ಖ್ಯಾತ ನಟಿ ಪವಿತ್ರಾ ಲೋಕೇಶ್ (Pavitra Lokesh) ಹಾಗೂ ತೆಲುಗಿನ ಪೋಷಕ ನಟ ನರೇಶ್ (Naresh) ಮದುವೆ ಆಗಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲೀಗ ಸಂಚಲನ ಮೂಡಿಸಿದೆ. ಅವರಿಬ್ಬರು ಪ್ರೀತಿಸುತ್ತಾ ಇದ್ದಾರೆ, ಡೇಟಿಂಗ್‌ನಲ್ಲಿ ಇದ್ದಾರೆ, ಮದುವೆ (Marriage) ಆಗುತ್ತಾರೆ ಎಂಬ ಸುದ್ದಿ ಈ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಆದರೆ ಅಂತಿಮವಾಗಿ ಈ ಎಲ್ಲಾ ಚರ್ಚೆಗಳಿಗೆ ಖುದ್ದು ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರೇ ಫುಲ್ ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಮದುವೆ ಆಗಿರುವ ವಿಡಿಯೋಗಳನ್ನು ನರೇಶ್ ಅವರೇ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಇದೀಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮರುಭೂಮಿಯೊಂದರಲ್ಲಿ (Desert) ಕೈ ಕೈ ಹಿಡಿದು ಸುತ್ತಾಡುತ್ತಾ ಇದ್ದಾರೆ. ಈ ವಿಡಿಯೋ ಇದೀಗ ವೈರಲ್ (Viral Video) ಆಗಿದ್ದು, ಮರುಭೂಮಿಯಲ್ಲಿ ಪವಿತ್ರಾ ಲೋಕೇಶ್, ನರೇಶ್ ಹನಿಮೂನ್ ಮಾಡಿಕೊಳ್ಳುತ್ತಿದ್ದಾರಾ ಅಂತ ನೆಟ್ಟಿಗರು ಪ್ರಶ್ನಿಸುತ್ತಾ ಇದ್ದಾರೆ!
ನರೇಶ್-ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ?
ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮದುವೆ ಆಗಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಗಂಡ, ಹೆಂಡತಿಯರಾಗಿ ಸಪ್ತಪದಿ ತುಳಿದಿರುವ ವಿಡಿಯೋಗಳನ್ನು ನರೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಮೇಲೆ ನಿಮ್ಮ ಆಶೀರ್ವಾದ ಇರಲಿ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಹನಿಮೂನ್‌ನಲ್ಲಿ ಇದ್ದಾರಾ ನರೇಶ್-ಪವಿತ್ರಾ?
ಇದೀಗ ನರೇಶ್ ಹಾಗೂ ಪವಿತ್ರಾ ಕುರಿತಾದ ಮತ್ತೆ ಕೆಲವು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಶಾಪಿಂಗ್ ಮಾಲ್‌ನಂತೆ ಕಾಣುವ ಸ್ಥಳವೊಂದರಲ್ಲಿ ಕೈ ಕೈ ಹಿಡಿದು ನಡೆಯುತ್ತಾ ಇದ್ದಾರೆ. ಮತ್ತೊಂದು ವಿಡಿಯೋದಲ್ಲಿ ಪವಿತ್ರಾ ಹಾಗೂ ನರೇಶ್ ಮರುಭೂಮಿಯೊಂದರಲ್ಲಿ ಕೈ ಕೈ ಹಿಡಿದು ಓಡಾಡುತ್ತಾ, ಖುಷಿ ಖುಷಿಯಾಗಿ ಮಾತನಾಡುತ್ತಾ, ನಗುತ್ತಿರುವ ದೃಶ್ಯ ಕಾಣಿಸುತ್ತಿದೆ.
ನಿಜಕ್ಕೂ ಮದುವೆಯಾದ್ರಾ ಪವಿತ್ರಾ ಲೋಕೇಶ್, ನರೇಶ್?
ಅಂದಹಾಗೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಮದುವೆ ಬಗ್ಗೆ ಹಲವು ಗೊಂದಲಗಳು ಇವೆ. ಅಸಲಿಗೆ ಇದು ಅವರ ರಿಯಲ್ ಮದುವೆ ಅಲ್ಲ, ರೀಲ್ ಮದುವೆ ಎನ್ನಲಾಗುತ್ತಿದೆ. ಅಂದರೆ ಸಿನಿಮಾದ ದೃಶ್ಯವೊಂದರಲ್ಲಿ ಪವಿತ್ರಾ ಹಾಗೂ ನರೇಶ್ ಪತಿ, ಪತ್ನಿಯರಾಗಿ ನಟಿಸಿದ್ದಾರಂತೆ. ಪವಿತ್ರಾ ಮತ್ತು ಲೋಕೇಶ್ ಅವರ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲಾಗುತ್ತಿದೆ. ಆ ಸಿನಿಮಾದಲ್ಲಿ ಪವಿತ್ರಾ ನಾಯಕಿ, ನರೇಶ್ ನಾಯಕ. ಇಬ್ಬರ ಬದುಕಿನಲ್ಲಿ ನಡೆದ ಘಟನೆಗಳನ್ನೇ ಚಿತ್ರಕಥೆಯಾಗಿಸಿದ್ದಾರಂತೆ ನಿರ್ದೇಶಕರು. ಆ ಸಿನಿಮಾದಲ್ಲಿ ಇಬ್ಬರೂ ಮದುವೆ ಆಗುವ ಸನ್ನಿವೇಶ ಕೂಡ ಇದೆಯಂತೆ. ಇದೇ ವಿಡಿಯೋ ವೈರಲ್ ಆಗಿದ್ದು, ನರೇಶ್ ಹಾಗೂ ಪವಿತ್ರಾ ಲೋಕೇಶ್ ರಿಯಲ್ ಆಗಿ ಮದುವೆ ಆಗಿದ್ದಾರೆ ಎಂಬ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: Pavitra Lokesh Naresh Love Story: ಪವಿತ್ರಾ ಲೋಕೇಶ್-ನರೇಶ್ ನಡುವೆ ಲವ್ವಿ ಡವ್ವಿಯ ಇಂಟರೆಸ್ಟಿಂಗ್ ಸ್ಟೋರಿ!
ವಿಡಿಯೋ ಹಂಚಿಕೊಂಡಿದ್ದ ನರೇಶ್
ಅಂದಹಾಗೆ ವೈರಲ್ ಆಗಿರುವ ವಿಡಿಯೋ ಹಂಚಿಕೊಂಡಿದ್ದು ಖುದ್ದು ನರೇಶ್ ಅವರೇ! ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದ ಅವರು, “ಒಂದು ಪವಿತ್ರ ಬಂಧ, ಎರಡು ಮನಸ್ಸು, ಮೂರು ಗಂಟು, ಏಳು ಹೆಜ್ಜೆ.. ನಾವು ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ” ಎಂದು ಬರೆದುಕೊಂಡಿದ್ದರು. ಇದು ಫೇಕ್ ಮದುವೆ ಆಗಿರಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಕೆಲವರು. ವೇರಿಫೈಡ್ ಟ್ವಿಟರ್ ಖಾತೆಯಿಂದ ವಿವಾಹದ ವಿಡಿಯೋ ಶೇರ್ ಮಾಡಿ ಆಶೀರ್ವಾದ ಕೇಳಿರುವಾಗ ಇದು ಫೇಕ್ ಆಗಿರಲು ಸಾಧ್ಯವಿಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ