Dabbu Uncle: ಡಬ್ಬು ಅಂಕಲ್​ ಈಸ್​ ಬ್ಯಾಕ್​: ಮತ್ತೆ ವೈರಲ್​ ಆಗುತ್ತಿದೆ ಹೊಸ ಡ್ಯಾನ್ಸ್ ವಿಡಿಯೋ..!

ಡಬ್ಬು ಅಂಕಲ್​ ಅಥವಾ ಡ್ಯಾನ್ಸಿಂಗ್​ ಅಂಕಲ್​ ಎಂದೇ ಫೇಮಸ್​ ಆಗಿರುವ ಶ್ರೀವಾಸ್ತವ್ ಅವರ ಹೊಸ ವಿಡಿಯೋ ಈಗ ಹರಿದಾಡುತ್ತಿದೆ. ಡಬ್ಬು ಅಂಕಲ್ ಡ್ಯಾನ್ಸ್​ ನೋಡಿದವರು ಹೀಗೆನ್ನುತ್ತಿದ್ದಾರೆ.

ಡಬ್ಬು ಅಂಕಲ್​ ಡ್ಯಾನ್ಸ್ ವಿಡಿಯೋ

ಡಬ್ಬು ಅಂಕಲ್​ ಡ್ಯಾನ್ಸ್ ವಿಡಿಯೋ

  • Share this:
ಗೋವಿಂದ ಡ್ಯಾನ್ಸ್ ಸ್ಟೈಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಚಾರ ಪಡೆದಿದ್ದ ಮಧ್ಯಪ್ರದೇಶ ವಿದಿಶಾದಲ್ಲಿ ನೆಲೆಸಿರುವ ಪ್ರೊ. ಸಂಜೀವ್ ಶ್ರೀವಾಸ್ತವ ಅಲಿಯಾಸ್ ಡಬ್ಬು ಅಂಕಲ್​ (Dabbu Uncle) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.  ವಿಡಿಯೋ ಮೂಲಕ ಫೇಮಸ್​ ಆಗಿದ್ದಾರೆ. 2018ರಲ್ಲಿ ಮದುವೆಯೊಂದರಲ್ಲಿ ಡ್ಯಾನ್ಸ್​ ಮಾಡಿದ್ದು, ಅದರ ವಿಡಿಯೋ ಮೂಲಕ ಡಬ್ಬು ಅಂಕಲ್​ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಅವರು ಡ್ಯಾನ್ಸ್​ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿತ್ತು. ರಾತ್ರೋರಾತ್ರಿ ಡಬ್ಬು ಅಂಕಲ್​ ಸ್ಟಾರ್​ ಆಗಿಬಿಟ್ಟಿದ್ದರು. ಇನ್ನು ಆ ಒಂದು ವಿಡಿಯೋ ಅವರಿಗೆ ಹೊಸ ಗುರುತನ್ನೇ ತಂದು ಕೊಟ್ಟಿತ್ತು.ಈಗ ಇವರ ಮತ್ತೊಂದು ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಡಬ್ಬು ಅಂಕಲ್​ ಅಥವಾ ಡ್ಯಾನ್ಸಿಂಗ್​ ಅಂಕಲ್​ ಎಂದೇ ಫೇಮಸ್​ ಆಗಿರುವ ಶ್ರೀವಾಸ್ತವ್​, ಈಗಾಗಲೇ ಸಾಕಷ್ಟು ಹಿಂಬಾಲಕರನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಇವರು ನಟ ಗೋವಿಂದ್​ ಅವರ ಕಟ್ಟಾ ಅಭಿಮಾನಿ. ಈ ಸಲವೂ ಅವರು ಗೋವಿಂದ ಅವರ ಹಾಡಿಗೆ ಹೆಜ್ಜೆ ಹಾಕಿದ್ದಾರೆ.



ನಟ ಗೋವಿಂದ ಅವರ ಅಭಿನಯದ ಮೈ ಸೆ ಮಿನಾ ಸೆ ನಾ ಸಾತಿ ಸೆ ಹಾಡಿಗೆ ಡಬ್ಬು ಅಂಕಲ್​ ಡ್ಯಾನ್ಸ್​ ಮಾಡಿದ್ದಾರೆ. ಯಾವುದೋ ಒಂದು ಕಾರ್ಯಕ್ರಮದಲ್ಲಿ ಡಬ್ಬು ಅಂಕಲ್​ ಡ್ಯಾನ್ಸ್ ಮಾಡಿದ್ದು, ಅದರ ವಿಡಿಯೋ ಈಗ ವೈರಲ್​ ಆಗುತ್ತಿದೆ. ಈ ಸಲ ಅವರು ಪೂರ್ತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿಶೇಷ ಅಂದರೆ ಈ ವಿಡಿಯೋದಲ್ಲಿ ಅವರ ಮಡದಿ ಮತ್ತೆ ಅವರ ಜೊತೆ ಕುಣಿದಿದ್ದಾರೆ. ಆಕೃತಿ ಡಿಜಿಟಲ್​ ಸ್ಟುಡಿಯೋಸ್​ ಅವರು ಯೂಟ್ಯೂಬ್​ನಲ್ಲಿ ಕಳೆದ ತಿಂಗಳು ಈ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ. ಈ ವಿಡಿಯೋಗೆ 38 ಲಕ್ಷಕ್ಕೂ ಅಧಿಕ ವೂಈಕ್ಷಣೆ ಸಿಕ್ಕಿದೆ. ಈ ವಿಡಿಯೋ ನೋಡಿದವರು ಇಲ್ಲಿಯವರೆಗಿನ ಪ್ರದರ್ಶನಗಳಲ್ಲಿ ಇದು ಅವರ ಬೆಸ್ಟ್​ ಪರ್ಫಾಮೆನ್ಸ್​ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯಾಗಿದ್ದ ದಿನಗಳನ್ನು ನೆನಪಿಕೊಂಡ ನಟಿ ಸಮೀರಾ ರೆಡ್ಡಿ..!

ಈ ಹಿಂದೆ ಖ್ಯಾತ ಬಾಲಿವುಡ್​ ನಾಯಕ ದಾದಾ ಖ್ಯಾತಿಯ ಮಿಥುನ್​ ಚಕ್ರವರ್ಥಿ ಅವರ ಶೈಲಿಯಲ್ಲಿ ನೃತ್ಯ ಮಾಡಿರುವ ಮಧ್ಯಪ್ರದೇಶದ ಕಾಲೇಜು ಶಿಕ್ಷಕ ಶ್ರೀವಾಸ್ತವ್​, 'ಜೂಲಿ ಜೂಲಿ' ಹಾಡಿಗೆ ಕಾಲುಗಳನ್ನು ಅಲ್ಲಾಡಿಸುವ ಸ್ಟೆಪ್ಸ್​ ಹಾಕಿ ನೆರೆದಿದ್ದವರ ಮನರಂಜಿಸಿದ್ದರು.



ಅದಕ್ಕೂ ಮೊದಲು ಆಪ್​ ಕೆ ಆ ಜಾನೆ ಹಾಡಿಗೆ ಸ್ಟೆಪ್​ ಹಾಕಿದ್ದ 'ಡ್ಯಾನ್ಸ್​ ಅಂಕಲ್'​ ವಿಡಿಯೋ ಹಲವು ದಿನಗಳಿಂದ ವೈರಲ್​ ಆಗಿತ್ತು, ಈ ವೀಡಿಯೋ ನೋಡಿರುವ ಖ್ಯಾತ ಬಾಲಿವುಡ್​ ಮಂದಿ ಸೇರಿದಂತೆ ಹಲವರು ಸಂಜೀವ್​ ಡ್ಯಾನ್ಸ್​ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದರು. ಈ ಸ್ಟೆಪ್​ ವೀಕ್ಷಿಸಿದ್ದ ನಟ ಗೋವಿಂದ್,​ ಅದೆಷ್ಟೋ ಮಂದಿ ನನ್ನ ನೃತ್ಯದ ಶೈಲಿಯನ್ನು ನಕಲು ಮಾಡಲು ಯತ್ನಿಸಿ ಸೋತಿದ್ದರೂ, ಡ್ಯಾನ್ಸ್​ ಅಂಕಲ್​ ಮಾತ್ರಾ ಯಥಾವತ್ತು ನಕಲು ಮಾಡಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಯಲ್ಲಿ ಹೇಳಿಕೊಂಡಿದ್ದರು.

ಅಲ್ಲದೇ ಮತ್ತೋರ್ವ ನಟ ಹೃತಿಕ್ ರೋಷನ್ ನೃತ್ಯ ಕೂಡಾ ಶ್ರೀವಾಸ್ತವ್​ ನಕಲು ಮಾಡಿದ್ದರು. ಕಹೋನ ಪ್ಯಾರ್​ ಹೆ ಚಿತ್ರದ ಹಾಡಿಗೆ ಡ್ಯಾನ್ಸ್​ ಮಾಡಿ ರಾಜ್​ ಕಪೂರ್​ಗೆ ನಮನ ಸಲ್ಲಿಸಿದ್ದರು

ಇದನ್ನೂ ಓದಿ: Allu Arha: ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ಮಗಳು ಸ್ಟೈಲಿಶ್​ ಪ್ರಿನ್ಸೆಸ್​ ಅಲ್ಲು ಅರ್ಹಾ



ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Anitha E
First published: