‘ದಿ ಕಾಶ್ಮೀರ್ ಫೈಲ್ಸ್’(The Kashmir Files) ಚಿತ್ರ ಇಡೀ ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದೇಶದ ಮುಕುಟ ಕಾಶ್ಮೀರ(Kashmir)ದ ಪಂಡಿತರ ಕತೆಯನ್ನು ಈ ಚಿತ್ರ ಹೊಂದಿದೆ. ರಾಜ್ಯದಲ್ಲಿ ಈ ಚಿತ್ರ ವೀಕ್ಷಿಸುವವರಿಗೆ ತೆರಿಗೆ(Tax)ಯನ್ನೂ ತೆಗೆದುಹಾಕಲಾಗಿತ್ತು. ನಮ್ಮ ರಾಜ್ಯದ ಎಲ್ಲ ಶಾಸಕರಿಗೂ ಈ ಚಿತ್ರವನ್ನು ನೋಡುವಂತೆ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಒಟ್ಟಾರೆ, ಈ ಚಿತ್ರ ದೇಶದಲ್ಲಿ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ. ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಒಟಿಟಿ(The Kashmir Files Ott) ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಜೀ5 ಮೂಲಕ ಈ ಸಿನಿಮಾ ಪ್ರಸಾರ ಆಗಲಿದೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾಗಳಲ್ಲಿ ಒಂದಾದ ‘ದಿ ಕಾಶ್ಮೀರ್ ಫೈಲ್ಸ್’ ಈಗ ಒಟಿಟಿಗೆ ಬರಲು ಸಜ್ಜಾಗಿದೆ. ಎಲ್ಲರೂ ಈ ಸಿನಿಮಾ ನೋಡಲು ಕಾತುರದಿಂದ ಎದುರು ನೋಡುತ್ತಿದ್ದರು. ಶೀಘ್ರದಲ್ಲೇ ಈ ಸಿನಿಮಾ ಜೀ 5(Zee 5)ನಲ್ಲಿ ಸ್ಟ್ರೀಮ್ ಆಗಲಿದೆ.
ಶ್ರೀಘ್ರದಲ್ಲೇ ಜೀ5ನಲ್ಲಿ ಬರಲಿದೆ 'ದಿ ಕಾಶ್ಮೀರ್ ಫೈಲ್ಸ್'
ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕುಳಿತು ನೋಡುವ ಸಮಯ ಹತ್ತಿರ ಬಂದಿದೆ. 90ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತ(Kashmiri Pundits)ರ ಸಾಮೂಹಿಕ ವಲಸೆ(Mass Migration)ಯ ದಾರುಣ ಕಥೆಗಳನ್ನು ಆಧರಿಸಿದ ಈ ಚಿತ್ರ, ಈಗಾಗಲೇ ವೀಕ್ಷಿಸಿದವರ ಹೃದಯವನ್ನು ಕರಗಿಸಿತ್ತು. ಈ ಚಿತ್ರಕ್ಕೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ.. ಮೊದಲ ದಿನ ಕೇವಲ 3.5 ಕೋಟಿ ರೂಪಾಯಿ ಸಂಪಾದನೆ ಮಾಡಿದ ಈ ಚಿತ್ರ ಅಂತಿಮವಾಗಿ 251 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಆಗಿತ್ತು.
ಬೇರೆ ಭಾಷೆಗಳಲ್ಲೂ ಡಬ್ ಮಾಡಿ ರಿಲೀಸ್!
ಶೀಘ್ರದಲ್ಲೇ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಜೀ5 ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಮೂಲ ಹಿಂದಿಯಲ್ಲಿ ತಯಾರಾದ ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಆಗಿದೆ.
ಇದನ್ನೂ ಓದಿ:ಈ ವೀಕೆಂಡ್ಗೆ ಮನೆಯಲ್ಲೇ ಕೂತು ಈ 4 ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿ..!
ಮತ್ತೆ ಫೈಲ್ ಹಿಂದೆ ಬಿದ್ದ ಅಗ್ನಿಹೋತ್ರಿ
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೆ ಫೈಲ್ಗಳ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತಾದ ಕಥೆಯನ್ನೊಳಗೊಂಡ ದಿ ತಾಷ್ಕೆಂಟ್ ಫೈಲ್ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ರಿಲೀಸ್ ಆದ ಈ ಸಿನಿಮಾ ಸುದ್ದಿ ಮಾಡಿದ್ರೂ, ಅಷ್ಟೊಂದು ಯಶಸ್ಸು ಗಳಿಸಲಿಲ್ಲ. ಅದಾದ ಬಳಿಕ ಬಂದಿದ್ದೇ ದಿ ಕಾಶ್ಮೀರ್ ಫೈಲ್ಸ್.
ಮತ್ತೆ ಸದ್ದು ಮಾಡುತ್ತಾರಾ ವಿವೇಕ್ ಅಗ್ನಿಹೋತ್ರಿ?
ಟೈಟಲ್ ಅನೌನ್ಸ್ ಮಾಡುವುದರ ಜೊತೆಗೆ ಅವರು ಒಂದು ಮೋಷನ್ ಪೋಸ್ಟರ್ ಸಹ ರಿಲೀಸ್ ಮಾಡಿದ್ದರು. ರಾಷ್ಟ್ರ ಲಾಂಚನದ ನಡುವೆ ಸಿಖ್ ಬಾಲಕನೊಬ್ಬ ಅಸಹಾಯಕತೆಯಿಂದ ಅಳುತ್ತಿರುವ ಪೋಸ್ಟರ್ ಅದಾಗಿದೆ. ಹಿನ್ನೆಲೆಯಲ್ಲಿ ಬೂಟಿನ ಶಬ್ದ ಕೇಳಿಸುತ್ತದೆ. ಈ ಸಿನಿಮಾದಲ್ಲಿ ‘ಜೀವಿಸುವ ಹಕ್ಕು’ ಬಗ್ಗೆ ವಿವರಿಸುವುದಾಗಿ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲೂ ರಾಕಿ ಡೈಲಾಗ್ ಹವಾ! 'ಮ್ಯಾರೇಜ್.. ಮ್ಯಾರೇಜ್..ಐ ಡೋಂಟ್ ಲೈಕ್ ಇಟ್'
ದೆಹಲಿಯ ಕರಾಳ ಕಥೆ ತೋರಿಸಲಿದ್ದಾರೆ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ಮುಂದಿನ ಸಿನಿಮಾ ‘ದಿ ದಿಲ್ಲಿ ಫೈಲ್ಸ್’ ಅಂತ ಘೋಷಣೆಯಾಗಿದೆ. 2021ರ ಸೆ.13ರಂದು ಅವರು ಈ ಸಿನಿಮಾ ಅನೌನ್ಸ್ ಮಾಡಿದ್ದರು. ‘ದಿ ತಾಷ್ಕೆಂಟ್ ಫೈಲ್ಸ್’ ಹಾಗೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಗಳಿಗಿಂತಲೂ ‘ದಿ ದಿಲ್ಲಿ ಫೈಲ್ಸ್’ ಹೆಚ್ಚು ಭಯಾನಕ ಆಗಿರಲಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ