Viral Video: ನಾಗಿಣಿಯ ಜೊತೆ ನಡು ರಸ್ತೆಯಲ್ಲಿ ಕುಣಿದ ರಾಖಿ ಸಾವಂತ್!

ರಾಖಿ ಮತ್ತು ಸುರಭಿ ಅಭಿಮಾನಿಗಳಿಗಂತೂ ಈ ವಿಡಿಯೋ ತುಂಬಾನೇ ಇಷ್ಟವಾಗಿದೆ. ಕೆಲವು ನೆಟ್ಟಿಗರು, ಸುರಭಿ ಅವರು ಕ್ರಿಕೆಟಿಗ ಯುಜ್‍ವೇಂದ್ರ ಚಾಲ್ ಅವರ ಪತ್ನಿ ಧನಶ್ರೀಯನ್ನು ಹೋಲುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಖಿ ಸಾವಂತ್​

ರಾಖಿ ಸಾವಂತ್​

  • Share this:
ನೀವು ರಾಖಿ ಸಾವಂತ್ ಅವರನ್ನು ಇಷ್ಟಪಡಿ ಅಥವಾ ಇಷ್ಟಪಡದಿರಿ, ಆದರೆ ಆಕೆಯನ್ನು ನಿರ್ಲಕ್ಷಿಸುವುದು ಮಾತ್ರ ಅಷ್ಟು ಸುಲಭವಲ್ಲ. ಎಲ್ಲೇ ಇರಲಿ, ಯಾವ ಸ್ಥಿತಿಯಲ್ಲೇ ಇರಲಿ ಜನರ ಗಮನ ಸೆಳೆಯುವ ಯಾವ  ಒಂದು ಅವಕಾಶವನ್ನೂ ಕೂಡ ಬಿಟ್ಟುಕೊಡುವವರಲ್ಲ ಈ ರಾಖಿ ಸಾವಂತ್​ ಎಂಬ ಡ್ರಾಮಾ ಕ್ವೀನ್. ಅಂತಹ ಅವಕಾಶ ಸಿಗದಿದ್ದರೇ ತಾನೇ ಅವಕಾಶ ಸೃಷ್ಟಿಸುವ ಮಹಾ ಚತುರೆ ರಾಖಿ. ಈ ದಿನಗಳಲ್ಲಂತೂ ರಾಖಿಯ ಚಿತ್ರ ವಿಚಿತ್ರ ವರ್ತನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣ ಸಿಗುವುದು ಮಾಮೂಲಾಗಿ ಬಿಟ್ಟಿದೆ. ರಾಖಿ ತಾನೇ ಖುದ್ದು ಬೀದಿಗಿಳಿದು ತರಕಾರಿ , ಹಣ್ಣು ಮತ್ತು ಎಳನೀರು ಮಾಡುವವರ ಹತ್ತಿರ ಹರಟೆ ಹೊಡೆಯುವ ವಿಡಿಯೋಗಳು ಈ ದಿನಗಳಲ್ಲಿ ರಾಖಿಯನ್ನು ಇಷ್ಟಪಡದವರು ಕೂಡ ಒಂದು ಕ್ಷಣ ತಿರುಗಿ ನೋಡುವಂತೆ ಮಾಡುತ್ತಿವೆ. ಅಂತಹ ರಾಖಿಯ ಜೊತೆ ಇತ್ತೀಚೆಗೆ ನಾಗಿನ್ 5 ಧಾರಾವಾಹಿ ಖ್ಯಾತಿಯ ಸುರಭಿ ಚಂದನಾ ಮಧ್ಯ ರಸ್ತೆಯಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ರಾಖಿ ಡ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿನ ದೃಶ್ಯ ಹೀಗಿದೆ: ನಾಗಿನ್​ ಧಾರಾವಾಹಿ ಖ್ಯಾತಿಯ ನಟಿ ಸುರಭಿ ತನ್ನ ಕಾರಿನಿಂದ ಇಳಿಯುತ್ತಾರೆ, ಅಲ್ಲೇ ನಿಂತಿದ್ದ ರಾಖಿಯನ್ನು ಕಂಡು ತಬ್ಬಿಕೊಳ್ಳುತ್ತಾರೆ. ಮತ್ತು “ನನಗೆ ಬೇಸರವಾದಾಗಲೆಲ್ಲ ಹವ್ಯಾಸಿ ಛಾಯಾಗ್ರಾಹಕರ ಜೊತೆಗಿನ ನಿನ್ನ ಸಂದರ್ಶನಗಳನ್ನು ನೋಡುತ್ತೇನೆ. ನೀನು ಬಿಗ್ ಬಾಸ್ ಬಗ್ಗ ಹಾಗೂ ಪ್ರಪಂಚದಲ್ಲಿ ನಡೆಯುತ್ತಿರುವ ಸುದ್ದಿಗಳ ಬಗ್ಗೆ ಮಾಹಿತಿ ನೀಡುತ್ತೀಯಾ. ಯಾವುದೇ ಮುಖವಾಡವಿಲ್ಲದೆ ಜನರ ಕಡೆ ಬೊಟ್ಟು ಮಾಡಿ ತೋರಿಸುತ್ತೀಯಾ” ಎಂದು ಹೇಳುತ್ತಾರೆ.
ಬಳಿಕ ತನ್ನ ಹೊಸ ‘ಡ್ರೀಮ್ ಮೆ ಎಂಟ್ರಿ’ ಹಾಡಿಗೆ ಹೇಗೆ ಹೆಜ್ಜೆ ಹಾಕಬೇಕು ಎಂದು ಸುರಭಿಗೆ ಹೇಳಿ ಕೊಡುತ್ತಾರೆ. ಇಬ್ಬರೂ ಜೊತೆಗೂಡಿ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಆ ನಂತರ ಅವರಿಬ್ಬರು ಜೊತೆಯಾಗಿ ಕ್ಯಾಮರಾಗಳಿಗೆ ಪೋಸ್ ನೀಡುತ್ತಾರೆ. ಆ ಕ್ಷಣ ಸುರಭಿ, ರಾಖಿಯ ಕಿವಿಯಲ್ಲಿ ಏನೋ ಗುಟ್ಟು ಹೇಳಿ ಛಾಯಾಗ್ರಾಹಕರಲ್ಲಿ ಆ ಬಗ್ಗೆ ಕುತೂಹಲ ಹುಟ್ಟಿಸುತ್ತಾರೆ.

ಇದನ್ನೂ ಓದಿ: Raghavendra: ಕೃಷ್ಣನ ವೇಷದಲ್ಲಿ ಮಿಂಚಿದ ಮಜಾ ಭಾರತದ ಅದ್ಭುತ ಪ್ರತಿಭೆ ರಾಗಿಣಿ

ರಾಖಿ ಮತ್ತು ಸುರಭಿಯ ಅಭಿಮಾನಿಗಳಿಗಂತೂ ಈ ವಿಡಿಯೋ ತುಂಬಾನೇ ಇಷ್ಟವಾಗಿದೆ. ಕೆಲವು ನೆಟ್ಟಿಗರು , ಸುರಭಿ ಅವರು ಕ್ರಿಕೆಟಿಗ ಯುಜ್‍ವೇಂದ್ರ ಚಾಲ್ ಅವರ ಪತ್ನಿ ಧನಶ್ರೀಯನ್ನು ಹೋಲುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. “ಅರೇ ನನಗೆ ಈಕೆ ಧನಶ್ರೀ ಎಂದೆನಿಸಿತು” ಎಂದು ಒಬ್ಬರು ಪ್ರತಿಕ್ರಿಯಿಸಿದರೆ,  ಮತ್ತೊಬ್ಬರು “ಹೇಯ್ , ಇದು ಚಹಲ್‍ನ ಪತ್ನಿ ಅಲ್ಲ” ಎಂದು ಬರೆದಿದ್ದಾರೆ.

ಇದನ್ನೂ ಓದಿ: Deepika Padukone: ಮತ್ತೊಂದು ಹಾಲಿವುಡ್​ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ..!

ಇತ್ತೀಚೆಗೆ ನೀಲಿ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ರಾಖಿ ಸಮರ್ಥಿಸಿಕೊಂಡಿದ್ದರು. ಕಳೆದ ವಾರ, ‘ಬಿಗ್‍ ಬಾಸ್ ಓಟಿಟಿ’ಗೆ ಅತಿಥಿಯಾಗಿ ಪ್ರವೇಶಿಸಿ, ಮನೆಯ ಸದಸ್ಯರು ಮತ್ತು ವೀಕ್ಷಕರಿಗೆ ಮನರಂಜನೆ ನೀಡಿದ್ದರು. ಸುರಭಿ ಇತ್ತೀಚೆಗಷ್ಟೆ ತಮ್ಮ ಮಾಲ್ಡೀವ್ಸ್ ಪ್ರವಾಸದಿಂದ ಮರಳಿದ್ದಾರೆ. ತಮ್ಮ ಪ್ರವಾಸದ ಸೆಕ್ಸಿ ಬೀಚ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು,ನೆಟ್ಟಿಗರ ಮೆಚ್ಚುಗೆ ಪಡೆದಿದ್ದಾರೆ. ಅವರು ಇತ್ತೀಚೆಗೆ ನಟ ಶರದ್ ಮಲ್ಹೋತ್ರಾ ಜೊತೆ ‘ಬೇಪನಾ ಪ್ಯಾರ್’ ಮತ್ತು ‘ಬೇಪನಾ ಇಶ್ಕ್’ ಎಂಬ ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
Published by:Anitha E
First published: