ವಾರಸ್ದಾರ ಧಾರಾವಾಹಿ ವಿವಾದ; ಹೈಕೋರ್ಟ್​ನಿಂದ ಕಿಚ್ಚ ಸುದೀಪ್​ಗೆ ಕ್ಲೀನ್​ಚಿಟ್

Kichcha Sudeep: ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕೆ ಮನೆ ಬಾಡಿಗೆ ಪಡೆದುಕೊಂಡು ಹಣ ಕೊಡದೆ ವಂಚಿಸಿದ್ದಾರೆ, ಮನೆ ಮಾಲೀಕನಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆ ಕೇಸನ್ನು ಹೈಕೋರ್ಟ್​ ವಜಾಗೊಳಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ಶಿವಕುಮಾರ್ ನಾಯ್ಡು ಸುದೀಪ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆನ್​ಲೈನ್​ ಜೂಜಾಟಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಶಿವಕುಮಾರ್ ನಾಯ್ಡು ಸುದೀಪ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆನ್​ಲೈನ್​ ಜೂಜಾಟಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.

  • Share this:
ಚಿಕ್ಕಮಗಳೂರು (ಫೆ. 15): ವಾರಸ್ದಾರ ಧಾರಾವಾಹಿ ಚಿತ್ರೀಕರಣದ ವೇಳೆ ತಮ್ಮ ಕಾಫಿ ತೋಟಕ್ಕೆ ಹಾನಿಯಾಗಿದೆ ಹಾಗೂ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರಿನ ದೀಪಕ್ ಮಯೂರ್ ಕಿಚ್ಚ ಸುದೀಪ್ ಮೇಲೆ ದೂರು ಸಲ್ಲಿಸಿದ್ದರು. 1 ವರ್ಷಗಳಿಂದ ನಡೆಯುತ್ತಿದ್ದ ಆ ಕೇಸನ್ನು ಕೋರ್ಟ್ ವಜಾಗೊಳಿಸಿದೆ.

2018ರಲ್ಲಿ ನಟ ಕಿಚ್ಚ ಸುದೀಪ್ ಅವರ ನಿರ್ಮಾಣ ಸಂಸ್ಥೆ 'ಕಿಚ್ಚ ಕ್ರಿಯೇಷನ್ಸ್​'ನಿಂದ 'ವಾರಸ್ದಾರ' ಎಂಬ ಧಾರಾವಾಹಿಯನ್ನು ನಿರ್ಮಿಸಲಾಗಿತ್ತು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯ ಹಳ್ಳಿಯ ಮನೆಯ ಚಿತ್ರೀಕರಣವನ್ನು ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ನಡೆಸಲಾಗಿತ್ತು. ಇದಕ್ಕಾಗಿ ದೀಪಕ್ ಮಯೂರ್ ಎಂಬುವವರ ಮನೆಯನ್ನು ಚಿತ್ರೀಕರಣಕ್ಕಾಗಿ ಬಾಡಿಗೆಗೆ ಪಡೆಯಲಾಗಿತ್ತು.

ಆದರೆ, 2019ರ ಜನವರಿಯಲ್ಲಿ ಕಿಚ್ಚ ಸುದೀಪ್ ಮೇಲೆ ದೂರು ಸಲ್ಲಿಸಿದ್ದ ದೀಪಕ್ ಮಯೂರ್, ಧಾರಾವಾಹಿ ಸಂದರ್ಭದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದೆ. ಮರ-ಗಿಡಗಳನ್ನು ಕಡಿದಿದ್ದರಿಂದ 60ರಿಂದ 70 ಲಕ್ಷ ಖರ್ಚಾಗಿದೆ. ಹೀಗಾಗಿ, ನಷ್ಟವಾದ ಹಣವನ್ನು ನೀಡಬೇಕೆಂದು ನಿರ್ಮಾಣ ತಂಡವಾದ ಕಿಚ್ಚ ಕ್ರಿಯೇಷನ್ಸ್​ ಬಳಿ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಸುದೀಪ್ ಒಪ್ಪಿರಲಿಲ್ಲ.

ಇದನ್ನೂ ಓದಿ: ಯಡಿಯೂರಪ್ಪ ಶಾಶ್ವತವಾಗಿ ಗೂಟ ಹೊಡ್ಕೊಂಡು ಕೂತಿರಲ್ಲ; ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ

ವಾರಸ್ದಾರ ಧಾರಾವಾಹಿಯ ಚಿತ್ರೀಕರಣಕ್ಕೆ ಮನೆ ಬಾಡಿಗೆ ಪಡೆದುಕೊಂಡು ಹಣ ಕೊಡದೆ ವಂಚಿಸಿದ್ದಾರೆ, ಮನೆ ಮಾಲೀಕನಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತೋಟದ ಮಾಲೀಕ ದೀಪಕ್ ಮಯೂರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಚಿಕ್ಕಮಗಳೂರು 2ನೇ ಹೆಚ್ಚುವರಿ ಕೋರ್ಟ್​ ಸುದೀಪ್​ಗೆ ವಾರಂಟ್ ಜಾರಿ ಮಾಡಿತ್ತು.

ಇದೀಗ ಈ ವಿವಾದ ಅಂತ್ಯವಾಗಿದ್ದು, ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ಸ್​ ಮೇಲಿನ ಕೇಸ್ ವಜಾ ಆಗಿದೆ. ಈ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ತೋಟದ ಮಾಲೀಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ಸುದೀಪ್ ಪರ ವಕೀಲ ಗೋಪಿನಾಥ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೋಜು-ಮಸ್ತಿಗಾಗಿ ಹೆದ್ದಾರಿಯಲ್ಲಿ ದರೋಡೆ; ನಾಲ್ವರ ಬಂಧನ, ಪೊಲೀಸ್ ಪೇದೆ ಮಗ ಎಸ್ಕೇಪ್

ಮಯೂರ್​ ಪಟೇಲ್ ತಮ್ಮ ಬೇರೆ ಬೇರೆ ವ್ಯವಹಾರದಲ್ಲಿ ಆಗಿರುವ ನಷ್ಟವನ್ನು ಸುದೀಪ್​ ಮೇಲೆ ಆರೋಪ ಮಾಡುವ ಮೂಲಕ ತುಂಬಿಕೊಳ್ಳಲು ಮಯೂರ್ ನಿರ್ಧರಿಸಿದ್ದರು. ಅವರ ಕೆಟ್ಟ ಉದ್ದೇಶ ಈಡೇರದ ಹಿನ್ನೆಲೆಯಲ್ಲಿ ಕೋರ್ಟ್​ನಲ್ಲಿ ಕೇಸು ಹಾಕಿದ್ದರು. ಆದರೆ, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಹೈಕೋರ್ಟ್​ಗೆ ಸ್ಪಷ್ಟಪಡಿಸಿದ್ದೇವೆ. ಹೀಗಾಗಿ, ಈ ಕೇಸನ್ನು ವಜಾಗೊಳಿಸಲಾಗಿದೆ ಎಂದು ವಕೀಲ ಗೋಪಿನಾಥ್ ಮಾಹಿತಿ ನೀಡಿದ್ದಾರೆ.
First published: