• Home
  • »
  • News
  • »
  • entertainment
  • »
  • Vinay Rajkumar: 4 ವರ್ಷಗಳಾದ್ರೂ ಬಿಡುಗಡೆಯಾಗಿಲ್ಲ, ಡಿಸೆಂಬರ್​ನಲ್ಲಿ ವಿನಯ್ ರಾಜ್​ಕುಮಾರ್ ಸಿನಿಮಾ ರಿಲೀಸ್

Vinay Rajkumar: 4 ವರ್ಷಗಳಾದ್ರೂ ಬಿಡುಗಡೆಯಾಗಿಲ್ಲ, ಡಿಸೆಂಬರ್​ನಲ್ಲಿ ವಿನಯ್ ರಾಜ್​ಕುಮಾರ್ ಸಿನಿಮಾ ರಿಲೀಸ್

ವಿನಯ್ ರಾಜ್​ಕುಮಾರ್ ಅಭಿನಯದ ಟೆನ್ ಸಿನಿಮಾ

ವಿನಯ್ ರಾಜ್​ಕುಮಾರ್ ಅಭಿನಯದ ಟೆನ್ ಸಿನಿಮಾ

ವಿನಯ್ ರಾಜ್‌ಕುಮಾರ್ ಅವರ 'ಟೆನ್' (Ten) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ವಿನಯ್ ರಾಜ್​ಕುಮಾರ್ (Vinay Rajkumar) ಅವರನ್ನು ಬಿಗ್​ಸ್ಕ್ರೀನ್​ನಲ್ಲಿ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ (Fans) ಗುಡ್ ನ್ಯೂಸ್ (Good News) ಸಿಕ್ಕಿದೆ. ಕಳೆದ ನಾಲ್ಕು ವರ್ಷಗಳಿಂದ ವಿನಯ್ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ತಮ್ಮ ಸಿನಿಮಾ (Cinema) ಪೋಸ್ಟರ್ ಫಸ್ಟ್​ ಲುಕ್​ಗಳನ್ನು ನಟ ಸೋಷಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡುತ್ತಲೇ ಇದ್ದಾರೆ. ಆದರೂ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಈಗ ವಿನಯ್ ರಾಜ್‌ಕುಮಾರ್ ಅವರ 'ಟೆನ್' (Ten) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ವಿನಯ್ ಅವರ ಈ ಸಿನಿಮಾ ಡಿಸೆಂಬರ್ 9ರಂದು ರಿಲೀಸ್ (Release) ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಆಶಿತಾ ರಂಗನಾಥ್ ಸಹೋದರಿಯೇ ಹೀರೋಯಿನ್


ಟೆನ್ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ ಅವರಿಗೆ ಅನುಷಾ ರಂಗನಾಥ್ ಜೋಡಿಯಾಗಿ ಅಭಿನಯಿಸಿದ್ದಾರೆ. 'ದಿ ಗ್ರೇಟ್ ಲವ್ ಸ್ಟೋರಿ ಆಫ್ ಸೋಡಾಬುಡ್ಡಿ', ಲವ್ 360 ಹಾಗೂ ಅಂದವಾದ ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅನುಷಾ ರಂಗನಾಥ್ ಅಭಿನಯದ ನಾಲ್ಕನೇ ಚಿತ್ರ ಇದಾಗಿದೆ. ಇವರು ಆಶಿಕಾ ರಂಗನಾಥ್ ಸಹೋದರಿ ಎನ್ನುವುದು ಇನ್ನೊಂದು ವಿಶೇಷ.




ಸಿನಿಮಾ ಬಿಡುಗಡೆಯ ಹಿಂಟ್ ಕೊಟ್ಟ ಪ್ರೊಡ್ಯೂಸರ್


ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ರಿಲೀಸ್ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಅಕೌಂಟ್​​ನಲ್ಲಿ ನಮ್ಮ ಸಂಸ್ಥೆಯ ಮುಂದಿನ ಚಿತ್ರ ಡಿಸೆಂಬರ್ 9ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಟೆನ್ ಸಿನಿಮಾ ಹೊರತುಪಡಿಸಿ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಯಾವ ಚಿತ್ರವೂ ಸಹ ಚಿತ್ರೀಕರಣ ಮುಗಿಸಿರುವ ಹಂತದಲ್ಲಿ ಇಲ್ಲ. ಹಾಗಾಗಿ ಟೆನ್ ಸಿನಿಮಾ ರಿಲೀಸ್ ಪಕ್ಕಾ ಎನ್ನಲಾಗುತ್ತಿದೆ.


ಇದನ್ನೂ ಓದಿ: Amitabh Bachchan: ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಹೃದಯ ಸ್ಪರ್ಶಿ ಮಾತು,ಮನದುಂಬಿ ಧನ್ಯವಾದ ಅರ್ಪಿಸಿದ ಅಶ್ವಿನಿ ಪುನೀತ್ ರಾಜಕುಮಾರ್


ವಿನಯ್ ಅವರು ಸೋಷಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಸಿನಿಮಾಗಳ ಬಗ್ಗೆ ಅಪ್ಡೇಟ್ ಹಂಚಿಕೊಳ್ಳುತ್ತಿರುತ್ತಾರೆ. ವಿಡಿಯೋ, ಫೋಟೋಗಳನ್ನು ಅಪ್​ಲೋಡ್ ಮಾಡಿ ಅಭಿಮಾನಿಗಳೊಂದಿಗೆ ಟಚ್​​ನಲ್ಲಿರುತ್ತಾರೆ.


ನಟ ಈಗಾಗಲೇ 69 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹೊಂದಿದ್ದು 200 ಪೋಸ್ಟ್​ಗಳನ್ನು ಮಾಡಿದ್ದಾರೆ. ಬಾಲ್ಯ, ಫ್ಯಾಮಿಲಿ, ಇವೆಂಟ್, ಶೂಟಿಂಗ್, ಪೋಸ್ಟರ್, ವಿಡಿಯೋಗಳು ಸೇರಿ ಬಹಳಷ್ಟು ಕಂಟೆಂಟ್ ಇವರು ಶೇರ್ ಮಾಡುತ್ತಾರೆ.


ಇದನ್ನೂ ಓದಿ: Jacqueline Fernandez: ಜಾಮೀನು ಅರ್ಜಿ ವಿಚಾರಣೆ, ರಕ್ಕಮ್ಮನಿಗೆ ಬೇಲಾ? ಜೈಲಾ?


ಬಾಲನಟನಾಗಿ ಎಂಟ್ರಿ ಕೊಟ್ಟ ವಿನಯ್


ಬಾಲನಟನಾಗಿ ಎಂಟ್ರಿ ಕೊಟ್ಟಿದ್ದ್ ನಟ ವಿನಯ್ ರಾಜ್‌ಕುಮಾರ್ ಅನುರಾಗದ ಅಲೆಗಳು ಸಿನಿಮಾದಲ್ಲಿ ನಟಿಸಿದ್ದರು. 'ಸಿದ್ಧಾರ್ಥ' ಮೂಲಕ ಹೀರೋ ಆಗಿ ಮಿಂಚಿದರು. ರನ್ ಆಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾದಲ್ಲಿ ಅಭಿನಯಿಸಿದ್ದ ವಿನಯ್  ನಂತರ ಸೈಲೆಂಟಾಗಿದ್ದರು. ಅವರ ಯಾವುದೇ ಸಿನಿಮಾ ಕಳೆದ ನಾಲ್ಕು ವರ್ಷಗಳಿಂದ ತೆರೆ ಕಂಡಿಲ್ಲ.


ಅನಂತು ವರ್ಸಸ್ ನುಸ್ರತ್ ಬಳಿಕ ವಿನಯ್ ರಾಜ್‌ಕುಮಾರ್ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ನಟ ಪುನೀತ್ ಅವರ ಸಿನಿಮಾ, ಅಪ್ಡೇಟ್​ಗಳನ್ನು ಕೂಡಾ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಲೇ ಇದ್ದರು. ಇತ್ತೀಚಿನ ಇವೆಂಟ್​​ಗಳ ಮಾಹಿತಿಯನ್ನೂ ಶೇರ್ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ, ಟೆನ್, ಅಂದೊಂದಿತ್ತು ಕಾಲ ಹಾಗೂ ಪೆಪೆ ಚಿತ್ರಗಳ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿ ಸೌಂಡ್ ಮಾಡಿದ್ರೂ ರಿಲೀಸ್ ಬಗ್ಗೆ ಅಪ್ಡೇಟ್ ಬಂದಿಲ್ಲ.

Published by:Divya D
First published: