• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • The Kerala Story: ನೀವು ಊಹಿಸಲಾಗದ ದ್ವೇಷ ನಿಮ್ಮದಾಗುತ್ತದೆ, ದಿ ಕೇರಳ ಸ್ಟೋರಿ ತಂಡಕ್ಕೆ ಎಚ್ಚರಿಕೆ ಕೊಟ್ಟ ವಿವೇಕ್ ಅಗ್ನಿಹೋತ್ರಿ 

The Kerala Story: ನೀವು ಊಹಿಸಲಾಗದ ದ್ವೇಷ ನಿಮ್ಮದಾಗುತ್ತದೆ, ದಿ ಕೇರಳ ಸ್ಟೋರಿ ತಂಡಕ್ಕೆ ಎಚ್ಚರಿಕೆ ಕೊಟ್ಟ ವಿವೇಕ್ ಅಗ್ನಿಹೋತ್ರಿ 

ವಿವೇಕ್ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ

ದಿ ಕೇರಳ ಸ್ಟೋರಿ ಸಿನಿಮಾ ಬಳಿಕ ನಿಮ್ಮ ಜೀವನ ಕೂಡ ಬದಲಾಗಲಿದೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

  • Share this:

ದೇಶದಾದ್ಯಂತ ದಿ ಕೇರಳ ಸ್ಟೋರಿ (The Kerala Story) ಬಗ್ಗೆಯೇ ಬಾರೀ ಚರ್ಚೆ ಆಗುತ್ತಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಟೀಸರ್ (Teaser) ಮೂಲಕ ವಿವಾದದ ಸುಳಿಯಲ್ಲಿ ಸಿಲುಕಿತ್ತು. ರಿಲೀಸ್ ಆದ ಬಳಿಕ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ  ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ. ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ (Collection) ಕೂಡ ಮಾಡ್ತಿದೆ. ಬಾಲಿವುಡ್ ನಟಿ ಅದಾ ಶರ್ಮಾ (Adah Sharma), ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಮತ್ತೊಂದು ಕಾಶ್ಮೀರ್ ಫೈಲ್ಸ್​ ಎಂದು ಕರೆಯಲಾಗ್ತಿದೆ. ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಶಾಕಿಂಗ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆನೀಡಿದ್ದಾರೆ.


ಸಿನಿಮಾ ತಂಡದ ಬಗ್ಗೆ ಅಗ್ನಿಹೋತ್ರಿ ಮೆಚ್ಚುಗೆ 


ಸಿನಿಮಾ ಬಗ್ಗೆ ಮಾತಾಡಿ ವಿವೇಕ್ ಅಗ್ನಿಹೋತ್ರಿ, ದಿ ಕೇರಳ ಸ್ಟೋರಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ದಿ ಕೇರಳ ಸ್ಟೋರಿ ಬಿಡುಗಡೆ ನಂತರ ನಿರ್ದೇಶಕ ಅಗ್ನಿಹೋತ್ರಿ ಟ್ವಿಟರ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಚಿತ್ರದ ನಿರ್ಮಾಪಕ ವಿಪುಲ್ ಶಾ, ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಟ ಅದಾ ಶರ್ಮಾ ಅವರಿಗೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಳಿಕ ನಿಮ್ಮ ಜೀವನ ಕೂಡ ಬದಲಾಗಲಿದೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.


ವಿವೇಕ್ ಅಗ್ನಿಹೋತ್ರಿ


ನೀವು ಊಹಿಸಲಾಗದ ದ್ವೇಷ ನಿಮ್ಮದಾಗುತ್ತದೆ 


'The Kerala Story ಸಿನಿಮಾ ತಂಡಕ್ಕೆ ಅಭಿನಂದನೆಗಳು. ಮೊದಲು ನಾನು ನಿಮ್ಮ ಧೈರ್ಯಶಾಲಿ ಪ್ರಯತ್ನಕ್ಕಾಗಿ ಅಭಿನಂದಿಸುತ್ತೇನೆ. ಅದೇ ಸಮಯದಲ್ಲಿ ನಾನು ನಿಮಗೆ  ಕೆಟ್ಟ ಸುದ್ದಿ ಕೂಡ ನೀಡುತ್ತೇನೆ. ಇಲ್ಲಿಂದ ಇನ್ಮುಂದೆ ನಿಮ್ಮ ಜೀವನವು ಒಂದೇ ಆಗಿರುವುದಿಲ್ಲ. ನೀವು ಊಹಿಸಲಾಗದ ದ್ವೇಷವನ್ನು ಸ್ವೀಕರಿಸುತ್ತೀರಿ. ನೀವು ಉಸಿರುಗಟ್ಟಿದ ಅನುಭವ ಪಡೆಯುತ್ತೀರಿ. ಅನೇಕ ಬಾರಿ ನೀವು ಗೊಂದಲಕ್ಕೊಳಗಾಗಬಹುದು ಮತ್ತು ಖಿನ್ನತೆಗೆ ಒಳಗಾಗಬಹುದು ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.



ದಿ ಕೇರಳ ಸ್ಟೋರಿ 40 ಕೋಟಿ ಬಜೆಟ್​ ಸಿನಿಮಾ


ಬಾಲಿವುಡ್ ನಟಿ ಅದಾ ಶರ್ಮಾ ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದು, ಈ ಚಿತ್ರ ಸತ್ಯ ಘಟನೆಗಳನ್ನು ಆಧರಿಸಿದೆ ಎಂದು ಹೇಳಲಾಗಿದೆ. ಏಪ್ರಿಲ್ 5 ರಂದು ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾ, ಮಾಸ್ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಸಿನಿಮಾವನ್ನು 40 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗಿದೆ.


ಇದನ್ನೂ ಓದಿ: The Kerala Story: ವಿವಾದದ ನಡುವೆ ಭರ್ಜರಿ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ, 3ನೇ ದಿನಕ್ಕೆ ಕೋಟಿ ಕೋಟಿ ಗಳಿಕೆ!


ಅದಾ ಶರ್ಮಾ ಪಡೆದ ಸಂಭಾವನೆ ಎಷ್ಟು?


ದಿ ಕೇರಳ ಸ್ಟೋರಿ ಸಿನಿಮಾವನ್ನು ನಟಿ ಅದಾ ಶರ್ಮಾ ಪಾತ್ರದ ಮೇಲೆಯೇ ರಚಿಸಲಾಗಿದೆ. ಈ ಸಿನಿಮಾಗಾಗಿ ನಟಿ ಅದಾ ಇತರೆ ನಟರಿಗಿಂತ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರಂತೆ. ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಲು ನಟಿ 1 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.




ಬ್ರೈನ್ ವಾಶ್ ಮಾಡಿ ಮತಾಂತರ


ಇದು ಕೇರಳದ ನೈಜ ಕಥೆಯನ್ನು ಆಧರಿಸಿದೆಯಂತೆ. ಕೇರಳದ ಹಾಸ್ಟೆಲ್‌ನಲ್ಲಿ ವಾಸಿಸುವ ನಾಲ್ವರು ಹಿಂದೂ ಕಾಲೇಜು ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸುವಂತೆ ಬ್ರೈನ್‌ವಾಶ್ ಮಾಡುತ್ತಾರೆ. ಬಳಿಕ ಅವರನ್ನು ಭಯೋತ್ಪಾದಕ ಸಂಘಟನೆ-ಐಸಿಸ್ ಬಲವಂತವಾಗಿ ತಳ್ಳುತ್ತಾರೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ.

top videos
    First published: