Vishnuvardhan: ನಟ ವಿಷ್ಣುವರ್ಧನ್​ ಇಂಗ್ಲಿಷ್​ ಎಷ್ಟು ಚೆನ್ನಾಗಿತ್ತು ಗೊತ್ತಾ?; ನೋಡಿ ಕಲಿಯಿರಿ

ವಿಷ್ಣುವರ್ಧನ್​ 220 ಚಿತ್ರಗಳಲ್ಲಿ ನಟಿಸಿದ್ದರೂ ಸಂದರ್ಶನಗಳಲ್ಲಿ ಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಹಾಗಂತ ವಿಷ್ಣು ವರ್ಧನ್​ ಅವರಿಗೆ ಇಂಗ್ಲಿಷ್​ ಬರುತ್ತಿರಲಿಲ್ಲವೆಂದಲ್ಲ. ಅವರು ಕನ್ನಡದಷ್ಟೇ ಪಾಂಡಿತ್ಯವನ್ನೂ ಇಂಗ್ಲೀಷ್​ನಲ್ಲೂ ಹೊಂದಿದ್ದಾರೆ.

news18-kannada
Updated:September 22, 2020, 2:08 PM IST
Vishnuvardhan: ನಟ ವಿಷ್ಣುವರ್ಧನ್​ ಇಂಗ್ಲಿಷ್​ ಎಷ್ಟು ಚೆನ್ನಾಗಿತ್ತು ಗೊತ್ತಾ?; ನೋಡಿ ಕಲಿಯಿರಿ
ವಿಷ್ಣುವರ್ಧನ್​
  • Share this:
ನಟ ವಿಷ್ಣು ವರ್ಧನ್​ ಅವರು ಕನ್ನಡ ಕಂಡ ಮಹಾನ್​ ನಟರಲ್ಲಿ ಒಬ್ಬರು. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಅವರು, ಇಂದಿಗೂ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ವಿಷ್ಣುವರ್ಧನ್​ ಅವರ ಖ್ಯಾತಿ ಸ್ಯಾಂಡಲ್​ವುಡ್​ಗೆ ಮಾತ್ರ ಸೀಮಿತವಾಗದೆ ಪರಭಾಷೆಯಲ್ಲೂ ಅವರ ಖ್ಯಾತಿ ಹೆಚ್ಚಿದೆ. ಸಂಪತ್ ಕುಮಾರ್ ಎಂಬುದು ವಿಷ್ಣುವರ್ಧನ್​ ಅವರ ಮೂಲ ಹೆಸರು. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಅವರ ಹೆಚ್ಚುಗಾರಿಕೆ. ವಿಷ್ಣುವರ್ಧನ್​ ಅವರು ಇಂಗ್ಲಿಷ್​ ಅನ್ನು ಎಷ್ಟು ಸುಲಲಿತವಾಗಿ ಮಾತನಾಡುತ್ತಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಈಗಿನ ನಟ-ನಟಿಯರು ಒಂದು ಸಿನಿಮಾ ಮಾಡಿದ ನಂತರ ನೂರು ಚಿತ್ರಗಳನ್ನು ಮಾಡಿದಂತೆ ಬೀಗುತ್ತಾರೆ. ಕನ್ನಡ ಸ್ಪಷ್ಟವಾಗಿ ಮಾತನಾಡದೆ ಇಂಗ್ಲಿಶ್​ಗೆ ಹೆಚ್ಚು ಒತ್ತು ಕೊಡುತ್ತಾರೆ ಎಂಬುದು ಸಾಮಾನ್ಯ ಆರೋಪ. ಆದರೆ, ವಿಷ್ಣುವರ್ಧನ್​ 220 ಚಿತ್ರಗಳಲ್ಲಿ ನಟಿಸಿದ್ದರೂ ಸಂದರ್ಶನಗಳಲ್ಲಿ ಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಹಾಗಂತ ವಿಷ್ಣು ವರ್ಧನ್​ ಅವರಿಗೆ ಇಂಗ್ಲಿಷ್​ ಬರುತ್ತಿರಲಿಲ್ಲವೆಂದಲ್ಲ. ಅವರು ಕನ್ನಡದಷ್ಟೇ ಪಾಂಡಿತ್ಯವನ್ನೂ ಇಂಗ್ಲೀಷ್​ನಲ್ಲೂ ಹೊಂದಿದ್ದಾರೆ.ಸಿನಿಮಿರರ್​ ಹೆಸರಿನ ಯೂಟ್ಯೂಬ್​ ಚಾನೆಲ್​ ವಿಷ್ಣುವರ್ಧನ್​ ಅವರ ಸಂದರ್ಶನದ ವಿಡಿಯೋ ಒಂದನ್ನು ಹಾಕಿದೆ. ಈ ವಿಡಯೋದಲ್ಲಿ ಅವರು ಇಂಗ್ಲಿಷ್​ನ ಪಾಂಡಿತ್ಯವನ್ನು ತೋರಿದ್ದಾರೆ.
Published by: Rajesh Duggumane
First published: September 22, 2020, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading