ವೈರಲ್ ಆಗುತ್ತಿದೆ ಇಂಗ್ಲೆಂಡ್​ನಲ್ಲಿರುವ ವಿರುಷ್ಕಾ ಫೋಟೋ..! ಅಂಥದ್ದೇನಿದೆ ಗೊತ್ತಾ..?


Updated:July 18, 2018, 2:29 PM IST
ವೈರಲ್ ಆಗುತ್ತಿದೆ ಇಂಗ್ಲೆಂಡ್​ನಲ್ಲಿರುವ ವಿರುಷ್ಕಾ ಫೋಟೋ..! ಅಂಥದ್ದೇನಿದೆ ಗೊತ್ತಾ..?

Updated: July 18, 2018, 2:29 PM IST
-ನ್ಯೂಸ್ 18

ಲಂಡನ್(ಜು.18): ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವೃತ್ತಿ ಸಂಪೂರ್ಣ ಬೇರೆ ಬೇರೆಯಾಗಿದ್ದು, ದಂಪತಿ ಯಾವಾಗಲೂ ತಮ್ಮ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ, ವಿರುಷ್ಕಾ ಮಾತ್ರ ಸಮಯ ಸಿಕ್ಕಾಗಲೆಲ್ಲ ಒಟ್ಟೊಟ್ಟಿಗೆ ಕಾಲ ಕಳೆಯುತ್ತಾರೆ.

ಸದ್ಯ, ಇಬ್ಬರೂ ಇಂಗ್ಲೆಂಡ್​ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪ್ರವಾಸಕ್ಕಾಗಿ ವಿರಾಟ್ ಕೊಹ್ಲಿ ತೆರಳಿದ್ದು, ಗಂಡನ ಜೊತೆ ಅನುಷ್ಕಾ ಸಹ ತೆರಳಿದ್ದಾರೆ. ಇತ್ತೀಚೆಗೆ ಟೀಮ್ ಬಸ್​ನಲ್ಲಿ ವಿರಾಟ್ ಜೊತೆ ಅನುಷ್ಕಾ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಇದೀಗ, ಇಂಗ್ಲೆಂಡ್​ನ ದಿನಸಿ ಅಂಗಡಿಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತೆರಳಿರುವ ಫೋಟೋ ವೈರಲ್ ಆಗಿದೆ.
Loading...

@anushkasharma and @virat.kohli clicked in Leeds yesterday. . . . #anushka #fireinhersoul #gorgeous #queen #divã #angel #strongwoman #inspiration #incrediblewoman #scrumptiousperson #Anushkaholic #loveanushka #loveofmylife


A post shared by Aηυѕнкα Uρ∂αтєѕ (@anushka.army) on


ಅನುಷ್ಕಾ ಶರ್ಮಾ ಕ್ರಾಪ್ ಟಾಪ್ ಮತ್ತು ಜೀನ್ಸ್ ತೊಟ್ಟಿದ್ದು, ವಿರಾಟ್ ಕೊಹ್ಲಿ ಸ್ವೆಟ್ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದಾರೆ. ಅನುಷ್ಕಾಳ ಅಭಿಮಾನಿ ಫೋಟೋವನ್ನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಅಪಾರ ಪ್ರಮಾಣದ ಅಭಿಮಾನಿ ಬಳಗ ಹೊಂದಿರುವ ವಿರುಷ್ಕಾ 4 ವರ್ಷಗಳ ಡೇಟಿಂಗ್ ಬಳಿಕ ಕಳೆದ ಡಿಸೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
ಅನುಷ್ಕಾ ಶರ್ಮಾ ಮತ್ತು ವರುಣ್ ಧವನ್ ಅಭಿನಯದ ಸುಯಿ ಧಾಗ ಚಿತ್ರ ಸೆಪ್ಟೆಂಬರ್ 28, 2018ಕ್ಕೆ ತೆರೆ ಕಾಣುತ್ತಿದ್ದು, ಇದೇ ವರ್ಷದಲ್ಲಿ ಆನಂದ್ ಎಲ್ ರಾಯ್ ಅವರ ಜೀರೋ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

 
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...