ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ಜುಲೈ 28 ರಂದು ಬಿಡುಗಡೆಯಾಗಿದ್ದು, ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅನುಪ್ ಭಂಡಾರಿ (Anup Bhandari) ನಿರ್ದೇಶನದ ಈ ಸಿನಿಮಾ ನಿಗೂಢ ಘಟನೆಗಳ ಸುತ್ತ ಸುತ್ತುತ್ತದೆ. ಚಿತ್ರದ ತಾಂತ್ರಿಕ ಅಂಶಗಳು ಚಿತ್ರಕ್ಕಿಂತ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿವೆ. ಅದರಲ್ಲಿಯೂ ಚಿತ್ರದ ಒಟ್ಟಾರೆ ಕಲೆಕ್ಷನ್ ಉತ್ತಮವಾಗಿದ್ದು, 100 ಕೋಟಿ ಕ್ಲಬ್ ಸನಿಹದಲ್ಲಿದೆ. ಆದರೆ ಚಿತ್ರ ಬಿಡುಗಡೆ ದಿನವೇ ಸಂಪೂರ್ಣ ಸಿನಿಮಾ ಪೈರಸಿಯಾಗಿತ್ತು. ಅಲ್ಲದೇ ಚಿತ್ರವು ಎಲ್ಲಾ ಭಾಷೆಗಳಲ್ಲಿ ಸಂಪೂರ್ಣವಾಗಿ ಸೋರಿಕೆ ಆಗಿತ್ತು. ಆದರೆ ಇದೀಗ ಈ ಪೈರಸಿ ಆದ ವಿಕ್ರಾಂತ್ ರೋಣ ಸಿನಿಮಾವನ್ನು ಶಾಲೆಯೊಂದರಲ್ಲಿ ತೋರಿಸಲಾಗಿದೆ. ಈ ಕುರಿತು ಚಿತ್ರತಂಡ ಸಹ ಬೇಸರ ಹೊರಹಾಕಿದೆ.
ವಿಕ್ರಾಂತ್ ರೋಣ ಸಿನಿಮಾ ಶಾಲೆಯಲ್ಲಿ ಪ್ರದರ್ಶನ:
ಹೌದು, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾಗೆ ಪೈರಿಸಿ ಕಾಟ ಎದುರಾಗಿದೆ. ಆಧುನಿಕ ತಂತ್ರಜ್ಞಾನ ಚಿತ್ರರಂಗಕ್ಕೆ ಎಡಬಿಡದೇ ಕಾಡುತ್ತಿದೆ. ಇದರ ಕುರಿತು ಇದೀಗ ಕಿಚ್ಚನ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದು, ಈ ರೀತಿಯ ಕೆಟ್ಟ ಕೆಲಸಕ್ಕೆ ಕೈ ಹಾಕಿದವರು ಕ್ಷಮೆ ಕೇಳ ಬೇಕು ಎಂದು ಹೇಳುತ್ತಿದ್ದಾರೆ. ಇದರ ನಡುವೆ ಮುಳಬಾಗಿಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಾರ್ಡನ್ ವಿಕ್ರಾಂತ್ ರೋಣ ಸಿನಿಮಾದ ಪೈರಸಿಯನ್ನು ತೋರಿಸಿದ್ದಾರೆ. ಮುಳಬಾಗಿಲಿನ ಮೂರಾರ್ಜಿ ಸ್ಕೂಲ್ ಕುತಂಡ್ಲಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ವಿಚಾರ ತಿಳಿದುಬಂದ ಬೆನ್ನಲ್ಲೆ ಚಿತ್ರದ ನಿರ್ಮಾಕಪ ಜಾಕ್ ಮಂಜು ಆಕ್ರೋಶ ಹೊರ ಹಾಕಿದ್ದು, ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದ್ದಾರೆ.
ವಿಕ್ರಾಂತ್ ರೋಣ ಚಿತ್ರ ಸಂಪೂರ್ಣ ಲೀಕ್:
ಹೌದು, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾಗೆ ಪೈರಿಸಿ ಕಾಟ ಎದುರಾಗಿದೆ. ಆಧುನಿಕ ತಂತ್ರಜ್ಞಾನ ಚಿತ್ರರಂಗಕ್ಕೆ ಎಡಬಿಡದೇ ಕಾಡುತ್ತಿದೆ. ವಿಕ್ರಾಂತ್ ರೋಣ ಸಿನಿಮಾವು ಬಿಡುಗಡೆ ಆದ ದಿನವೇ ಸಂಪೂರ್ಣ ಲೀಕ್ ಆಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಸೋರಿಕೆ ಆಗಿದೆ. ಇನ್ನು, ಪೈರಸಿ ವಿರುದ್ಧ ಹೋರಾಟಕ್ಕೆ ಪೈರಸಿ ನಿಗ್ರಹ ತಂಡ ನಿಯಮಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬಂತಾಗಿದೆ.
ಪೈರಸಿ ಕುರಿತು ಮಾತನಾಡಿದ್ದ ಕಿಚ್ಚ:
ಇನ್ನು, ಪೈರಸಿ ಕುರಿತು ಮಾತನಾಡಿದ್ದ ಸುದೀಪ್, ‘ಚಿತ್ರಮಂದಿರದಲ್ಲಿ ಸಿಗುವ ಎಫೆಕ್ಟ್ ಮೊಬೈಲ್ನಲ್ಲಿ ಸಿಗುತ್ತಿದೆ ಎಂದಾದರೆ ಮೊಬೈಲ್ನಲ್ಲೇ ನೋಡಿ. ಮೊಬೈಲ್ನಲ್ಲಿ ನೋಡಿದ ಮೇಲೆ ಖುಷಿ ಸಿಗದಿದ್ದರೆ ಚಿತ್ರಮಂದಿರಕ್ಕೆ ಬನ್ನಿ’ ಎಂದು ಕಿಚ್ಚ ಒಮ್ಮೆ ಪೈರಸಿ ಕುರಿತು ಹೇಳಿದ್ದರು. ಪೈರಸಿ ಕಂಡುಬಂದಲ್ಲಿ ಈ ರೀತಿ ಮಾಡಿ ಎಂದು ಚಿತ್ರತಂಡ ಅಭಿಮಾನಿಗಳಲ್ಲಿ ಮನವಿ ಮಾಡಿದೆ. ಅದರ ಪ್ರಕಾರ ನಿಮಗೆ ವಿಕ್ರಾಂತ್ ರೋಣ ಸಿನಿಮಾದ ಪೈರಸಿ ಕಂಡುಬಂದಲ್ಲಿ AntiPiracyAiPlex.com ಇಮೇಲ್ ವಿಳಾಸಕ್ಕೆ ವರದಿ ಮಾಡಿ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಚಿತ್ರಕ್ಕೆ ಪೈರಸಿ ಕಾಟ, ಸಂಪೂರ್ಣ ಚಿತ್ರ ಆನ್ಲೈನ್ನಲ್ಲಿ ಲೀಕ್
ಮೂರನೇ ದಿನದ ಕಲೆಕ್ಷನ್ ಹೀಗಿದೆ:
ಶುಕ್ರವಾರ ಈ ಸಿನಿಮಾದ ಕಲೆಕ್ಷನ್ 20 ರಿಂದ 25 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ಶನಿವಾರ 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಈ ವಾರಂತ್ಯದಲ್ಲಿ ಈ ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ ಎನ್ನಲಾಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಸುಮಾರು 325 ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಉಳಿದಂತೆ 325 ಥಿಯೇಟರ್, 65 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ 2500ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲೆ 1200 ಶೋ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ