War Box office collection: ಬಾಕ್ಸಾಫಿಸ್​ನಲ್ಲಿ ವಾರ್​ ದರ್ಬಾರ್​: 300 ಕೋಟಿಗೂ ಅಧಿಕ ಗಳಿಸಿದ ಹೃತಿಕ್​-ಟೈಗರ್​ ಜೋಡಿ

War Box office collection: ಹೃತಿಕ್​ ಹಾಗೂ ಟೈಗರ್​ ಶ್ರಾಫ್​ ಜೋಡಿಯ ಮೋಡಿ ಇನ್ನೂ ಮುಂದುವರೆಯುತ್ತಿದ್ದು, ವಾರ್​ ಸಿನಿಮಾ ಈಗ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಹೌದು ಸದ್ಯ 3 ಕೋಟಿ 17 ಲಕ್ಷ ಗಳಿಸುವ ಮೂಲಕ ವಾರ್​ ಮತ್ತೊಂದು ಹೊಸ ದಾಖಲೆ ಬರೆದಿದೆ.

Anitha E | news18-kannada
Updated:November 9, 2019, 10:32 AM IST
War Box office collection: ಬಾಕ್ಸಾಫಿಸ್​ನಲ್ಲಿ ವಾರ್​ ದರ್ಬಾರ್​: 300 ಕೋಟಿಗೂ ಅಧಿಕ ಗಳಿಸಿದ ಹೃತಿಕ್​-ಟೈಗರ್​ ಜೋಡಿ
ವಾರ್​ ಸಿನಿಮಾದ ಪೋಸ್ಟರ್​
  • Share this:
ತೆರೆಕಂಡ ಎರಡು ವಾರಗಳಲ್ಲಿ 'ವಾರ್', ಬರೋಬ್ಬರಿ 280 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿತ್ತು. ಆ ಮೂಲಕ ಈ ವರ್ಷ ತೆರೆಗೆ ಬಂದ ಕಬೀರ್ ಸಿಂಗ್, ಉರಿ- ದಿ ಸರ್ಜಿಕಲ್ ಸ್ಟ್ರೈಕ್, ಭಾರತ್, ಮಿಷನ್ ಮಂಗಲ್ ಸಿನಿಮಾಗಳನ್ನು ಹಿಂದಿಕ್ಕಿದ್ದ ವಾರ್​ ಈಗ ಬಾಕ್ಸಾಫಿಸ್​ನಲ್ಲಿ ಮತ್ತೊಂದು ದಾಖಲೆ ಬರೆದಿದೆ.

ಬಾಲಿವುಡ್​ನ ಇತಿಹಾಸದಲ್ಲಿ ಬಿಗ್ ಓಪನಿಂಗ್ ಪಡೆದುಕೊಂಡ ಸಿನಿಮಾಗಳ ಪೈಕಿ ‘ವಾರ್’ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 53.10 ಕೋಟಿ ರೂಪಾಯಿ. ಈ ಹಿಂದೆ ಅಮೀರ್​ ಖಾನ್​ ನಟನೆಯ 'ಠಗ್ಸ್​ ಆಫ್​ ಹಿಂದೋಸ್ಥಾನ್'​ ಮೊದಲ ಸ್ಥಾನದಲ್ಲಿತ್ತು.

#War surpasses *lifetime biz* of #KabirSingh... Now highest grossing film of 2019... [#Hindi; Week 2] Fri 7.10 cr, Sat 11.20 cr, Sun 13.20 cr, Mon 4.40 cr, Tue 3.90 cr. Total: ₹ 268.30 cr. Including #Tamil + #Telugu: ₹ 280.60 cr. #India biz.
ಈ ವರ್ಷ ಅಂದರೆ 2019ರಲ್ಲಿ ತೆರೆಕಂಡ ಸಿನಿಮಾಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ಮೂಲಕ 'ವಾರ್​' ಮೊದಲ ಸ್ಥಾನದಲ್ಲಿದ್ದರೆ, ಶಾಹಿದ್​ ಕಪೂರ್​ ಅಭಿನಯದ 'ಕಬೀರ್​ ಸಿಂಗ್'​ ಎಡರನೇ ಸ್ಥಾನ, 'ಉರಿ' ಮೂರನೇ ಸ್ಥಾನ, ಸಲ್ಮಾನ್​ರ 'ಭಾರತ್'​ ನಾಲ್ಕನೇ ಸ್ಥಾನ ಹಾಗೂ ಹಾಗೂ ಅಕ್ಷಯ್​ ಕುಮಾರ್​ ಅಭಿನಯದ 'ಮಿಷನ್​ ಮಂಗಲ್​' ಐದನೇ ಸ್ಥಾನದಲ್ಲಿದೆ.

ಹೃತಿಕ್​ ಹಾಗೂ ಟೈಗರ್​ ಶ್ರಾಫ್​ ಜೋಡಿಯ ಮೋಡಿ ಇನ್ನೂ ಮುಂದುವರೆಯುತ್ತಿದ್ದು, 'ವಾರ್​' ಸಿನಿಮಾ ಈಗ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಹೌದು ಸದ್ಯ 3 ಕೋಟಿ 17 ಲಕ್ಷ ಗಳಿಸುವ ಮೂಲಕ 'ವಾರ್'​ ಮತ್ತೊಂದು ಹೊಸ ದಾಖಲೆ ಬರೆದಿದೆ. ಈ ಬಗ್ಗೆ ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್​ ಆದರ್ಶ್ ಟ್ವೀಟ್​ ಮಾಡಿದ್ದಾರೆ.


'ವಾರ್​' ಸಿನಿಮಾ ವಿಶ್ವದಾದ್ಯಂತ ಒಟ್ಟಾರೆ 4,200 ಸ್ಕ್ರೀನ್​ಗಳಲ್ಲಿ ತೆರೆಕಂಡಿತ್ತು. ಮೊದಲ ದಿನವೇ ನಿರೀಕ್ಷೆಗೂ ಮೀರಿ ಒಟ್ಟಾರೆ 53 ಕೋಟಿ ಗಳಿಕೆ ಮಾಡಿತ್ತು. ಈ ಮೂಲಕ ಮೊದಲ ದಿನ ಅತಿ ಹೆಚ್ಚು  ಅಂದರೆ 52 ಕೋಟಿ ಗಳಿಕೆ ಮಾಡಿದ್ದ 'ಠಗ್ಸ್​ ಆಫ್​ ಹಿಂದೋಸ್ತಾನ್​' ಸಿನಿಮಾದ ದಾಖಲೆಯನ್ನು 'ವಾರ್​' ಮುರಿದಿದೆ.

 

ಹುಟ್ಟುಹಬ್ಬದ ಆಚರಣೆಗೆಂದು ವಿದೇಶಕ್ಕೆ ಹೋಗಿ ಬೆತ್ತಲಾದ ಹೆಬ್ಬುಲಿ​ ನಟಿ..!


 

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading