ಇಂದು ಓರಾಯನ್ ಮಾಲ್ನಲ್ಲಿ ಇಂದು ವಿಕ್ರಾಂತ್ ರೋಣ ಟ್ರೈಲರ್ ಲಾಂಚ್ (Vikrant Rona Trailer Launch) ಕಾರ್ಯಕ್ರಮ ನಡೀತು. ಚಿತ್ರರಂಗದ ದಿಗ್ಗಜರು ಬಂದು ತ್ರಿಡಿಯಲ್ಲಿ ವಿಕ್ರಾಂತ್ ರೋಣನ ಟ್ರೈಲರ್ ಕಣ್ಣು ತುಂಬಿಕೊಂಡರು. ಶಿವಣ್ಣ (Shivanna) , ವಿ .ರವಿಚಂದ್ರನ್ (v Ravichandran) , ರಮೇಶ್ ಅರವಿಂದ್ (Ramesh Aravind), ಡಾಲಿ ಧನಂಜಯ್ (Daali Dhananjay) , ರಿಷಭ್ ಶೆಟ್ಟಿ (Rishab Shetty) , ರಕ್ಷಿತ್ ಶೆಟ್ಟಿ (Rakshit Shetty) , ರಾಜ್ ಬಿ ಶೆಟ್ಟಿ (Raj B Shetty) , ಸೃಜನ್ ಲೋಕೇಶ್ (Srujan Lokesh) ಸೇರಿ ಚಿತ್ರರಂಗದ ಹಲವರು ಇಲ್ಲಿ ಹಾಜರಿದ್ದರು. ವಿಕ್ರಾಂತ್ ರೋಣನ ಹೆಸರಲ್ಲಿ ಕನ್ನಡ ಚಿತ್ರರಂಗ ಒಂದಾಗಿದ್ದು ಮಾತ್ರ ನಿಜಕ್ಕೂ ಖುಷಿಯ ಸಂಗತಿ.
ಸ್ಯಾಂಡಲ್ವುಡ್ ಸ್ಟಾರ್ಸ್ ಜೊತೆ ಜಾಕಲಿನ್ ಡ್ಯಾನ್ಸ್!
ಈ ಕಾರ್ಯಕ್ರಮದಲ್ಲಿ ಜಾಕಲಿನ್ ಫರ್ನಾಡಿಂಸ್ ಕೂಡ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಎಲ್ಲ ನಟರನ್ನು ಕರೆಸಿ ಡ್ಯಾನ್ಸ್ ಮಾಡಿಸಿದ್ದಾರೆ ಅಕುಲ್. ಅದು ವಿಕ್ರಾಂತ್ ರೋಣ ಸಿನಿಮಾದ ಹಿಟ್ ಸಾಂಗ್ ರಾ ರಾ ರಕ್ಕಮ್ಮ ಎಲ್ಲರೂ ಹುಕ್ ಅಪ್ ಸ್ಟೆಪ್ಸ್ ಮಾಡಿಸಿದ್ದಾರೆ. ವೇದಿಕೆ ಮೇಲೆ ಶಿವಣ್ಣ, ರವಿಚಂದ್ರನ್, ರಕ್ಷಿತ್ ಶೆಟ್ಟಿ , ರಿಷಭ ಶೆಟ್ಟಿ, ಕಿಚ್ಚ ಸುದೀಪ್, ಸೇರಿ ಹಲವರು ರಾ ರಾ ರಕ್ಕಮ್ಮ ಹಾಡಿನ ಹುಕ್ಅಪ್ ಸ್ಟೆಪ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
'ವಿಕ್ರಾಂತ್ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್ವುಡ್
ವಿಕ್ರಾಂತ್ ರೋಣ ಪ್ರೀ- ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಸಂಪೂರ್ಣ ಸ್ಯಾಂಡಲ್ವುಡ್ ಒಂದಾಗಿದೆ. ಹೌದು, ಒರಾಯನ್ ಮಾಲ್ ನಲ್ಲಿ ನಡೆಯುತ್ತಿರುವ ಪ್ರೀ- ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಕಿಚ್ಚನಿಗೆ ಶಿವಣ್ಣ, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ, ರಮೇಶ್, ನಿರ್ದೇಶಕ ಯೋಗರಾಜ್ ಭಟ್, ಜಾಕ್ವೆಲಿನ್ ಪರ್ನಾಂಡಿಸ್, ರಾಜ್ ಬಿ ಶೆಟ್ಟಿ, ಅರ್ಜುನ್ ಜನ್ಯಾ, ನಂದ ಕಿಶೋರ್, ಸೃಜನ್ ಲೋಕೇಶ್ ಸೇರಿದಂತೆ ಅನೇಕ ತಾರೆಯರು ಪಾಲ್ಗೊಳ್ಳುವ ಮೂಲಕ ಚಿತ್ರ ರಂಗದ ಒಗ್ಗಟ್ಟನ್ನು ಪ್ರದರ್ಶಿಸಿದರು.
ಇದನ್ನೂ ಓದಿ: VR ಅಂದ್ರೆ Vikrant Rona ಅಲ್ಲ, ವಿ. ರವಿಂಚಂದ್ರನ್ ಅಂತೆ! ಸುದೀಪ್ನ ಅಪ್ಪಿ ಅಳೋದು ಫಿಕ್ಸ್ ಎಂದ ಕ್ರೇಜಿಸ್ಟಾರ್
ವಿಕ್ರಂತ್ ರೋಣನನ್ನು ಹಾಡಿ ಹೊಗಳಿದ ತಾರೆಯರು
ಸುದೀಪ್ ನಮ್ಮ ಫ್ಯಾಮಿಲೆ ಎಂದರೂ ತಪ್ಪಾಗಲಾರದು. ಅಲ್ಲದೇ ಸುದೀಪ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದವರು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಅಲ್ಲದೇ ಶಿವಣ್ಣ ಸಹ ವೇದಿಕೆ ಮೇಲೆ ಚಿತ್ರದ ರಾ.. ರಾ.. ರಕ್ಕಮ್ಮಾ ಹಾಡಿನ ಹುಕ್ ಸ್ಟೆಫ್ ಹಾಕುವ ಮೂಲಕ ಚಿತ್ರದಲ್ಲಿ ಈ ಹಾಡು ಮತ್ತಷ್ಟು ಇಷ್ಟ ಎಂದು ಹೇಳಿದರು.
ರಮೇಶ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸುದೀಪ್ ಅವರ ಬಗ್ಗೆ ಮಾತಾಡಿದ್ದಾರೆ. ಟ್ರೈಲರ್ ನೀಡಿದ ನಂತರ ಮಾತನಾಡಿ, ಜುಮಾಂಜಿ, ಟಾರ್ಸನ್ ನಂತಹ ಹಾಲಿವುಡ್ ಚಿತ್ರಕ್ಕೆ ಸಮನಾಗಿ ವಿಕ್ರಾಂತ್ ರೋಣ ಚಿತ್ರ ಮೂಡಿಬಂದಿದ್ದು, ಚಿತ್ರಮಂದಿರದಲ್ಲಿ ನಿಮ್ಮನ್ನು ಇನ್ನೊಂದು ಲೀಕಕ್ಕೆ ಕರೆದುಕೊಂಡು ಹೋಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: 'ವಿಕ್ರಾಂತ್ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್ವುಡ್, ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು
ನಾನು ಚಿತ್ರಂಗದ ಪರವಾಗಿ ಬಂದವನಲ್ಲ, ನಾನು ಸುದೀಪ್ ಫ್ಯಾನ್ಸ್ ಆಗಿ ಬಂದಿದ್ದೇನೆ ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಸುದೀಪ್ ಅವರ ಈ ಪ್ರಯತ್ನ ನಮ್ಮನಂತವರಿಗೆ ಇನ್ನಷ್ಟು ಚಿತ್ರರಂಗದಲ್ಲಿ ಕೆಲಸ ಮಾಡಲು ಉತ್ಸಾಹ ಬಂದಿದೆ. ಟ್ರೈಲರ್ ಸಹ ಅದ್ಭುತವಾಗಿದೆ ಎಂದಿದ್ದಾರೆ. ಅಲ್ಲದೇ ಖಂಡಿತವಾಗಿಯೂ ನಾನು ಮತ್ತು ಸುದೀಪ್ ಒಟ್ಟಿಗೆ ಕೆಲಸ ಮಾಡುತ್ತೇವೆ ಎನ್ನುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ