ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ, ಸಸುರಾಲ್ ಸಿಮಾರ್ ಕಾ ಮತ್ತು ಸೂಪರ್ ಸಿಸ್ಟರ್ಸ್‌ನಂತಹ ಟೆಲಿವಿಶನ್ ಸೀರಿಯಲ್‌ಗಳಿಂದ ಹೆಸರುವಾಸಿಯಾಗಿದ್ದ ನಟಿ ವೈಶಾಲಿ ಟಕ್ಕರ್(Vaishali Takkar) ಇತ್ತೀಚಿಗೆ ತಮ್ಮ ಇಂದೋರ್ ನಿವಾಸದಲ್ಲಿ ನಿಧನರಾಗಿದ್ದಾರೆ. 29ರ ಹರೆಯದ ನಟಿ ಆತ್ಯಹತ್ಯೆ (Suicide) ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಈ ಪ್ರಯುಕ್ತ ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ (Investigation) ಮುಂದುವರಿದಿದೆ. ವೈಶಾಲಿಯ ಹಠಾತ್ ಸಾವಿನ ಸುದ್ದಿ ತಿಳಿದು ಟಿವಿ ಮಾಧ್ಯಮ ವ್ಯಕ್ತಪಡಿಸಲಾಗದಷ್ಟು ಆಘಾತಕ್ಕೊಳಗಾಗಿದೆ. ಇದರ ನಡುವೆಯೇ ವೈಶಾಲಿ ಸಾವಿಗೆ ಸಂಬಂಧಿಸಿದಂತೆ ಹೊಸ ವಿವರವೊಂದು ದೊರಕಿದ್ದು, ವೈಶಾಲಿಗೆ ಆಕೆಯ ನೆರೆಹೊರೆಯವನಾದ ರಾಹುಲ್ (Rahul) ಎಂಬಾತ ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ರಾಹುಲ್ ತಲೆಮರೆಸಿಕೊಂಡಿದ್ದಾನೆ.
ವೈಶಾಲಿ ಟಕ್ಕರ್ ಸೂಸೈಡ್ ನೋಟ್‌ನಲ್ಲಿ ರಾಹುಲ್ ಹೆಸರು
ವೈಶಾಲಿ ನಿವಾಸವಾಗಿದ್ದ ಸಾಯಿಬಾಗ್ ಪ್ರದೇಶದಲ್ಲಿರುವ ಆಕೆಯ ಫ್ಲ್ಯಾಟ್ನಿಂದ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದು ವೈಶಾಲಿ ಬರೆದಿದ್ದ ಸುಸೈಡ್ ನೋಟ್ ಅನ್ನು ಪಡೆದುಕೊಂಡಿದ್ದಾರೆ. ವೈಶಾಲಿ ಡೆತ್ ನೋಟ್‌ನಲ್ಲಿ ಏನು ಬರೆದಿದ್ದಾರೆ ಎಂಬುದನ್ನು ಪೊಲೀಸರು ವಿವರವಾಗಿ ತಿಳಿಸಿಲ್ಲವೆಂದು ವರದಿಯಾಗಿದೆ. ನಟಿ ತಮ್ಮ ತಂದೆಯ ಕೋಣೆಯಲ್ಲಿ ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೆರೆಹೊರೆಯವನೂ ಹಾಗೂ ಮಾಜಿ ಗೆಳೆಯನೂ ಆಗಿದ್ದ ರಾಹುಲ್ ವೈಶಾಲಿಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ಮನನೊಂದು ವೈಶಾಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: Charu and Rajeev Sen: ಸುಶ್ಮಿತಾ ಸೇನ್ ಸಹೋದರ, ಅತ್ತಿಗೆ ದಾಂಪತ್ಯದಲ್ಲಿ ಮತ್ತೆ ಬಿರುಕು?
ಡೆತ್ ನೋಟ್‌ನಲ್ಲಿ ರಾಹುಲ್ ಹೆಸರು ಇರುವುದಾಗಿ ತಿಳಿಸಿರುವ ಪೊಲೀಸರು ಆತನ ಕಾರಣದಿಂದಲೇ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಯಾವುದನ್ನೂ ಸರಿಯಾಗಿ ತನಿಖೆ ಮಾಡದೇ ಈಗಲೇ ಹೇಳಲಾಗುವುದಿಲ್ಲ ನಮಗೆ ರಾಹುಲ್ ಮೇಲೆ ಸಂದೇಹವಿರುವುದಾಗಿ ಪೊಲೀಸರು ತಿಳಿಸಿದ್ದು ಸರಿಯಾದ ತನಿಖೆಯ ನಂತರವೇ ಸತ್ಯ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ವೈಶಾಲಿಗೆ ಈಗಾಗಲೇ ವಿವಾಹ ಗೊತ್ತುಪಡಿಸಲಾಗಿತ್ತು ಈ ಹಿನ್ನಲೆಯಲ್ಲಿ ವಿವಾಹ ನಿರ್ಶಿತಾರ್ಥವನ್ನು ಮಾಡಲಾಗಿತ್ತು. ಇದು ರಾಹುಲ್‌ನ ಕೋಪಕ್ಕೆ ಕಾರಣವಾಗಿದ್ದು ಆತ ಅಡ್ಡಿಯನ್ನುಂಟು ಮಾಡಿದ್ದನು ಎಂಬುದು ವೈಶಾಲಿ ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ರಾಹುಲ್ ಒಬ್ಬ ಉದ್ಯಮಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ ಹಾಗೂ ಆತನಿಗಾಗಿ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಹುಲ್‌ಗೆ ಸಂಬಂಧಪಟ್ಟ ಗ್ಯಾಜೆಟ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂಬುದು ಪೊಲೀಸ್ ವರ್ಗದಿಂದ ಬಂದ ಮಾಹಿತಿಯಾಗಿದೆ.
ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು ವೈಶಾಲಿ ವಿವಾಹ
ವರದಿಯ ಪ್ರಕಾರ, ಈ ವರ್ಷ ಡಿಸೆಂಬರ್‌ನಲ್ಲಿ ವೈಶಾಲಿಯವರ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ. ಕೀನ್ಯಾ ಮೂಲದ ಸರ್ಜನ್ ಡಾ. ಅಭಿನಂದನ್ ಸಿಂಗ್ ಅವರೊಂದಿಗೆ ಕಳೆದ ಏಪ್ರಿಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೋವಿಡ್ ಕಾರಣದಿಂದ ಅವರ ವಿವಾಹವನ್ನು ಮುಂದೂಡಲಾಗಿತ್ತು.
ಇದನ್ನೂ ಓದಿ: Mahalakshmi-Ravindar: ಹೆಂಡ್ತಿಯಿಂದ ಸಿಕ್ತು ಸಿಹಿ ಮುತ್ತು! ಸ್ವರ್ಗ ಭೂಮಿ ಮೇಲಿದೆ ಎಂದ ರವೀಂದ್ರ
ತಮ್ಮ ವಿವಾಹ ನಿಶ್ಚಿತಾರ್ಥದ ವಿಡಿಯೋವೊಂದನ್ನು ಸ್ವತಃ ವೈಶಾಲಿ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ನಂತರ ಅದನ್ನು ತೆಗೆದುಹಾಕಿದ್ದರು ಎನ್ನಲಾಗಿದೆ. ತಮ್ಮ ಫಿಯಾನ್ಸಿ ಕುರಿತು ಯಾವುದೇ ಮಾಹಿತಿಗಳನ್ನು ವೈಶಾಲಿ ಹಂಚಿಕೊಳ್ಳುವುದನ್ನು ನಿಲ್ಲಿಸಿದ್ದರು .
ವೈಶಾಲಿ ಟಕ್ಕರ್ ವೃತ್ತಿಜೀವನ
ವೈಶಾಲಿ ಪೋಷಕರು ಉಜ್ಜಯಿನಿ ನಗರದ ಸಮೀಪದ ಮಹಿದ್‌ಪುರದವರಾಗಿದ್ದಾರೆ. ನಟಿ ಮಲ್ಟಿಮೀಡಿಯಾ ಸಂಶೋಧನಾ ಕೇಂದ್ರದಿಂದ (EMRC) ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಸ್ವಲ್ಪ ಸಮಯ ನಿರೂಪಣೆಯ ವೃತ್ತಿಯನ್ನು ಮಾಡಿಕೊಂಡಿದ್ದ ನಟಿ ನಂತರ, ಮುಂಬೈಗೆ ತೆರಳಿದ್ದಾರೆ, ವೈಶಾಲಿ ಸ್ಟಾರ್ ಪ್ಲಸ್‌ನ ಜನಪ್ರಿಯ ಧಾರವಾಹಿ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈನಲ್ಲಿ ತಮ್ಮ ಚೊಚ್ಚಲ ಪಾತ್ರವನ್ನು ನಿರ್ವಹಿಸಿದರು. ಯೇ ಆಶಿಖಿ, ರಕ್ಷಾಬಂಧನ್ ಮೊದಲಾದ ಟಿವಿ ಸೀರಿಯಲ್‌ಗಳಲ್ಲಿ ವೈಶಾಲಿ ಠಕ್ಕರ್ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ