Manike Mage Hithe ಹಾಡಿಗೆ ಮನಸೋತ ಮಲೆಯಾಳಂ ನಟ Prithviraj Sukumaran

ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್, 'ಮನಿಕೆ ಮಗೆ ಹಿತೆ' ಹಾಡಿಗೆ ಕಾಜನ್​ ತಾಳವಾದ್ಯವನ್ನು  ಬಾರಿಸುತ್ತಾ ಖುಷಿ ಪಡುತ್ತಿರುವ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಲೆಯಾಳಂ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್

ಮಲೆಯಾಳಂ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್

  • Share this:
ಶ್ರೀಲಂಕಾದ ವೈರಲ್​ ಹಾಡು (Viral Song) 'ಮನಿಕೆ ಮಗೆ ಹಿತೆ' (Manike Mage hithe)ಹಾಡಿಗೆ ತಲೆದೂಗದವರಿಲ್ಲ. ಈ ಹಾಡು ಈಗ ಜಗತ್ತಿನಾದ್ಯಂತ ಜನಪ್ರಿಯವಾಗಿದ್ದು, ದಿನ ಕಳೆದಂತೆ ಈ ಹಾಡಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಸ್ವತಃ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಕೂಡ 'ಮನಿಕೆ ಮಗೆ ಹಿತೆ' ಹಾಡಿಗೆ ತಲೆದೂಗುತ್ತಾ ತಾಳ ಹಾಕುತ್ತಿರುವುದು ಕೂಡ ಇತ್ತೀಚೆಗೆ ಸಾಮಾನ್ಯವಾಗಿದೆ. ಅಮಿತಾಭ್​ ಬಚ್ಚನ್​ (Amithabh Bachchan) ಅವರೂ ಸಹ ಈ ಹಾಡು ವೈರಲ್ ಆಗುತ್ತಿದ್ದಂತೆಯೇ ತಮ್ಮ ಹಳೇ ಸಿನಿಮಾದ ಹಾಡಿನ ವಿಡಿಯೋಗೆ  'ಮನಿಕೆ ಮಗೆ ಹಿತೆ'  ಹಾಡನ್ನು ಸೇರಿಸಿ ಇನ್​ಸ್ಟಾ ರೀಲ್ಸ್​ ಮಾಡಿದ್ದರು. ಈಗ ಅಂತಹ ಸೆಲೆಬ್ರಿಟಿಗಳ ಸಾಲಿಗೆ ಮಲೆಯಾಳಂ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj Sukumaran)​ ಸಹ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ಪೃಥ್ವಿರಾಜ್ ಸುಕುಮಾರನ್, 'ಮನಿಕೆ ಮಗೆ ಹಿತೆ' ಹಾಡಿಗೆ ಕಾಜನ್​ ತಾಳವಾದ್ಯವನ್ನು  ಬಾರಿಸುತ್ತಾ ಖುಷಿ ಪಡುತ್ತಿರುವ ವಿಡಿಯೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರ ಜೊತೆಗಿದ್ದ ಇನ್ನೊಬ್ಬ ಸ್ನೇಹಿತ ಆ ಹಾಡಿಗೆ ಡ್ರಮ್ ಬಾರಿಸುತ್ತಾ ಸಾಥ್ ನೀಡುತ್ತಿರುವುದನ್ನು ಕೂಡ ಆ ವಿಡಿಯೋದಲ್ಲಿ ಕಾಣಬಹುದು.ಈ ವಿಡಿಯೋದಲ್ಲಿ ಪೃಥ್ವಿರಾಜ್ ಸುಕುಮಾರನ್ ಸಂತೋಷದಿಂದ ತಲೆದೂಗುತ್ತಾ ಹಾಡಿಗೆ ತಾಳ ಹಾಕುತ್ತಿರುವುದನ್ನು ಕಂಡಾಗ, ನಟನಿಗೆ ಈ ಹಾಡು ಎಷ್ಟೊಂದು ಮೆಚ್ಚುಗೆ ಆಗಿದೆ ಎಂಬುವುದು ಅರಿವಾಗದೆ ಇರಲು ಸಾಧ್ಯವಿಲ್ಲ. ಅವರು ಆ ವಿಡಿಯೋಗೆ ಸ್ನೇಹಿತರ ಜೊತೆ ಅದ್ಭುತ ಸಂಗೀತ ಮತ್ತು ಅತ್ಯುತ್ತಮ ಭೋಜನ ಎಂಬ ಅಡಿಬರಹವನ್ನೂ ನೀಡಿದ್ದಾರೆ.

ಇದನ್ನೂ ಓದಿ: Manike Mage Hithe: ಮನಿಕೆ ಮಗೆ ಹಿತೆ ಎಂದು ಎಲ್ಲರ ಮನಸು ಕದ್ದ ಗಾಯಕಿ ಯೋಹಾನಿ ಡಿಸಿಲ್ವಾ ಸಂದರ್ಶನ

ಇತ್ತೀಚೆಗೆ ನಡೆದ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಲೂಸಿಫರ್ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಆ ಸಿನಿಮಾದಲ್ಲಿ ಮಲೆಯಾಳಂನ ಮೇರು ನಟ ಮೋಹನ್‍ಲಾಲ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅದೇ ಸಮಾರಂಭದಲ್ಲಿ, 2020ರಲ್ಲಿ ಬಿಡುಗಡೆ ಆದ ಥ್ರಿಲ್ಲರ್ ಸಿನಿಮಾ ಅಯ್ಯಪ್ಪನಮ್ ಕೋಶಿಯುಮ್ ಸಿನಿಮಾಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದರು. 38 ವರ್ಷದ ಪೃಥ್ವಿರಾಜ್ ಈ ಗೌರವಕ್ಕಾಗಿ ಸೈಮಾಗೆ ವಂದನೆ ಸಲ್ಲಿಸಿದ್ದಾರೆ.

ಪ್ರಸ್ತುತ ಪೃಥ್ವಿರಾಜ್ ತಮ್ಮ ಮುಂದಿನ ಚಿತ್ರ ಬ್ರೋ ಡ್ಯಾಡಿಯ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಇದೊಂದು ಕೌಟುಂಬಿಕ ಚಿತ್ರವಾಗಿದೆ ಎನ್ನಲಾಗುತ್ತಿದ್ದು, ಚಿತ್ರದಲ್ಲಿ ಪೃಥ್ವಿರಾಜ್ ಜೊತೆ, ಮೋಹನ್ ಲಾಲ್, ಕಲ್ಯಾಣಿ ಪ್ರಿಯದರ್ಶನ್, ಮೀನಾ, ಲಾಲು ಅಲೆಕ್ಸ್, ಮುರಳಿ ಗೋಪಿ, ಕನಿಹ ಮತ್ತು ಸೌಬಿನ್ ಶಾಹಿರ್ ಅಭಿನಯಿಸುತ್ತಿದ್ದಾರೆ. ಶ್ರೀಜಿತ್ ಎನ್ ಮತ್ತು ಬಿಬಿನ್ ಮಲಿಯೆಕಲ್ ಈ ಸಿನಿಮಾದ ಚಿತ್ರಕಥೆಯನ್ನು ಬರೆದಿದ್ದು, ದೀಪಕ್ ದೇವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: Viral Song Manike Mage Hithe.. ಒರಿಜಿನಲ್ ಹಾಡು ನೋಡಿದ್ದೀರಾ: ಹಾಡಿದವರು ಯಾರು ಗೊತ್ತಾ..?

ಪೃಥ್ವಿರಾಜ್ ದಿವಂಗತ ನಟ ಸುಕುಮಾರನ್ ಮತ್ತು ಮಲ್ಲಿಕಾ ಪುತ್ರ. ಮಲ್ಲಿಕಾ ಕೂಡ ಬ್ರೋ ಡ್ಯಾಡಿಯ ಭಾಗವಾಗಲಿದ್ದಾರೆ. ಹಿರಿಯ ನಟಿ ಮಲ್ಲಿಕಾ ಉತ್ತರಾಯಣಂ, ತಮ್ಮಾರಥೋನಿ, ಸ್ವಪ್ನದಾನಂ ಮತ್ತು ಪಂಚವರ್ಣತತ್ತ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೋಹನ್‍ಲಾಲ್ ಚೊಚ್ಚಲ ನಿರ್ದೇಶನ ಸಿನಿಮಾ ಬರೋಜ್: ಗಾರ್ಡಿಯನ್ ಆಫ್ ಡಿಗಾಮಾಸ್ ಟ್ರೆಶರ್ ಎಂಬ ಚಿತ್ರದಲ್ಲೂ , ಪ್ರಥ್ವಿರಾಜ್ ಹಾಗೂ ಮೋಹನ್‍ಲಾಲ್ ಜೊತೆಯಾಗಿ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಅಭಿನಯದ ಹೊಸ ಚಿತ್ರ ಭ್ರಮಂ ಬಿಡುಗಡೆಗೆ ಸಿದ್ಧವಾಗಿದ್ದು, ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ಇದು ಆಯುಶ್ಮಾನ್ ಖುರಾನ ಅಭಿನಯದ ಬಾಲಿವುಡ್ ಚಿತ್ರ ಅಂಧಾಧುನ್‍ ರಿಮೇಕ್ ಆಗಿದೆ. ಸದ್ಯಕ್ಕೆ ಪೃಥ್ವಿರಾಜ್ ಕೈಯಲ್ಲಿ, ಕಡುವ, ಗೋಲ್ಡ್ ಮತ್ತು ಆಡು ಜೀವಿತಮ್ ಚಿತ್ರಗಳಿವೆ.
Published by:Anitha E
First published: