ಚಿತ್ರೀಕರಣಕ್ಕೆ ತೆರೆ ಎಳೆದ ವಿಶಾಲ್​ ಭಾರಾದ್ವಾಜ್​ ಅವರ 'ಪಟಾಕ' ಸಿನಿ ತಂಡ!

news18
Updated:July 13, 2018, 10:41 AM IST
ಚಿತ್ರೀಕರಣಕ್ಕೆ ತೆರೆ ಎಳೆದ ವಿಶಾಲ್​ ಭಾರಾದ್ವಾಜ್​ ಅವರ 'ಪಟಾಕ' ಸಿನಿ ತಂಡ!
news18
Updated: July 13, 2018, 10:41 AM IST
ನ್ಯೂಸ್​ 18 ಕನ್ನಡ 

ರಾಷ್ಟ್ರ ಪ್ರಶಸ್ತಿ ವಿಜೇತ ವಿಶಾಲ್​ ಭಾರದ್ವಾಜ್​ ಅವರ ನಿರ್ದೇಶನದ  ಬಹು ನಿರೀಕ್ಷಿತ 'ಪಟಾಕ' ಸಿನಿಮಾದ ಚಿತ್ರೀಕರಣ ಮುಗಿದಿದೆ. ಮೌಂಟ್​ ಅಬುವಿನಲ್ಲಿ ನಡೆಯುತ್ತಿದ್ದ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಕೊನೆಗೊಂಡಿದೆ.

ಈ ಸಿನಿಮಾ ಹಾಸ್ಯ ಪ್ರದಾನವಾಗಿದ್ದು, ಸಹೋದರಿಯರ ನಡುವಿನ ಕಥೆಯಾಗಿದೆ. ರಾಜಸ್ಥಾನದ ಪುಟ್ಟ ಹಳ್ಳಿಯಲ್ಲಿ ಜನಿಸುವ ಬಡ್ಕಿ ಹಾಗೂ ಚುಟ್ಕಿ ಎಂಬ ಸಹೋರಿಯರು ಜಗಳವಾಡುತ್ತಲೇ ಬೆಳೆಯುತ್ತಾರೆ. ಇವರಿಬ್ಬರಿಗೂ ಮದುವೆಯಾದ ನಂತರ ಒಬ್ಬರನ್ನು ಒಬ್ಬರು ನೋಡದೆ ಜೀವಿಸಲಾರರು ಎಂಬುದು ಅರ್ಥವಾಗುತ್ತದೆ.

ಈ ಸಿನಿಮಾದ ಕಥೆಯನ್ನು ಚರಣ್​ ಸಿಂಗ್​ ಪತಿಕ್​ ಅವರ ಸಣ್ಣ ಕಥೆಗಳಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ 'ದಂಗಲ್​' ಖ್ಯಾತಿಯ ಸಾನ್ಯಾ ಮಲ್ಹೋತ್ರ ಹಾಗೂ ಹಾಸ್ಯ ಕಲಾವಿದ ಸುನಿಲ್​ ಗ್ರೋವರ್​, ವಿಜಯ್​ ರಾಝ್​ ಹಾಗೂ ರಾಧಿಕಾ ಮದನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ