Vishal: ಲಾಠಿ ಚಿತ್ರದ ಶೂಟಿಂಗ್ ವೇಳೆ ಅವಘಡ.. ತಮಿಳು ನಟ ವಿಶಾಲ್​ಗೆ ಗಾಯ, ಅಭಿಮಾನಿಗಳಿಗೆ ಟೆನ್ಶನ್!

ವಿಶಾಲ್ ಮುಂದಿನ ಚಿತ್ರ ‘ಲಾಠಿ’ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿತ್ತು. ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವೇಳೆ ವಿಶಾಲ್ ಅವರಿಗೆ ಗಾಯಗಳಾಗಿವೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿದರು. ವರದಿಗಳ ಪ್ರಕಾರ, ನಟ ವಿಶಾಲ್ ಗೆ ಮೂರು ವಾರಗಳ ಕಾಲ ವಿಶ್ರಾಂತಿ ಬೇಕಿದ್ದು, ವಿಶ್ರಾಂತಿಗಾಗಿ ಕೇರಳಕ್ಕೆ ತೆರಳಲಿದ್ದಾರೆ.

ಶೂಟಿಂಗ್ ವೇಳೆ ನಟ ವಿಶಾಲ್​ಗೆ ಗಾಯ

ಶೂಟಿಂಗ್ ವೇಳೆ ನಟ ವಿಶಾಲ್​ಗೆ ಗಾಯ

  • Share this:
ಕಾಲಿವುಡ್ ನ ಖ್ಯಾತ ನಟ ವಿಶಾಲ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣದ ವೇಳೆ ವಿಶಾಲ್ ಗಾಯಗೊಂಡಿದ್ದು, ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ‘ಲಾಠಿ’ ಸಿನಿಮಾದ ಶೂಟಿಂಗ್ ವೇಳೆ ವಿಶಾಲ್ ಗಾಯಗೊಂಡಿದ್ದಾರೆ. ಈ ವಿಷಯ ಕೇಳುತ್ತಿದ್ದಂತೆ ವಿಶಾಲ್ ಅಭಿಮಾನಿಗಳು ನೆಚ್ಚಿನ ಹೀರೋಗೆ ಏನಾಗಿದೆ ಎಂದು ಆತಂಕಕ್ಕೆ ಒಳಗಾಗಿದ್ದರು. ಆದರೆ ವಿಶಾಲ್ ಈ ಬಗ್ಗೆ, ಹೇರ್ ಲೈನ್ ಫ್ರ್ಯಾಕ್ಚರ್ ಆಗಿದೆ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಷಯ ಕೇಳಿ ವಿಶಾಲ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.ವಿಶಾಲ್ ಮುಂದಿನ ಚಿತ್ರ ‘ಲಾಠಿ’ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿತ್ತು. ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವೇಳೆ ವಿಶಾಲ್ ಅವರಿಗೆ ಗಾಯಗಳಾಗಿವೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿದರು. ವರದಿಗಳ ಪ್ರಕಾರ, ನಟ ವಿಶಾಲ್ ಗೆ ಮೂರು ವಾರಗಳ ಕಾಲ ವಿಶ್ರಾಂತಿ ಬೇಕಿದ್ದು, ವಿಶ್ರಾಂತಿಗಾಗಿ ಕೇರಳಕ್ಕೆ ತೆರಳಲಿದ್ದಾರೆ. ವಿಶಾಲ್ ಗುಣಮುಖರಾದ ನಂತರ, ಚಿತ್ರದ ಮುಂದಿನ ಶೆಡ್ಯೂಲ್ ಪ್ರಾರಂಭವಾಗುವ ಸಾಧ್ಯತೆಯಿದೆ.

‘ಲಾಠಿ’ ಚಿತ್ರದ ಶೂಟಿಂಗ್ ವೇಳೆ ಅವಘಡ

‘ಲಾಠಿ’ ಚಿತ್ರದ ಶೂಟಿಂಗ್ ಸಂದರ್ಭ ಅವಘಡ ಸಂಭವಿಸಿದ್ದು, ಹೇರ್​ಲೈನ್​ ಫ್ರ್ಯಾಕ್ಚರ್ ಆಗಿದೆ ಎಂದು ವಿಶಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಘಟನೆ ಹೇಗೆ ನಡೆಯಿತು ಎಂಬುದನ್ನು ವಿಶಾಲ್ ಅವರು ಸಿನಿಮಾದ ದೃಶ್ಯದ ವಿಡಿಯೋ ಸಮೇತ ವಿವರಿಸಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದು ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರಳುವುದಾಗಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಕೇರಳದಲ್ಲ ವಿಶ್ರಾಂತಿ ಪಡೆಯುತ್ತಿರುವ ವಿಶಾಲ್​!

ವಿಶಾಲ್ ಅವರ ಸಿನಿಮಾಗಳಲ್ಲಿ ಆ್ಯಕ್ಷನ್ ಸೀನ್​ಗಳಿಗೇನು ಕೊರತೆ ಇರುವುದಿಲ್ಲ. ಈ ಬಾರಿ ಅವರ ‘ಲಾಠಿ’ ಚಿತ್ರಕ್ಕೆ ಪೀಟರ್ ಹೇನ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ‘ಈ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಹಲವು ಹೇರ್​ಲೈನ್ ಫ್ರ್ಯಾಕ್ಚರ್ ಆಗಿದೆ. ವಿಶ್ರಾಂತಿ ಪಡೆಯಲು ಕೇರಳಕ್ಕೆ ತೆರಳಿದ್ದೇನೆ. ಕೊನೇ ಹಂತದ ಶೂಟಿಂಗ್ಗೆ ಮಾರ್ಚ್ ಮೊದಲ ವಾರದಲ್ಲಿ ಬಂದು ಸೇರಿಕೊಳ್ಳುತ್ತೇನೆ’ ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ವಿಕ್ರಂ 'ಮಹಾನ್' ಸಿನಿಮಾ ನೋಡಿ ಮೆಚ್ಚಿದ ತಲೈವಾ.. ಅಪ್ಪ-ಮಗನ ಆ್ಯಕ್ಟಿಂಗ್ ಬಗ್ಗೆ ರಜನಿಕಾಂತ್​ ಹೇಳಿದ್ದೇನು?

ಚೇಸಿಂಗ್​ ಸೀನ್​ ವೇಳೆ ಬಿದ್ದ ನಟ ವಿಶಾಲ್​!

ನಿರ್ಮಾಣ ಹಂತದಲ್ಲಿ ಇರುವ ಕಟ್ಟಡವೊಂದರಲ್ಲಿ ಈ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ನೂರಾರು ಸಹ-ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದರು. ಲಾಠಿ ಚಿತ್ರದ ಈ ದೃಶ್ಯದಲ್ಲಿ ಸಖತ್ ಚೇಸಿಂಗ್ ಸೀನ್​ಗಳು ಇದ್ದು, ಮಗುವನ್ನು ಎತ್ತಿಕೊಂಡು ಆಳವಾದ ಜಾಗಕ್ಕೆ ಧುಮುಕುವ ಸೀನ್ನಲ್ಲಿ ವಿಶಾಲ್ ನಟಿಸುತ್ತಿದ್ದರು. ಈ ವೇಳೆ ಅವರಿಗೆ ಗಾಯಗಳಾದವು. ಈ ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಈ ಮೊದಲು ಕೂಡ ಬೇರೆ ಸಿನಿಮಾಗಳ ಸಾಹಸ ದೃಶ್ಯಗಳ ಶೂಟಿಂಗ್ ಸಂದರ್ಭದಲ್ಲಿ ವಿಶಾಲ್ ಗಾಯಗೊಂಡಿದ್ದುಂಟು.

‘ಲಾಠಿ’ ಚಿತ್ರಕ್ಕೆ ಎ. ವಿನೋದ್ ಕುಮಾರ್ ನಿರ್ದೇಶನ

‘ಲಾಠಿ’ ಚಿತ್ರಕ್ಕೆ ಎ. ವಿನೋದ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಸುನೈನಾ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿ ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ವಿಶಾಲ್ ಈ ವರ್ಷ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಂದರ್ ಸಿ ನಿರ್ದೇಶನದ ಮದ ಗಜ ರಾಜ, ತುಪ್ಪರಿವಾಲನ್ 2, ಪಾರಸಿಗ ರಾಜ, ಮಾರ್ಕ್ ಆ್ಯಂಟೋನಿ ಚಿತ್ರಗಳು ಈ ವರ್ಷ ಬಿಡುಗಡೆಯಾಗುವ ಚಿತ್ರಗಳ ಪಟ್ಟಿಯಲ್ಲಿವೆ.

ಇದನ್ನೂ ಓದಿ: ಡಿಪ್ಪಿ ಜೊತೆ ಕಿಸ್​ ಸೀನ್​ ಕಂಡು ಸಿದ್ದಾರ್ಥ್ ಚಿಕ್ಕಪ್ಪ ಕೇಳಿದ್ದೇನು ಅಂತ ಗೊತ್ತಾದ್ರೆ ಸಖತ್​ ನಗ್ತೀರಾ!

ಕನ್ನಡ ಚಿತ್ರರಂಗದ ಜೊತೆ ವಿಶಾಲ್ ಅವರು ಒಡನಾಟ ಹೊಂದಿದ್ದಾರೆ. ಪುನೀತ್ ರಾಜಕುಮಾರ್ ನಿಧನದ ಬಳಿಕ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ‘ಪುನೀತ ನಮನ’ ಕಾರ್ಯಕ್ರಮದಲ್ಲೂ ವಿಶಾಲ್ ಭಾಗಿ ಆಗಿದ್ದರು..
Published by:Vasudeva M
First published: