ದಿ ಕಾಶ್ಮೀರ್ ಫೈಲ್ಸ್’(The Kashmir Files) ಚಿತ್ರ ಇಡೀ ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದೇಶದ ಮುಕುಟ ಕಾಶ್ಮೀರ(Kashmir)ದ ಪಂಡಿತರ ಕತೆಯನ್ನು ಈ ಚಿತ್ರ ಹೊಂದಿದೆ. ರಾಜ್ಯದಲ್ಲಿ ಈ ಚಿತ್ರ ವೀಕ್ಷಿಸುವವರಿಗೆ ತೆರಿಗೆ(Tax)ಯನ್ನೂ ತೆಗೆದುಹಾಕಲಾಗಿತ್ತು. ನಮ್ಮ ರಾಜ್ಯದ ಎಲ್ಲ ಶಾಸಕರಿಗೂ ಈ ಚಿತ್ರವನ್ನು ನೋಡುವಂತೆ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಒಟ್ಟಾರೆ, ಈ ಚಿತ್ರ ದೇಶದಲ್ಲಿ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ. ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಒಟಿಟಿ(The Kashmir Files Ott) ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಜೀ5 ಮೂಲಕ ಈ ಸಿನಿಮಾ ಪ್ರಸಾರ ಆಗಲಿದೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾಗಳಲ್ಲಿ ಒಂದಾದ ‘ದಿ ಕಾಶ್ಮೀರ್ ಫೈಲ್ಸ್’ ಈಗ ಒಟಿಟಿಗೆ ಬರಲು ಸಜ್ಜಾಗಿದೆ.
ಮೇ 15ಕ್ಕೆ ಜೀ5 ನಲ್ಲಿ ದಿ ಕಾಶ್ಮೀರ್ ಫೈಲ್ಸ್!
ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರತಿಷ್ಠಿತ ಜೀ5ಗೆ ಒಟಿಟಿ ಸಂಸ್ಥೆ ಲಗ್ಗೆ ಇಡಲು ಸಜ್ಜಾಗಿದೆ. ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ, ನಿರಾಶ್ರಿತರ ಹತ್ಯೆ ಕುರಿತು ತಯಾರಿಸಿದ್ದ ಈ ಸಿನಿಮಾ ಬಾಕ್ಸಾಫೀಸ್ನ್ನು ಕೊಳ್ಳೆ ಹೊಡೆದಿತ್ತು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಸೆಲೆಬ್ರಿಟಿಗಳು, ಜನಸಾಮಾನ್ಯರು ಸಿನಿಮಾ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾ ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಪ್ರಿಮಿಯರ್ ಆಗಲಿದೆ.
1991ರ ಕಾಶ್ಮೀರಿ ಪಂಡಿತರ ಕಥೆಯ ಸಿನಿಮಾ!
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅತಿರಥ ಮಹಾರಥ ತಾರಬಳಗ ನಟಿಸಿದ್ದರು. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು. 1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಹೀಗಾಗಿ ಈ ಸಿನಿಮಾ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ವಿರೋಧ ನಡುವೆಯೂ ಕಾಶ್ಮೀರ್ ಫೈಲ್ಸ್ ಗೆಲುವಿನ ನಗೆ ಬೀರಿತ್ತು.
ಇದನ್ನೂ ಓದಿ: ಶಾರುಖ್ ಖಾನ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡ ನಟಿ, ವಿಷಯ ಕೇಳಿ ತಲೆ ತಿರುಗಿ ಬಿದ್ದಿದ್ರಂತೆ!
ಕನ್ನಡ ಸೇರಿದಂತೆ ನಾಲ್ಕು ಭಾಷೆಯಲ್ಲಿ ಲಭ್ಯ!
ಬಾಲಿವುಡ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ಆದ್ರೇ ಜೀ 5 ಒಟಿಟಿಯಲ್ಲಿ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ಒಟಿಟಿಯಲ್ಲಿ ಮೇ 13 ರಿಂದ ಪ್ರಸಾರ ಕಾಣುತ್ತಿದೆ. ಇಷ್ಟು ದಿನ ಬೆಳ್ಳಿಪರದೆ ಮೇಲೆ ಧೂಳ್ ಎಬ್ಬಿಸಿದ್ದ ಕಾಶ್ಮೀರಿ ಫೈಲ್ಸ್ ಸಿನಿಮಾ ಜೀ5 ಡಿಜಿಟಲ್ ವರ್ಲ್ಡ್ ನಲ್ಲಿ ಮಿಂಚಲಿದೆ.
ಇದನ್ನೂ ಓದಿ: ವರ್ಕೌಟ್ ಆಗ್ಲಿಲ್ವಂತೆ ಅಪ್ಪ-ಮಗನ ಕಾಂಬೋ! ಹಳೆ ಬಾಟ್ಲಿಗೆ ಹೊಸ ನೀರು ತುಂಬಿದ್ದಾರೆ ಅಂತ ಫ್ಯಾನ್ಸ್ ಗರಂ
ಮತ್ತೆ ಫೈಲ್ ಹಿಂದೆ ಬಿದ್ದ ಅಗ್ನಿಹೋತ್ರಿ
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೆ ಫೈಲ್ಗಳ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತಾದ ಕಥೆಯನ್ನೊಳಗೊಂಡ ದಿ ತಾಷ್ಕೆಂಟ್ ಫೈಲ್ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ರಿಲೀಸ್ ಆದ ಈ ಸಿನಿಮಾ ಸುದ್ದಿ ಮಾಡಿದ್ರೂ, ಅಷ್ಟೊಂದು ಯಶಸ್ಸು ಗಳಿಸಲಿಲ್ಲ. ಅದಾದ ಬಳಿಕ ಬಂದಿದ್ದೇ ದಿ ಕಾಶ್ಮೀರ್ ಫೈಲ್ಸ್. ಟೈಟಲ್ ಅನೌನ್ಸ್ ಮಾಡುವುದರ ಜೊತೆಗೆ ಅವರು ಒಂದು ಮೋಷನ್ ಪೋಸ್ಟರ್ ಸಹ ರಿಲೀಸ್ ಮಾಡಿದ್ದರು. ರಾಷ್ಟ್ರ ಲಾಂಚನದ ನಡುವೆ ಸಿಖ್ ಬಾಲಕನೊಬ್ಬ ಅಸಹಾಯಕತೆಯಿಂದ ಅಳುತ್ತಿರುವ ಪೋಸ್ಟರ್ ಅದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ