ಇಂದು ಸ್ಯಾಂಡಲ್ವುಡ್ನ ಸಾಹಸ ಸಿಂಹ ವಿಷ್ಣುವರ್ಧನ್ ಅವರ 70ನೇ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ಸಲ ಯಜಮಾನನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿಲ್ಲ. ಕೊರೋನಾ ಕಾರಣದಿಂದಾಗಿ ಈ ಸಲ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗದಿದ್ದರೂ, ಸರಳವಾಗಿ ಸಂಭ್ರಮಿಸಲು ನಿರ್ಧರಿಸಿದ್ದಾರೆ ಅಭಿಮಾನಿಗಳು. ಅದಕ್ಕಾಗಿಯೇ ನಿನ್ನೆಯೇ ಸಾಮಾಜಿಕ ಜಾಲತಾಣದಲ್ಲಿ ಒಂದು ಕಾಮನ್ ಡಿಪಿ ಸಹ ರಿಲೀಸ್ ಮಾಡಲಾಗಿದೆ. ಜೊತೆಗೆ ವಿಷ್ಣು ಹೆಸರಲ್ಲಿ ಅನ್ನದಾನ ಹಾಗೂ ಸಸಿ ನೆಡಲು ಸಿದ್ಧತೆ ಮಾಡಿಕೊಂಡಿದೆ ವಿಷ್ಣುಸೇವಾ ಸಮಿತಿ. ಈ ಸಲ ವಿಷ್ಣು ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕೆ ಮೊದಲೇ ಭರ್ಜರಿ ಉಡುಗೊರೆ ಸಿಕ್ಕಿದೆ. ಅದು ವಿಷ್ಣುವರ್ಧನ್ ಅವರ ಸ್ಮಾರಕ ವಿಷಯ. ಹೌದು, ವಿಷ್ಣು ಅಭಿಮಾನಿಗಳು ಹಾಗೂ ಕುಟುಂಬದವರು ನಡೆಸಿದ ಹೋರಾಟಕ್ಕೆ ಕಡೆಗೂ ಪ್ರತಿಫಲ ಸಿಕ್ಕಿದೆ. ಈ ಕಾರಣದಿಂದಾಗಿ ಅಭಿಮಾನಿಗಳ ಖುಷಿ ಇಮ್ಮಡಿಗೊಂಡಿದೆ. ಇನ್ನು ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೂ ಶುಭಕೋರುವುದರೊಂದಿಗೆ ಅವರನ್ನು ಸ್ಮರಿಸಿದ್ದಾರೆ.
ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕರು, ನಟರು ವಿಷ್ಣುವರ್ಧನ್ ಅವರಿಗೆ ಹಟ್ಟುಹಬ್ಬದ ಶುಭಕೋರುವ ಮೂಲಕ ಸ್ಮರಿಸಿದ್ದಾರೆ. ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ರಿಷಭ್ ಶೆಟ್ಟಿಮ, ಪವನ್ ಒಡೆಯರ್ ತಮ್ಮ ಟ್ವಿಟರ್ನ ಡಿಪಿ ಬದಲಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.
“ಸಾಹಸ ನಿಮ್ಮ ಬದುಕು-ಅಭಿನಯ ನಿಮ್ಮ ಉಸಿರು-ಅಭಿಮಾನಿಗಳು ನಿಮ್ಮ ಕುಟುಂಬ-ಸಮಾಜ ನಿಮ್ಮ ಮನೆ-ಕನ್ನಡ ನಿಮ್ಮ ತಾಯಿ--ಸಾಧನೆ ನಿಮ್ಮ ಹೆಜ್ಜೆ-ಶಾಶ್ವತ ನಿಮ್ಮ ನೆನಪು-ಸ್ಮರಣೆ ನಿಮ್ಮ ಸ್ಮಾರಕ” ನೀವು ಹುಟ್ಟುವಾಗ ಒಬ್ಬ, ಬಿಟ್ಟು ಹೋಗವುವಾಗ ಕೋಟಿಗೊಬ್ಬ” ಮತ್ತೆ ಹುಟ್ಟಿ ಬನ್ನಿ ಭುವನೇಶ್ವರಿಯ ಮಗನಾಗಿ, ನಮ್ಮೆಲ್ಲರ ಅಣ್ಣನಾಗಿ #HappyBirthdayದಾದಾ pic.twitter.com/ea752tSInK
— Santhosh Ananddram (@SanthoshAnand15) September 18, 2020
ಹುಟ್ಟುಹಬ್ಬದ ಶುಭಾಶಯಗಳು ದಾದಾ. ಕನ್ನಡ ಕುಲಕೋಟಿ ಮನಸ್ಸುಗಳಲ್ಲಿ ನೀವೆಂದಿಗೂ ಜೀವಂತ. 🙏 pic.twitter.com/bbH1olKUg6
— Pavan Wadeyar (@PavanWadeyar) September 18, 2020
#vishnusirlivesForever@KicchaSudeep @shetty_rishab
❤❤❤❤ ಅಪ್ಪಾಜಿ ಲವ್ ಯೂ
❤❤❤❤❤❤ .... no words..... pic.twitter.com/nRhhu07Jey
— Kichcha Shreesha (@KichchaShreesha) September 17, 2020
ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ. Happy 18th to all his Fans&Followers.#VishnuSirLivesForever pic.twitter.com/U4rxwGzdai
— Kichcha Sudeepa (@KicchaSudeep) September 17, 2020
ಕೊರೋನಾ ಕಾರಣದಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಷ್ಣುವರ್ಧನ್ ಸ್ಮಾರಕದ ಅಡಿಗಲ್ಲು ಇಡುವ ಪೂಜಾ ಕಾರ್ಯಕ್ಕೆ ಆನ್ಲೈನ್ ಮೂಲಕ ಚಾಲನೆ ನೀಡಿದರು. 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಆನ್ಲೈನ್ನಲ್ಲಿ ಶಂಕುಸ್ಥಾಪನೆ ಕೆಲಸಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಭಾರತಿ ವಿಷ್ಣುವರ್ಧನ್ ಅವರು ಭೂಮಿ ಪೂಜೆ ಮಾಡಿ ಅಡಿಗಲ್ಲು ಇಟ್ಟಿದ್ದಾರೆ. ಸ್ಮಾರಕ ನಿರ್ಮಾಣದ ಗುತ್ತಿಗೆಯನ್ನು ಪೊಲೀಸ್ ವಸತಿ ನಿಗಮಕ್ಕೆ ನೀಡಲಾಗಿದೆ. ಎಂ-9 ಡಿಸೈನ್ ಸ್ಟುಡಿಯೋದಿಂದ ಆರ್ಕಿಟೆಕ್ ಡಿಸೈನ್ ಮಾಡಿಸಲಾಗುತ್ತಿದೆ. ಈ ಸ್ಮಾರಕ ಭವನದಲ್ಲಿ ವಿಷ್ಣು ಪುತ್ಥಳಿ, ಆಡಿಟೋರಿಯಂ , ಫೋಟೋ ಗ್ಯಾಲರಿ, ಉದ್ಯಾನವನ, ನೀರಿನ ಕಾರಂಜಿ ಸಹ ಇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ