ಲೀನಾ ಮಣಿಮೇಕಲೈ (Leena Manimekalai) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇತ್ತೀಚೆಗೆ ಸುದ್ದಿಯಲ್ಲಿರುವ ನಿರ್ದೇಶಕಿ. ಇವರು ಒಳ್ಳೆಯ ವಿಷಯದಿಂದ ಸುದ್ದಿಯಾಗಿಲ್ಲ. ಬದಲಿಗೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ವಿವಾದಕ್ಕೀಡಾದ ಡೈರೆಕ್ಟರ್. ಲೀನಾ ಮಣಿಮೇಕಲೈ ವಿರುದ್ಧ ದೇಶದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕಾಳಿ ಮಾತೆಯಂತೆ ವೇಷಭೂಷಣ ಧರಿಸಿರುವ ಮಹಿಳೆಯು ಧೂಮಪಾನ ಮಾಡುತ್ತಿರುವಂತೆ ಪೋಸ್ಟರ್ ಹಾಕಿ ವಿವಾದಕ್ಕೀಡಾಗಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Viveek Agnihotri) ತರಾಟೆಗೆ ತೆಗೆದುಕೊಂಡಿದ್ದಾರೆ. ವಿವಾದಾತ್ಮಕ ಪೋಸ್ಟ್ ವಿರುದ್ಧ ಕಿಡಿಕಾರಿದ್ದಾರೆ. ಅವಳ ಕಾಳಿಮಾತೆಯನ್ನು ವಿಲಕ್ಷಣವಾಗಿ (Queer) ತೋರಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಹುಚ್ಚು ಹೆಚ್ಚಾಗಿದೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಟ್ವಿಟ್ಟರ್‍ನಲ್ಲಿ ಲೀನಾ ಮಣಿಮೇಕಲೈಗೆ ತರಾಟೆ!
ಹಿಂದೂಗಳ ನೆಚ್ಚಿನ ದೇವರಾದ ಕಾಳಿ ಮಾತೆಯು ಸಿಗರೇಟ್ ಸೇದುವಂತೆ ಪೋಸ್ಟರ್ ಹಾಕಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಪೋಸ್ಟರ್ ಹಾಕಿದ ಮೇಲೆ ದೇಶದ್ಯಾಂತ ವಿವಾದ ಆಗಿದ್ದರೂ, ಮತ್ತು ಸಂದರ್ಶನ ವೊಂದರಲ್ಲಿ ಲೀನಾ ಮಣಿಮೇಕಲೈ ತಮ್ಮ ಪೋಸ್ಟರನ್ನು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಹುಚ್ಚರನ್ನು ಕಿತ್ತು ಹಾಕಬೇಕು ಎಂದು ಟ್ವಿಟ್ಟರ್‍ನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.
ವಿವಾದಾತ್ಮಕ ಪೋಸ್ಟರ್ನಲ್ಲಿ ಏನಿತ್ತು?
ಮೂಲತಃ ಮಧುರೈ ಮೂಲದ ನಿರ್ದೇಶಕಿ ಲೀನಾ ಮಣಿಮೇಕಲೈ ಸದ್ಯ ಟೊರೊಂಟೊದಲ್ಲಿ ನೆಲೆಸಿದ್ದಾರೆ. ಇವರುತಮ್ಮ ಕಾಳಿ ಸಾಕ್ಷ್ಯಚಿತ್ರದ ಪೆÇೀಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪೋಸ್ಟರ್ನಲ್ಲಿ ಕಾಳಿ ಮಾತೆಯಂತೆ ವೇಷಭೂಷಣ ಧರಿಸಿರುವ ಮಹಿಳೆಯು ಧೂಮಪಾನ ಮಾಡುತ್ತಿರುವಂತೆ ಚಿತ್ರಿಸಿದ್ದರು. ಇದರ ಜೊತೆಗೆ, ಇಂದು ಅಗಾ ಖಾನ್ ಮ್ಯೂಸಿಯಂನಲ್ಲಿ ರಿದಮ್ಸ್ ಆಫ್ ಕೆನಡಾದ ಭಾಗವಾಗಿರುವ ನನ್ನ ಚಿತ್ರವನ್ನು ಲಾಂಚ್ ಮಾಡಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನನ್ನ ಇಡೀ ತಂಡದಲ್ಲಿ ಉತ್ಸಾಹ ತುಂಬಿದೆ ಎಂದು ಲೀನಾ ಮಣಿಮೇಕಲೈ ಬರೆದುಕೊಂಡಿದ್ದರು.
ವಿವಾದದ ನಂತರವೂ ಲೀನಾ ಸಮರ್ಥನೆ!
ನನ್ನ ಕಾಳಿ ವಿಲಕ್ಷಣವಾದರೂ ಸ್ವತಂತ್ರ ಮನೋಭಾವದ ಚೇತನ. ಪಿತೃ ಪ್ರಭುತ್ವದ ಮೇಲೆ ಹೋರಾಡುತ್ತಾಳೆ. ನನ್ನ ಕಾಳಿ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ, ಬಂಡವಾಳಶಾಹಿಯನ್ನು ಕಿತ್ತೊಗೆಯುತ್ತಾಳೆ. ತನ್ನ ಸಾವಿರ ಕೈಗಳಿಂದ ಎಲ್ಲರನ್ನು ಅಪ್ಪಿಕೊಳ್ಳುತ್ತಾಳೆ ಎಂದು ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಇದರ ಜೊತೆ ಕಾಳಿಯ ರೌದ್ರಾವತಾರದ ಚಿತ್ರವೊಂದನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: Kangana Ranaut vs Javed Akhtar: ಜಾವೇದ್ ಅಖ್ತರ್ vs ಕಂಗನಾ ರನೌತ್; ಮಾನನಷ್ಟ ಮೊಕದ್ದಮೆ ಹೂಡಿದ್ದೇಕೆ?
ಲೀನಾ ಮಣಿಮೇಕಲೈ ಹಲವು ಕೇಸ್!
ನಿರ್ದೇಶಕಿ ಲೀನಾ ಮಣುಮೇಕಲೈ ಕಾಳಿ ಮಾತೆಯು ಸಿಗರೇಟ್ ಸೇದುವ ರೀತಿಯ ಪೋಸ್ಟರ್ ಹಾಕಿದ ಮೇಲೆ ತೀವ್ರ ವಿವಾದಕ್ಕೆ ಒಳಗಾಗಿದ್ರು. ಪೆÇೀಸ್ಟರ್ ವಿವಾದ ಸ್ಫೋಟಗೊಂಡ ಲೀನಾ ಮಣಿಮೇಕಲೈ ವಿರುದ್ಧ ಭಾರತದ ವಿವಿಧ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಧರ್ಮದ ಆಧಾರದ ಮೇಲೆ ವಿವಿಧ ಸಮುದಾಯಗಳ ನಡುವೆ ಶತ್ರುತ್ವವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪವನ್ನು ಆಕೆಯ ಮೇಲೆ ಹೊರಿಸಲಾಗಿದೆ.
ಇದನ್ನೂ ಓದಿ: Pushpa 2 ಚಿತ್ರದ ಬಜೆಟ್ ರಿವೀಲ್, ಅಲ್ಲು ಸಂಭಾವನೆ ಅಂತೂ ಅಬ್ಬಬ್ಬಾ! ಕೋಟಿಗಳಿಗೆ ಬೆಲೆನೇ ಇಲ್ವಾ?
ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಲೀನಾ ಮಣಿಮೇಕಲೈ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದ ಮೇಲೆ ಲೀನಾ ಮಣಿಮೇಕಲೈ ಅರೆಸ್ಟ್ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದರು. ಕಾಳಿ ಹೆಸರಿನ ಸಾಕ್ಷ್ಯಚಿತ್ರವನ್ನು ಲೀನಾ ಮಾಡುತ್ತಿದ್ದಾರೆ. ಪೋಸ್ಟರ್ನಿಂದ ಹೀಗಾಗಲೇ ಸಾಕಷ್ಟು ವಿವಾದ ಎದ್ದಿದೆ. ಪೋಸ್ಟರ್ ಸಂಬಂಧ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಲೀನಾ ಮಣಿಮೇಕಲೈ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತು ಆಕೆಯ ಸಂಗಡಿಗರಿಗೆ ಸಮನ್ಸ್ ಜಾರಿ ಮಾಡಿದೆ. ಸಮನ್ಸ್ ನೀಡಿ ಆಗಸ್ಟ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ