ಯಜಮಾನ್ರೋತ್ಸವ: ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ

ಡಾ.ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದರೂ 70thBDayOfLegendDrVishnuvardhan ಎನ್ನುವ ಹ್ಯಾಷ್ ಟ್ಯಾಗ್ ಜೊತೆಗೆ ಪೋಸ್ಟ್ ಮಾಡಲಾಗುತ್ತಿದೆ. 

news18-kannada
Updated:August 20, 2020, 7:51 PM IST
ಯಜಮಾನ್ರೋತ್ಸವ: ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ
vishnu dada
  • Share this:
ಕೊರೋನ ಕಾರಣಕ್ಕೆ ಜಗತ್ತು ತಲ್ಲಣಗೊಂಡಿದೆ. ಇದೇ ಸಂದರ್ಭದಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜಯಂತೋತ್ಸವ ಬಂದಿರುವುದು ಅಭಿಮಾನಿಗಳಲ್ಲಿ ತೀವ್ರ ನಿರಾಸೆಯನ್ನು ಉಂಟುಮಾಡಿದೆ. 70 ಎಂಬುದು ಮಹತ್ವದ ವರ್ಷ..! ಕೊರೋನ ಇಲ್ಲದಿದ್ದರೆ ಇಡೀ ನಾಡಿನಾದ್ಯಂತ ಒಂದು ಹಬ್ಬದ ವಾತಾವರಣ ಇರುತಿತ್ತು. ಆದರೆ ಈಗ ಅದಿಲ್ಲವೆಂಬುದೇ ಅವರ ನಿರಾಸೆಗೆ ಕಾರಣ.

ಹಾಗಂತ ಈ  70ನೇ ವರ್ಷವನ್ನು ಆಚರಿಸದೇ ಇರುವುದು ಹೇಗೆ? ಅದೇ ಕಾರಣಕ್ಕೆ ಡಾ.ವಿಷ್ಣು ಸೇನಾ ಸಮಿತಿ ಒಂದಷ್ಟು ಸಮಾಜಕ್ಕೆ ಒಳಿತಾಗುವ ಕೆಲವು ಕೆಲಸಗಳ ಮೂಲಕ ಈ 70ನೇ ಹುಟ್ಟುಹಬ್ಬವನ್ನು ಆಚರಿಸಲು ಮುಂದಾಗಿದೆ.

ಅಂತಹ ಕೆಲವು ಪ್ರಮುಖಾಂಶಗಳೆಂದರೆ..
1. ಈ ಹುಟ್ಟುಹಬ್ಬದ ಆಚರಣೆ ಆಗಸ್ಟ್ 1 ರಿಂದ ಸೆಪ್ಟೆಂಬರ್ 18 ರ ತನಕ ಬರೋಬ್ಬರಿ ಒಂದು ತಿಂಗಳ ಕಾಲ ನಡೆಯಲಿದೆ.

2.  ಖೈದಿಗಳಿಗೆ ಮರುಜನ್ಮ: ರಾಜ್ಯದಲ್ಲಿ ಸಾವಿರಾರು ಖೈದಿಗಳಿದ್ದಾರೆ. ಅದರಲ್ಲಿ ನೂರಾರು ಜನ ಖೈದಿಗಳ ಶಿಕ್ಷೆಯ ಅವಧಿ ಮುಗಿದಿದೆ. ಆದರೆ ಅವರಿಂದ ದಂಡ ಪಾವತಿಸಲಾಗದ ಕಾರಣಕ್ಕೆ ಶಿಕ್ಷೆಯ ಅವಧಿ ಮುಗಿದರೂ ಇನ್ನೂ ಜೈಲುಗಳಲ್ಲೇ ಇದ್ದಾರೆ. ಅಂತಹ 10 ಖೈದಿಗಳನ್ನು ಗುರುತಿಸಿ ಅವರು ಪಾವತಿಸಬೇಕಾದ ದಂಡವನ್ನು ಸಮಿತಿಯೇ ಭರಿಸಿ, ಡಾ .ವಿಷ್ಣುವರ್ಧನ್ ಅವರ ಜನ್ಮದಿನದಂದು ಖೈದಿಗಳಿಗೆ ಮರುಜನ್ಮ ನೀಡೋ ಕೆಲಸ ಮಾಡಲಾಗ್ತಿದೆ.

3. 70000 ಸಸಿ ನೆಟ್ಟು ಪೋಷಿಸುವುದು: ಆಗಸ್ಟ್ 17 ರಿಂದ ಸೆಪ್ಟೆಂಬರ್ 18 ರ ತನಕ ರಾಜ್ಯದಾದ್ಯಂತ ಎಪ್ಪತ್ತು ಸಾವಿರ ಸಸಿ ನೆಡುವ ಗುರಿ ಹೊಂದಿದ್ದೇವೆ. ಪ್ರತಿಯೊಬ್ಬ ಅಭಿಮಾನಿ ತಾನಿರುವ ಜಾಗದಲ್ಲೇ, ತನ್ನ ಸ್ನೇಹಿತರು, ಕುಟುಂಬದವರ ಜೊತೆಗೂಡಿ ಕನಿಷ್ಠ  25 ಗಿಡಗಳನ್ನು ನೆಡುತ್ತಾರೆ.  ಈ ರೀತಿ ಗಿಡ ನೆಡಲು ಈಗಾಗಲೇ 2000 ಅಭಿಮಾನಿಗಳು ನೊಂದಾಯಿಸಿಕೊಂಡಿದ್ದಾರೆ. ಗಿಡ ನೆಡುವ ಪ್ರತಿಯೊಬ್ಬರೂ ತಮ್ಮ ಹೆಸರು, ವಿಳಾಸದ ಜೊತೆಗೆ ತಾವು ನೆಟ್ಟ ಗಿಡಗಳ ಫೋಟೋ ಕಳಿಸುವುದನ್ನು ಕಡ್ಡಾಯಗೊಳಿಸಿದ್ದೇವೆ.   ಗಿಡ ನೆಡಲು ಪ್ರೋತ್ಸಾಹಿಸುವುದು, ನೆಟ್ಟ ಗಿಡಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವುದು, ಆರೈಕೆ ಮಾಡುತ್ತಿದ್ದಾರ ಇಲ್ಲವಾ ಎಂಬುದನ್ನು  ಕಾಲ ಕಾಲಕ್ಕೆ ವಿಚಾರಿಸುವುದಕ್ಕಾಗಿ ಡಾ.ವಿಷ್ಣು ಸೇನಾ ಸಮಿತಿಯು ತಂಡವೊಂದನ್ನು ರಚಿಸಿದೆ.

4. ಶಾಲಾ ಮಕ್ಕಳಿಗಾಗಿ ಸ್ಪರ್ಧೆ: 1 ರಿಂದ 10 ನೇ ತರಗತಿ ಮಕ್ಕಳಿಗಾಗಿ ಡಾ.ವಿಷ್ಣುವರ್ಧನ್ ಅವರ ವೇಷಭೂಷಣ, ಅಭಿನಯ, ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಇಲ್ಲಿ ವಿಜೇತರಾದ ಮಕ್ಕಳಿಗೆ ಮೊದಲನೇ ಬಹುಮಾನ ರೂ.20000/- ಎರಡನೇ ಬಹುಮಾನ ರೂ. 15000 ಮತ್ತು ಮೂರನೇ ಬಹುಮಾನ ರೂ. 10000 ಗಳನ್ನು ಘೋಷಿಸಲಾಗಿದೆ. ಮಕ್ಕಳು ತಮ್ಮ ವಿಡಿಯೋಗಳನ್ನು 99722 19267 ಗೆ ಕಳುಹಿಸಬಹುದಾಗಿದೆ.5.* ರಾಜ್ಯದಲ್ಲಿನ ರಕ್ತದ ಕೊರತೆ ನೀಗಿಸಲು 700 ಯುನಿಟ್ ರಕ್ತದಾನ:  ಪ್ರಸ್ತುತ ರಾಜ್ಯದಲ್ಲಿ ರಕ್ತದ ಕೊರತೆ ಬಹಳ ದೊಡ್ಟಮಟ್ಟದಲ್ಲಿದೆ. ಆದ್ದರಿಂದ ರಾಜ್ಯದಾದ್ಯಂತ ಇರುವ ಡಾ.ವಿಷ್ಣು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಕನಿಷ್ಠ 700 ರಿಂದ ಗರಿಷ್ಠ 7000 ಯುನಿಟ್ ತನಕ ರಕ್ತದಾನ ಮಾಡುವ ನಿರ್ಧಾರವನ್ನು ತಾಳಿದ್ದೇವೆ. ಹೀಗೆ ರಕ್ತದಾನ ಮಾಡಲು ಈಗಾಗಲೇ ಸುಮಾರು 300 ಜನ ನೊಂದಾಯಿಸಿಕೊಂಡಿದ್ದಾರೆ.

6.  ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು: ಗಾಗಲೇ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿಗೆ ಅರ್ಹವ್ಯಕ್ತಿಗಳನ್ನು ನಾಮಿನೇಟ್ ಮಾಡಲು ಕರೆ ನೀಡಿದೆ. ಅದರಂತೆ ಡಾ.ವಿಷ್ಣು ಸೇನಾನಿಗಳು ಈ ಬಾರಿ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ನಾಮಿನೇಟ್ ಮಾಡುವುದರ ಜೊತೆಗೆ ಸೆಲೆಬ್ರೆಟಿ/ಗಣ್ಯರಿಂದಲೂ ಮಾಡಿಸುತ್ತಿದ್ದಾರೆ. ಈ ಅಭಿಯಾನ ಸಹ ದಿನಾಂಕ 19.08.2020ರಿಂದ ಕಾರ್ಯರೂಪಕ್ಕೆ ಬರಲಿದೆ.

7.  ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್: ಇವತ್ತಿನಿಂದ ಡಾ.ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದರೂ 70thBDayOfLegendDrVishnuvardhan ಎನ್ನುವ ಹ್ಯಾಷ್ ಟ್ಯಾಗ್ ಜೊತೆಗೆ ಪೋಸ್ಟ್ ಮಾಡಲಾಗುತ್ತಿದೆ.  ಜೊತೆಗೆ ಸೆಪ್ಟೆಂಬರ್ 18 ರಂದು ಸುಮಾರು 5 ಲಕ್ಷ ಹುಟ್ಟುಹಬ್ಬದ ಟ್ವೀಟ್ಸ್ ಮಾಡಿಸುವ ಗುರಿಯನ್ನು ಡಾ.ವಿಷ್ಣು ಸೇನಾ ಸಮಿತಿ ಹಮ್ಮಿಕೊಂಡಿದೆ.
Published by: zahir
First published: August 20, 2020, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading