Vikrant Rona: ವಿಕ್ರಾಂತ್ ರೋಣ ಸಂಭ್ರಮಾಚರಣೆ ಶುರು, ಸಿನಿಮಾ ಬಿಡುಗಡೆ ಮೊದಲೇ ಥಿಯೇಟರ್ ಸಿಂಗಾರ ಮಾಡಿದ ಫ್ಯಾನ್ಸ್

Vikrant Rona: ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಬಾಲಾಜಿ ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಈಗಾಗಲೇ ಸಿದ್ದತೆ ಆರಂಭಿಸಿದ್ದು, ಸಿನಿಮಾ ಬಿಡುಗಡೆಗೆ ಇನ್ನು 3 ದಿನ ಬಾಕಿ ಇರುವ ಮೊದಲೇ ಚಿತ್ರಮಂದಿರ ಬಳಿ ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಪ್ಯಾನ್​ ಇಂಡಿಯಾ (Pan India) ಸಿನಿಮಾಗಳ (Film)  ಹವಾಳಿ ಹೆಚ್ಚಾಗಿದೆ. ಕೆಜಿಎಫ್​ 1 (KGF) ಹಾಗೂ 2 ಸಿನಿಮಾಗಳ ನಂತರ ಕನ್ನಡ ಸಿನಿಮಾ ರಂಗದ ಖ್ಯಾತಿ ಎಲ್ಲೆಡೆ ಹರಡಿದೆ. ಸದ್ಯ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ ವಿಕ್ರಾಂತ್​ ರೋಣ (Vikrant Rona) ಬಿಡುಗಡೆಗೆ ಸಜ್ಜಾಗಿದೆ. ಜುಲೈ 28 ರಂದು ನಟ ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ರಾಜ್ಯದ ವಿವಿಧ ಭಾಗದಲ್ಲಿ ಈಗಾಗಲೇ ಸಂಭ್ರಮಾಚರಣೆ ಆರಂಭವಾಗಿದೆ.

ಇಂದಿನಿಂದಲೇ ಸಂಭ್ರಮಾಚರಣೆ ಆರಂಭ

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಬಾಲಾಜಿ ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಈಗಾಗಲೇ ಸಿದ್ದತೆ ಆರಂಭಿಸಿದ್ದು, ಸಿನಿಮಾ ಬಿಡುಗಡೆಗೆ ಇನ್ನು 3 ದಿನ ಬಾಕಿ ಇರುವ ಮೊದಲೇ ಚಿತ್ರಮಂದಿರ ಬಳಿ ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹೌದು, ಬಾಲಾಜಿ ಸಿನಿಮಾ ಥಿಯೇಟರ್ ಅನ್ನು ಅಭಿಮಾನಿಗಳು ಮದು ಮಗಳಂತೆ ಸಿಂಗಾರ ಮಾಡಿದ್ದು, ನಟ ಸುದೀಪ್ ಕಟೌಟ್ ಕಟ್ಟಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.ಈಗಾಗಲೇ ಥಿಯೇಟರ್ ಎದುರು ಸುದೀಪ್ ಹಾಗು ಪುನೀತ್ ರಾಜ್ ಕುಮಾರ್ ಕಟೌಟ್ ಕಟ್ಟಲಾಗಿದ್ದು, ಸಿನಿಮಾ ಯಶಸ್ಸಿಗೆ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಒಡೆದು ಕಿಚ್ಚ ಸುದೀಪ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇನ್ನು ಈಗಾಗಲೇ ಈ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿದ್ದು, ನಿನ್ನೆಯಿಂದಲೇ ಸಿನಿಮಾದ ಪ್ರೀ ಬುಕ್ಕಿಂಗ್ ಆರಂಭವಾಗಿದೆ.  ವಿಕ್ರಾಂತ್ ರೋಣ ಸಿನಿಮಾದ ಕನ್ನಡ ಅವತರಣಿಕೆಯ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದೆ.ಇದನ್ನೂ ಓದಿ: ನಂಬರ್ ಒನ್​ ನಟಿಯಾಗಲು ಹಣ ಕೊಟ್ಟೆ ಎಂದ ಸಮಂತಾ! ಟ್ರೋಲಿಗರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ರಾ ಸ್ಯಾಮ್​?

ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಾಣುತ್ತಿರುವ ಕನ್ನಡದ ಸಿನಿಮಾ. ಹೀಗಾಗಿ ಈ ಸಿನಿಮಾ ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಒಂದು ಮಾಹಿತಿ ಪ್ರಕಾರ ಚಿತ್ರವು ಈವರೆಗಿನ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 3500 ಸ್ಕ್ರೀನ್‌ ಗಳಲ್ಲಿ ತೆರೆಕಾಣಲಿದೆ.ಕನ್ನಡದಲ್ಲಿ 450 ಸ್ಕ್ರೀನ್​ಗಳಲ್ಲಿ ಸಿನಿಮಾ ರಿಲೀಸ್​

ಕನ್ನಡದಲ್ಲಿ ಅಂದರೆ ಕರ್ನಾಟಕದಲ್ಲಿ 450 ಸ್ಕ್ರೀನ್‌ ಗಳಲ್ಲಿ ಸಿನಿಮಾ ರಿಲೀಸ್ ಆದರೆ ಉಳಿದಂತೆ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ಹಾಗೂ ಉತ್ತರ ಭಾರತದಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಲಭ್ಯ ಮಾಹಿತಿ ಪ್ರಕಾರ ಸದ್ಯ, ವಿಕ್ರಾಂತ್ ರೋಣ ಚಿತ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದಲ್ಲಿ 450 ಸ್ಕ್ರೀನ್‌, ತಮಿಳುನಾಡಿನಲ್ಲಿ 200 ಸ್ಕ್ರೀನ್‌ ಮತ್ತು ಕೇರಳದಲ್ಲಿ 150 ಸ್ಕ್ರೀನ್‌ ಗಳಲ್ಲಿ ಬಿಡುಗಡೆಯಾಗಲಿದೆ.  ಆದರೆ ಹಿಂದಿಯಲ್ಲಿ ಅಂದರೆ ಉತ್ತರ ಭಾರತ ಭಾಗದಲ್ಲಿ ಬರೋಬ್ಬರಿ 1000 ಸ್ಕ್ರೀನ್‌ ಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ.ಜುಲೈ 28 ರಂದು 3D ನಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣ, ಜುಲೈ 27 ರಂದು ದುಬೈನಲ್ಲಿ ಅದರ ಅಂತರರಾಷ್ಟ್ರೀಯ ಪ್ರೀಮಿಯರ್ ಅನ್ನು ಆಯೋಜಿಸಿದೆ. ಜುಲೈ 24 ಅಥವಾ 25 ರಂದು ಬೆಂಗಳೂರಿನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ನಡೆಸಲು ತಂಡ ನಿರ್ಧರಿಸಿದೆ.ಇದನ್ನೂ ಓದಿ: ಆಂಧ್ರದಲ್ಲೂ ಪುನೀತ್ ನೆನಪು, ಅಭಿಮಾನಿಗಳನ್ನು ಬಿಟ್ಟು ಹೋಗಿಲ್ಲ ನಮ್ಮ ಅಪ್ಪು

ಕೆಜಿಎಫ್​ ಬಳಿಕ ಕನ್ನಡ‌ ಚಿತ್ರರಂಗದಿಂದ ಬರುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರವಾಗಿದ್ದು, ಅನೂಪ್ ಭಂಡಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ವಿಕ್ರಾಂತ್ ರೋಣ ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಜುಲೈ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
Published by:Sandhya M
First published: