್ತಾರೆ.. ಸುತ್ತಲೆಲ್ಲಾ ಗಾಯಗೊಂಡವರ ರಾಶಿ.. ಯಾವುದೋ ಹೆಣವನ್ನು ಎಳೆಯುತ್ತಾ ಬರ್ತಿರೋ ಸೂರ್ಯ ರಗಡ್ ಲುಕ್ ಸಖತ್ತಾಗಿ ಕ್ಲಿಕ್ ಆಗಿದೆ.

ಸೂರ್ಯ ಹೊಸಾ ಚಿತ್ರದ ಫಸ್ಟ್ ಲುಕ್

ಸೂರ್ಯ ಹೊಸಾ ಚಿತ್ರದ ಫಸ್ಟ್ ಲುಕ್

  • Share this:
Etharkkum Thunindhavan :ತಮಿಳು ಚಿತ್ರನಟ ಸೂರ್ಯ ಇಂದು 40 ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿಅವರ ಅಭಿಮಾನಿಗಳಿಗೆ ಹೊಸಾ ಚಿತ್ರದ ಫಸ್ಟ್ ಲುಕ್ ಗಿಫ್ಟ್ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿಯೇ ಈ ಸಿನಿಮಾ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಇದುವರೆಗೆ ಸೂರ್ಯ 40 ಎಂದೇ ಈ ಹೊಸಾ ಚಿತ್ರವನ್ನು ಗುರುತಿಸಲಾಗಿತ್ತು. ಆದರೆ ಈಗ ಅದರ ಟೈಟಲ್ ರಿವೀಲ್ ಆಗಿದ್ದು ‘ಎದರ್ಕ್ಕುಂ ತುಣಿಂದವನ್’ ಎನ್ನುವ ಹೆಸರು ಹೊರಬಂದಿದೆ. ಪ್ರತಿಭಾವಂತ ನಟ ಸೂರ್ಯ ಸೂರರೈ ಪೋಟ್ರು ಸಿನಿಮಾ ನಂತರ ಬೇರೆ ಯಾವುದೇ ಹೊಸಾ ಚಿತ್ರ ಮಾಡಿರಲಿಲ್ಲ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಚಿತ್ರ ಸೂರರೈ ಪೋಟ್ರು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸುದ್ದಿ ಮಾಡಿತ್ತು.

ಈ ಟೀಸರ್​ ಈಗಾಗಲೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಕೈಯಲ್ಲೊಂದು ಖಡ್ಗ ಹಿಡಿದು ಸೂರ್ಯ ಫ್ಯಾಕ್ಟರಿಯೊಂದರೊಳಗೆ ನಡೆದುಕೊಂಡು ಬರುತ್ತಾರೆ.. ಸುತ್ತಲೆಲ್ಲಾ ಗಾಯಗೊಂಡವರ ರಾಶಿ.. ಯಾವುದೋ ಹೆಣವನ್ನು ಎಳೆಯುತ್ತಾ ಬರ್ತಿರೋ ಸೂರ್ಯ ರಗಡ್ ಲುಕ್ ಸಖತ್ತಾಗಿ ಕ್ಲಿಕ್ ಆಗಿದೆ. ನೆಚ್ಚಿನ ನಟನನ್ನು ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚು ಇಷ್ಟ ಪಡುವ ಅಭಿಮಾನಿಗಳಂತೂ ಎದರ್ಕ್ಕುಂ ತುಣಿಂದವನ್ ಮೊದಲ ಲುಕ್​ಗೆ ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ. ಇದೊಂದು ಥ್ರಿಲ್ಲರ್ ಪ್ಯಾಕ್ಡ್ ಆಕ್ಷನ್ ಸಿನಿಮಾ ಅನ್ನೋ ಕ್ಲಾರಿಟಿ ಈಗ ಸಿಕ್ಕಂತಾಗಿದೆ.



ಪ್ರಿಯಾಂಕಾ ಅರುಳ್ ಮೋಹನ್ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿ. ಪಾಂಡಿರಾಜ್ ಆಕ್ಷನ್ ಕಟ್ ಹೇಳಿರೋ ಈ ಚಿತ್ರದಲ್ಲಿ ಸತ್ಯರಾಜ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿ ಇಮಾಮ್ ಸಂಗೀತ ನೀಡಿರೋ ಸಿನಿಮಾಕ್ಕೆ ಸನ್ ಪಿಕ್ಚರ್ಸ್ ಹಣ ಹೂಡಿದೆ. ವಿನಯ್ ರೈ ಈ ಚಿತ್ರದಲ್ಲಿ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಫೆಬ್ರವರಿ 15ರಂದು ಸೂರ್ಯ 40 ಮೊದಲ ಸುದ್ದಿ ಹೊರಬಂದಿತ್ತು.

ಅಂದ್ಹಾಗೆ ನಿರ್ದೇಶಕ ಪಾಂಡಿರಾಜ್ ಜೊತೆ ಇದು ಸೂರ್ಯನ ಮೂರನೇ ಪ್ರಾಜೆಕ್ಟ್. 2015ರಲ್ಲಿ ಸೂಪರ್ ಹಿಟ್ ಆಗಿದ್ದ ಪಸಂಗ 2 ನಂತರ ಸೂರ್ಯ ಸಹೋದರ ಕಾರ್ತಿ ನಾಯಕತ್ವದ ಕಡೈಕುಟ್ಟಿ ಸಿಂಗಂ ಚಿತ್ರದಲ್ಲಿ ಸೂರ್ಯ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ನಂತರ ಈಗ ಈ ಚಿತ್ರವನ್ನು ಈ ಜೋಡಿ ತೆರೆ ಮೇಲೆ ತರಲು ಸಜ್ಜಾಗಿದೆ. ಬಿಳಿ ಪಂಚೆ ಧರಿಸಿ ಗಡ್ಡ ಬಿಟ್ಟ ಸೂರ್ಯನ ಲುಕ್ ಸಖತ್ ರಗಡ್ ಆಗಿದ್ದು ಫ್ಯಾನ್ಸ್​ ಬಹಳ ಖುಷಿಪಟ್ಟಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: