Pushpa: ಇನ್ನೂ ಕಡಿಮೆಯಾಗಿಲ್ಲ ಪುಷ್ಪ ಕ್ರೇಜ್​.. ಗ್ರೌಂಡ್​ನಲ್ಲೇ `ತಗ್ಗೆದೆಲೆ’ ಎಂದ ಕಿಂಗ್​ ಕೊಹ್ಲಿ! ವಿಡಿಯೋ ನೋಡಿ

ಇದೇ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಫಿಲ್ಡಿಂಗ್​​ ಮಾಡುವ ವೇಳೆ ಅಲ್ಲು ಅರ್ಜುನ್​ ಪುಷ್ಪ ಸಿನಿಮಾದಲ್ಲಿ ತಗ್ಗೆದೆಲೆ ಎನ್ನುತಾ ಗಡ್ಡ ಸವರಿಕೊಳ್ಳುವ ಸ್ಟೈಲ್​ ಅನ್ನು ವಿರಾಟ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ವಿರಾಟ್​ ಕೊಹ್ಲಿಯ ತೆಗ್ಗೆದೆಲೆ ಸ್ಟೈಲ್​ ಕಂಡು ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

ವಿರಾಟ್​ ಕೊಹ್ಲಿ, ಅಲ್ಲು ಅರ್ಜುನ್​

ವಿರಾಟ್​ ಕೊಹ್ಲಿ, ಅಲ್ಲು ಅರ್ಜುನ್​

  • Share this:
ಪುಷ್ಪ’(Pushpa) ಅಲ್ಲು ಅರ್ಜುನ್ ​(Allu Arjun) ಅಭಿನಯದ ಡಿಫ್ರೆಂಟ್​ ಸಿನಿಮಾ. ಈ ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದೆ. ಅದರಲ್ಲೂ ಹಿಂದಿ ಅವತರಣಿಕೆಯಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ (Collection)​ ಮಾಡಿದೆ. ಈ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗಿದ್ದು ಪುಷ್ಪ ಅಲಿಯಾಸ್​ ಪುಷ್ಪ ರಾಜ್​ ಮ್ಯಾನರಿಸಂ (Mannerism). ಹೌದು, ಅಲ್ಲು ಅರ್ಜುನ್​ ನಟನೆಗೆ ಇಲ್ಲಿ ಎಲ್ಲಾ ಫಿದಾ ಆಗಿದ್ದಾರೆ.  ಸಿನಿಮಾ ರಿಲೀಸ್ ಆದಾಗ ನೆಗೆಟಿವ್​ ಟಾಕ್ಸ್​ನಿಂದ ಸಿನಿಮಾ ಕಲೆಕ್ಷನ್​ ಮೇಲೆ ಪರಿಣಾಮ ಬೀಳುತ್ತೆ ಅಂತ ಸಿನಿ ಪಂಡಿತರು ಅಂದುಕೊಂಡಿದ್ದರು. ಆದರೆ, ‘ಪುಷ್ಪ’ ಸಿನಿಮಾ ಮಾತ್ರ ಭರ್ಜರಿ ಕಲೆಕ್ಷನ್​ ಮಾಡಿದೆ. ಸುಮಾರು​ 300 ಕ್ಕೂ ಹೆಚ್ಚು ಕೋಟಿ ಗಳಿಸಿದೆ ಅಂತ ಟಾಕ್​ ಇದೆ. ಈ ಸಿನಿಮಾದ ಡೈಲಾಗ್ಸ್ (Dialogues)​, ಸಾಂಗ್ಸ್ (Songs)​ಗಳು ಸಿಕ್ಕಾಪಟ್ಟೆ ಫೇಮಸ್​ ಆಗಿವೆ.

ಇನ್ನೂ ಕಡಿಮೆಯಾಗಿಲ್ಲ ‘ತಗ್ಗೆದೆಲೆ’ ಕ್ರೇಜ್​!

ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್​ ಆದ ಬಳಿಕವಂತೂ ಇನ್ನೂ ಇದರ ಕ್ರೇಜ್​ ಹೆಚ್ಚಾಗಿದೆ. ಫೇಸ್​ಬುಕ್ (Facebook)​, ಇನ್​ಸ್ಟಾಗ್ರಾಂ (Instagram) , ವಾಟ್ಸ್​ಆ್ಯಪ್​(WhatsApp) ಎಲ್ಲಿ ನೋಡಿದರೂ.. ಪುಷ್ಪ ಸಿನಿಮಾದ ರೀಲ್ಸ್(Reels)​ದೆ ಅಬ್ಬರ. ಯಾವ ಸೆಲೆಬ್ರಿಟಿ ಅಕೌಂಟ್​ ನೋಡಿದರೂ, ಪುಷ್ಪ ರೀಲ್ಸ್​ಗಳದ್ದೇ ಸದ್ದು. ಅದರಲ್ಲೂ ಅಲ್ಲು ಅರ್ಜುನ್​ ಅವರ ‘ತಗ್ಗೆದೆಲೆ’ ಸ್ಟೈಲ್​ ಅಂತೂ ಕ್ರಿಕೆಟಿಗರು, ಫುಟ್​ಬಾಲ್​ ಆಟಗಾರರು ಸೇರಿದಂತೆ ಹಲವರು ಮಾಡಿರುವ ವಿಡಿಯೋಗಳು ಸಖತ್​ ವೈರಲ್​ ಆಗುತ್ತಿವೆ. ವಿದೇಶಿಗರು ಕೂಡ ಈ ತಗ್ಗೆದೆಲೆ ಕ್ರೇಜ್​ಗೆ ಫಿದಾ ಆಗಿದ್ದಾರೆ.

ತಗ್ಗೆದೆಲೆ ಸ್ಟೈಲ್ ಮಾಡಿದ ಕಿಂಗ್​ ಕೊಹ್ಲಿ!

ಹೌದು, ಇಂಡಿಯಾ ವರ್ಸಸ್​ ಶ್ರೀಲಂಕಾ ಟೆಸ್ಟ್ ಸರಣಿ ನಡೆಯುತ್ತಿದೆ. ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯ ಹಿನ್ನೆಲೆ ಭಾರಿ ಕುತೂಹಲ ಮೂಡಿಸಿತ್ತು. ಇದೇ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಫಿಲ್ಡಿಂಗ್​​ ಮಾಡುವ ವೇಳೆ ಅಲ್ಲು ಅರ್ಜುನ್​ ಪುಷ್ಪ ಸಿನಿಮಾದಲ್ಲಿ ತಗ್ಗೆದೆಲೆ ಎನ್ನುತಾ ಗಡ್ಡ ಸವರಿಕೊಳ್ಳುವ ಸ್ಟೈಲ್​ ಅನ್ನು ವಿರಾಟ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ವಿರಾಟ್​ ಕೊಹ್ಲಿಯ ತೆಗ್ಗೆದೆಲೆ ಸ್ಟೈಲ್​ ಕಂಡು ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಹಲವರು ಈ ವಿಡಿಯೋವನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್  ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣಗೆ ಮೊದಲ ಸೋಲು? ಕಿರಿಕ್​ ಬ್ಯೂಟಿಗೆ ಯಾಕ್​ ಬೇಕಿತ್ತು ಈ ಸಿನಿಮಾ ಎಂದ ಫ್ಯಾನ್ಸ್​!

ಏಕದಿನ ಪಂದ್ಯದಲ್ಲಿ ಶ್ರೀವಲ್ಲಿ ಸ್ಟೆಪ್​ ಹಾಕಿದ್ದ ಕೊಹ್ಲಿ!

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಠಿಣ ಕ್ಯಾಚ್ ಪಡೆದ ವಿರಾಟ್ ಕೊಹ್ಲಿಯ ಪುಷ್ಪಾ ಸಿನಿಮಾ ಹಾಡು ‘ಶ್ರೀವಲ್ಲಿ’  ಹಾಡಿನ ಸಂಭ್ರಮಾಚರಣೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಿಜಯೋತ್ಸವದ ಕ್ಯಾಚ್‌ನ ನಂತರ, ಕೊಹ್ಲಿ ಅದನ್ನು ಟ್ರೆಂಡಿಂಗ್ ತೆಲಗು ಸಿನಿಮಾ ಪುಷ್ಪಾದ  ‘ಶ್ರೀವಲ್ಲಿ’ ಹುಕ್ ಸ್ಟೆಪ್‌ನೊಂದಿಗೆ ಆಚರಿಸಿದರು. ಕೊಹ್ಲಿ ಅವರ  'ಶ್ರೀವಲ್ಲಿ' ಹುಕ್ ಸ್ಟೆಪ್‌ ಇಂಟರ್ನೆಟ್ ಅನ್ನು ಬ್ರೇಕ್ ಮಾಡಿದೆ.

ಇದನ್ನೂ ಓದಿ: ಭಾರತದ ವನಿತೆಯರ ಪರಾಕ್ರಮ, ಪಾಕ್​​ಗೆ 107 ರನ್​ಗಳ ಮುಖಭಂಗ; ತೆಂಡೂಲ್ಕರ್ ಸರಿಸಮರಾದ ಮಿಥಾಲಿ ರಾಜ್

ವಿದೇಶಿಗರಿಗೆ ದುಡ್ಡು ಕೊಟ್ಟು ರೀಲ್ಸ್ ಮಾಡಿಸಿದ್ದರಂತೆ!

ಕ್ರಿಕೆಟ್​ ಆಟಗಾರರಂತೂ ಪುಷ್ಪ ಸಿನಿಮಾ ಡೈಲಾಗ್​, ಸಾಂಗ್​ಗೆ ರೀಲ್ಸ್ ಮಾಡಿ ಪೋಸ್ಟ್​ ಮಾಡಿದ್ದರು. ಇದನ್ನು ಕಂಡು ಅವರ ಅಭಿಮಾನಿಗಳು ಥ್ರಿಲ್​ ಆಗಿದ್ದರು. ಆದರೆ, ಅಸಲಿ ವಿಷಯ ಬೇರೆನೆ ಇದೆ. ಬೇರೆ ದೇಶದ ಕ್ರಿಕೆಟ್​ ಆಟಗಾರರೆಲ್ಲ ಈ ಸಿನಿಮಾದ ರೀಲ್ಸ್​ ಮಾಡಿದ್ದರು. ಈ ಸಿನಿಮಾ ಅಷ್ಟರ ಮಟ್ಟಿಗೆ ನಿಜಕ್ಕೂ ಸೌಂಡ್ ಮಾಡಿದ್ಯ? ಇಲ್ಲ, ಮ್ಯಾಟರ್​ ಬೇರೇನೆ ಇದೆ ಅಂತಿದ್ದಾರೆ ಸಿನಿ ಪಂಡಿತರು. ಅದೇನಪ್ಪಾ ಅಂದರೆ, ಚಿತ್ರತಂಡದವರು ಕ್ರಿಕೆಟ್​ ಆಟಗಾರರಿಗೆ ದುಡ್ಡು ಕೊಟ್ಟು ಈ ರೀತಿಯ ವಿಡಿಯೋ ಮಾಡಿಸಿದ್ದಾರೆ ಅಂತ ಹೇಳಲಾಗುತ್ತಿದೆ.
Published by:Vasudeva M
First published: