Virat Kohli: ಬಾಲಿವುಡ್​ಗೆ ಎಂಟ್ರಿ ಕೊಟ್ಟ ವಿರಾಟ್​ ಕೊಹ್ಲಿ: ವಿಡಿಯೋ ವೈರಲ್​..!

Virat Kohli: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಈಗ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ​. ವಿರಾಟ್ ಅಭಿನಯದ ವಿಡಿಯೋ ಈಗ ವೈರಲ್​ ಆಗಿದೆ. ಸೋನಮ್​ ಕಫೂರ್​ ಅಭಿನಯದ ಸಿನಿಮಾದ ವಿಡಿಯೋ ಈಗ ವಿರಾಟ್​ರಿಂದ ವೈರಲ್​ ಆಗುತ್ತಿದೆ.

Anitha E | news18-kannada
Updated:September 11, 2019, 10:26 AM IST
Virat Kohli: ಬಾಲಿವುಡ್​ಗೆ ಎಂಟ್ರಿ ಕೊಟ್ಟ ವಿರಾಟ್​ ಕೊಹ್ಲಿ: ವಿಡಿಯೋ ವೈರಲ್​..!
ದ ಜೋಯಾ ಫ್ಯಾಕ್ಟರ್​ ಸಿನಿಮಾದಲ್ಲಿ ವಿರಾಟ್​ ಕೊಹ್ಲಿ ಎಂಟ್ರಿ
  • Share this:
ನಟಿ ಸೋನಮ್​ ಕಪೂರ್​ ಹಾಗೂ ದುಲ್ಕರ್​ ಸಲ್ಮಾನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ದ ಜೋಯಾ ಫ್ಯಾಕ್ಟರ್​'. ಈ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಸಿಗುತ್ತಿದೆ. ಹೀಗಿರುವಾಗಲೇ ಈ ಚಿತ್ರದ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಹೌದು, ಈ ಸಿನಿಮಾದ ವಿಡಿಯೋ ವೈರಲ್​ ಆಗಲು ಒಂದು ಕಾರಣವಿದೆ. ಅದು ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​. ಈ ವಿಡಿಯೋದಲ್ಲಿ ವಿರಾಟ್​ ಕೊಹ್ಲಿಎಂಟ್ರಿ ಆಗುತ್ತದೆ.ಈ ಚಿತ್ರದಲ್ಲಿ ವಿರಾಟ್​ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು​ ಸಿನಿಮಾ ಪ್ರಮೋಷನ್​ ಮಾಡುವಂತೆ ಕಾಣುತ್ತಿದೆ. ಈ ವಿಡಿಯೋದಲ್ಲಿ ವಿರಾಟ್​ ಕೊಹ್ಲಿ ಒಂದು ಲಾಕೆಟ್​ ಧರಿಸಿದ್ದು, ಅದರಲ್ಲಿ ಸೋನಮ್​ ಕಪೂರ್ ಫೋಟೋ ಇದೆ.  ಡ್ರೆಸ್ಸಿಂಗ್​ ರೂಮ್​ನಲ್ಲಿ ವಿರಾಟ್​ ರೆಡಿಯಾಗುತ್ತಿರುತ್ತಾರೆ. ಆಗ ಕಮೆಂಟ್ರಿ ಹೇಳುವವರು ಹೊರಗಡೆ ಮೈದಾನದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಇಬ್ಬರೂ ಆರಂಭಿಕ ಆಟಗಾರರು ಔಟ್​ ಆಗಿದ್ದಾರೆ ಎಂದು ಹೇಳುತ್ತಾರೆ. ನಂತರ ವಿರಾಟ್​ ಬ್ಯಾಟಿಂಗ್​ ಮಾಡಲು ಬರಲಿದ್ದಾರೆ ಎಂದು ಹೇಳುತ್ತಿರುತ್ತಾರೆ. ಜತೆಗೆ ವಿರಾಟ್​ ಈಗ ಜೋಯಾ ಫ್ಯಾಕ್ಟರ್ ಅನ್ನು ನಂಬುತ್ತಿದ್ದು, ಅದು ಈಗ ಕೆಲಸ ಮಾಡುತ್ತಾ ಎಂದು ಕಮೆಂಟ್ರಿಯಲ್ಲಿ ಹೇಳಲಾಗುತ್ತದೆ.

ಇದನ್ನೂ ಓದಿ: 'ಪೈಲ್ವಾನ್'​ ಚಿತ್ರಕ್ಕಾಗಿ ಕಿಚ್ಚ ಸುದೀಪ್​ ಜಿಮ್​ನಲ್ಲಿ ಬೆವರಿಳಿಸಿದ ವಿಡಿಯೋ ಇಲ್ಲಿದೆ..!

ಸೋನಮ್ ಕಪೂರ್ ಅವರ ಫೋಟೋ ಇರುವ ಸರವನ್ನು ವಿರಾಟ್​ ಹಾಕಿಕೊಂಡು ಮೈದಾನಕ್ಕೆ ಇಳಿಯುತ್ತಾರೆ. ಮಜವಾದ ಈ ವಿಡಿಯೋ ಲೀಕ್​ ಆಗುತ್ತಿದ್ದಂತೆಯೇ ವೈರಲ್​ ಆಗಿದೆ. ಇದನ್ನು ಸೋನಮ್​ ಕಪೂರ್​ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

Ab saare sawaalon 📝 ke jawaab aaye na aaye, Zoya Kavach 🔮 se aap ke liye good luck 🍀zaroor aayega! #TheZoyaFactorhttps://t.co/hQVP8CGEC6@dulQuer #AbhishekSharma @Pooja__Shetty @aartims @foxstarhindi @ad_labsfilms @Imangadbedi @sikandarkher @anujachauhan


'ದ ಜೋಯಾ ಫ್ಯಾಕ್ಟರ್​' ಸಿನಿಮಾ ಅದೃಷ್ಟದ ಮೇಲೆಯೇ ನಿರ್ಮಾಣವಾಗಿದೆ. ಎಲ್ಲರೂ ಒಮ್ಮೆಯಾದರೂ ಅದೃಷ್ಟವನ್ನು ನಂಬುತ್ತಾರೆ. ಕ್ರಿಕೆಟ್​ ಆಟಗಾರರು ಅದೃಷ್ಟವನ್ನು ನಂಬುತ್ತಾರೆ ಹಾಗಾಗಿಯೇ ಕೊಹ್ಲಿ ಅವರನ್ನು ಈ ದೃಶ್ಯದಲ್ಲಿ ತರಲಾಗಿದೆ. ಆದರೆ ಇದರಲ್ಲಿ ಅಭಿನಯಿಸಿರುವುದು ನಿಜವಾದ ಕೊಹ್ಲಿ ಅಲ್ಲ. ಅವರಂತೆ ಕಾಣುವ ವ್ಯಕ್ತಿ. ಈ ಸಿನಿಮಾ ಇದೇ 20ರಂದು ತೆರೆಗಪ್ಪಳಿಸಲಿದೆ.

 

Evelyn Sharma: ವೈರಲ್​ ಆಯ್ತು 'ಸಾಹೋ' ಬ್ಯೂಟಿಯ ಬಿಕಿನಿ ಫೋಟೋಗಳು

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ