Viral Video: ಮೌನಿ ರಾಯ್‌ ಬಳಿಕ ನಟಿ ಮಲ್ಲಿಕಾ ಶೆರಾವತ್ ವಿಡಿಯೋ ವೈರಲ್..!

ಮೌನಿ ಕಾರಿನಲ್ಲಿ ಕುಳಿತುಕೊಳ್ಳಲು ಕಾರಿನ ಬಾಗಿಲನ್ನು ತೆರೆದ ತಕ್ಷಣ, ಅವರ ಹಾಲ್ಟರ್ ಕುತ್ತಿಗೆ ಉಡುಪಿನ ಒಂದು ಭಾಗ ಜಾರಿದ್ದು, ಈ ಮುಜುಗರದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇಂತಹದೇ ಘಟನೆ ಅಲ್ಲದೆ ಇದ್ದರೂ, ತಾವು ಹಾಕಿದ ಬಟ್ಟೆಯಲ್ಲಿ ಒಳವಸ್ತ್ರ ಕಾಣುತ್ತಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿ ಇಲ್ಲೊಬ್ಬ ನಟಿಯು  ಮುಜುಗರಕ್ಕೆ ಒಳಗಾಗಿದ್ದಾರೆ.

ಮಲ್ಲಿಕಾ ಶೆರಾವತ್

ಮಲ್ಲಿಕಾ ಶೆರಾವತ್

  • Share this:
ಕೆಲವೊಮ್ಮೆ ಈ ಚಲನಚಿತ್ರ ನಟಿಯರು ತಾವು ತುಂಬಾ ಚೆನ್ನಾಗಿ ಕಾಣಬೇಕೆಂದು ವಿಭಿನ್ನವಾದ ವಿನ್ಯಾಸಿತ ಉಡುಪಗಳನ್ನು ಧರಿಸಿ ಎಡವಟ್ಟು ಮಾಡಿಕೊಂಡು ಮುಜುಗರದ ಕ್ಷಣಗಳನ್ನು ಅನುಭವಿಸಿದ್ದು ನಾವೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತಹ ವೀಡಿಯೋ ತುಣುಕುಗಳಲ್ಲಿ ನೋಡಿರುತ್ತೇವೆ. ಕೆಲವು ದಿನಗಳ ಮುಂಚೆಯೇ ನಟಿ ಮೌನಿ ರಾಯ್ ಇದೇ ರೀತಿಯಾಗಿ ವಿಭಿನ್ನವಾಗಿ ಉಡುಪನ್ನು ಧರಿಸಿಕೊಂಡು  ಬಂದು ಛಾಯಾಗ್ರಾಹಕರಿಗೆ ಪೋಸ್ ನೀಡಿ, ನಂತರ ಅವರು ಹಾಕಿದಂತಹ ಬಟ್ಟೆಯು ಕುತ್ತಿಗೆ ಭಾಗದಿಂದ ಸ್ವಲ್ಪ ಕೆಳಕ್ಕೆ ಜಾರಿ ತಮ್ಮ ಕಾರಿನ ಕಡೆಗೆ ಓಡಿದಂತಹ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು.

ಮೌನಿ ಕಾರಿನಲ್ಲಿ ಕುಳಿತುಕೊಳ್ಳಲು ಕಾರಿನ ಬಾಗಿಲನ್ನು ತೆರೆದ ತಕ್ಷಣ, ಅವರ ಹಾಲ್ಟರ್ ಕುತ್ತಿಗೆ ಉಡುಪಿನ ಒಂದು ಭಾಗ ಜಾರಿದ್ದು, ಈ ಮುಜುಗರದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇಂತಹದೇ ಘಟನೆ ಅಲ್ಲದೆ ಇದ್ದರೂ, ತಾವು ಹಾಕಿದ ಬಟ್ಟೆಯಲ್ಲಿ ಒಳವಸ್ತ್ರ ಕಾಣುತ್ತಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿ ಇಲ್ಲೊಬ್ಬ ನಟಿಯು  ಮುಜುಗರಕ್ಕೆ ಒಳಗಾಗಿದ್ದಾರೆ.
ಪ್ರಸಿದ್ಧ ಛಾಯಾಗ್ರಾಹಕ ವೈರಲ್ ಭಯಾನಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಲ್ಲಿಕಾ ಶೆರಾವತ್​ ಛಾಯಾಗ್ರಾಹಕರ ಗುಂಪನ್ನು ನೋಡಿ ತನ್ನ ಕಾರಿನಿಂದ ಹೊರ ಬಂದು ಅವರಿಗೆ ಪೋಸ್ ನೀಡುತ್ತಾರೆ. ಅವರು ಫೋಟೋಗಳನ್ನು ಕ್ಲಿಕ್ಕಿಸಲು ನಟಿಯನ್ನು ಹಿಂಬಾಲಿಸುತ್ತಿದ್ದಾರೆ ಎಂದು ಛಾಯಾಗ್ರಾಹಕರು ಹೇಳುವುದನ್ನು ಕೇಳಬಹುದು. ಅದಕ್ಕೆ ಮಲ್ಲಿಕಾ 'ನೀವು ನಿಜವಾಗಿಯೂ ನನ್ನ ಫೋಟೋ ಕ್ಲಿಕ್ಕಿಸಲು ನನ್ನನ್ನು ಹಿಂಬಾಲಿಸುತ್ತಿದ್ದೀರಾ' ಎಂದು ಕೇಳಿಯೇ ಬಿಟ್ಟರು.

ಇದನ್ನೂ ಓದಿ: Ponniyin Selvan: ಮಣಿರತ್ನಂ ನಿರ್ದೇಶನದ ಸಿನಿಮಾ ಶೂಟಿಂಗ್​ನಲ್ಲಿ ಅವಘಡ: ಎಫ್​ ಐಆರ್​ ದಾಖಲು

ವಿಡಿಯೋದಲ್ಲಿ ಮಲ್ಲಿಕಾ ತುಂಬಾ ಸಂತೋಷವಾಗಿ ಕಾಣುತ್ತಿದ್ದು, ಅವರ ಸಡಿಲವಾದ ಉಡುಗೆಯೇ ನೆಟ್ಟಿಗರ ಗಮನ ಸೆಳೆಯಿತು. ಮಲ್ಲಿಕಾ ಸ್ಟ್ರಾಪಿ ಮ್ಯಾಕ್ಸಿ ಉಡುಪನ್ನು ಧರಿಸಿದ್ದರು. ಉಡುಗೆ ಸ್ವಲ್ಪ  ಸಡಿಲವಾಗಿತ್ತು. ಹಾಗಾಗಿ ಅವರ ಒಳ ಉಡುಪು ಕಾಣುತ್ತಿದ್ದು, ಅದನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಆ ಕ್ಷಣ ಮುಜುಗರದ ಕ್ಷಣವಾಗಿತ್ತು ಎಂದು ಹೇಳಬಹುದು.

ಮಲ್ಲಿಕಾ ಯಾವುದೇ ಪ್ರತಿಕ್ರಿಯೆ ನೀಡದೆ ತುಂಬಾ ಶಾಂತವಾಗಿ ತನ್ನ ಬ್ಯಾಗ್‌ ತೆಗೆದುಕೊಂಡು ಉಡುಪಿನ ಬದಿಯನ್ನು ಮುಚ್ಚಿಕೊಂಡರು. ಈ ವಿಡಿಯೋ ಕ್ಷಣಾರ್ಧದಲ್ಲಿ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Raayan Raj Sarja: ಚಿರು ಸರ್ಜಾ-ಮೇಘನಾ ರಾಜ್​ ಮಗನ ಹೆಸರು ರಾಯನ್ ರಾಜ್ ಸರ್ಜಾ: ಹೆಸರಿನ ಅರ್ಥ ಹೀಗಿದೆ..!

ಈ ವೈರಲ್ ವೀಡಿಯೋ ನೋಡಿದ ನೆಟ್ಟಿಗರು 'ಸಭ್ಯ ಬಟ್ಟೆಗಳನ್ನು' ಧರಿಸದ ಕಾರಣ ನಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.  "ಈ ನಟಿಯು ಸಾಮಾನ್ಯ ಸಭ್ಯ ಬಟ್ಟೆಗಳನ್ನು ಏಕೆ ಧರಿಸಲು ಸಾಧ್ಯವಿಲ್ಲ" ಎಂದು ಇನ್ಸ್ಟಾಗ್ರಾಮ್ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು ಇದನ್ನು ನೋಡಿ "ಅನುಚಿತ" ಎಂದು ಬರೆದಿದ್ದಾರೆ.

ಇದನ್ನೂ ಓದಿ: Tamannaah Bhatia: ಕರೀನಾ ಕಪೂರ್​ ನಂತರ ತಮ್ಮ ಪುಸ್ತಕ ಹೊರ ತಂದ ತಮನ್ನಾ ಭಾಟಿಯಾ..!

ಕೋವಿಡ್-19ನಿಂದಾಗಿ ದೀರ್ಘಕಾಲದವರೆಗೆ ಅಮೆರಿಕದಲ್ಲಿ ನೆಲೆಸಿದ್ದು, ವಾರಗಳ ಹಿಂದೆ ಪ್ಯಾರಿಸ್‌ಗೆ ಭೇಟಿ ನೀಡಿದ್ದ ನಟಿ ಮಲ್ಲಿಕಾ ಶೆರಾವತ್ ಇತ್ತೀಚೆಗೆ ಭಾರತಕ್ಕೆ ಮರಳಿದ್ದರು. ಮಲ್ಲಿಕಾ ತಮ್ಮ ಚಲನಚಿತ್ರಗಳಿಂದ ಈಗ ಸುದ್ದಿಯಲ್ಲಿ ಇಲ್ಲದಿದ್ದರೂ, ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿಹಾಟ್ ಫೋಟೋಗಳು ಮತ್ತು ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ.
ನಟಿ ಮಲ್ಲಿಕಾ ಸದ್ಯಕ್ಕೆ ಯಾವುದೇ ಚಲನಚಿತ್ರದಲ್ಲಿ ನಟಿಸದೆ ಇದ್ದರೂ, ಝೀ ಟಿವಿಯಲ್ಲಿ ಬರುವಂತಹ ಹಾಸ್ಯ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published by:Anitha E
First published: