ಸ್ಯಾಂಡಲ್ವುಡ್ನ (Sandalwood) ಬಹು ನಿರೀಕ್ಷಿತ ಸಿನಿಮಾಗಳಲ್ಲಿ (Most Expected Movie) ಕಿಚ್ಚ ಸುದೀಪ್ (Kichcha Sudeep) ಅಭಿನಯದ ‘ವಿಕ್ರಾಂತ್ ರೋಣ’ (Vikrant Rona) ಕೂಡ ಒಂದು. ಪ್ರಾರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಸಿನಿಮಾ, ಇದೀಗ ಬಿಡುಗಡೆಗೆ (Release) ಸಜ್ಜಾಗಿದೆ. ಈಗಾಗಲೇ ಬಾಲಿವುಡ್ ಬ್ಯೂಟಿ (Bollywood Beauty) ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ‘ರಾ ರಾ ರಕ್ಕಮ್ಮ’ (Ra Ra RAkkamma) ಅಂತ ರೋಣನ ಅಭಿಮಾನಿಗಳ (Fans) ಎದೆಗೆ ಕಿಚ್ಚು ಹಚ್ಚಿದ್ದಾರೆ. ಇದೀಗ ಜಾಕ್ವೆಲಿನ್ ಜಾದುವಿನಲ್ಲಿ ತೇಲುತ್ತಿರುವ ಫ್ಯಾನ್ಸ್ಗೆ ಮತ್ತೊಂದು ಗುಡ್ ನ್ಯೂಸ್ (Good News) ಕೊಡ್ತಿದೆ ಚಿತ್ರತಂಡ (Film Team). ಹೌದು ಟ್ರೇಲರ್ (Trailer) ಮೂಲಕ ಕಿಚ್ಚನ ಅಭಿಮಾನಿಗಳಿಗೆ ಗಿಫ್ಟ್ ನೀಡೋದಕ್ಕೆ ವಿಕ್ರಾಂತ್ ರೋಣ ಚಿತ್ರತಂಡ ಮುಂದಾಗಿದೆ.
ವಿಕ್ರಾಂತ್ ರೋಣನ ಟ್ರೇಲರ್ ರಿಲೀಸ್ಗೆ ಮೂಹೂರ್ತ
ವಿಕ್ರಾಂತ್ ರೋಣ ಸಿನಿಮಾದ ಮುಂದಿನ ಅಪ್ ಡೇಟ್ ಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದರು. ಅದರಲ್ಲೂ ಟ್ರೈಲರ್ ಯಾವಾಗ ಬರಲಿದೆ ಎನ್ನುವ ಪ್ರಶ್ನೆಗಳನ್ನು ಸಾಕಷ್ಟು ಬಾರಿ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಕೇಳಿದ್ದರು. ಇದೀಗ ಅಭಿಮಾನಿಗಳ ಕಾಯುವಿಕೆಗೆ ಉತ್ತರ ಸಿಕ್ಕಿದೆ. ಕಿಚ್ಚನ ಫ್ಯಾನ್ಸ್ಗೆ ಬಿಗ್ ಗಿಫ್ಟ್ ಕೊಡಲು ಚಿತ್ರತಂಡ ಸಜ್ಜಾಗಿದೆ. ಹೌದು, ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ರಿಲೀಸ್ಗೆ ಮುಹೂರ್ತ ಕೂಡಿ ಬಂದಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ.
ಜೂನ್ 23ರಂದು ವಿಕ್ರಾಂತ್ ರೋಣ ಟ್ರೇಲರ್ ರಿಲೀಸ್
ಇದೇ ಜೂನ್ 23ರಂದು ಕಿಚ್ಚನ ಅಭಿಮಾನಿಗಳ ಪಾಲಿಗೆ ಸ್ಮರಣೀಯ ದಿನವಾಗಿಸಲು ವಿಕ್ರಾಂತ್ ರೋಣ ಚಿತ್ರತಂಡ ಮುಂದಾಗಿದೆ. ಜೂ.23 ರಂದು ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್ ಮಾಡುವುದಾಗಿ ಕಿಚ್ಚ ಸುದೀಪ್ ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: Jacqueline Fernandez: 'ರಕ್ಕಮ್ಮ'ನಿಗೆ ಕನ್ನಡ ಕಲಿಸಿದ ಕಿಚ್ಚ! "ಕನ್ನಡಿಗರಿಗೆ ನಮಸ್ಕಾರ" ಎಂದ ಜಾಕ್ವೆಲಿನ್
ಟ್ರೇಲರ್ ರಿಲೀಸ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ
ನಿನ್ನೆ ಸಂಜೆ ಸೋಷಿಯಲ್ ಮೀಡಿಯಾ ಮೂಲಕ ಸಿನಿಮಾ ಟೀಮ್ ಬಿಗ್ ಅನೌನ್ಸ್ ಮಾಡಿತ್ತು. ನಾಳೆ ಬಿಗ್ ಅನೌನ್ಸ್ ಮೆಂಟ್’ ಎಂದು ಬರೆದು, ಸಖತ್ ಕ್ಯೂರಿಯಾಸಿಟಿ ಮೂಡಿಸಿತ್ತು. ಈ ನಿರೀಕ್ಷೆಗೆ ಇಂದು ಕಿಚ್ಚ ಸುದೀಪ್ ಅವರೇ ಉತ್ತರ ನೀಡಿದ್ದಾರೆ. ಸುದೀಪ್ ಟ್ವೀಟ್ ಮೂಲಕ ವಿಕ್ರಾಂತ್ ರೋಣ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
Once You Enter The Maze, Escape Is Not An Option
Vikrant Rona Official Trailer on 23rd June... Get Ready !!!! #VikrantRonaTrailer #VRTrailerOnJune23 @anupsbhandari @JackManjunath @shaliniartss @InvenioF @ZeeStudios_ #VRonJuly28 #VRin3D pic.twitter.com/o9oQupFeXJ
— Kichcha Sudeepa (@KicchaSudeep) June 17, 2022
ವಿಕ್ರಾಂತ್ ರೋಣ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ ಮತ್ತು ಸಿನಿಮಾ ಯಾವಾಗ ಥಿಯೇಟರ್ಗಳಿಗೆ ಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗ, ಎಲ್ಲರಿಗೂ ಗುಡ್ ನ್ಯೂಸ್ ಸಿಕ್ಕಿದೆ. ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಜು.28ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ರಿಲೀಸ್ ಡೇಟ್ ಬಹಿರಂಗ ಮಾಡಿದೆ.
ಇದನ್ನೂ ಓದಿ: Vikrant Rona: ಕಿಚ್ಚನಿಗೆ ಸಲ್ಲು ಸಾಥ್ - ಬಾಲಿವುಡ್ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಮಾಡ್ತಿದ್ದಾರೆ ಭಾಯ್ಜಾನ್
ಭಾರೀ ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣ
ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಬಾಲಿವುಡ್ ಅಂಗಳದಲ್ಲಿ ಮೆರೆಯಲು ಸಿದ್ದವಾಗಿದ್ದು, ಕಿಚ್ಚನಿಗೆ ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಸಹಾಯ ದೊರೆದಿದೆ. ವಿಕ್ರಾಂತ್ ರೋಣ ಸಿನಿಮಾವನ್ನು ಬಾಲಿವುಡ್ನಲ್ಲಿ ರಿಲೀಸ್ ಮಾಡಲು ಸಲ್ಮಾನ್ ಖಾನ್ ನೆರವು ಸಿಕ್ಕಿದ್ದು ಕಿಚ್ಚನಿಗೆ ದೊಡ್ಡ ಕೈ ಸಹಾಯಕ್ಕೆ ಸಿಕ್ಕಂತಾಗಿದೆ. ಬಾಲಿವುಡ್ ಭಾರತದ ಅತಿ ದೊಡ್ಡ ಸಿನೆಮಾ ಮಾರುಕಟ್ಟೆ ಇಲ್ಲಿ ಬೇರೆ ಭಾಷೆಯ ಚಿತ್ರ ಡಬ್ ಆಗಿ ಬಿಡುಗಡೆಯಾಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಭಾಯ್ಜಾನ್ ಸಾಥ್ ನೀಡಿರುವುದು ನಿಜಕ್ಕೂ ಮೈಲಿಗಲ್ಲು ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ