#MeToo: ಕೊನೆಗೂ ಮೌನ ಮುರಿದ ವಿಸ್ಮಯ ಚಿತ್ರ ನಿರ್ದೇಶಕ, ಅರ್ಜುನ್ ಸರ್ಜಾ ಬಗ್ಗೆ ಹೇಳಿದ್ದೇನು?

zahir | news18
Updated:October 21, 2018, 11:43 AM IST
#MeToo: ಕೊನೆಗೂ ಮೌನ ಮುರಿದ ವಿಸ್ಮಯ ಚಿತ್ರ ನಿರ್ದೇಶಕ, ಅರ್ಜುನ್ ಸರ್ಜಾ ಬಗ್ಗೆ ಹೇಳಿದ್ದೇನು?
  • News18
  • Last Updated: October 21, 2018, 11:43 AM IST
  • Share this:
-ನ್ಯೂಸ್ 18 ಕನ್ನಡ

ದೇಶದಲ್ಲಿ #MeToo ಅಭಿಯಾನ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಹಲವು ಖ್ಯಾತನಾಮರ ಹೆಸರುಗಳು ಬಹಿರಂಗವಾಗುತ್ತಿದೆ. ಈ ಅಭಿಯಾನದಡಿಯಲ್ಲಿ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಹೆಸರು ತಳುಕು ಹಾಕಿಕೊಂಡಿದ್ದು ದೊಡ್ಡದೊಂದು ಚರ್ಚೆಗೆ ಕಾರಣವಾಗಿದೆ. ನಟಿ ಶೃತಿ ಹರಿಹರನ್ ವಿಸ್ಮಯ ಚಿತ್ರದ ರಿಹರ್ಸಲ್ ಸಂದರ್ಭದಲ್ಲಿ ಅರ್ಜುನ್ ಸರ್ಜಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಆ ಸಿನಿಮಾದ ನಿರ್ದೇಶಕ ಅರುಣ್ ವೈದ್ಯನಾಥನ್ ಕೂಡ ಈ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ತುಂಬಾ ಹತ್ತಿರದ ಫ್ರೆಂಡ್ಸ್​. ಇವರಿಬ್ಬರ ಕುಟುಂಬವನ್ನು ನಾನು ಹತ್ತಿರದಿಂದ ಬಲ್ಲೆ. ಇವರಿಬ್ಬರೂ ತಮ್ಮ ವೃತ್ತಿಯಲ್ಲಿ ಪಕ್ಕಾ ಪ್ರೊಫೆಶನಲ್ ನಟ-ನಟಿಯರು. ವಿಸ್ಮಯ ಚಿತ್ರದ ಚಿತ್ರೀಕರಣಕ್ಕೂ ಮುನ್ನ ನಾವು ಸಿನಿಮಾದ ಕೆಲವು ಸೀನ್​ಗಳಿಗೆ ರಿಹರ್ಸಲ್ ಮಾಡಿರುವುದು ನಿಜ. ಎರಡು ವರ್ಷಗಳ ಹಿಂದೆ ಈ ಚಿತ್ರದ ಚಿತ್ರೀಕರಣವಾಗಿತ್ತು. ಹೀಗಾಗಿ ನನಗೆ ಎಲ್ಲವೂ ನೆನಪಿಲ್ಲ. ಆದರೂ ಅರ್ಜುನ್ ಸರ್ಜಾ ಎಂಬ ನಟ ಜಂಟಲ್​ಮ್ಯಾನ್ ಎಂಬುದರಲ್ಲಿ ಎರಡು ಮಾತಿಲ್ಲ.ಈ ಚಿತ್ರದ ಶೂಟಿಂಗ್​ಗಿಂತಲೂ ಮುಂಚಿತವಾಗಿ ಸೀನ್​ಗಳನ್ನು ಉತ್ತಮಗೊಳಿಸಲು ಕೆಲವು ಸನ್ನಿವೇಶಗಳ ರಿಹರ್ಸಲ್​ ನಡೆಸಿದ್ದೆವು. ಸಿನಿಮಾದಲ್ಲಿ ನೀವು ನೋಡಿರುವ ದೃಶ್ಯಗಳಿಗಿಂತಲೂ ಕೆಲವು ತುಂಬಾ ಸಲಿಗೆಯ ಸನ್ನಿವೇಶಗಳು ಚಿತ್ರಕಥೆಯಲ್ಲಿತ್ತು. ಆದರೆ ಖುದ್ದು ಅರ್ಜುನ್ ಸರ್ಜಾ ಅವರೇ ಕೆಲವು ದೃಶ್ಯಗಳಿಗೆ ಬೇಡ ಎಂದಿದ್ದರು. ತನಗೂ ವಯಸ್ಸಿಗೆ ಬಂದಿರುವ ಹೆಣ್ಣುಮಗಳಿದ್ದು, ಇಂತಹ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ ಎಂದು ಆ್ಯಕ್ಷನ್ ಕಿಂಗ್ ಹೇಳಿದ್ದರು. ಹಾಗಾಗಿ ನಟಿಯೊಂದಿಗಿನ ಅನೇಕ ಸಲಿಗೆಯಿಂದ ಕೂಡಿದ ದೃಶ್ಯಗಳನ್ನು ನಾವು ಬದಲಾವಣೆ ಮಾಡಿಕೊಂಡಿದ್ದೆವು.ಇದಾದ ಬಳಿಕ ವಿಸ್ಮಯ ಚಿತ್ರೀಕರಣದಲ್ಲಿ ಒಂದು ತಂಡದ ರೀತಿಯಲ್ಲಿ ಎಲ್ಲರೂ ಕೆಲಸ ಮಾಡಿದ್ದರು. ಆದರೆ ಶೂಟಿಂಗ್ ನಂತರದ ಚಾಟಿಂಗ್ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗ ಈ ರೀತಿ ಆರೋಪ ಕೇಳಿ ಬಂದಿರುವುದು ಬೇಸರ ತಂದಿದೆ ಎಂದು ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸೂಪರ್ ಹೀರೋಗಳೇ ಎಲ್ಲಿದ್ದೀರಾ..? ಶೃತಿ ಹರಿಹರನ್ ಬೆಂಬಲಕ್ಕೆ ನಿಂತ ನಟಿ ಶ್ರದ್ಧಾ ಶ್ರೀನಾಥ್

ನಟಿ ಶೃತಿ ಹರಿಹರನ್ ವಿಸ್ಮಯ ಸಿನಿಮಾದ ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ತಮ್ಮೊಂದಿಗೆ ಎಲ್ಲೆ ಮೀರಿ ವರ್ತಿಸಿದ್ದರು. ಚಿತ್ರೀಕರಣದ ವೇಳೆ​ ನನ್ನನ್ನು ಪದೇ‌ ಪದೇ ಹೋಟೆಲ್, ಪಬ್​ಗೆ ಕರೆಯುತ್ತಿದ್ದರು ಎಂದು ಶ್ರುತಿ ಆರೋಪಿಸಿದ್ದರು.

First published: October 21, 2018, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading