ವೈರಲ್​ ಆಗುತ್ತಿದೆ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​ ಮಾಡಿರುವ ಡ್ಯಾನ್ಸ್​ ವಿಡಿಯೋ..!

Aniruddh Dancing Video: ವಯಸ್ಸಿಗೆ ತಕ್ಕ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವ ಅನಿರುದ್ಧ್​ ಆರ್ಯವರ್ಧನ್​ ಆಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯ ಲಾಕ್​ಡೌನ್​ನಿಂದಾಗಿ ಅನಿರುದ್ಧ್​ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

Anitha E | news18-kannada
Updated:May 11, 2020, 5:58 PM IST
ವೈರಲ್​ ಆಗುತ್ತಿದೆ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​ ಮಾಡಿರುವ ಡ್ಯಾನ್ಸ್​ ವಿಡಿಯೋ..!
Aniruddh Dancing Video: ವಯಸ್ಸಿಗೆ ತಕ್ಕ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವ ಅನಿರುದ್ಧ್​ ಆರ್ಯವರ್ಧನ್​ ಆಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯ ಲಾಕ್​ಡೌನ್​ನಿಂದಾಗಿ ಅನಿರುದ್ಧ್​ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.
  • Share this:
ಬೆಳ್ಳಿ ತೆರೆಯಿಂದ ಕಿರುತೆರೆಯತ್ತ ಮುಖ ಮಾಡಿರುವ ವಿಷ್ಣುವರ್ಧನ್​ ಅವರ ಅಳಿಯ ಅನಿರುದ್ಧ್​ ಸದ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಾಲ್ಟ್​ ಆ್ಯಂಡ್​ ಪೆಪ್ಪರ್​ ಲುಕ್​ನಲ್ಲಿ ಆರ್ಯವರ್ಧನ್​ ಪಾತ್ರದ ಮೂಲಕ ಸಾಕಷ್ಟು ಹೆಣ್ಣು ಮಕ್ಕಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ ಅನಿರುದ್ಧ್​.

ವಯಸ್ಸಿಗೆ ತಕ್ಕ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವ ಅನಿರುದ್ಧ್​ ಆರ್ಯವರ್ಧನ್​ ಆಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯ ಲಾಕ್​ಡೌನ್​ನಿಂದಾಗಿ ಅನಿರುದ್ಧ್​ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

 
ಮಗಳು ಶ್ಲೋಕಾ ಹಾಗೂ ಮಗ ಜ್ಯೇಷ್ಠ ವರ್ಧನ್​ ಜೊತೆ ಬಾಲಿವುಡ್​ ಸಿನಿಮಾದ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ್ದಾರೆ. ಅಮಿತಾಭ್, ಗೋವಿಂದಾ ಹಾಗೂ ಮಾಧುರಿ ದೀಕ್ಷಿತ್​ ಹೆಜ್ಜೆ ಹಾಕಿರುವ 'ಬಡೇ ಮಿಯಾ ಚೋಟೆ ಮಿಯಾ' ಸಿನಿಮಾದ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ.
ಅವರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅದಕ್ಕೆ 2.50 ಲಕ್ಷ ವೀಕ್ಷಣೆ ಸಿಕ್ಕಿದೆ. 
View this post on Instagram
 

ಲಾಕ್ ಡೌನ್ ನಲ್ಲಿ ಹೀಗೊಂದು ಫೋಟೋ.. #Anirudh


A post shared by Aniruddha Jatkar (@aniruddhajatkar) on


ಬೆಳ್ಳಿ ತೆರೆಯಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಕಿರುತೆರೆಗೆ ಬಂದ ಅನಿರುದ್ಧ್​ಗೆ ಆರ್ಯವರ್ಧನ್​ ಪಾತ್ರ ಖ್ಯಾತಿ ತಂದುಕೊಟ್ಟಿದೆ. ಈ ಧಾರಾವಾಹಿಯ ಒಂದು ದಿನದ ಚಿತ್ರೀಕರಣಕ್ಕಾಗಿ 35 ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ ಅನಿರುದ್ಧ್​ ಎಂದೂ ಹೇಳಲಾಗುತ್ತಿದೆ. ಅಲ್ಲದೆ ಈಗ ಅನಿರುದ್ಧ್​ಗೆ ಸಿನಿಮಾಗಳಿಂದಲೂ ಅವಕಾಶಗಳು ಅರಸಿ ಬರುತ್ತಿವೆಯಂತೆ.

Divya Bharti: ಅಮೀರ್​ ಖಾನ್​ ಮಾಡಿದ್ದ ಕೆಲಸದಿಂದ ಗಂಟೆಗಟ್ಟಲೇ ಕಣ್ಣೀರಿಟ್ಟಿದ್ದರಂತೆ ದಿವ್ಯಾ ಭಾರತಿ..!
First published: May 11, 2020, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading