ಇಲ್ಲಿದೆ ವಿರಾಟ್​ ಹಾಗೂ ಅನುಷ್ಕಾರ ದತ್ತು ಮಗನ ಫೋಟೋ..!

news18
Updated:August 25, 2018, 1:45 PM IST
ಇಲ್ಲಿದೆ ವಿರಾಟ್​ ಹಾಗೂ ಅನುಷ್ಕಾರ ದತ್ತು ಮಗನ ಫೋಟೋ..!
news18
Updated: August 25, 2018, 1:45 PM IST
ನ್ಯೂಸ್​ 18 ಕನ್ನಡ 

ಸೆಲೆಬ್ರಿಟಿ ಜೋಡಿ ಅನುಷ್ಕಾ ಹಾಗೂ ವಿರಾಟ್​ ಸದಾ ಒಂದಲ್ಲಾ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತಲೇ ಇರುತ್ತಾರೆ. ಹೌದು ಇತ್ತೀಚೆಗಷ್ಟೆ ಇಂಗ್ಲೆಂಡ್​ನಲ್ಲಿ ನಡೆದ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ನಿಂತಿದ್ದ ಅನುಷ್ಕಾಗೆ ಪ್ಲೈಯಿಂಗ್​ ಕಿಸ್​ ಹಾರಿಬಿಟ್ಟು ವಿರಾಟ್​ ಸುದ್ದಿಯಾಗಿದ್ದರು.

ಆದರೆ ಈಗ ಈ ಜೋಡಿಯ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅದು ಸಹ ಈ ಜೋಡಿ ತಮ್ಮ ದತ್ತು ಮಗನ ಜೊತೆ ತೆಗೆಸಿಕೊಂಡಿರುವ ಈ ಚಿತ್ರ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ 8 ಗಂಟೆಯಲ್ಲೇ 16 ಲಕ್ಷ (1.6 ಮಿಲಿಯನ್​) ಲೈಕ್ಸ್​ ಸಿಕ್ಕಿದೆ.

ಹೌದು ವಿರಾಟ್​ ಹಾಗೂ ಅನುಷ್ಕಾರ ಈ ದತ್ತು ಮಗನ ಚಿತ್ರ ಈಗ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡುತ್ತಿದೆ. ಯಾರಿದು ಇವರ ದತ್ತು ಮಗ ಅಂತೀರಾ? ಇಲ್ಲಿದೆ ನೋಡಿ ಅವನ ಚಿತ್ರ.

 


Loading...


Met this beautiful boy who was patient enough to take a picture with us 😍🐶


A post shared by Virat Kohli (@virat.kohli) on


ಸದ್ಯ ಇಂಗ್ಲೆಂಡ್​ನಲ್ಲಿ ಈ ಜೋಡಿ ಇಂಗ್ಲಿಷ್​ ಡಿಪಾರ್ಟ್​ಮೆಂಟಲ್​ ಸ್ಟೋರೊಂದಕ್ಕೆ ಭೇಟಿ ನೀಡಿದಾಗ ಅಲ್ಲಿದ್ದ ಕಂದು ಬಣ್ಣದ ಈ ನಾಯಿಯೊಂದಿಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಈ ದಂಪತಿ ಮನೆಯಲ್ಲೂ ನಾಯಿಯನ್ನು ಸಾಕಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದಿದೆ.

ಕೇರಳದಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ಪ್ರಾಣಿಗಳಿಗೆಂದು ಆಹಾರ ಹಾಗೂ ವೈದ್ಯಕೀಯ ನೆರು ನೀಡಲು ಸಹಾಯ ಮಾಡಿರುವ ಈ ದಂಪತಿ ಪ್ರಾಣಿಗಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳೊಂದಿಗೆ ಕೂಡಿ ಕೆಲಸವನ್ನೂ ಮಾಡುತ್ತಿದ್ದಾರೆ.

ಅನುಷ್ಕಾ ಸದ್ಯ ವರುಣ್​ ಧವನ್​ ಜತೆ 'ಸೂಯಿ ಧಾಗ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾ ಸೆಪ್ಟೆಂಬರ್​ 28ಕ್ಕೆ ತೆರೆ ಕಾಣಲಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ