ವಿರಾಟ್ ಕೊಹ್ಲಿ (Virat Kohli) ಹಾಗೂ ಅನುಷ್ಕಾ ಶರ್ಮಾ (Anushka Sharma) ಪವರ್ ಸೆಲೆಬ್ರಿಟಿ ಕಪಲ್ಗಳಲ್ಲಿ (Celebrity Couple) ಒಬ್ಬರು. ಕ್ರಿಕೆಟ್ ತಾರೆ (Cricket Star) ಹಾಗೂ ಬಾಲಿವುಡ್ (Bollywood) ತಾರೆಯ ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವಿದೆ. ಸಪರೇಟ್ ಫ್ಯಾನ್ ಬೇಸ್ ಇರುವಂತಹ ಈ ದಂಪತಿಗೆ (Couple) ಜೋಡಿಯಾಗಿಯೂ ಅಪಾರ ಅಭಿಮಾನಿಗಳಿದ್ದಾರೆ. ವಿರುಷ್ಕಾರನ್ನು (Virushka) ಆರಾಧಿಸುವ ಜನರ ಸಂಖ್ಯೆ ಹೆಚ್ಚಿದೆ. ಈ ಜೋಡಿ ಎಲ್ಲಾ ಕಡೆಗಳಲ್ಲಿ ಕೂಡಾ ಫೇಮಸ್ (Famous). ಇಬ್ಬರೂ ಕೂಡಾ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಹೆಸರು ಗಳಿಸಿದ್ದಾರೆ. ಇಬ್ಬರೂ ಕೆರಿಯರ್ನಲ್ಲಿ ಚೆನ್ನಾಗಿ ಮುಂದುವರಿಯುತ್ತಿದ್ದಾರೆ. ಪರಸ್ಪರ ಪ್ರೀತಿಸಿ (Love) ಮದುವೆಯಾದ (Marriage) ಜೋಡಿ ಈಗ ಒಂದಾಗಿದ್ದಾರೆ. ಮಗಳು ವಮಿಕಾ (Vamika) ಜೊತೆ ಹ್ಯಾಪಿಯಾಗಿದ್ದಾರೆ.
ಜನರಿಂದ ಅಪಾರ ಪ್ರೀತಿ ಗಳಿಸೋ ಈ ಜೋಡಿ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ಕೊಟ್ಟಿದ್ದರು. ಬೆಂಗಳೂರಿನಲ್ಲಿ ಫೇಮಸ್ ಸಿಟಿಆರ್ (CTR) ಮಸಾಲೆ ದೋಸೆ ಹಾಗೂ ಕಾರ್ನರ್ ಐಸ್ಕ್ರೀಂನ (Ice-Cream) ಡೆತ್ ಬೈ ಚಾಕೊಲೇಟ್ ಐಸ್ಕ್ರೀಂ (Death By Chocolate) ಸವಿದಿದ್ದಾರೆ. ಈ ಜೋಡಿ ಬೆಂಗಳೂರಿಗೆ (Bengaluru) ಬಂದಿದ್ದಾಗ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ಭದ್ರತೆ ಸವಾಲಿನ ವಿಚಾರ
ಇವರ ಜನಪ್ರಿಯತೆಯಿಂದಾಗಿ ಇವರು ಹೋದಲ್ಲೆಲ್ಲ ಇವರ ಭದ್ರತೆಯೂ ಸವಾಲಿನ ವಿಚಾರ. ಅದು ಕೂಡಾ ಇಬ್ಬರೂ ಒಟ್ಟಿಗೆ ಬಂದರೆಂದರೆ ಮುಗಿಯಿತು. ಅಭಿಮಾನಿಗಳನ್ನು ಅವರನ್ನು ಒಮ್ಮೆ ನೋಡಿಬಿಡಲು, ಸೆಲ್ಫಿ ಪಡೆಯಲು ಹರಸಾಹಸ ಮಾಡುತ್ತಾರೆ.
ಇದೀಗ ಇತ್ತೀಚೆಗೆ ನಡೆದ ಘಟನೆ ವೈರಲ್ ಆಗಿದೆ. ಇದರಲ್ಲಿ ವಿರುಷ್ಕಾ ದಂಪತಿಯನ್ನು ನೋಡಲು ಜನರು ಮುಗಿಬೀಳುವುದನ್ನು ಕಾಣಬಹುದು. ಈ ಜೋಡಿ ಸೆಂಟ್ರಲ್ ಟಿಫಿನ್ ರೋಡ್ನಲ್ಲಿ ಸಿಟಿಆರ್ ಮಸಾಲೆ ದೋಸೆ ತಿನ್ನಲು ಬಂದಾಗ ಕೊಹ್ಲಿ ಅಭಿಮಾನಿಯ ಮೇಲೆ ಸಿಟ್ಟಾಗಿದ್ದಾರೆ.
ಇದನ್ನೂ ಓದಿ: The Kerala Story: ವೈರಲ್ ಆಗ್ತಿರೋ ಕೇರಳ ಸ್ಟೋರಿ ಏನು? ಇದಿಷ್ಟು ಟ್ರೆಂಡ್ ಆಗ್ತಿರೋದೇಕೆ?
ವ್ಯಕ್ತಿಯೊಬ್ಬರು ಅನುಷ್ಕಾ ಶರ್ಮಾ ಜೊತೆ ಫೋಟೋ ಕ್ಲಿಕ್ ಮಾಡಲು ಸೆಕ್ಯುರಿಟಿಯನ್ನು ದಾಟಿ ಬಂದಿದ್ದಕ್ಕಾಗಿ ಕೊಹ್ಲಿ ಸಿಟ್ಟಾದರು. ಸೆಕ್ಯುರಿಟಿಯನ್ನು ಮೀರಿ ಪತ್ನಿಗೆ ತುಂಬಾ ಹತ್ತಿರ ಬಂದಿದ್ದಕ್ಕೆ ಕೊಹ್ಲಿ ಸಿಟ್ಟಾದರು. ಅನುಷ್ಕಾ ಶರ್ಮಾ ಅವರ ಭದ್ರತೆ ಹಾಗೂ ಪ್ರೈವಸಿ ಗಮನದಲ್ಲಿಟ್ಟುಕೊಂಡು ಕೊಹ್ಲಿ ಅಭಿಮಾನಿಯನ್ನು ದೂರ ನಿಲ್ಲುವಂತೆ ಹೇಳಿದ್ದಾರೆ.
ಅವಳು ಬೆಂಗಳೂರಿನ ಹುಡುಗಿ. ಅವಳು ಬೆಳೆದಿದ್ದು ಇಲ್ಲಿಯೇ. ನನಗಿಂತ ಹೆಚ್ಚು ಸಮಯವನ್ನು ಅವಳು ಬೆಂಗಳೂರಿನಲ್ಲಿ ಕಳೆದಿದ್ದಾಳೆ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವಳಿಗೆ ಈಗಾಗಲೇ ಈ ನಗರದೊಂದಿಗೆ ವಿಶೇಷ ಸಂಬಂಧ ಇದೆ. ಹಾಗಾಗಿ ನಾನು ಆರ್ಸಿಬಿಗಾಗಿ ಆಡುವುದು ಅವಳಿಗೆ ಖುಷಿ ಕೊಡುತ್ತದೆ. ನಾನು ಕೂಡಾ ಈ ತಂಡ ಹಾಗೂ ನಗರ ಪರವಾಗಿರುತ್ತೇನೆ ಎಂದಿದ್ದರು ಕೊಹ್ಲಿ.
Virat Kohli got mobbed in Bengaluru 😆❤️🔥 after lunch date with Anushka nd family . pic.twitter.com/JYHNtDaYMo
— `` (@KohlifiedGal) April 22, 2023
ನಟಿ ಅನುಷ್ಕಾ ಶರ್ಮಾ ಅವರು ಬಾಲಿವುಡ್ನಲ್ಲಿ ಫೇಮಸ್ ಆಗಿದ್ದಾರೆ. ಅವರು ಕೊನೆಯಬಾರಿಗೆ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡರು. ಆದರೆ ಆ ಸಿನಿಮಾ ಫ್ಲಾಪ್ ಆಯಿತು. ಅವರು ಅದರ ನಂತರ ಕಾಲಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದರು. ಆದರೆ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ. ಆದರೆ ಈ ಸಿನಿಮಾದಲ್ಲಿ ಹಾಡುಗಳು ಫೇಮಸ್ ಆದವು. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ