ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty ) ಸದ್ಯ 777 ಚಾರ್ಲಿ (777 Charlie) ಚಿತ್ರದ ಯಶಸ್ಸಿನಲ್ಲಿದ್ದಾರೆ. ಇದರ ನಡುವೆ ಅವರ ಅಭಿನಯದ ಬಹುನಿರೀಕ್ಷಿತ 'ಸಪ್ತ ಸಾಗರದಾಚೆ ಎಲ್ಲೋ' (Sapta Sagaradaache Yello) ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ರಕ್ಷಿತ್ ಜನ್ಮದಿನದ (Birthday) ಪ್ರಯುಕ್ತ ಚಿತ್ರತಂಡ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿತ್ತು. ಲವ್ ಮತ್ತು ಕಮರ್ಷಿಯಲ್ ಕಥೆಯ ಈ ಚಿತ್ರದ ಟೀಸರ್ ನೋಡುಗರ ಮನಗೆದ್ದಿತ್ತು. ಆದರೆ ಇದೀಗ ಎಲ್ಲರೂ ಹುಬ್ಬೆರಿಸುವಂತಹ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿದ ಕನ್ನಡ ಸಿನಿ ಪ್ರೇಮಿಗಳು ಒಮ್ಮೆ ಹೌದಾ ಎಂದು ಬಾಯಿಯ ಮೇಲೆ ಬೆರಳಿಡುತ್ತಿದ್ದಾರೆ. ಹಾಗಿದ್ರೆ ಆ ವೈರಲ್ ಪೋಟೋದ ಅಸಲಿಯತ್ತೇನೆಂದು ನೀವೂ ತಿಳಿದುಕೊಳ್ಳಿ.
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಕೊಹ್ಲಿ?:
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ಕೊಹ್ಲಿ ನಟಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಹರಿದಾಡುತ್ತಿದೆ. ಹೌದು, ಕೊಹ್ಲಿ ಸಮುದ್ರ ತೀರದಲ್ಲಿ ಕುಳಿತುಕೊಂಡಿರುವ ಪೋಟೋಗೆ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಟೈಟಲ್ ಅನ್ನು ಸೇರಿಸಲಾಗಿದೆ. ಓ ಪೋಟೋ ಸದ್ಯ ಎಲ್ಲಡೆ ಸಖತ್ ವೈರಲ್ ಆಗುತ್ತಿದ್ದು, ಅನೇಕರು ಕೊಹ್ಲಿ ಸ್ಯಾಂಡ್ವುಡ್ಗೆ ಕಾಲಿಡಲಿದ್ದಾರಾ? ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಲಾರಂಭಿಸಿದ್ದಾರೆ.
ಆದರೆ ಅಲಿಯತ್ತೇನೆಂದರೆ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸದ್ಯ ಮಾಲ್ಡ್ವೀಸ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಸಮುದ್ರ ತೀರದಲ್ಲಿ ತೆಗೆದುಕೊಂಡ ಫೋಟೋವನ್ನು ಕೊಹ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ರಕ್ಷಿತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಜೊತೆ ಎಡೆಟ್ ಮಾಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಹೀಗಾಗಿ ಕೊಹ್ಲಿ ಅವರು ಕನ್ನಡಕ್ಕೆ ಬರುತ್ತಿಲ್ಲ ಎಂದು ಕನ್ಫಫರ್ಮ್ ಆಗಿದೆ.
ಚಿತ್ರದ ಟೀಸರ್ಗೆ ಮೆಚ್ಚುಗೆ:
ಇನ್ನು, ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿತ್ತು. ಅಲ್ಲದೇ ಇದೊಂದು 10ರಿಂದ 15 ವರ್ಷಗಳ ಹಿಂದಿನ ಕಥೆ ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೇ ಟೀಸರ್ ಕೊನೆಯಲ್ಲಿ ರಕ್ತವನ್ನು ತೋರಿಸಲಾಗಿರುವುದರಿಂದ ಈ ಚಿತ್ರ ಕೇವಲ ಪ್ರೇಮ ಕಥೆಯನ್ನು ಹೊಂದಿರದೇ ಇದೊಂದು ಸಸ್ಪೆನ್ಸ್ ಸಿನಿಮಾ ಸಹ ಆಗಿರಬಹುದೆಂದು ಹೇಳಲಾಗುತ್ತಿದೆ.ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ರಕ್ಷಿತ್ಗೆ ಹೇಮಂತ್ ಆಕ್ಷನ್ ಕಟ್:
ಈ ಹಿಂದೆ ರಕ್ಷಿತ್ ಶೆಟ್ಟಿ ಯಶಸ್ವಿ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೂ ಹೇಮಂತ್ ರಾವ್ ನಿರ್ದೇಶಕರಾಗಿದ್ರು. ಇದೀಗ ಮತ್ತೆ ರಕ್ಷಿತ್, ಹೇಮಂತ್ ಜೋಡಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗ್ತಿದ್ದಾರೆ. ಇನ್ನು ಈ ಸಿನಿಮಾವನ್ನು ಪುಷ್ಕರ್ ಚಿತ್ರ ನಿರ್ಮಾಣ ಸಂಸ್ಥೆಯ ಪುಷ್ಕರ ಮಲ್ಲಿಕಾರ್ಜುನ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಭರ್ಜರಿ ತಯಾರಿ ಹೇಗಿದೆ ಗೊತ್ತಾ..?
ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ಸಿಂಪಲ್ ಸ್ಟಾರ್:
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಅರ್ಧ ಭಾಗದ ಚಿತ್ರೀಕರಣಕ್ಕಾಗಿ ರಕ್ಷಿತ್ ಶೆಟ್ಟಿ 15 ಕೆ.ಜಿ ತೂಕ ಇಳಿಸಿಕೊಂಡಿದ್ರು. ಇದೀಗ ಉಳಿದ ಭಾಗದ ಶೂಟಿಂಗ್ ಗೆ 15 ಕೆ.ಜಿ ತೂಕ ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಲೇ ದಪ್ಪ ಆಗಲು ರಕ್ಷಿತ್ ವರ್ಕೌಟ್ ಶುರುಮಾಡಿದ್ದು, ಚಿತ್ರೀಕರಣಕ್ಕೆ ತಿಂಗಳ ಅಂತರ ನೀಡಲಾಗಿದೆ. ಇದೀಗ ಚಿತ್ರದ ಅರ್ಧ ಚಿತ್ರೀಕರಣ ಮುಗಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ