6 ಅಡಿ ಕಟೌಟ್ ಅಂದ್ರೆ ಥಟ್ ಅಂತ ಕಣ್ಣು ಮುಂದೆ ಬರುವುದು ಕಿಚ್ಚ ಸುದೀಪ್ (Kiccha Sudeep) . 6 ಅಡಿ ಕಟೌಟ್, ಸ್ಟೈಲಿಶ್ ಲುಕ್ (Stylish Look), ಮುಖದಲ್ಲಿ ಸದಾ ಸ್ಥಾನ ಪಡೆದುಕೊಂಡಿರುವ ಆ ನಗು. ಇದೆಲ್ಲ ಹೇಳುತ್ತಿದ್ದರೆ ಕಿಚ್ಚ ಸುದೀಪ್ ಆಕೃತಿ ನಮ್ಮ ಮುಂದೆ ಬಂದು ನಿಲ್ಲುತ್ತೆ. ಇನ್ನೂ ತ್ರಿಡಿ (3D) ಯಲ್ಲಿ ಅವರನ್ನು ತೋರಿಸಿದರೆ, ನೋಡುವುದಕ್ಕೆ ಹೇಗಿರಬೇಡ ಎಂದು ನೀವೂ ಊಹೆ ಮಾಡಿಕೊಳ್ಳಿ. ಯೆಸ್, ನಾವು ಇಲ್ಲಿ ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದ ಬಹು ನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ (Vikrant Rona) ಬಗ್ಗೆ. ಹೌದು, ಇಂದು ಓರಾಯನ್ ಮಾಲ್ನಲ್ಲಿ ಇಂದು ವಿಕ್ರಾಂತ್ ರೋಣ ಟ್ರೈಲರ್ ಲಾಂಚ್ (Vikrant Rona Trailer Launch) ಕಾರ್ಯಕ್ರಮ ನಡೀತು. ಚಿತ್ರರಂಗದ ದಿಗ್ಗಜರು ಬಂದು ತ್ರಿಡಿಯಲ್ಲಿ ವಿಕ್ರಾಂತ್ ರೋಣನ ಟ್ರೈಲರ್ ಕಣ್ಣು ತುಂಬಿಕೊಂಡರು. ಶಿವಣ್ಣ (Shivanna) , ವಿ .ರವಿಚಂದ್ರನ್ (V Ravichandran) , ರಮೇಶ್ ಅರವಿಂದ್ (Ramesh Aravind), ಡಾಲಿ ಧನಂಜಯ್ (Daali Dhananjay) , ರಿಷಭ್ ಶೆಟ್ಟಿ (Rishab Shetty) , ರಕ್ಷಿತ್ ಶೆಟ್ಟಿ (Rakshit Shetty) , ರಾಜ್ ಬಿ ಶೆಟ್ಟಿ (Raj B Shetty) , ಸೃಜನ್ ಲೋಕೇಶ್ (Srujan Lokesh) ಸೇರಿ ಚಿತ್ರರಂಗದ ಹಲವರು ಇಲ್ಲಿ ಹಾಜರಿದ್ದರು.
VR ಅಂದ್ರೆ Vikrant Rona ಅಲ್ಲ, ವಿ. ರವಿಂಚಂದ್ರನ್ ಅಂತೆ!
ಸಿನಿಮಾದ ಟ್ರೈಲರ್ ನೋಡಿದ ಬಳಿಕ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ಅಭಿಪ್ರಾಯ ತಿಳಿಸಿದರು. ಹೀಗೆ ಎಲ್ಲರೂ ಮಾತನಾಡಿದ ಬಳಿಕ ವಿ.ರವಿಚಂದ್ರನ್ ವೇದಿಕೆ ಮೇಲೆ ಬಂದರು. ವೇದಿಕೆ ಮೇಲೆ ಬರುವಾಗಲೇ ಕಿಚ್ಚ ಸುದೀಪ್ ಅವರ ಕೈ ಹಿಡಿದುಕೊಂಡು ಮೇಲೆ ಬಂದರು. ಸಿನಿಮಾದ ಟ್ರೈಲರ್ನಲ್ಲಿ ಭಯ ಎನ್ನುವ ಪದದ ಬಗ್ಗೆ ಮಾತನಾಡಿದ ರವಿಚಂದ್ರನ್, 'ಅನುಪ್ ಭಂಡಾರಿ ಕಿಚ್ಚ ಸುದೀಪ್ ವಿ ರವಿಚಂದ್ರನ್ ಅವರ ಮಗ ರೀ, ಅವನಿಗೆ ಭಯ ಅಂದ್ರೆ ಏನು ಗೊತ್ತಿಲ್ಲ' ಅಂತ ಹೇಳಿದರು.
ನನಗೆ ತಂದೆ ಸ್ಥಾನ ಕೊಡ್ತಾನೆ ಕಿಚ್ಚ ಎಂದ ಕ್ರೇಜಿಸ್ಟಾರ್!
ಮುಂದುವರೆದು, ರವಿಚಂದ್ರನ್ ಅವರು 'ವಿ ಆರ್ ಎಂದರೆ ನಿಮಗೆ ವಿಕ್ರಾಂತ್ ರೋಣ ಅಂತ ಗೊತ್ತು ವಿಆರ್ ಅಂದ್ರೆ ವಿ ರವಿಚಂದ್ರನ್ ಅಂತಾನೂ ನೀವು ತಿಳಿದುಕೊಳ್ಳಬೇಕು. ಪ್ರೇಮಲೋಕ ಸಿನಿಮಾ ನೋಡಿದಾಗ ನಮ್ಮ ತಂದೆ ಬಂದು ನನ್ನ ಬೆನ್ನಿನ ಮೇಲೆ ಒರಗಿ ಅತ್ತಿದ್ದರು. ವಿಕ್ರಾಂತ್ ರೋಣ ಸಿನಿಮಾ ನೋಡಿದ ಮೇಲೆ ನಾನೂ ಕೂಡ ಸುದೀಪ್ ತಬ್ಬಿಕೊಂಡು ಅಳುತ್ತೇನೆ ಅನ್ನಿಸುತ್ತೆ' ಎಂದು ರವಿಚಂದ್ರನ್ ಭಾವುಕರಾದರು. 'ವಿಕ್ರಾಂತ್ ರೋಣ ರಿಲೀಸ್ ದಿನ ನನಗೆ ತಂದೆ ಸ್ಥಾನ ಬರುತ್ತೆ ಎಂದುಕೊಂಡಿದ್ದೇನೆ' ಎಂದು ಹೇಳಿದರು.
ಇದನ್ನೂ ಓದಿ: ಬೀಸ್ಟ್ ನಿರ್ಮಾಪಕರು ಕೊಟ್ಟ ಗಿಫ್ಟ್ ಕಂಡು ಪೂಜಾ ಕಕ್ಕಾಬಿಕ್ಕಿ! ದೌಲತ್ತು ಇಳಿಸಿದ್ದಾರೆ ಬಿಡಿ ಅಂತಿದ್ದಾರೆ ನೆಟ್ಟಿಗರು
'ವಿಕ್ರಾಂತ್ ರೋಣ ಬೇರೆ ಪ್ರಪಂಕ್ಕೆ ಕರೆದುಕೊಂಡು ಹೋಗುವುದು ಖಚಿತ. ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ಕಮಾಲ್ ಮಾಡುವುದು ಫಿಕ್ಸ್. ಕನ್ನಡ ಚಿತ್ರರಂಗಕ್ಕೆ ಮೊದಲು ದೃಷ್ಟಿ ತೆಗೆಯಬೇಕು. ಕನಸುಗಾರ ಅಂದರೆ ನಾನೊಬ್ಬನೇ ಅಲ್ಲ. ಈಗ ಎಲ್ಲರೂ ಕನಸುಗಾರರೇ. ಸಿನಿಮಾ ಮಾಡುವ ಕನಸು ಹೊಂದಿದ್ದಾರೆ. ಕೊರೋನಾ ಬಂದಮೇಲೆ ಥಿಯೇಟರ್ಗೆ ಜನ ಬರಲ್ಲ ಅಂದಿದ್ದರು. ಆದೆಲ್ಲ ಸುಳ್ಳಾಗಿದೆ. ವೆಲ್ಕಮ್ ಟು ಕನ್ನಡ ಇಂಡಸ್ಟ್ರಿ. ಜಾಕಲಿನ್ ನೋಡುವುದಕ್ಕೆ ಚೆನ್ನಾಗಿ ಕಾಣುತ್ತಾರೆ' ಎಂದು ರವಿಚಂದ್ರನ್ ಹೇಳಿದರು.
ಇದನ್ನೂ ಓದಿ: 'ವಿಕ್ರಾಂತ್ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್ವುಡ್, ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು
ವಿಕ್ರಾಂತ್ ರೋಣ ಟ್ರೈಲರ್ ಮೆಚ್ಚಿದ ತಾರೆಯರು!
ಸ್ಯಾಂಡಲ್ವುಡ್ನ ಘಟಾನುಘಟಿಗಳೆಲ್ಲ ಇಂದು ಓರಾಯನ್ ಮಾಲ್ನಲ್ಲಿ ಸೇರಿದ್ದರು. ವಿಕ್ರಾಂತ್ ರೋಣ ಟ್ರೈಲರ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ನ ಪ್ರತಿಯೊಬ್ಬರು ಕಿಚ್ಚ ಸುದೀಪ್ ಅವರನ್ನು ಕೊಂಡಾಡಿದ್ದಾರೆ. ವಿಕ್ರಾಂತ್ ರೋಣ ಮತ್ತೊಂದು ಮೈಲಿಗಲ್ಲು ಸೃಷ್ಟಿಸುತ್ತೆ ಎಂದು ಎಲ್ಲರೂ ಶುಭ ಹಾರೈಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ