Vikrant Rona Twitter Review: ವಿಕ್ರಾಂತ್ ರೋಣನ ಖದರ್, ತೆರೆ ಮೇಲೆ ಕಿಚ್ಚನ ಪವರ್! ಫಸ್ಟ್ ಡೇ ಫಸ್ಟ್ ಶೋ ಸೂಪರೋ ಸೂಪರ್

Kiccha Sudeep: ಈ ಸಿನಿಮಾ ಭಾವನೆಗಳು ಮತ್ತು ಟ್ವಿಸ್ಟ್​ಗಳಿಂದ ತುಂಬಿದೆ. ಚಿತ್ರದ ನಿರ್ಮಾಣದ ರೀತಿ ಹಾಗೂ ಬಿಜಿಎಂ ಇದಕ್ಕೆ ಇನ್ನೂ ಹೆಚ್ಚಿನ ಮೆರಗು ನೀಡುತ್ತದೆ.

ಸುದೀಪ್

ಸುದೀಪ್

  • Share this:
ಕನ್ನಡ ಚಿತ್ರೋದ್ಯಮ (Kannada Film Industry) ಈಗ ಫುಲ್ ಫಾರ್ಮ್‌ನಲ್ಲಿದೆ ಎಂದರೆ ತಪಲ್ಲ. ಸ್ಯಾಂಡಲ್​ವುಡ್​ನಲ್ಲಿ (Sandalwood) ಪ್ಯಾನ್​ ಇಂಡಿಯಾ (Pan India) ಸಿನಿಮಾದ ಹವಾಳಿ ಹೆಚ್ಚಾಗಿದೆ. ಕೆಜಿಎಫ್​ 2 (KGF 2) ಸಿನಿಮಾ ದಾಖಲೆಗಳನ್ನು ಮಾಡಿರುವುದು ಇದಕ್ಕೆ ಸಾಕ್ಷಿ. ಅದರ ನಂತರ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777 ಚಾರ್ಲಿ (77 Charlie) ಸಹ ಬಾಕ್ಸ್​ ಆಫೀಸಿನಲ್ಲಿ (Box Office) ಸದ್ದು ಮಾಡಿತ್ತು. ಇದೀಗ ಕಿಚ್ಚ ಸುದೀಪ್ (Kiccha Sudeep) ಅಭಿನಯದ , ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ (Vikrant Rona) ಚಿತ್ರದ ಟ್ರೈಲರ್, ಪೋಸ್ಟರ್ ಮತ್ತು ಹಾಡುಗಳು ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದು, ಇದೀಗ ಅಭಿಮಾನಿಗಳು ಸಿನಿಮಾ ನೋಡಿದ್ದಾರೆ. ಹಾಗಾದ್ರೆ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಹೇಗಿದೆ?ಟ್ವಿಟ್ಟರ್​ನಲ್ಲಿ ಅಭಿಮಾನಿಗಳು ಹೇಳಿದ್ದೇನು? ಇಲ್ಲಿದೆ ರಿವ್ಯೂ.

ಕಿಚ್ಚನಿಗೆ ಜೈಕಾರ ಹಾಕಿದ ಫ್ಯಾನ್ಸ್

ಅನೂಪ್​ ಭಂಡಾರಿ ಅವರ ಈ ಹಿಂದಿನ ರಂಗಿತರಂಗ ಸಿನಿಮಾ ನೋಡಿವರಿಗೆ ಅವರ ನಿರ್ದೇಶನದ ಬಗ್ಗೆ ಅವರಿವಿರುತ್ತದೆ. ಒಂದು ಕಥೆಯನ್ನು ಸುಂದರವಾಗಿ ಹೇಳುವ ಕಲೆ ಅವರಲ್ಲಿದೆ. ಅದೇ ರೀತಿ ಈ ಸಿನಿಮಾ ಸಹ ಮೂಡಿ ಬಂದಿದ್ದು, ವಿಶ್ವದಾದ್ಯಂತ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗಿದ್ದು, ಟ್ವಿಟ್ಟರ್​ ತಮ್ಮ ಅನುಭವ ಬರೆದು ಹಾಕಿದ್ದಾರೆ.





ವಿಕ್ರಾಂತ್ ರೋಣಾ 147 ನಿಮಿಷಗಳ ಸಿನಿಮಾವಾಗಿದ್ದು, ಅದ್ಭುತ ಘಟನೆಗಳು, ಊಹಿಸಲಾಗದ ಟ್ವಿಸ್ಟ್​ಗಳ ಜೊತೆ ಉತ್ತಮ ಅದರ ಛಾಯಾಗ್ರಹಣಕ್ಕಾಗಿ ಜನರಿಗೆ ಬಹಳ ಇಷ್ಟವಾಗಿದ್ದು, ವಿಶ್ವದಾದ್ಯಂತ ಅಭಿಮಾನಿಗಳು ಕಿಚ್ಚನ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ.



ಈ ಸಿನಿಮಾ ಭಾವನೆಗಳು ಮತ್ತು ಟ್ವಿಸ್ಟ್​ಗಳಿಂದ ತುಂಬಿದೆ. ಚಿತ್ರದ ನಿರ್ಮಾಣದ ರೀತಿ ಹಾಗೂ ಬಿಜಿಎಂ ಇದಕ್ಕೆ ಇನ್ನೂ ಹೆಚ್ಚಿನ ಮೆರಗು ನೀಡುತ್ತದೆ. ಈ ಸಿನಿಮಾದ ಹಾಡುಗಳು ನಿಜಕ್ಕೂ ರಸದೌತಣ ಬಡಿಸುತ್ತದೆ. ಹಾಡುಗಳಲ್ಲಿ ವಿಶೇಷವಾಗಿ "ರಾ ರಾ ರಕ್ಕಮ್ಮ" ಮತ್ತು "ಲಾಲಿ ಸಾಂಗ್ - ರಾಜಕುಮಾರಿ" ಹಾಡುಗಳು ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ, ಇದರಲ್ಲಿ ಕಲಾವಿದರ ನಟನೆ ಸಹ ಅದ್ಬುತವಾಗಿದೆ.



ಈಗಾಗಲೇ ವಿಮರ್ಶೆಗಳು ಟ್ವಿಟರ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ  ಮತ್ತು ಸಿನಿಪ್ರಿಯರು ಒಮ್ಮತದಿಂದ ಚಿತ್ರ ಮತ್ತು ಸುದೀಪ್ ಅಭಿನಯದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟಿಜನ್‌ಗಳು ಚಿತ್ರದ ಕಥಾವಸ್ತು ಮತ್ತು ನಿರ್ದೇಶಕರ ಕಥೆ ಹೇಳುವ ರೀತಿಯನ್ನು ಬಹಳ ಮೆಚ್ಚಿಕೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
Published by:Sandhya M
First published: