ಬಾಲಿವುಡ್ನಲ್ಲಿ (Bollywood) ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವು ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ತನ್ನ ಮುಂಬೈ (Mumbai) ಫ್ಲ್ಯಾಟ್ನಲ್ಲಿ (Flat) ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾದ ನಟನ (Actor) ಸಾವು ದೊಡ್ಡ ಚರ್ಚೆಯಾಗಿತ್ತು. ನಟನ ಸಾವು ಸಂಭವಿಸಿ ಇಷ್ಟೊಂದು ಸಮಯವಾದರೂ ಈಗಲೂ ನಟನ ಹೆಸರು ಹಲವು ಬಾರಿ ಸೋಷಿಯಲ್ ಮೀಡಿಯಾ ಟ್ರೆಂಡ್ (Trend) ಆಗುತ್ತಿದೆ. ಅವರ ಅಭಿಮಾನಿಗಳು ಈಗಲೂ ನಟನನ್ನು ನೆನಪಿಸಿಕೊಳ್ಳುತ್ತಾರೆ. ಒಬ್ಬ ಒಳ್ಳೆಯ ನಟ ಮಾತ್ರವಲ್ಲದೆ ಜೀನಿಯಸ್ ಆಗಿದ್ದ ಸುಶಾಂತ್ ಚಂದ್ರನಲ್ಲಿಯೂ (Moon) ಜಾಗ ಖರೀದಿಸಿದ್ದರು. ಅದಕ್ಕೆ ಬೇಕಾದ ಅರ್ಹತೆಗಳು ಅವರಲ್ಲಿದ್ದವು. ಆದರೆ ಅವರ ಸಾವು ದೊಡ್ಡ ವಿವಾದವಾಗಿ (Controversy) ಬಾಲಿವುಡ್ (Bollywood) ನೆಪೊಟಿಸಂ (Nepotism) ವಿಚಾರ ಹೈಲೈಟ್ ಆಗಿತ್ತು.
ಆದರೆ ಈ ರೀತಿ ಆಗಿದ್ದು ನಟ ಸುಶಾಂತ್ಗೆ ಮಾತ್ರವಲ್ಲ. ಬಹಳಷ್ಟು ನಟ, ನಟಿಯರ ಬದುಕಿನಲ್ಲಿ ಇಂಥಹ ಲೋ ಪಾಯಿಂಟ್ಗಳು ಬಂದಿವೆ. ನಟ ವಿವೇಕ್ ಒಬೆರಾಯ್ ಕೂಡಾ ಒಬ್ಬರು. ಬಾಲಿವುಡ್ ಟಾಪ್ ನಟ ಈಗ ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾರಣ ಬಾಲಿವುಡ್ ಅಂತಹ ಪ್ರತಿಭಾನ್ವಿತ ನಟನಿಗೆ ಅವಕಾಶವನ್ನೇ ನೀಡುತ್ತಿಲ್ಲ.
ಜೀವನ ಕೊನೆಗೊಳಿಸಲು ಬಯಸಿದ್ರು ನಟ
ಯುವ ಮತ್ತು ಪ್ರತಿಭಾವಂತ ನಟ ವಿವೇಕ್ ಒಬೆರಾಯ್ ಅವರು ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ ಬಹಳಷ್ಟು ಏರಿಳಿತವನ್ನು ಎದುರಿಸಿದ ನಂತರ ತಮ್ಮ ಜೀವನವನ್ನು ಕೊನೆಗೊಳಿಸಲು ಬಯಸಿದ್ದರು ಎಂದು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಖಿನ್ನತೆಯು ಅವರನ್ನು ನಿರಾಶಾವಾದಿಯನ್ನಾಗಿ ಮಾಡಿತ್ತು. ಅದು ತನ್ನ ಜೀವನದ ಕರಾಳ ಹಂತವಾಗಿತ್ತು ಎಂದು ನಟ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಜೊತೆಗಿದ್ದರು ಪತ್ನಿ
ತನ್ನ ಜೀವನವನ್ನು ಹಿಂತಿರುಗಿ ನೋಡುವಾಗ ವಿವೇಕ್ ಅವರು ತಮ್ಮ ಮನಸಿಗೆ ಆವರಿಸಿದ ನಕಾರಾತ್ಮಕ ಆಲೋಚನೆಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿದ ಬಹಳಷ್ಟು ಸಂದರ್ಭಗಳಿದ್ದವು ಎಂದಿದ್ದಾರೆ. ಅವರ ಸಂವಾದದ ಸಮಯದಲ್ಲಿ ವಿವೇಕ್ ಅವರು ತಮ್ಮ ಪತ್ನಿ ಪ್ರಿಯಾಂಕಾ ಆಳ್ವ ಅವರ ಪ್ರಭಾವಶಾಲಿ ಪಾತ್ರವನ್ನು ಒಪ್ಪಿಕೊಂಡರು.
ಇದನ್ನೂ ಓದಿ: Sushant Singh Rajput: ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಯ್ಲಾಟ್ಗೆ ಜನ ಸಿಕ್ತಿಲ್ಲ! ಎರಡೂವರೆ ವರ್ಷದಿಂದ ಖಾಲಿ
ತನ್ನ ಪತ್ನಿ ಕಷ್ಟದ ಹಂತದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ತನ್ನ ಯೋಚನೆಗಳನ್ನು, ಮನಸನ್ನೂ ಪಾಸಿಟಿವ್ ಆಗಿಡಲು ಸಹಾಯ ಮಾಡಿದ ಪತ್ನಿಯ ಬೆಂಬಲ, ಪ್ರೀತಿ ಮತ್ತು ಪ್ರಾರ್ಥನೆಗಳಿಗಾಗಿ ಅವರು ತಮ್ಮ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ.
ಬಾಲಿವುಡ್ ಬಗ್ಗೆ ಮಾತನಾಡಿದ ನಟ ಬಾಲಿವುಡ್ ಉದ್ಯಮವು ಕ್ರೂರವಾಗಿದೆ. ಬಹಳಷ್ಟು ಕಠಿಣವಾಗಿದೆ. ಅಲ್ಲಿ ಸಹಾನುಭೂತಿಯಿಲ್ಲ ಎಂದು ವಿವೇಕ್ ಓಪನ್ ಆಗಿ ಒಪ್ಪಿಕೊಂಡಿದ್ದಾರೆ. ಅಲ್ಲಿನ ನಕಾರಾತ್ಮಕ ಜನರು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾರೆ. ಖಿನ್ನತೆಗೂ ಹೋಗುವಂತೆ ಮಾಡುತ್ತಾರೆ ಎಂದು ಅವರು ಹೇಳಿದರು.
ಉದ್ಯಮದಲ್ಲಿ ಹೆಸರುಗಳಿಸಲು ಕಷ್ಟಪಟ್ಟ ನಟರಿಗೆ ಅನ್ಯಾಯ
ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಒಬೆರಾಯ್ ಮಾತನಾಡಿದ್ದು ಹಿಂದಿ ಚಿತ್ರರಂಗದ ಕರಾಳ ಮುಖದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ದುರದೃಷ್ಟಕರವಾಗಿ ಸಾವನ್ನಪ್ಪಿದರು. ಉದ್ಯಮದಲ್ಲಿ ಹೆಸರು ಮಾಡಲು ಕಷ್ಟಪಟ್ಟ ಇತರ ಯುವನಟರಿಗೂ ಇದೇ ರೀತಿಯ ಅನ್ಯಾಯಗಳಾದವು ಎಂಬುದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಸದ್ಯ ವಿವೇಕ್ ಒಬೆರಾಯ್ ಅವರಿಗೆ ಉತ್ತಮ ಅವಕಾಶಗಳು ಬರುತ್ತಿವೆ ಎನ್ನುವುದು ಖುಷಿಯ ವಿಚಾರ. ಅವರು 'ಓಂಕಾರ', 'ಸಾಥಿಯಾ', 'ಶೂಟೌಟ್ ಅಟ್ ಲೋಖಂಡವಾಲಾ', ಇತ್ಯಾದಿ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ಮಲಯಾಳಂನ ಕಡುವ ಸಿನಿಮಾದಲ್ಲಿಯೂ ಕಾಣಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ