Vikrant Rona: ನಿಮ್ಮ ಭಾಷೆಯಲ್ಲೇ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು! ಕನ್ನಡ ಸಿನಿಮಾರಂಗದಲ್ಲಿ ಇದು ಮೊದಲ ಪ್ರಯತ್ನ

Kiccha Sudeep: ಭಾರತದಲ್ಲಿ, R Madhavan ಅಭಿನಯದ Rocketry ಚಲನಚಿತ್ರವು ಆರು ಭಾಷೆಗಳಿಗೆ ಸಿನೆಡಬ್ಸ್ ಅನ್ನು ಅಳವಡಿಸಿಕೊಂಡ ಮೊದಲನೆಯ ಸಿನಿಮಾವಾಗಿದೆ. ಈಗ, ವಿಕ್ರಾಂತ್ ರೋಣ ಅದೇ ಹಾದಿಯಲ್ಲಿದ್ದು, ಕನ್ನಡ ಸಿನಿಮಾ ರಂಗದಲ್ಲಿ ಮೊದಲ ಪ್ರಯತ್ನವಾಗಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ವಿಕ್ರಾಂತ್ ರೋಣ (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿ(3D)ಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಪೋಸ್ಟರ್ (Poster), ಟೀಸರ್(Teaser)ಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಜನರಿಗೆ ಫುಲ್ ಮಾಡಿದೆ. ಎಲ್ಲೆಡೆ ಇದೇ ಹಾಡು ಕೇಳಿ ಬರುತ್ತಿದೆ. ಇದೀಗ ಅಭಿಮಾನಿಗಳಿಗೆ ಮಾತ್ರವಲ್ಲದೇ ಇಡೀ ಸ್ಯಾಂಡಲ್​ವುಡ್​ ಹೆಮ್ಮೆ ಪಡುವಂತಹ ಸುದ್ದಿಯೊಂದಿದೆ. ಏನು ಅಂತೀರಾ? ಈ ಸ್ಟೋರಿ ಓದಿ.

ನಿಮ್ಮ ಭಾಷೆಯಲ್ಲಿ  ಸಿನಿಮಾ ನೋಡಿ

ಇನ್ನು ಮೊನ್ನೆ ದೆಹಲಿಯಲ್ಲಿ ಸಿನಿಮಾ ಪ್ರಚಾರ ಕಾರ್ಯದಲ್ಲಿದ್ದ ನಟ ಸುದೀಪ್ ಅವರು ವಿಕ್ರಾಂತ್ ರೋಣ ಮತ್ತು ವಿವಿಧ ಭಾಷೆಗಳಿಗೆ ಡಬ್ ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ.ತಮ್ಮ ತಂಡವು ಸಿನೆಡಬ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹೊಸ ಆ್ಯಪ್​ ಸಿನಿಪ್ರಿಯರು ತಮ್ಮ ಆಯ್ಕೆಯ ಭಾಷೆಯಲ್ಲಿ ಸಿನಿಮಾವನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.

Kiccha Sudeep vikrant rona movie play double role in vikrant rona as hero or villain
ವಿಕ್ರಾಂತ್​ ರೋಣ


ಉದಾಹರಣೆಗೆ, ನೀವು ಆಂಧ್ರಪ್ರದೇಶದಲ್ಲಿದ್ದರೆ ಮತ್ತು ಕನ್ನಡ ಆವೃತ್ತಿಯಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನು ವೀಕ್ಷಿಸಬೇಕು ಎಂದರೆ ನೀವು ಕಷ್ಟಪಡಬೇಕಿಲ್ಲ. ನಿಮಗೆ ಥಿಯೇಟರ್​ಗಳಲ್ಲಿ ಕನ್ನಡ ಆವೃತ್ತಿ ಸಿಗುವುದಿಲ್ಲ ಎಂಬ ಚಿಂತೆ ಬೇಡ. ನೀವು ತೆಲುಗು ಭಾಷೆಯಲ್ಲಿ ಸಿನಿಮಾ ನೋಡಲು ಹೋಗಬಹುದು, ಅಲ್ಲಿ ಈ ಅಪ್ಲಿಕೇಶನ್ ಅನ್ನು ಬಳಸಿ ನಿಮ್ಮ ಆಯ್ಕೆಯ ಭಾಷೆಯನ್ನು ಸಿಂಕ್ ಮಾಡಬಹುದು. ಡೈಲಾಗ್​, ಹಾಡುಗಳು, ಎಲ್ಲವೂ ನಿಮಗೆ ನಿಮ್ಮ ಭಾಷೆಯಲ್ಲಿ ಸಿಗುತ್ತದೆ. ಇದು ಥಿಯೇಟರ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ ಎಂದು ಸುದೀಪ್ ವಿವರಿಸಿದ್ದಾರೆ.

Salman Khan supports kiccha Sudeep Vikrant Rona for Bollywood release

ಭಾರತದಲ್ಲಿ, R Madhavan ಅಭಿನಯದ Rocketry ಚಲನಚಿತ್ರವು ಆರು ಭಾಷೆಗಳಿಗೆ ಸಿನೆಡಬ್ಸ್ ಅನ್ನು ಅಳವಡಿಸಿಕೊಂಡ ಮೊದಲನೆಯ ಸಿನಿಮಾವಾಗಿದೆ. ಈಗ, ವಿಕ್ರಾಂತ್ ರೋಣ ಅದೇ ಹಾದಿಯಲ್ಲಿದ್ದು, ಕನ್ನಡ ಸಿನಿಮಾ ರಂಗದಲ್ಲಿ ಮೊದಲ ಪ್ರಯತ್ನವಾಗಿದೆ. Google Play Store ಅಥವಾ Apple App Store ನಿಂದ Cinedubs ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ನಂತರ ಥಿಯೇಟರ್, ಪ್ರದರ್ಶನದ ಸಮಯ ಮತ್ತು ಅವರು ಅದನ್ನು ವೀಕ್ಷಿಸಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ. ಅಪ್ಲಿಕೇಶನ್ ನಂತರ ಮೂಲ ಧ್ವನಿ ಡೌನ್‌ಲೋಡ್ ಮಾಡುತ್ತದೆ. ಹೀಗೆ ನೀವು ನಿಮಗೆ ಬೇಕಾದ ಭಾಷೆಯಲ್ಲಿ ಸಿನಿಮಾ ನೋಡಬಹುದು.

ಇದನ್ನೂ ಓದಿ: ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ಕೀರ್ತಿ ಸುರೇಶ್​, ಈ ಫಿಲ್ಮ್​ ರಿಮೇಕ್​ ಮಾಡ್ತಾರಂತೆ ಮಹಾನಟಿ!

ದುಬೈನಲ್ಲಿ ಪ್ರೀಮಿಯರ್ ಶೋ 

ಜುಲೈ 28 ರಂದು 3D ನಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣ, ಜುಲೈ 27 ರಂದು ದುಬೈನಲ್ಲಿ ಅದರ ಅಂತರರಾಷ್ಟ್ರೀಯ ಪ್ರೀಮಿಯರ್ ಅನ್ನು ಆಯೋಜಿಸಿದೆ. ಜುಲೈ 24 ಅಥವಾ 25 ರಂದು ಬೆಂಗಳೂರಿನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ನಡೆಸಲು ತಂಡ ನಿರ್ಧರಿಸಿದೆ.  ಕೆಜಿಎಪ್ ಬಳಿಕ ಕನ್ನಡ‌ ಚಿತ್ರರಂಗದಿಂದ ಬರುತ್ತಿರೋ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರವಾಗಿದ್ದು, ಅನೂಪ್ ಭಂಡಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.

Its a Global Level Cinema Sudeep unleashes intrusting information on Vikrant Rhone movie

ಇದನ್ನೂ ಓದಿ:  ಹಳೆಯ ಫೋಟೋ ಶೇರ್ ಮಾಡಿಕೊಂಡು ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ರಾಧಿಕಾ ಪಂಡಿತ್

ವಿಕ್ರಾಂತ್ ರೋಣ ಈ ಸಿನಿಮಾವನ್ನು ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಈ ಚಿತ್ರದ ರಾ ರಾ ರಕ್ಕಮ್ಮ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಜುಲೈ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಇದಲ್ಲದೇ ಇಂದು ಬಿಡುಗಡೆ ಆದ ಸಾಂಗ್​ ನೋಡಿದ ಮೇಲೆ ಪ್ರೇಕ್ಷಕರಲ್ಲಿ ಮತ್ತಷ್ಟು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.
Published by:Sandhya M
First published: