• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Anushka Sharma: ವಿರಾಟ್-ಅನುಷ್ಕಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ನಟಿ ನೋಡಿ ಫುಲ್ ನರ್ವಸ್ ಆಗಿದ್ದರಂತೆ ಕೊಹ್ಲಿ!

Anushka Sharma: ವಿರಾಟ್-ಅನುಷ್ಕಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ನಟಿ ನೋಡಿ ಫುಲ್ ನರ್ವಸ್ ಆಗಿದ್ದರಂತೆ ಕೊಹ್ಲಿ!

ವಿರಾಟ್ ಕೊಹ್ಲಿ ಜೊತೆ ನಟಿ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಜೊತೆ ನಟಿ ಅನುಷ್ಕಾ ಶರ್ಮಾ

ತಾನು ಅನುಷ್ಕಾ ಅವರೊಂದಿಗೆ ಒಂದು ಚಿತ್ರೀಕರಣಕ್ಕೆ ಹೋಗುತ್ತಿದ್ದೇನೆ ಎಂದು ತಿಳಿದಾಗ ನಾನು ನಡುಗಲು ಶುರು ಮಾಡಿದ್ದೆ. ಏಕೆಂದರೆ ಅವರು ಆ ಸಮಯದಲ್ಲಿ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು ಎಂದು ವಿರಾಟ್ ಹಂಚಿಕೊಂಡಿದ್ದಾರೆ.

 • Share this:

ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಸೆಲೆಬ್ರಿಟಿ ದಂಪತಿಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ? ಕ್ರಿಕೆಟಿಗ ವಿರಾಟ್ ಕೊಹ್ಲಿಯ ಆಟದ ಬಗ್ಗೆ ಇರುವ ಒಲವು, ಸದಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದನ್ನು ಅವರ ಅಭಿಮಾನಿಗಳು ತುಂಬಾನೇ ಇಷ್ಟಪಡುತ್ತಾರೆ. ಅದೇ ರೀತಿ ಅವರ ಹೆಂಡತಿ ಮತ್ತು ನಟಿ ಅನುಷ್ಕಾ ಶರ್ಮಾ ಸಹ ತನ್ನ ನಟನೆಯಿಂದ ಬಾಲಿವುಡ್ ನಲ್ಲಿ (Bollywood) ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವಂತಹ ನಟಿ ಅಂತ ಹೇಳಬಹುದು. ಹೀಗೆ ಈ ಸ್ಟಾರ್ ದಂಪತಿಗಳು (Star Couple) ಬಹುತೇಕವಾಗಿ ಎಲ್ಲರಿಗೂ ಇಷ್ಟ ಅಂತ ಹೇಳಬಹುದು.


ಅನುಷ್ಕಾರನ್ನ ಭೇಟಿಯಾದ ವಿರಾಟ್ ತುಂಬಾನೇ ನರ್ವಸ್ ಆಗಿದ್ರಂತೆ..


ಇವರಿಬ್ಬರು ಮೊದಲು ಭೇಟಿಯಾದದ್ದು ಒಂದು ಜಾಹೀರಾತು ಚಿತ್ರೀಕರಣದ ಸೆಟ್ ನಲ್ಲಿ ಅಂತ ಹೇಳಬಹುದು. ತಮ್ಮ ಮೊದಲ ಭೇಟಿಯ ಬಗ್ಗೆ ಈಗ ವಿರಾಟ್ ಮಾತನಾಡಿದ್ದಾರೆ ನೋಡಿ. ಇತ್ತೀಚೆಗೆ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರೊಂದಿಗಿನ ಸಂಭಾಷಣೆಯಲ್ಲಿ, ವಿರಾಟ್ ಅವರು ಅನುಷ್ಕಾ ಅವರನ್ನು ಆ ಶೂಟಿಂಗ್ ನಲ್ಲಿ ಭೇಟಿಯಾದಾಗ ಅವರಿಗೆ ಆದಂತಹ ಆ ಮೊದಲ ಭೇಟಿಯ ಅನುಭವವನ್ನು ಹಂಚಿಕೊಂಡರು. 2013 ರಲ್ಲಿ ಒಂದು ಜಾಹೀರಾತಿನ ಚಿತ್ರೀಕರಣದಲ್ಲಿ ಅವರು ಮೊದಲ ಬಾರಿಗೆ ಅನುಷ್ಕಾ ಅವರನ್ನು ಭೇಟಿಯಾಗಿದ್ದು, ಆಗ ನಾನು ತುಂಬಾನೇ ನರ್ವಸ್ ಆಗಿದ್ದೆ ಎಂದು ವಿರಾಟ್ ನೆನಪಿಸಿಕೊಂಡರು.


ತಾನು ಅನುಷ್ಕಾ ಅವರೊಂದಿಗೆ ಒಂದು ಚಿತ್ರೀಕರಣಕ್ಕೆ ಹೋಗುತ್ತಿದ್ದೇನೆ ಎಂದು ತಿಳಿದಾಗ ನಾನು ನಡುಗಲು ಶುರು ಮಾಡಿದ್ದೆ. ಏಕೆಂದರೆ ಅವರು ಆ ಸಮಯದಲ್ಲಿ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು ಎಂದು ವಿರಾಟ್ ಹಂಚಿಕೊಂಡಿದ್ದಾರೆ. ಆಕೆ ದೊಡ್ಡ ನಟಿ ಎಂಬ ವಿಷಯವು ವಿರಾಟ್ ಅವರನ್ನು ತುಂಬಾನೇ ಆತಂಕಕ್ಕೀಡು ಮಾಡಿತ್ತಂತೆ ಎಂದು ಹೇಳಿದರು.


ಅನುಷ್ಕಾ ಹಾಕಿದ್ದ ಹೈ ಹಿಲ್ಸ್ ಬಗ್ಗೆ ವಿರಾಟ್ ಮೊದಲು ಮಾತಾಡಿದ್ದಂತೆ


"ನಾನು ಶೂಟಿಂಗ್ ಸೆಟ್ ನಲ್ಲಿ ಐದು ನಿಮಿಷ ಮುಂಚಿತವಾಗಿಯೇ ಬಂದು ಸುಮ್ಮನೆ ನಿಂತಿದ್ದೆ ಮತ್ತು ಆಗ ಅನುಷ್ಕಾ ಸೆಟ್ ಗೆ ಬಂದರು" ಎಂದು ಅವರು ನೆನಪಿಸಿಕೊಂಡರು. ಆಕೆ ಎಷ್ಟು ಎತ್ತರವಾಗಿದ್ದಾಳೆಂದು ತನಗೆ ತಿಳಿದಿರಲಿಲ್ಲ ಮತ್ತು ಆಕೆ ಹೈ ಹೀಲ್ಸ್ ಧರಿಸಿಕೊಂಡು ಬಂದಿದ್ದಳು. ಆದ್ದರಿಂದ ವಿರಾಟ್ ಅವರ ಬಾಯಿಯಿಂದ ಹೊರ ಬಂದ ಮೊದಲ ವಿಷಯವೆಂದರೆ ಅವಳ ಹೈ ಹೀಲ್ಸ್ ಬಗ್ಗೆ ಕಾಮೆಂಟ್ ಅಂತೆ.


ಸೆಟ್‌ಗೆ ಬಂಗಾಗ ಅನುಷ್ಕಾ ಅವರು ಉತ್ತಮವಾದ ಹೈ ಹಿಲ್ಸ್‌ ಹಾಕಲು ಕೇಳಿದ್ದರಂತೆ, ಆದರೆ ವಿರಾಟ್‌ ಮುಂದೆ ಹೈಹಿಲ್ಸ್‌ ಧರಿಸಿದರೆ ಅವರು ಕುಳ್ಳ ಕಾಣಬಹುದು ಎಂದು ಯಾರೋ ಹೇಳಿದ್ದಾರೆ. ಹಾಗಾಗಿ ಅನುಷ್ಕಾ ಸಾಧಾರಣ ಹೀಲ್ಸ್‌ ಹಾಕಿಕೊಂಡು ಸೆಟ್‌ಗೆ ಬಂದಿದ್ದರಂತೆ. ಇದನ್ನೆಲ್ಲಾ ಗಮನಿಸಿದ ಕೊಹ್ಲಿ ಅನುಷ್ಕಾಗೆ ಒಳ್ಳೆಯ ಹೈ ಹಿಲ್ಸ್‌ ಸಿಗಲಿಲ್ವಾ ಅಂತಾ ಮೊದಲ ಬಾರಿಗೆ ಅನುಷ್ಕಾ ಜೊತೆ ಮಾತನಾಡಿದ್ದರಂತೆ. ನಮ್ಮಿಬ್ಬರ ಮೊದಲ ಭೇಟಿ ಮತ್ತು ಮಾತು ಚಪ್ಪಲಿ ಬಗ್ಗೆ ಅಂತಾ ವಿರಾಟ್‌ ನಗುತ್ತಾ ಉತ್ತರಿಸಿದ್ದಾರೆ.
ಮಾತಾಡ್ತಾ ಮಾತಾಡ್ತಾ ಶುರುವಾದ ಸ್ನೇಹ, ಪ್ರೀತಿಯಾಗಿ ಬದಲಾಯ್ತಂತೆ..


ನಂತರ ವಿರಾಟ್ ಅವರಿಗೆ ತಾನು ಆಡಿದ ಮಾತು ಅಷ್ಟೊಂದು ಚೆನ್ನಾಗಿರಲಿಲ್ಲ ಅಂತ ಅನ್ನಿಸಿತ್ತಂತೆ. ಆದರೆ ಶೂಟಿಂಗ್ ಮುಂದುವರೆದಾಗ ಅವರಿಬ್ಬರು ಚೆನ್ನಾಗಿ ಮಾತನಾಡಲು ಪ್ರಾರಂಭಿಸಿದಾಗ, ಅವರಿಬ್ಬರ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ಅವರು ಕಂಡುಕೊಂಡರು ಎಂದು ವಿರಾಟ್ ಹೇಳಿದರು. "ಆ ಇಡೀ ದಿನ ಅವಳು ನಿಜವಾಗಿಯೂ ತುಂಬಾನೇ ಸರಳವಾದ ವ್ಯಕ್ತಿ ಎಂದು ನಾನು ಕಂಡುಕೊಂಡೆ. ನಾವು ಮಾತನಾಡಲು ಪ್ರಾರಂಭಿಸಿದೆವು ಮತ್ತು ನಾವಿಬ್ಬರೂ ಸಾಮಾನ್ಯ ಮಧ್ಯಮ ವರ್ಗದಿಂದ ಬಂದವರಾಗಿದ್ದು, ನಮ್ಮ ಹಿನ್ನೆಲೆಗಳು ತುಂಬಾ ಹೋಲುತ್ತವೆ ಎಂದು ನಮ್ಮಿಬ್ಬರಿಗೂ ಅನ್ನಿಸಿತು ಎಂದು ವಿರಾಟ್ ಹೇಳಿದರು. ಅಲ್ಲಿಂದ, ನಾವಿಬ್ಬರೂ ಒಳ್ಳೆಯ ಸ್ನೇಹಿತರಾದೇವು ಮತ್ತು ನಂತರ ನಾವು ಡೇಟಿಂಗ್ ಶುರು ಮಾಡಿದೆವು" ಎಂದು ಅವರು ಹೇಳಿದರು.


ಇದನ್ನೂ ಓದಿ: Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

top videos


  ಅವರು ತಕ್ಷಣ ಪರಸ್ಪರ ಡೇಟಿಂಗ್ ಪ್ರಾರಂಭಿಸಲಿಲ್ಲ ಎಂದು ವಿರಾಟ್ ಹೇಳಿದರು. ಅವರು ಬಹಳ ಸಮಯದವರೆಗೆ ಮಾತನಾಡಿದರು ಮತ್ತು ಕೆಲವು ಬಾರಿ ಭೇಟಿಯಾದರು ಮತ್ತು ನಂತರ, ಪರಸ್ಪರರಿಗೆ ಯೋಗ್ಯ ಅಂತ ಅನ್ನಿಸಿದ ನಂತರ ನಾವು ಡೇಟಿಂಗ್ ಮಾಡಲು ಪ್ರಾರಂಭಿಸಿದೆವು ಎಂದು ವಿರಾಟ್ ಹೇಳಿದರು. ಅನುಷ್ಕಾ ಮತ್ತು ವಿರಾಟ್ 2018 ರಲ್ಲಿ ಇಟಲಿಯಲ್ಲಿ ವಿವಾಹವಾದರು. ಈ ದಂಪತಿಗಳಿಗೆ 2021 ರಲ್ಲಿ ವಮಿಕಾ ಎಂಬ ಮಗಳಿದ್ದಾಳೆ.

  First published: