HOME » NEWS » Entertainment » VISHNUVARDHAN BIRTHDAY KICHCHA SUDEEP EMOTIONAL TWEET ON VISHNUVARDHAN SCT

Happy Birthday Vishnuvardhan: ಸಾಹಸಸಿಂಹನ ಮೇಲೆ ಹೆಬ್ಬುಲಿ ಸುದೀಪ್ ಕೋಪಿಸಿಕೊಂಡಿದ್ದೇಕೆ?

Happy Birthday Vishnuvardhan: ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್​ ಅವರನ್ನು ಮಾದರಿಯಾಗಿಟ್ಟುಕೊಂಡ ಅನೇಕ ನಾಯಕರಿದ್ದಾರೆ. ಅವರಲ್ಲಿ ಸುದೀಪ್​ ಕೂಡ ಒಬ್ಬರು. ಇಂದು ವಿಷ್ಣುವರ್ಧನ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ನಟ ಸುದೀಪ್​ ತನ್ನ ಪ್ರೀತಿಯ ನಾಯಕ ವಿಷ್ಣುವರ್ಧನ್​ಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

Sushma Chakre | news18-kannada
Updated:September 18, 2019, 10:57 AM IST
Happy Birthday Vishnuvardhan: ಸಾಹಸಸಿಂಹನ ಮೇಲೆ ಹೆಬ್ಬುಲಿ ಸುದೀಪ್ ಕೋಪಿಸಿಕೊಂಡಿದ್ದೇಕೆ?
ವಿಷ್ಣುವರ್ಧನ್​-ಸುದೀಪ್​
  • Share this:
ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್​ ನಮ್ಮನ್ನಗಲಿ 10 ವರ್ಷಗಳು ಕಳೆದಿವೆ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ ಕನ್ನಡದ ಹಲವು ಸ್ಟಾರ್​ಗಳು ಕೂಡ ವಿಷ್ಣುವರ್ಧನ್​ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅಂಥವರ ಸಾಲಿನಲ್ಲಿ ಯಶ್​, ಸುದೀಪ್​ ಮುಂಚೂಣಿಯಲ್ಲಿದ್ದಾರೆ.

ಕನ್ನಡದ ಹಿರಿಯ ನಟರಾದ ಅಂಬರೀಶ್ ಮತ್ತು ವಿಷ್ಣುವರ್ಧನ್ ಇಬ್ಬರ ಜೊತೆಗೂ ಸ್ಯಾಂಡಲ್​ವುಡ್ ಸ್ಟಾರ್​ ನಟರಾದ ದರ್ಶನ್​ ಮತ್ತು ಸುದೀಪ್ ಅವರಿಗೆ ಆತ್ಮೀಯ ಒಡನಾಟವಿತ್ತು. ಆ ಕಾರಣದಿಂದಲೇ ಕುಚಿಕುಗಳಾದ ಅಂಬಿ- ವಿಷ್ಣು ರೀತಿಯಲ್ಲಿ ದರ್ಶನ್​ ಮತ್ತು ಕಿಚ್ಚ ಸುದೀಪ್ ಕೂಡ ಇರಬೇಕೆಂದು ಅಭಿಮಾನಿಗಳು ಬಯಸಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್​ ಅವರನ್ನು ಮಾದರಿಯಾಗಿಟ್ಟುಕೊಂಡ ಅನೇಕ ನಾಯಕರಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ನಟ ಸುದೀಪ್​ ತನ್ನ ಪ್ರೀತಿಯ ನಾಯಕ ವಿಷ್ಣುವರ್ಧನ್​ಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

Kichcha Sudeep: ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ, ಸುಮ್ಮನಿದ್ದುಬಿಡಿ; ಅಭಿಮಾನಿಗಳಿಗೆ ಕಿಚ್ಚನ ಬಹಿರಂಗ ಪತ್ರ

'ನನ್ನ ಪ್ರೀತಿಯ ಅಪ್ಪಾಜಿ ವಿಷ್ಣುವರ್ಧನ್​ಗೆ ಹುಟ್ಟುಹಬ್ಬದ ಶುಭಾಶಯ. ನಿಮ್ಮ ಮೇಲೆ ಎಷ್ಟು ಪ್ರೀತಿ ಇದೆಯೋ ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಅಷ್ಟೇ ಕೋಪವೂ ಇದೆ. ನೀವಿಲ್ಲದೆ ನಾವು ಅನಾಥರಾಗಿದ್ದೇವೆ. ಬಹಳ ಬೇಗ ನಮ್ಮನ್ನು ಬಿಟ್ಟು ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯವಂತೂ ನಮಗಿತ್ತು.
ಇಂತಿ,
ನಿಮ್ಮನ್ನು ನೆನೆಯುವ, ಪ್ರೀತಿಸುವ ಅಭಿಮಾನಿಯಲ್ಲೊಬ್ಬ' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.ಸ್ಯಾಂಡಲ್‍ವುಡ್​ನ ಮೂವರು ದಿಗ್ಗಜರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಸುದೀಪ್​ ವಿಷ್ಣುವರ್ಧನ್​ ಜೊತೆಗೆ 'ಮಾತಾಡ್​ ಮಾತಾಡು ಮಲ್ಲಿಗೆ' ಸಿನಿಮಾದಲ್ಲಿ ಅಭಿನಯಿಸಿದ್ದರು. ವಿಷ್ಣುವರ್ಧನ್​ ಕುಟುಂಬದ ಜೊತೆಗೆ ಆತ್ಮೀಯ ಸಂಬಂಧವಿಟ್ಟುಕೊಂಡಿದ್ದ ಸುದೀಪ್ ವಿಷ್ಣು ಸ್ಮಾರಕ ನಿರ್ಮಾಣ ವಿಚಾರದಲ್ಲಿಯೂ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

First published: September 18, 2019, 10:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories