Vinod Prabhakar: ಲಂಕಾಸುರ ಸಿನಿಮಾದ ಟೈಟಲ್​ ಟ್ರ್ಯಾಕ್​ ರಿಲೀಸ್​, ಹೊಸ ಅವತಾರದಲ್ಲಿ ಮರಿ ಟೈಗರ್

Lankasura Movie: ಇನ್ನು ಈಗಾಗಲೇ ಈ ಸಿನಿಮಾದ ಟೀಸರ್​ ಸಹ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗೆಯೇ ಈ ಚಿತ್ರದಲ್ಲಿ ಮೊದಲ ಬಾರಿ ಲೂಸ್​ ಮಾದ ಯೋಗಿ ಹಾಗೂ ವಿನೋದ್ ಪ್ರಭಾಕರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಲಂಕಾಸುರ

ಲಂಕಾಸುರ

  • Share this:
ವಿನೋದ್ ಪ್ರಭಾಕರ್ (Vinod Prabhakar) ಯಾವಾಗಲೂ ವಿಭಿನ್ನ ಕತೆಯೊಂದಿಗೆ ಜನರ ಮುಂದೆ ಬರಲು ಇಷ್ಟಪಡುತ್ತಾರೆ. ಮೊದಲಿನಿಂದಲೂ ಸ್ವಲ್ಪ ಖಡಕ್ ಲುಕ್ ಹಾಗೂ ಪಾತ್ರಗಳನ್ನು ಮಾಡುತ್ತಿರುವ ವಿನೋದ್ ಪ್ರಭಾಕರ್​, ಈ ಭಾರೀ ಕೂಡ ಹೊಸತನದೊಂದಿಗೆ ಮರಳಿ ಬಂದಿದ್ದಾರೆ. ಹೌದು, ಸದ್ಯದಲ್ಲಿಯೇ ಅವರ ಬಹು ನಿರೀಕ್ಷಿತ ಚಿತ್ರ ಲಂಕಾಸುರದ (Lankasura) ಟೈಟಲ್​ ಟ್ರ್ಯಾಕ್​  (Title Track) ರಿಲೀಸ್​ ಆಗಿದ್ದು, ಎಲ್ಲೆಡೆ ಟ್ರೆಂಡಿಂಗ್​ ಆಗಿದೆ.

ಎಲ್ಲೆಡೆ ಟ್ರೆಂಡಿಂಗ್ ಆಗಿದೆ ಸಾಂಗ್

ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ, ಲಂಕಾಸುರ, ಲಂಕಾಸುರ ಎಂದು ಆರಂಭವಾಗುವ ಈ ಹಾಡಿಗೆ  ಧ್ವನಿ ನೀಡಿರುವ ವಿಜೇತ ಕೃಷ್ಣ ಸಂಗೀತ ಸಂಯೋಜನೆಯನ್ನು ಸಹ ಮಾಡಿದ್ದು, ಮೋಹನ್ ಕುಮಾರ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಲಂಕಾಸುರ ಚಿತ್ರ ವಿನೋದ್ ಪ್ರಭಾಕರ್ ಅವರಿಗೆ ಬಹಳ ವಿಶೇಷವಾಗಿದ್ದು, ಈ ಚಿತ್ರವನ್ನು ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಹೌದು, ಈ ಬಾರಿ ನಿರ್ಮಾಣಕ್ಕೆ ಇಳಿದಿರುವ ವಿನೋದ್ ಪ್ರಭಾಕರ್ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ಇನ್ನು ಲಂಕಾಸುರ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಈಗಾಗಲೇ ಗೋವಾ ಹಾಗೂ ಬೆಂಗಳೂರಿನಲ್ಲಿ ಸರಿ ಸುಮಾರು 65 ದಿನಗಳ ಕಾಲ ಶೂಟಿಂಗ್ ಮಾಡಿ ಬಂದಿದ್ದು, ಟೈಟಲ್​ ಟ್ರ್ಯಾಕ್​ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.


ಇನ್ನು ಈಗಾಗಲೇ ಈ ಸಿನಿಮಾದ ಟೀಸರ್​ ಸಹ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗೆಯೇ ಈ ಚಿತ್ರದಲ್ಲಿ ಮೊದಲ ಬಾರಿ ಲೂಸ್​ ಮಾದ ಯೋಗಿ ಹಾಗೂ ವಿನೋದ್ ಪ್ರಭಾಕರ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಚಿತ್ರದ ನಾಯಕಿಯಾಗಿ ಪಾರ್ವತಿ ಅರುಣ್​ ನಟಿಸಿದ್ದಾರೆ. ಇನ್ನು ಹಿರಿಯ ನಟರಾದ ದೇವರಾಜ್, ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.


ಚಿತ್ರತಂಡ ಹೇಳುವ ಪ್ರಕಾರ ಈ ಚಿತ್ರದಲ್ಲಿ ಆಕ್ಷನ್ ಸೀನ್​ಗಳು ಅದ್ಭುತವಾಗಿ ಮೂಡಿಬಂದಿದೆ. ಅದನ್ನು ನೋಡುವವರ ಮೈ ಜುಮ್ಮೆನಿಸುವುದು ಪಕ್ಕಾ. ಹಾಗೆಯೇ ಮೂಲಗಳ ಪ್ರಕಾರ ಈ ಚಿತ್ರದಲ್ಲಿ 5 ಆಕ್ಷನ್​ ಸೀನ್​ಗಳಿದ್ದು, ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ , ಕುಂಗ್ಫು ಚಂದ್ರು ಸಾಹಸ ದೃಶ್ಯಗಳ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ- ಕತ್ರಿನಾಗೆ ಜೀವ ಬೆದರಿಕೆ, ತನಿಖೆ ಆರಂಭಿಸಿದ ಪೊಲೀಸರು
10 ಕೆಜಿ ತೂಕ ಇಳಿಸಿಕೊಂಡ ಮರಿ ಟೈಗರ್

ಯಾವಾಗಲೂ ಫಿಟ್​ ಆ್ಯಂಡ್​ ಫೈನ್​ ಆಗಿರುವ ವಿನೋದ್​ ಪ್ರಭಾಕರ್ ಈ ಚಿತ್ರಕ್ಕೆ ಬಹಳ ತಾಲೀಮು ಮಾಡಿದ್ದಾರೆ. ಕೇವಲ ಒಂದು ಫೈಟಿಂಗ್ ದೃಶ್ಯಕ್ಕಾಗಿ ವಿನೋದ್​ ಪ್ರಭಾಕರ್ 10 ಕೆಜಿ ತೂಕ ಇಳಿಸಿಕೊಂಡಿದ್ದು, ಬಿಯರ್ಡ್ ಲುಕ್​ ನಲ್ಲಿ ಬಹಳ ಹ್ಯಾಂಡ್​ಸಮ್​ ಆಗಿ ಕಾಣುತ್ತಿದ್ದಾರೆ.

ಇದನ್ನೂ ಓದಿ: 68ನೇ ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಫಿಲ್ಮ್ ಚೇಂಬರ್​​ನಿಂದ ಸನ್ಮಾನ

ಬಹಳ ಒಳ್ಳೆಯ ಚಿತ್ರಗಳನ್ನು ನೀಡುತ್ತಿರುವ ವಿನೋದ್ ಪ್ರಭಾಕರ್ ಮತ್ತೊಂದು ಅದ್ಭುತ ಚಿತ್ರ ಮೂಲಕ ಬರುತ್ತಿದ್ದು, ಅಭಿಮಾನಿಗಳು ಸಹ ಚಿತ್ರ ಬಿಡುಗಡೆ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದಾರೆ.  ರಾಬರ್ಟ್ ನಂತರ ಲಂಕಾಸುರ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ವಿನೋದ್ ಪ್ರಭಾಕರ್​ಗೆ ಹಲವಾರು ಚಿತ್ರಗಳ ಆಫರ್ ಬರುತ್ತಿದ್ದು, ಒಳ್ಳೆಯ ಕತೆ ಸಿಕ್ಕರೆ ಇನ್ನೂ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
Published by:Sandhya M
First published: