SSLC Exam:10ನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪುಷ್ಪಾ ಚಿತ್ರದ ಡೈಲಾಗ್..!

ಇಲ್ಲೊಬ್ಬ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಬೋರ್ಡ್ ಪರೀಕ್ಷೆಯಲ್ಲಿ ಒಂದು ಹಿಟ್ ಚಿತ್ರದ ಡೈಲಾಗ್ ಅನ್ನು ಬರೆದು ಬಂದಿದ್ದಾನೆ.

ಎಸ್​ಎಸ್​ಎಲ್​ಸಿ ಉತ್ತರ ಪತ್ರಿಕೆ

ಎಸ್​ಎಸ್​ಎಲ್​ಸಿ ಉತ್ತರ ಪತ್ರಿಕೆ

  • Share this:
ಸಾಮಾನ್ಯವಾಗಿ ಶಾಲೆಗೆ (School) ಮತ್ತು ಕಾಲೇಜಿಗೆ (College) ಓದಲು ಹೋಗುವ ಹುಡುಗರು ಹಾಗೂ ಹುಡುಗಿಯರು ಯಾವುದಾದರೂ ತಮ್ಮ ನೆಚ್ಚಿನ ನಟ ಮತ್ತು ನಟಿಯರ ಚಲನಚಿತ್ರವನ್ನು ನೋಡಿ ಬಂದರೆ ಸಾಕು, ಮಾರನೆಯ ದಿನ ಅವರಂತೆಯೇ ಡ್ರೆಸ್ ಮಾಡಿಕೊಳ್ಳುವುದು, ಅವರಂತೆಯೇ ತಮ್ಮ ಕೂದಲುಗಳನ್ನು ಬಾಚುವುದು ಮತ್ತು ಆ ಚಿತ್ರದ ಡೈಲಾಗ್‌ಗಳನ್ನು ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ತಮ್ಮ ಸ್ನೇಹಿತರ (Friends) ಮುಂದೆ ಸ್ಟೈಲ್ ಆಗಿ ಹೇಳುವುದು ಮತ್ತು ಮುಖ್ಯವಾಗಿ ಆ ಚಿತ್ರದ ಇಷ್ಟವಾದ ಹಾಡುಗಳನ್ನು ಪದೇ ಪದೇ ಹಾಡುತ್ತಲೇ ಇರುತ್ತಾರೆ. ಹೀಗೆ ಈ ಸಿನಿಮಾ ಎನ್ನುವುದು ಈ ಹುಡುಗ ಮತ್ತು ಹುಡುಗಿಯರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ನೋಡಿ. ಕೆಲವೊಮ್ಮೆ ಅಂತೂ ಪರೀಕ್ಷೆಯಲ್ಲಿ (Exam) ಏನು ಬರೆದೆ ಎಂದು ಕೇಳಿದರೆ ಒಂದು ಪ್ರಶ್ನೆಗೆ ಉತ್ತರ ಗೊತ್ತಿರಲಿಲ್ಲ, ಅದಕ್ಕೆ ಯಾವುದೋ ಒಂದು ಚಿತ್ರದ ಹಾಡಿನ ಸಾಲುಗಳನ್ನು ಬರೆದು ಬಂದೆ ಎಂದು ಹೇಳುವುದನ್ನು ನಾವು ನಮ್ಮ ಸ್ನೇಹಿತರ ಬಾಯಿಂದ ಒಮ್ಮೆಯಾದರೂ ಕೇಳಿರುತ್ತೇವೆ.

ಅಯ್ಯೋ ಈಗೇಕೆ ಇದನ್ನೆಲ್ಲಾ ಮಾತಾಡುತ್ತಿದ್ದೇವೆ ಎಂದು ನಿಮಗೆ ಅನ್ನಿಸಬಹುದು. ಹೌದು, ವಿಷಯ ಇದೆ ಇಲ್ಲೊಬ್ಬ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಬೋರ್ಡ್ ಪರೀಕ್ಷೆಯಲ್ಲಿ ಒಂದು ಹಿಟ್ ಚಿತ್ರದ ಡೈಲಾಗ್ ಅನ್ನು ಬರೆದು ಬಂದಿದ್ದಾನೆ. ಸುಮಾರು ಭಾಷೆಗಳಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪಾ’ ಬಿಡುಗಡೆಯಾಗಿ ಹಿಟ್ ಚಿತ್ರವಾದದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

10ನೇ ತರೆಗತಿ ಪರೀಕ್ಷೆಯಲ್ಲಿ ಪುಷ್ಪ ಡೈಲಾಗ್:

ಈ ಚಿತ್ರದಲ್ಲಿನ ಡೈಲಾಗ್‌ಗಳು ಮತ್ತು ಹಾಡುಗಳೆಲ್ಲವೂ ತುಂಬಾನೇ ವೈರಲ್ ಆಗಿದ್ದವು. ಈ ಚಿತ್ರದ ಡೈಲಾಗ್ ಈಗ ಪಶ್ಚಿಮ ಬಂಗಾಳದ 10ನೇ ತರಗತಿ ಪರೀಕ್ಷೆಗಳ ಮೇಲೆ ತನ್ನ ಜಾದೂ ತೋರಿಸಿದೆ ನೋಡಿ. ಈ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ 'ಪುಷ್ಪಾ, ಪುಷ್ಪಾ ರಾಜ್, ಅಪುನ್ ಲಿಖೇಗಾ ನಹಿ' (ಪುಷ್ಪಾ, ಪುಷ್ಪಾ ರಾಜ್, ನಾನು ಬರೆಯುವುದಿಲ್ಲ) ಬರೆದು ಹೋಗಿದ್ದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: Pushpa: ಇನ್ನೂ ಕಡಿಮೆಯಾಗಿಲ್ಲ ಪುಷ್ಪ ಕ್ರೇಜ್​.. ಗ್ರೌಂಡ್​ನಲ್ಲೇ `ತಗ್ಗೆದೆಲೆ’ ಎಂದ ಕಿಂಗ್​ ಕೊಹ್ಲಿ! ವಿಡಿಯೋ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್:

ಈ ವೈರಲ್ ಆದ 'ಪುಷ್ಪ ರಾಜ್' ಉತ್ತರ ಪತ್ರಿಕೆಯ ಬಗ್ಗೆ ಶೈಕ್ಷಣಿಕ ತಜ್ಞರು ತುಂಬಾನೇ ಕಳವಳ ವ್ಯಕ್ತಪಡಿಸಿದ್ದಾರೆ, ಇನ್ನು ಜನರು ಹೆಚ್ಚಾಗಿ ಈ ಘಟನೆಯನ್ನು ನೋಡಿ ಆನಂದಿಸಿದ್ದಾರೆ ಮತ್ತು ಅದನ್ನು ತಮಾಷೆಯಾಗಿ ಹಂಚಿಕೊಂಡಿದ್ದಾರೆ. ಆಸಕ್ತಿದಾಯಕವಾಗಿ, ಅನೇಕರು ಈ ಡೈಲಾಗ್‌ಗೆ ಸರಿ ಹೊಂದುವ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸಹ ಮಾಡಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ಎಂದು ಹೇಳಬಹುದು.

ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರವು ಬಿಡುಗಡೆಯಾದ ಸಂದರ್ಭದಲ್ಲಿ ಇಡೀ ದೇಶದಲ್ಲಿಯೇ ಒಂದು ರೀತಿಯ ಬಿರುಗಾಳಿ ಎಬ್ಬಿಸಿತ್ತು ಎಂದು ಅನೇಕ ಅಭಿಮಾನಿಗಳಿಗೆ ತಿಳಿದಿದೆ. ನಟ ಈ ಡೈಲಾಗ್ ಹೇಳಿದ ಶೈಲಿ ಸಾಕಷ್ಟು ಮೆಚ್ಚುಗೆಯನ್ನು ಪಡೆಯಿತು. ಆದರೆ ಈ ಡೈಲಾಗ್‌ಗಳು ಈ ರೀತಿಯಾಗಿ 10ನೇ ತರಗತಿ ಪರೀಕ್ಷೆಗಳ ಉತ್ತರ ಪತ್ರಿಕೆಯಲ್ಲಿ ಬರಬಹುದು ಎಂದು ಯಾರೂ ಊಹಿಸಿರಲಿಲ್ಲ.

ಇದನ್ನೂ ಓದಿ: Puspha: ಎಲ್ಲಾ ಕಡೆ ಆಯ್ತು.. ಈಗ ಟಿವಿಯಲ್ಲಿ `ಪುಷ್ಪ’ನ ಅಬ್ಬರ! ಕನ್ನಡದಲ್ಲಿ ಯಾವ ಚಾನಲ್​? ಇಲ್ಲಿದೆ ಮಾಹಿತಿ

ಉತ್ತರ ಪತ್ರಿಕೆ ತುಂಬ ಡೈಲಾಗ್:

'ಪುಷ್ಪಾ ರಾಜ್, ಅಪುನ್ ಲಿಖೇಗಾ ನಹಿ' ಎಂಬ ಡೈಲಾಗ್‌ನೊಂದಿಗೆ ವೈರಲ್ ಉತ್ತರ ಪತ್ರಿಕೆಯು ಈ ಹಂತದಲ್ಲಿ ಖಂಡಿತವಾಗಿಯೂ ಅನೇಕ ಜನರನ್ನು ನಗೆಗಡಲಲ್ಲಿ ತೇಲಿಸಿದೆ. ಕುತೂಹಲಕಾರಿ ಸಂಗತಿ ಎಂದರೆ ಇಡೀ ಉತ್ತರ ಕಿರುಪುಸ್ತಕದಲ್ಲಿ ಯಾವ ಪುಟದಲ್ಲಿಯೂ ಸರಿಯಾದ ಉತ್ತರಗಳಿಲ್ಲ, ಬರೀ ಈ ಡೈಲಾಗ್ ಅನ್ನೇ ವಿದ್ಯಾರ್ಥಿಯೊಬ್ಬ ಬರೆದು ಹೋಗಿದ್ದಾನೆ ಎಂದು ವರದಿಯಾಗಿದೆ.

ಈಗಾಗಲೇ ಪಶ್ಚಿಮ ಬಂಗಾಳದ 10ನೇ ತರಗತಿ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಈ ಉತ್ತರ ಪತ್ರಿಕೆಯನ್ನು ನೋಡಿ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವವರು ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೌಲ್ಯಮಾಪನ ಪ್ರಕ್ರಿಯೆಯ ಸಮಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನಂತರ 'ಪುಷ್ಪ ರಾಜ್' ಉತ್ತರ ಪತ್ರಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು.
Published by:shrikrishna bhat
First published: