• Home
  • »
  • News
  • »
  • entertainment
  • »
  • Big Boss Season-9: ಬಿಗ್ ಬಾಸ್ ಮನೆಯಲ್ಲಿ ಸೈಕ್ ನವಾಜ್ ಎಂಟ್ರಿ- ಇನ್ನು ಇಲ್ಲಿ ಶುರು ಆಗುತ್ತೆ ಸೈಕಿಕ್ ಆಟ

Big Boss Season-9: ಬಿಗ್ ಬಾಸ್ ಮನೆಯಲ್ಲಿ ಸೈಕ್ ನವಾಜ್ ಎಂಟ್ರಿ- ಇನ್ನು ಇಲ್ಲಿ ಶುರು ಆಗುತ್ತೆ ಸೈಕಿಕ್ ಆಟ

ಸೈಕ್ ನವಾಜ್ ಬಿಗ್ ಬಾಸ್-09 ಎಂಟ್ರಿ

ಸೈಕ್ ನವಾಜ್ ಬಿಗ್ ಬಾಸ್-09 ಎಂಟ್ರಿ

ಸೈಕ್ ನವಾಜ್ ನಿಜಕ್ಕೂ ಸೂಪರ್ ಡೈಲಾಗ್ ಹೊಡೀತಾನೇ. ಈತನ ಪ್ರತಿಭೆ ಏನೂ ಅಂತ ಯಾರಾದರೂ ಕೇಳಿದ್ರೆ ಸಾಕು. ಈತನ ಕಥೆ ಕೇವಲ ಡೈಲಾಗ್ ಗೆ ಮಾತ್ರ ನಿಂತು ಬಿಡುತ್ತದೆ. ಇಂತಹ ವಿಚಿತ್ರ ಮಾತುಗಾರನಿಗೆ ಅವನ ಈ ಮಾತುಗಳೇ ಈಗ ಬಿಗ್ ಮನೆಗೆ ಎಂಟ್ರಿ ಕೊಡಿಸಿದೆ.

  • Share this:

ಬಿಗ್ ಬಾಸ್ (Big Boss Season-9) ಮನೆಯಲ್ಲಿ ಈಗಾಗಲೇ ಮೂರು ಜನರ ಎಂಟ್ರಿ ಆಗಿದೆ. ಅರುಣ್ ಸಾಗರ್ (Arun Sagar) ಮೊದಲ ಸ್ಪರ್ಧಿಯಾಗಿಯೇ ಎಂಟ್ರಿ ಕೊಟ್ಟರು. ಎರಡನೇ ಸ್ಪರ್ಧಿಯಾಗಿಯೇ ನಟಿ ಮಯೂರಿ ಬಿಗ್ ಮನೆ ಪ್ರವೇಶ ಮಾಡಿದರು. ಮೂರನೇ ಸ್ಪರ್ಧಿಯಾಗಿ ನಟಿ ದೀಪಿಕಾ ದಾಸ್ ಮನೆ ಒಳಗೆ ಹೋದರು. ಆದರೆ ನಾಲ್ಕನೆಯ ಸ್ಪರ್ಧಿ ಯಾರು ಗೊತ್ತೇ? ಹೌದು ಈ ಹೆಸರಲ್ಲಿಯೇ ಸೈಕೋತನ ಇದೆ. ಸೈಕ್ (Saik Nawaz)ಅಂದ್ರೆ ಅಂತಿಂತ ಸೈಕೋ ಅಲ್ಲ. ಮಾತಿಗೆ ನಿಂತರೇ ಸೈಕೋ ನವಾಜ್ ಹೆಸರು ಬಂದೇ ಬಿಡುತ್ತದೆ. ಅಷ್ಟು ಫೇಮಸ್ ಆಗಿರೊ ಸೈಕೋ ನವಾಜ್ ಬೇರೆ ಏನೂ ಮಾಡಲೇ ಇಲ್ಲ. ಮಾಡಿರೊದು ಕೇವಲ ಡೈಲಾಗ್ ಹೊಡೆಯೋದು. ಅದು ಅಲ್ಲಿ ಇಲ್ಲಿ ಅಲ್ಲವೇ ಅಲ್ಲ. ಸಿನಿಮಾ ನೋಡಿ ಬಂದು ಥಿಯೇಟರ್ (Theater)​ ಹೊರಗಡೆನೇ ಚಾನೆಲ್ ಗಳ ಮೈಕ್ ಮುಂದೆ ನಿಂತು ಡೈಲಾಗ್ ಹೊಡೆದಿದ್ದೇ ಬಂತು. ಅಲ್ಲಿಂದಲೇ ಈಗ ನೇರವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿದೆ.

ಸೈಕ್ ನವಾಜ್ ಸೂಪರ್ ಡೈಲಾಗ್-ಕಿಚ್ಚ ಕೂಡ ಫುಲ್ ಬೋಲ್ಡ್
ಸೈಕ್ ನವಾಜ್ ನಿಜಕ್ಕೂ ಸೂಪರ್ ಡೈಲಾಗ್ ಹೊಡೀತಾನೇ. ಈತನ ಪ್ರತಿಭೆ ಏನೂ ಅಂತ ಯಾರಾದರೂ ಕೇಳಿದ್ರೆ ಸಾಕು. ಈತನ ಕಥೆ ಕೇವಲ ಡೈಲಾಗ್ ಗೆ ಮಾತ್ರ ನಿಂತು ಬಿಡುತ್ತದೆ. ಇಂತಹ ವಿಚಿತ್ರ ಮಾತುಗಾರನಿಗೆ ಅವನ ಈ ಮಾತುಗಳೇ ಈಗ ಬಿಗ್ ಮನೆಗೆ ಎಂಟ್ರಿ ಕೊಡಿಸಿದೆ.


ಹೌದು, ಸೈಕ್ ನವಾಜ್ ಸೂಪರ್ ಬಿಡಿ. ಒಳ್ಳೆ ಅವಕಾಶವನ್ನೇ ಪಡೆದಿದ್ದಾನೆ. ಬಿಗ್ ಮನೆಗೆ ಹೋಗದು ಅಂದ್ರೆ ಸುಮ್ನೇನಾ, ಅದು ಕೇವಲ ಡೈಲಾಗ್ ಹೊಡೆದು ಹೋಗಲು ಸಾಧ್ಯವೇ? ಇಲ್ಲ ಬಿಡಿ.


ಸೈಕ್ ನವಾಜ್ ಥಿಯೇಟರ್ ಮುಂದೆ ತನ್ನದೇ ಸ್ಟೈಲ್ ಅಲ್ಲಿ ಆಯಾ ಸಿನಿಮಾದ ಡೈಲಾಗ್ ಹೊಡೆದೇ ಬಿಡುತ್ತಿದ್ದನು. ಅದನ್ನ ಕಂಡ ಅನೇಕರು ತುಂಬಾ ಖುಷಿ ಪಡುತ್ತಿದ್ದರು. ಆಗಲೇ ನೋಡಿ ಈ ಸೈಕ್ ನವಾಜ್ ವೈರಲ್ ಆಗಿರೋದು.


Viral Saik Nawaz Now Entered Big Boss-09 Kannada
ಬಿಗ್ ಬಾಸ್ ಮನೆಗೆ ಸೈಕ್ ನವಾಜ್ ಎಂಟ್ರಿ


ಸೈಕ್ ನವಾಜ್ ಬಿಗ್ ಬಾಸ್ ಎಂಟ್ರಿ ಹೇಗಿತ್ತು ಗೊತ್ತೇ?
ಇಂತಹ ಸೈಕ್ ನವಾಜ್ ಬಿಗ್ ಬಾಸ್-ಸೀಸನ್ 09 ರ ಆಟಕ್ಕಾಗಿಯೇ ಬಿಗ್ ಮನೆಗೆ ಎಂಟ್ರಿ ಕೊಟ್ಟು ಬಿಟ್ಟಿದ್ದಾನೆ. ಆದರೆ ವೇದಿಕೆ ಮೇಲೆ ಬಂದ ಈ ಸೈಕ್ ನವಾಜ್ ನಾರ್ಮಲ್ ಆಗಿಯೇ ಇದ್ದನು. ಸೈಕ್ ರೀತಿ ಏನೂ ಆಡಲಿಲ್ಲ.


ಇದನ್ನೂ ಓದಿ: Bigg Boss Season 9: ರೇಡಿಯೋ ಜಾಕಿ ರೂಪೇಶ್ ಶೆಟ್ಟಿ-ಜ್ಯೋತಿಷಿ ಆರ್ಯವರ್ಧನ್ ಬಿಗ್ ಬಾಸ್ ಎಂಟ್ರಿ


ಇದರ ಹೊರತಾಗಿ ನಾರ್ಮಲ್ ಆಗಿಯೇ ಸೈಕ್ ನವಾಜ್ ಕಿಚ್ಚನ ಮುಂದೆ ಸಖತ್ ಕೂಲ್ ಆಗಿಯೇ ಇದ್ದನು. ಕಿಚ್ಚ ಹೇಳಿದಾಗಲೇ ಸೈಕ್ ನವಾಜ್,ಸೈಕ್ ಡೈಲಾಗ್ ಹೇಳಿರೋದು.


Viral Saik Nawaz Now Entered Big Boss-09 Kannada
ಬಿಗ್ ಬಾಸ್ ಮನೆಗೆ ಹೋದ ಸೈಕ್ ನವಾಜ್


ಬಿಗ್ ಬಾಸ್ ಗೆ ಹೋಗ್ತಿರೋದು ನನ್ನ ಪುಣ್ಯ ಎಂದ ಸೈಕ್ ನವಾಜ್
ಸೈಕ್ ನವಾಜ್ ನೀವು ಬಿಗ್ ಬಾಸ್ ಮನೆಗೆ ಬಂದಿದ್ದೀರಾ, ಹೇಗೆ ಅನಿಸುತ್ತದೆ ಅಂತ ಕೇಳಿದ್ರೆ, ಇದು ಪುಣ್ಯ ಸಾರ್, ಮತ್ತೇನೂ ಇಲ್ಲ ಅಂತಲೇ ಸೈಕ್ ನವಾಜ್ ಹೇಳಿದ್ದಾನೆ. ಸೈಕ್ ಅಂತಲೇ ಯಾಕೆ ಕರೆಯುತ್ತಾರೆ ಅಂತ ಕೇಳಿದ್ರೆ, ಎಲ್ಲರೂ ಹಾಗೆ ಹೇಳೋದು ಸರ್ ಅಂತಲೇ ನವಾಜ್ ಹೇಳಿ ಮಾತು ಮುಗಿಸುತ್ತಾನೆ.


ಇದನ್ನೂ ಓದಿ: Bigg Boss Season 9: ಬಿಗ್​ಬಾಸ್ ಮನೆಗೆ ಅನುಪಮಾ ಗೌಡ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್ ಎಂಟ್ರಿ


ಸೈಕ್ ನವಾಜ್ ಮನೆಯಲ್ಲಿ ನಾರ್ಮಲ್ ಆಗಿಯೇ ಇರುತ್ತಾನೆ. ನವಾಜ್ ತಂದೆ ಮತ್ತು ತಾಯಿ ಈ ವೇಳೆ ನವಾಜ್ ಬಗ್ಗೆ ಮಾತನಾಡಿದರು. ತಮ್ಮದೇ ರೀತಿಯಲ್ಲಿಯೇ ತಮ್ಮ ಮಗ ಸೈಕ್ ನವಾಜ್ ಗೆ ಶುಭ ಕೋರಿದರು.

First published: