ನೀವು GAYನಾ ಅಥವಾ Bisexual? ಪತ್ರಕರ್ತನ ಪ್ರಶ್ನೆಗೆ ಶಾರೂಖ್ ಖಾನ್ ಉತ್ತರ ಏನಾಗಿತ್ತು ಗೊತ್ತೇ?

Shah Rukh Khan- Vir Sanghvi: ಸಿನಿ ವಲಯದಲ್ಲಿ ಹೆಚ್ಚು ಪ್ರಚಾರ ಪಡೆದಿದ್ದ ಒಂದು ವಿಷಯವೆಂದರೆ ಶಾರುಖ್ ಸಲಿಂಗಿಯೇ ಅಥವಾ ದ್ವಿಲಿಂಗಿಯಾಗಿರಬಹುದೇ ಎಂಬುದಾಗಿತ್ತು. ಅದೇ ಪ್ರಶ್ನೆಯನ್ನು ನಾನು ಕೇಳಿದ್ದೆ.

ನಟ ಶಾರೂಖ್​​ ಖಾನ್​

ನಟ ಶಾರೂಖ್​​ ಖಾನ್​

 • Share this:
  ನೇರವಂತಿಕೆ, ದಿಟ್ಟ ಸಂದರ್ಶನಗಳಿಗೆ ಹೆಸರುವಾಸಿಯಾಗಿರುವ ಪತ್ರಕರ್ತ ವೀರ್ ಸಾಂಘ್ವಿ ಘಟಾನುಘಟಿಗಳನ್ನೇ ಸಂದರ್ಶಿಸಿ ಮಾಧ್ಯಮ ಲೋಕದಲ್ಲಿ ಸಂಚಲನ ಸೃಷ್ಟಿಸಿದವರು. ಇತ್ತೀಚಿನ ಲೇಖನದಲ್ಲಿ ವೀರ್ ಸಾಂಘ್ವಿ ಅವರ ‘ಎ ರೂಡ್ ಲೈಫ್: ದಿ ಮೆಮೊಯಿರ್‌ನಿಂದ ಈ ಆಯ್ದ ಭಾಗವನ್ನು ಪೆಂಗ್ವಿನ್ ರ‍್ಯಾಂಡಮ್ ಹೌಸ್ ಅನುಮತಿಯೊಂದಿಗೆ ಪ್ರಕಟಿಸಲಾಗಿದ್ದು ಸಿನಿ ದಿಗ್ಗಜರು ಹಾಗೂ ರಾಜಕೀಯ ಮುತ್ಸದ್ದಿಗಳೊಂದಿಗೆ ನಡೆಸಿದ ಸಂದರ್ಶನಗಳ ಚಿತ್ರಣವನ್ನು ಅವರದೇ ಮಾತುಗಳಲ್ಲಿ ಪ್ರಸ್ತುತಪಡಿಸಲಾಗಿದೆ.

  ಹಾಡಿನ ದೃಶ್ಯಕ್ಕಾಗಿ ಮುಂಬೈ ಸ್ಟುಡಿಯೋ ಒಂದರಲ್ಲಿ ಅಮಿತಾಭ್ ಬಚ್ಚನ್ ಇರುವುದಾಗಿ ತಿಳಿಸಿದ್ದರು. ಅವರ ಸಂದರ್ಶನ ನಡೆಸಲು ಟೇಕ್‌ಗಳ ನಡುವಿನ ಸಮಯ ಬಳಸಿಕೊಳ್ಳಲು ಒಪ್ಪಿಗೆ ನೀಡಿದ್ದರು. ಹೀಗಾಗಿ ಸಂಪೂರ್ಣ ಸ್ಟುಡಿಯೋವನ್ನೇ ಬಾಡಿಗೆಗೆ ಪಡೆದುಕೊಳ್ಳಲೇಬೇಕಾಗಿತ್ತು. ಸ್ಟುಡಿಯೋದಲ್ಲಿ ಕಭಿ ಖುಷಿ ಕಭಿ ಗಮ್ ಚಿತ್ರದ ‘ಶಾವಾ ಶಾವಾ’ ಹಾಡು ಚಿತ್ರೀಕರಿಸುತ್ತಿದ್ದ ಸೌಂಡ್‌ಸ್ಟೇಜ್ ಬಾಡಿಗೆಗೆ ಪಡೆದುಕೊಂಡೆವು.

  ಆ ದಿನವನ್ನು ರವೀನಾ ಟಂಡನ್‌ ಸಂದರ್ಶನದೊಂದಿಗೆ ಆರಂಭಿಸಿದೆವು. ಇನ್ನು ಅಮಿತಾಭ್‌ ಸಂದರ್ಶನ ನಡೆಸಲು ಸಂಜೆಯವರೆಗೆ ಸಮಯವಕಾಶವಿತ್ತು. ಆ ಸಮಯಕ್ಕೆ ವಿರಾಮ ತೆಗೆದುಕೊಳ್ಳಲು ಹೊರಕ್ಕೆ ಬಂದಿದ್ದ ಶಾರುಖ್ ಖಾನ್ ಅವರಲ್ಲಿ ಅಮಿತಾಭ್ ಬರುವವರೆಗೆ ನಿಮ್ಮನ್ನು ಸಂದರ್ಶಿಸಬಹುದೇ ಎಂದು ಕೇಳಿಕೊಂಡೆವು. ಶಾರುಖ್ ಒಪ್ಪಿಗೆ ನೀಡಿದರು.

  ನಾವು ಶಾರುಖ್ ಹಾಗೂ ಅಮಿತಾಬ್ ಇಬ್ಬರನ್ನೂ ಒಬ್ಬರಾದ ಮೇಲೆ ಒಬ್ಬರಂತೆ ಶೂಟಿಂಗ್ ಮಾಡಲಿದ್ದೇವೆಯೇ ಎಂದು ನನಗನ್ನಿಸಿತ್ತು. ಅಂತೂ ಶಾರುಖ್‌ರನ್ನು ಸಂದರ್ಶನ ನಡೆಸುವುದಾಗಿ ತೀರ್ಮಾನಿಸಿದೆವು. ಹಾಗೂ ಅವರ ಸಮೀಪ ಬೇರೆ ಯಾರೂ ಇರಲಿಲ್ಲ. ತುಂಬಾ ಆತ್ಮೀಯರಾಗಿಯೇ ಶಾರುಖ್ ತಮ್ಮ ಸಂದರ್ಶನ ನೀಡಿದ್ದರು. ಸಿನಿ ವಲಯದಲ್ಲಿ ಹೆಚ್ಚು ಪ್ರಚಾರ ಪಡೆದಿದ್ದ ಒಂದು ವಿಷಯವೆಂದರೆ ಶಾರುಖ್ ಸಲಿಂಗಿಯೇ ಅಥವಾ ದ್ವಿಲಿಂಗಿಯಾಗಿರಬಹುದೇ ಎಂಬುದಾಗಿತ್ತು. ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಶಾರುಖ್ ಗಲಿಬಿಲಿಗೊಂಡರು ಹಾಗೂ ನಿರಾಸಕ್ತಿಯಿಂದ ಪ್ರಶ್ನೆಯನ್ನು ತಿರಸ್ಕರಿಸಿದರು. ನಾನು ಮುಂದಿನ ಪ್ರಶ್ನೆ ಕೇಳಬೇಕಾಯಿತು. ಒಟ್ಟಿನಲ್ಲಿ ಸಂದರ್ಶನ ಚೆನ್ನಾಗಿ ನಡೆಯಿತು. ಆದರೆ ಶಾರುಖ್ ಸಲಿಂಗಿಯೇ ಎಂಬುದು ಜನರ ಮನಸ್ಸಿನಲ್ಲಿ ಆ ಸಂದರ್ಶನದ ನಂತರ ಅಚ್ಚೊತ್ತಿತ್ತು ಎಂಬುದಕ್ಕೆ ಕೆಲವು ದಿನಗಳ ನಂತರ ನಡೆದ ಘಟನೆ ಸಾಕ್ಷಿಯಾಯಿತು.

  ಕೆಲವು ಸಮಯದ ನಂತರ ಚಲನಚಿತ್ರ ಪತ್ರಕರ್ತರೊಬ್ಬರು ಶಾರುಖ್ ಬಳಿ, ವೀರ್ ಸಾಂಘ್ವಿ ನೀವು ಸಲಿಂಗಿಯೇ ಅಥವಾ ದ್ವಿಲಿಂಗಿಯೇ ಎಂದು ಯಾಕೆ ಕೇಳಿದ್ದರು? ಕಾರಣ ನೀಡಿ ಎಂದು ಹೇಳಿದಾಗ “ನನಗೆ ಗೊತ್ತಿಲ್ಲ. ನಾನು ಹೌದು ಎಂದು ಹೇಳಿದ್ದರೆ ಅವರು ನನ್ನನ್ನು ಡಿನ್ನರ್‌ಗೆ ಆಹ್ವಾನಿಸುತ್ತಿದ್ದರೋ ಏನೋ” ಎಂದು ಹಾಸ್ಯಭರಿತವಾಗಿ ಶಾರುಖ್ ಉತ್ತರಿಸಿದ್ದರು.

  ಪತ್ರಕರ್ತ ವೀರ್​ ಸಾಂಘ್ವಿ


  ವೀರ್ ಸಾಂಘ್ವಿ ಅವರು ಬಾಳಾ ಠಾಕ್ರೆ ಸಂದರ್ಶನ ನಡೆಸಿದಾಗ ಮಣಿರತ್ನಂ ಅವರ ಬಾಂಬೆ ಚಿತ್ರದ ಬಿಡುಗಡೆಗೆ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಠಾಕ್ರೆಯ ವ್ಯಕ್ತಿತ್ವವನ್ನು ರೂಪಿಸಲಾಗಿದ್ದು ನಾಯಕನು ಕೊನೆಗೆ ತನ್ನ ಮುಸ್ಲಿಂ ಗೆಳೆಯರೊಂದಿಗೆ ಕೈಜೋಡಿಸುತ್ತಾನೆ. ಠಾಕ್ರೆಯವರಲ್ಲಿ ಸಿನಿಮಾವನ್ನು ವಿರೋಧಿಸಿದ್ದರ ನೈಜ ಕಾರಣ ಕೇಳಿದಾಗ ತನ್ನನ್ನು ಚಿತ್ರದಲ್ಲಿ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿರುವಂತೆ ತೋರಿಸಲಾಗಿತ್ತು. ಆದರೆ ಚಿತ್ರದಲ್ಲಿ ನಡೆಸಿದ ಗಲಭೆ ನನ್ನ ಪ್ರಕಾರ ನ್ಯಾಯಯುತವಾಗಿದೆ ಹಾಗೂ ಪಾತ್ರ ಅದಕ್ಕಾಗಿ ಯಾವುದೇ ಪಶ್ಚತ್ತಾಪ ಪಡಬೇಕಾಗಿಲ್ಲ ಎಂದಾಗಿತ್ತು.

  ಇದನ್ನೂ ಓದಿ: Pratyusha Banerjee: ನಟಿ ಪ್ರತ್ಯುಶಾ ನಿಗೂಢ ಸಾವು: ಕೋರ್ಟ್-ಕೇಸ್ ಅಂತ ಎಲ್ಲವನ್ನೂ ಕಳೆದುಕೊಂಡ ಹೆತ್ತವರು

  ಅವರ ಅನುಯಾಯಿಗಳು ವ್ಯಾಲಂಟೈನ್ ಡೇ ಕಾರ್ಡ್ ಮಾರುತ್ತಿದ್ದ ಶಾಪ್‌ಗಳನ್ನು ಸುಟ್ಟುಹಾಕಿದ್ದು ನಿಜವೇ ಎಂದು ಕೇಳಿದಾಗ ಈ ಕಾರ್ಡ್‌ಗಳನ್ನು ತಯಾರಿಸಿ ಕಂಪೆನಿಯೊಂದಿಗೆ ಅವರ ಸೊಸೆ ವಾಣಿಜ್ಯ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಹಾಗಾಗಿ ನಾವು ಸುಡಲಿಲ್ಲ ಬದಲಿಗೆ ನಾಶ ಮಾಡಿದೆವು ಎಂದು ಶಾಂತರಾಗಿಯೇ ಉತ್ತರಿಸಿದರು.
  First published: