ವಿನಯ್​ ರಾಜ್​ಕುಮಾರ್​ ಅಭಿನಯದ 'ಗ್ರಾಮಾಯಣ'ದಲ್ಲಿ ಕಾಡುತ್ತೆ ಗಾಜನೂರಿನ ನೆನಪು..!

news18
Updated:September 7, 2018, 4:44 PM IST
ವಿನಯ್​ ರಾಜ್​ಕುಮಾರ್​ ಅಭಿನಯದ 'ಗ್ರಾಮಾಯಣ'ದಲ್ಲಿ ಕಾಡುತ್ತೆ ಗಾಜನೂರಿನ ನೆನಪು..!
news18
Updated: September 7, 2018, 4:44 PM IST
ಓಂ ಸಕಲೇಶಪುರ, ನ್ಯೂಸ್​ 18 ಕನ್ನಡ 

'ಗ್ರಾಮಾಯಣ' ಆ ಹೆಸರಲ್ಲೇ ದೇಸೀತನವಿದೆ. ಬಿಸಿ ಮನಸ್ಸನ್ನು ತಂಪಾಗಿಸುವ ಅರ್ಧ ಭಾವವಿದೆ. 'ಗ್ರಾಮಾಯಣ' ಚಿತ್ರವೂ ಹಾಗೆಯೇ ಇರಲಿದೆಯಂತೆ. ಹಳ್ಳಿಯ ನೆನಪುಗಳ ಹೂರಣವೇ ತುಂಬಿಕೊಂಡಿರುವ ಚಿತ್ರವಾಗಿ ಮೂಡಿಬರಲಿದೆಯಂತೆ. ಇದೆಲ್ಲವೂ ಚಿತ್ರದ ಟೀಸರ್​ನಲ್ಲಿ ಮೂಡಿಬಂದ ವಿಷಯಳು. ಆದರೆ ದೊಡ್ಮನೆಯ ಮೊಮ್ಮಗನ ಹೊಸ ಚಿತ್ರದ ಟೀಸರ್ ಚಿತ್ರೀಕರಣ ನಡೆದಿರೋದು ಅಣ್ಣಾವರು ಹುಟ್ಟಿದ ಗಾಜನೂರಲ್ಲಿ. ಈ ಗಾಜನೂರಿನ ಕುರಿತ ಅಣ್ಣಾವರ ಮಕ್ಕಳ ನೆನಪುಗಳ ಗೊಂಚಲಿನಲ್ಲಿ ಸಿಹಿ ಸವಿ ನೆನಪುಗಳನ್ನು ಒಂದೊಂದಾಗಿ ನಿಮ್ಮ ಮುಂದಿಡುವ ಪ್ರಯತ್ನ ಇದು.

ಈ ಸಿನಿಮಾದ ಟೀಸರ್​ ಬಿಡುಗಡೆಯಾಗಿದ್ದು ಇಲ್ಲಿದೆ ಅದರ ವಿಡಿಯೋ...ಗಾಜನೂರು ಡಾ ರಾಜ್ ಹುಟ್ಟಿ ಊರು ಮಾತ್ರವಲ್ಲ ಪವರ್​ ಸ್ಟಾರ್​ ಪುನೀತ್ ಹಾರಾಡುವ ಹಕ್ಕಿಯಂತೆ ಕುಪ್ಪಳಿಸಿ ಕುಣಿಯುತ್ತಿದ್ದ ವಿಷಯ ಯಾಕಂದರೆ ಪವರ್​ಸ್ಟಾರ್​ ಈಜು ಕಲಿತಿದ್ದು ಅಲ್ಲೇ. ಈಗಲೂ ಮರೆಯಲಾಗದ ಹಲವು ನೆನಪುಗಳನ್ನು ಥ್ರಿಲ್ಲಾಗುತ್ತಾರೆ.

'ಗ್ರಾಮಾಯಣ' ಚಿತ್ರದಲ್ಲಿ ಪವರ್​ ಸ್ಟಾರ್​​ ನೆನಪುಗಳು ಎಷ್ಟು ಅದ್ಭುತವಾಗಿಯೋ ಹಾಗೇ ಈ ಊರಿನೊಂದಿಗೆ ಕೂಡಿದ ಶಿವಣ್ಣರ ಅನುಭವಗಳೂ ಈ ಸಿನಿಮಾದಲ್ಲಿದೆ.

ಇನ್ನೂ ಅಣ್ಣಾವ್ರ ಮಕ್ಕಳ ಗಾಜನೂರ ನೆನಪುಗಳ ಸರಮಾಲೆಗೆ ರಾಘಣ್ಣ ಕೂಡ ತಮ್ಮ ನೆನಪುಗಳನ್ನು ಜೋಡಿಸಿದ್ದಾರೆ. ತಂದೆ ಡಾ. ರಾಜ್ ಗಾಜನೂರನ್ನು ಪ್ರೀತಿಸುತ್ತಿದ್ದ ಪರಿಯನ್ನು ಇಂದಿಗೂ ಅವರಿಗೆ ನೆನಪಿದೆ.
Loading...

ಚಿತ್ರಕ್ಕೆ ವಿನಯ್‍ರಾಜ್‍ಕುಮಾರ್​ ಅವರನ್ನೇ ಆಯ್ಕೆ ಮಾಡಿಕೊಂಡ ಬಗ್ಗೆ ನಿರ್ದೇಶಕ ದೇವನೂರು ಚಂದ್ರು ಖುಷಿಯಾಗಿದ್ದರೆ, ವಿನಯ್‍ರಾಜ್‍ಕುಮಾರ್ ಮತ್ತು ನಾಯಕಿ ಅಮೃತಾ ಅಯ್ಯರ್ ಥ್ರಿಲ್ಲಾಗಿದ್ದಾರೆ.

'ಗ್ರಾಮಾಯಣ' ಚಿತ್ರವೇ ದೊಡ್ಮನೆ ಕುಟುಂಬವನ್ನು ಕಾಡಿದೆ. ಹಳೆ ನೆನಪುಗಳನ್ನು ಮೆಲುಕು ಹಾಕಿ ಮತ್ತೊಮ್ಮೆ ಹಳ್ಳಿ ಕಡೆ ಮುಖಮಾಡುವಂತೆ ಮಾಡಿದೆ. ಸದ್ಯ ಗ್ರಾಮಾಯಣ ಚಿತ್ರತಂಡ ಕಡೂರು, ಚಿಕ್ಕಮಗಳೂರು ಭಾಗದಲ್ಲಿ ಶೂಟಿಂಗ್ ನಡೆಸೋಕೆ ತಯಾರಿ ಮಾಡಿಕೊಂಡಿದೆ.

 
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ