ಕಾಜಲ್​ ಅಗರ​ವಾಲ್​ಗೆ ಸಾರ್ವಜನಿಕವಾಗಿ ಮುತ್ತಿಟ್ಟವರು ಯಾರು?

Anitha E | news18
Updated:November 15, 2018, 7:15 PM IST
ಕಾಜಲ್​ ಅಗರ​ವಾಲ್​ಗೆ ಸಾರ್ವಜನಿಕವಾಗಿ ಮುತ್ತಿಟ್ಟವರು ಯಾರು?
  • News18
  • Last Updated: November 15, 2018, 7:15 PM IST
  • Share this:
ನ್ಯೂಸ್​ 18 ಕನ್ನಡ 

ನಟಿ ಕಾಜಲ್​ ಅಗರ್​ವಾಲ್​ ಬಾಲಿವುಡ್​ನಲ್ಲಿ ಮಾಡಿರುವುದು ಬೆರಳೆಣಿಕೆ ಸಿನಿಮಾಗಳಾದರೂ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಸ್ಟಾರ್​ ನಟಿ. ವಿವೇಕ್​ ಒಬೆರಾಯ್​ ಹಾಗೂ ಐಶ್ವಯಾ ರೈ ಜತೆ ಬಾಲಿವುಡ್​ನಲ್ಲಿ ಮೊದಲ ಸಿನಿಮಾ ಮಾಡಿದ್ದ ಕಾಜಲ್​ ತೆಲುಗು ಹಾಗೂ ತಮಿಳಿನಲ್ಲಿ ಸೂಪರ್​ ಸ್ಟಾರ್​ಗಳ ಜತೆ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದೀಪಿಕಾ-ರಣವೀರ್​ ವಿವಾಹದ ಫೋಟೋ ಹಾಗೂ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ...

ರಣದೀಪ್​ ಹುಡ ಜತೆ ಅಭಿನಯಿಸಿರುವ 'ದೊ ಲಫ್ಜೋಂಕಿ ಕಹಾನಿ' ಸಿನಿಮಾ ಇದೇ ವರ್ಷ ತೆರೆ ಕಂಡಿದ್ದು, ಇದಾದ ನಂತರ ಯಾವುದೇ ಹಿಂದಿ ಸಿನಿಂಆದಲ್ಲಿ ಅವರ ಕಾಣಿಸಿಕೊಂಡಿಲ್ಲ. ಆದರೆ ಈಗ ಅವರು ಸಿನಿಮಾವೊಂದರ ಟೀಸರ್​ನಿಂದಾಗಿ ತುಂಬಾ ಸುದ್ದಿಯಲ್ಲಿದ್ದಾರೆ.

ಹೌದು ಇತ್ತೀಚೆಗೆ ನಡೆದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಕಾಜಲ್​ ಅವರಿಗೆ ವಿಶೇಷ ವ್ಯಕ್ತಿಯೊಬ್ಬರು ಬಂದು ಇದ್ದಕ್ಕಿದ್ದಂತೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

 


 
View this post on Instagram
 

@kajalaggarwal.offl ♥️


A post shared by KAJAL AGGARWAL ♥️ (@kajalaggarwal.offl) on


ಹೈದರಾಬಾದ್​ನಲ್ಲಿ ಕಾಜಲ್​ ಅಗರ್​ವಾಲ್​ ಅಭಿನಯದ ಹೊಸ ಸಿನಿಮಾ 'ಕವಚಂ'ನ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಕಾಜಲ್​ ತಮ್ಮ ಸಹ ಕಲಾವಿದ ಚೋಟಾ ನಾಯ್ಡು ಅವರ ಬಗ್ಗೆ ಮಾತನಾಡುತ್ತಾ ಅವರನ್ನು ವೇದಿಕೆಗೆ ಕರೆದಿದ್ದರು. ಅಲ್ಲಿಗೆ ಬಂದ ಚೋಟಾ ನಾಯ್ಡು ಕಾಜಲ್​ ಅವರನ್ನು ಆಲಂಗಿಸಿಕೊಂಡು ಮುತ್ತಿಟ್ಟರು.

ಚೋಟಾ ನಾಯ್ಡು ಮುತ್ತಿಟ್ಟಾಗ ಒಂದು ಕ್ಷಣ ಮೂಕವಿಸ್ಮಿತರಾದ ಕಾಜಲ್​, ಕೂಡಲೇ ಚೋಟೆ ನಮ್ಮ ಕುಟುಂಬದವರಿದ್ದಂತೆ ಎಂದು ಪರಿಸ್ಥಿತಿಯನ್ನು ಸಂಭಾಳಿಸಿದರು.

First published:November 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading