• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • MS Dhoni: ಕ್ರಿಕೆಟ್​ ಚೆಂಡನ್ನು ಬಿಟ್ಟು ಫುಟ್​ಬಾಲ್​ ಹಿಡಿದ ಧೋನಿ!; ಬಾಲಿವುಡ್​ ನಟರೊಂದಿಗೆ ಕೂಲ್​ ಕ್ಯಾಪ್ಟನ್ ಮೋಜು-ಮಸ್ತಿ

MS Dhoni: ಕ್ರಿಕೆಟ್​ ಚೆಂಡನ್ನು ಬಿಟ್ಟು ಫುಟ್​ಬಾಲ್​ ಹಿಡಿದ ಧೋನಿ!; ಬಾಲಿವುಡ್​ ನಟರೊಂದಿಗೆ ಕೂಲ್​ ಕ್ಯಾಪ್ಟನ್ ಮೋಜು-ಮಸ್ತಿ

ಫುಟ್​ಬಾಲ್​ ಆಡುತ್ತಿರುವ ಧೋನಿ

ಫುಟ್​ಬಾಲ್​ ಆಡುತ್ತಿರುವ ಧೋನಿ

Mahendra Singh Dhoni: ಸದ್ಯಕ್ಕೆ ರಜೆಯನ್ನು ಎಂಜಾಯ್ ಮಾಡುತ್ತಿರುವ ಎಂಎಸ್​ ಧೋನಿ ತಮ್ಮ ಬಾಲಿವುಡ್​ ಗೆಳೆಯರಾದ ಅರ್ಜುನ್ ಕಪೂರ್ ಮುಂತಾದವರ ಜೊತೆ ಮುಂಬೈನಲ್ಲಿ ಫುಟ್​ಬಾಲ್​ ಆಡುತ್ತಿರುವ ಫೋಟೋಗಳು ವೈರಲ್ ಆಗಿವೆ.

  • Share this:

ಭಾರತ ಕ್ರಿಕೆಟ್​ ತಂಡದ 'ಕೂಲ್ ಕ್ಯಾಪ್ಟನ್' ಎಂದೇ ಕರೆಸಿಕೊಂಡಿದ್ದ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಪಡೆಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿತ್ತು. ಆದರೆ, ಆ ಬಗ್ಗೆ ಧೋನಿ ಯಾವುದೇ ಸ್ಪಷ್ಟನೆಯನ್ನೂ ನೀಡಿರಲಿಲ್ಲ. ಕ್ರಿಕೆಟ್​ ಮೈದಾನದಿಂದ ಸದ್ಯಕ್ಕೆ ಹೊರಗುಳಿದಿರುವ ಎಂಎಸ್​ ಧೋನಿ ತಮ್ಮ ಕ್ರಿಕೆಟ್​ ಜೊತೆಗಾರರನ್ನು ಬಿಟ್ಟು ಬಾಲಿವುಡ್​ ತಾರೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಇದೇನಿದು? ಸೇನೆಯ ಯೂನಿಫಾರಂ ಧರಿಸಿ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದ್ದ ಧೋನಿ ಈಗ ಬಾಲಿವುಡ್​ನಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರಾ? ಎಂದೆಲ್ಲ ಯೋಚನೆ ಮಾಡಬೇಡಿ. ಬ್ಯಾಟಿನಿಂದ ಕ್ರಿಕೆಟ್​ ಚೆಂಡನ್ನು ಆಕಾಶಕ್ಕೆ ಚಿಮ್ಮಿಸುತ್ತಿದ್ದ ಧೋನಿ ಫುಟ್​ಬಾಲ್​ ಆಟವಾಡಿ ಮಜಾ ಮಾಡಿದ್ದಾರೆ. ಇವರಿಗೆ ಕಂಪನಿ ಕೊಟ್ಟವರು ಬಾಲಿವುಡ್ ತಾರೆಯರು ಎನ್ನುವುದು ವಿಶೇಷ.

(VIDEO): ನೋ ಬಾಲ್ ಅಲ್ಲ: ಅರ್ಧಶತಕದ ಬೆನ್ನಲ್ಲೆ ಕ್ಯಾಚ್ ಔಟ್ ಆಗಿದ್ದ ರೋಹಿತ್ ನಾಟೌಟ್ ಆಗಿದ್ದೇಗೆ?

ಐಸಿಸಿ ವಿಶ್ವಕಪ್​ನಲ್ಲಿ ಭಾರತ ತಂಡ ಸೆಮಿಫೈನಲ್​ನಲ್ಲಿ ಸೋಲನ್ನು ಅನುಭವಿಸಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲೂ ಭಾಗಿಯಾಗಿಲ್ಲ. 15 ದಿನಗಳ ಭಾರತೀಯ ಸೇನಾ ತರಬೇತಿಗಾಗಿ ಕಾಶ್ಮೀರಕ್ಕೆ ತೆರಳಿದ್ದ ದೋನಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದಿಂದ ತಾವಾಗಿಯೇ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಸರಣಿಗೂ ಧೋನಿ ಮರಳಿರಲಿಲ್ಲ. ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಹೊರಗುಳಿದ ಧೋನಿ ರಜೆ ವಿಸ್ತರಿಸಿದ್ದಾರೆ.




 




View this post on Instagram




 

Mahiya with his first love #football #MSDhoni #Dhoni #Mumbai


A post shared by MS Dhoni / Mahi7781 (@msdhonifansofficial) on





ಸದ್ಯಕ್ಕೆ ರಜೆಯನ್ನು ಎಂಜಾಯ್ ಮಾಡುತ್ತಿರುವ ಎಂಎಸ್​ ಧೋನಿ ಜಮ್ಮು ಕಾಶ್ಮೀರದಿಂದ ಕಳೆದ ತಿಂಗಳೇ ವಾಪಾಸಾಗಿದ್ದಾರೆ. ತಮ್ಮ ಬಾಲಿವುಡ್​ ಗೆಳೆಯರಾದ ಅರ್ಜುನ್ ಕಪೂರ್ ಮುಂತಾದವರ ಜೊತೆ ಮುಂಬೈನಲ್ಲಿ ಫುಟ್​ಬಾಲ್​ ಆಡುತ್ತಿರುವ ಫೋಟೋಗಳು ಈಗ ವೈರಲ್ ಆಗಿವೆ. ಧೋನಿ ಫುಟ್​ಬಾಲ್ ಆಡುತ್ತಿರುವ ವಿಡಿಯೋವನ್ನು ಅವರ ಅಭಿಮಾನಿಗಳ ಇನ್​ಸ್ಟಾಗ್ರಾಂ ಪೇಜಿನಲ್ಲಿ ಅಪ್​ಲೋಡ್ ಮಾಡಲಾಗಿದೆ. ಈ ಮೂಲಕ ಧೋನಿ ಕ್ರಿಕೆಟ್​ನಲ್ಲಿ ಮಾತ್ರವಲ್ಲ ಫುಟ್​ಬಾಲ್​ನಲ್ಲೂ ಎಕ್ಸ್​ಪರ್ಟ್​ ಎಂಬುದನ್ನು ಸಾಬೀತುಪಡಿಸಿದ್ದಾರೆ.


First published: